ಕನ್ಯಾಕುಮಾರಿ: ಕನ್ನಿಕಾಗೆ ಸಿಹಿಮುತ್ತು ನೀಡಿದ ಚರಣ್‌, ನಾಚಿ ನೀರಾದ ಕನ್ನಿಕಾ ಮಾಡಿದ್ದೇನು?

Published : Jul 24, 2022, 03:55 PM IST
ಕನ್ಯಾಕುಮಾರಿ: ಕನ್ನಿಕಾಗೆ ಸಿಹಿಮುತ್ತು ನೀಡಿದ ಚರಣ್‌, ನಾಚಿ ನೀರಾದ ಕನ್ನಿಕಾ ಮಾಡಿದ್ದೇನು?

ಸಾರಾಂಶ

ಮೊನ್ನೆ ಮೊನ್ನೆವರೆಗೆ ಮಾಟ ಮಂತ್ರ ಅಂತೆಲ್ಲ ಕತೆ ಹೇಳ್ತಿದ್ದ 'ಕನ್ಯಾಕುಮಾರಿ' ಸೀರಿಯಲ್‌ನಲ್ಲಿ ಈಗ ಲೈಟಾಗಿ ರೊಮ್ಯಾನ್ಸ್ ಶುರುವಾಗಿದೆ. ಈ ಸೀರಿಯಲ್‌ ನಾಯಕ ಚರಣ್ ಕನ್ನಿಕಾ ಕೆನ್ನೆಗೆ ಸಿಹಿ ಮುತ್ತು ನೀಡಿದ್ದಾನೆ. ಈ ಅನಿರೀಕ್ಷಿತ ಮುತ್ತಿಗೆ ಒಂದು ಕ್ಷಣ ಶಾಕ್ ಆದ ಕನ್ನಿಕಾ ನಾಚಿ ನೀರಾಗಿದ್ದಾಳೆ. ಆಮೇಲೆ ಅವಳೇನು ಮಾಡಿದ್ದು ಗೊತ್ತಾ?

ಕಲರ್ಸ್ ಕನ್ನಡದಲ್ಲಿ ಇದೀಗ ಮೈಮುರಿದು ಎದ್ದು ನಿಲ್ಲುತ್ತಿರುವ ಧಾರಾವಾಹಿ 'ಕನ್ಯಾಕುಮಾರಿ'. ಈ ಸೀರಿಯಲ್‌ನ ಸಬ್ಜೆಕ್ಟೇ ಒಂಥರಾ ವಿಚಿತ್ರ. ಮಹಾನ್ ದೈವಭಕ್ತೆ, ದೊಡ್ಡ ಶ್ರೀಮಂತ ಹುಡುಗಿ ಕನ್ನಿಕಾ ಟ್ಯಾಕ್ಸಿ ಡ್ರೈವರ್ ಚರಣ್ ಗೆ ಜೋಡಿಯಾಗೋ ಕಥೆ. ಚರಣ್‌ಗಾಗಿ ತನ್ನೆಲ್ಲ ಆಸ್ತಿ, ಸಿರಿತನಗಳನ್ನು ಬಿಟ್ಟು ಆತನ ಹಿಂದೆ ಬಂದು ಸರಳವಾಗಿ ಅವನ ಮನೆಯಲ್ಲೇ ಜೀವನ ಮಾಡ್ತಿದ್ದಾಳೆ ಕನ್ನಿಕಾ. ಚರಣ್ ಮನೆಯವರಿಗೆ ಎಲ್ಲಾ ಕಡೆ ಇರುವ ಹಾಗೇ ಕನ್ನಿಕಾನ ಕಂಡರೆ ಒಳಗೊಳಗೇ ಅಸಹನೆ. ಯಾಮಿನಿ ಅನ್ನೋ ಹುಡುಗಿ ಚರಣ್‌ ರಿಲೇಟಿವ್. ಅವಳಿಗೆ ಚರಣ್‌ ಮೇಲೆ ಕಣ್ಣು. ಅವನನ್ನು ಹೇಗಾದರೂ ಮಾಡಿ ಮದುವೆ ಆಗಬೇಕು ಅನ್ನೋ ಹಠಕ್ಕೆ ಬಿದ್ದ ಅವಳು ಚರಣ್‌ ವಶಪಡಿಸಿಕೊಳ್ಳೋದಕ್ಕೆ ಮಾಟ, ಮಂತ್ರದ ಪ್ರಯೋಗ ಮಾಡಿ ಅವನನ್ನು ತನ್ನ ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾಳೆ. ಇದಕ್ಕಾಗಿ ಕನ್ನಿಕಾ, ಚರಣ್ ಪ್ರಾಣಕ್ಕೆ ಕುತ್ತು ಬಂದರೂ ಅವಳು ಸ್ವಾರ್ಥ ಸಾಧನೆಗೆ ಮುಂದಾಗಿದ್ದಾಳೆ. ಆದರೆ ಬಾಲ್ಯದಿಂದಲೇ ದೇವಿಯ ಮಹಾನ್ ಭಕ್ತಳಾದ ಕನ್ನಿಕಾ ಇದರ ವಿರುದ್ಧ ಹೋರಾಗಿದ್ದಾಳೆ. ಇದೊಂದು ರೀತಿ ದುಷ್ಟ ಶಕ್ತಿ ಹಾಗೂ ದೈವೀ ಶಕ್ತಿಯ ಮಧ್ಯದ ಹೋರಾಟ ಆಗಿತ್ತು. ಕೊನೆಗೂ ಕನ್ನಿಕಾಳ ದೈವೀ ಶಕ್ತಿಗೆ ಜಯವಾಗಿದೆ. ಚರಣ್ ಅವಳವನಾಗಿಯೇ ಉಳಿದಿದ್ದಾನೆ. 

 

ಕೆಲವು ವರ್ಷಗಳ ಹಿಂದೆ ಹೀಗೆ ಮಾಟ, ಮಂತ್ರಗಳ ಸೀರಿಯಲ್‌ಗಳು ಬಹಳ ಪಾಪ್ಯುಲರ್ ಆಗಿದ್ದವು. ಆದರೆ ಈ ಜಮಾನಾದಲ್ಲಿ ಆ ಥರದ ಕತೆ ಜನರಿಗೆ ರುಚಿಸುವಂತೆ ತೋರುತ್ತಿಲ್ಲ. ಈ ಸೀರಿಯಲ್‌ನಲ್ಲಿ ಭಯ ಹುಟ್ಟಿಸುವಂತೆ ಏನೇನೆಲ್ಲ ಗ್ರಾಫಿಕ್ಸ್ ಪ್ರಯೋಗ ಮಾಡಿ ಹೇಗ್ಹೇಗೆಲ್ಲ ಕಥೆ ಹೇಳುವ ಪ್ರಯತ್ನ ಮಾಡಿದರೂ ನಿರೀಕ್ಷಿಸಿದ ಟಿಆರ್ ಪಿ ಬಂದಂತಿಲ್ಲ. ಈ ಕಥೆಯಲ್ಲಿ ಆರಂಭದಿಂದಲೂ ಕನ್ನಿಕಾಳ ದೈವಭಕ್ತಿಯನ್ನೂ ತೋರಿಸಲಾಗಿದೆ. ಆದರೆ ಇದ್ಯಾವುದೂ ಈ ಕಾಲದ ಜನರಿಗೆ ಅಷ್ಟಾಗಿ ರುಚಿಸಿದ ಹಾಗಿಲ್ಲ. ಆದರೆ ಇದೀಗ ಕತೆಯಲ್ಲಿ ಸ್ವಲ್ಪ ಬದಲಾವಣೆ ತಂದಿದ್ದೇ ಜನ ಈ ಸೀರಿಯಲ್‌ನ ಕಡೆಗೆ ದೃಷ್ಟಿ ಹೊರಳಿಸಲಾರಂಭಿಸಿದ್ದಾರೆ. 

ಇದನ್ನೂ ಓದಿ: Ramachari serial: ರಾಮಾಚಾರಿ ಮದುವೆ ಠುಸ್ ಪಟಾಕಿ, ವೀಕ್ಷಕರನ್ನು ಫೂಲ್ ಮಾಡಿದ್ರಾ?

ಇದೀಗ ಈ ಸೀರಿಯಲ್‌ನಲ್ಲಿ ರೊಮ್ಯಾಂಟಿಕ್‌ ಸೀನ್‌ಗಳು ಹೆಚ್ಚೆಚ್ಚು ಬರಲಾರಂಭಿಸಿವೆ. ಇದನ್ನು ಜನ ಇಷ್ಟಪಟ್ಟು ನೋಡಲು ಶುರು ಮಾಡಿದ್ದಾರೆ. ಸೋ, ಟಿಆರ್‌ಪಿ ಚಿಂತೆಯೂ ಸದ್ಯಕ್ಕೆ ದೂರಾಗಿದೆ. ಚರಣ್‌ಗೆ ತನ್ನ ಪತ್ನಿ ಕನ್ನಿಕಾ ಮೇಲೆ ಪ್ರೀತಿ ಹೆಚ್ಚಾಗಿದೆ. ಆಯತ ಅವಳ ಬಳಿ ಏನೋ ಒಂದನ್ನು ಕೇಳಿದ್ದಾನೆ. ಆದರೆ ಅವಳು ಅದನ್ನು ಕೊಡೋದಕ್ಕೆ ಕಂಡೀಶನ್ ಹಾಕಿದ್ದಾಳೆ. ಅವಳ ಮೊದಲನೇ ಕಂಡೀಶನ್ ಚರಣ್ ಪ್ರತೀದಿನ ಸ್ನಾನ ಮಾಡ್ಬೇಕು ಅನ್ನೋದು. ಬೇಕಿದ್ರೆ ದಿನಾ ಕಾರು ಕ್ಲೀನಾಗಿ ತೊಳೀತೀನಿ, ಆದರೆ ದಿನಾ ಸ್ನಾನ ಮಾಡೋದಕ್ಕಾಗಲ್ಲ ಅಂತ ಅಂತ ಆಗ ತಗಾದೆ ತೆಗೆದಿದ್ದಾನೆ. ಕನ್ನಿಕಾ ಹೇಳಿದ ಇನ್ನೊಂದು ಕಂಡೀಶನ್ ಟೈಮ್‌ಗೆ ಸರಿಯಾಗಿ ಊಟ, ತಿಂಡಿ ಮಾಡ್ಬೇಕು ಅನ್ನೋದು. ಅವನು ಅವಳಿಗೆ ದಿನಕ್ಕೆ ಎರಡು ಬಾರಿಯಾದರೂ ಐ ಲವ್‌ ಯೂ ಹೇಳ್ಬೇಕು ಅನ್ನೋದು ಕಂಡೀಶನ್‌ ನಂಬರ್ ೩. ಉಳಿದೆಲ್ಲ ಕಂಡೀಶನ್‌ಗೆ ಓಕೆ ಅಂದ ಚರಣ್‌ ಸ್ನಾನ ಮಾಡೋದಕ್ಕೆ ಮಾತ್ರ ತಕರಾರು ಮಾಡ್ತಿದ್ದಾನೆ. ಅವನು ಒಪ್ಪಿಲ್ಲ ಅಂದರೆ ತಾನು ಅವನು ಕೇಳಿದ್ದನ್ನು ಕೊಡೋದಿಲ್ಲ ಅಂದಿದ್ದಾಳೆ ಕನ್ನಿಕಾ. ಆದರೆ ತಡೆಯಲಾಗದೇ ಚರಣ್ ಅವಳ ಕೆನ್ನೆಯನ್ನು ಚುಂಬಿಸಿದ್ದಾನೆ. ಈ ಅನಿರೀಕ್ಷಿತ ಆಘಾತ ಕನ್ನಿಕಾಗೆ ಶಾಕ್ ತಂದಿದೆ. ಅವಳು ನಾಚಿ ನೀರಾಗಿದ್ದಾಳೆ. 

'ನಾನು ನನ್ನ ಹೆಂಡ್ತಿಗೆ ಮುತ್ತು ಕೊಟ್ರೆ ನಿಮ್ಮದೇನ್ರಿ ತಕರಾರು?' ಅಂತ ಚರಣ್ ಕಾಲೆಳೆದಿದ್ದಾನೆ. ಕನ್ನಿಕಾ ಅವನ ಕೆನ್ನೆಗೂ ಸಿಹಿ ಮುತ್ತು ಕೊಟ್ಟಿದ್ದಾಳೆ. ಈಗ ಕಣ್ಣು ಬಾಯಿ ಬಿಟ್ಟು ಶಾಕ್‌ನಿಂದ ಚೇತರಿಸಿಕೊಳ್ಳಲಾಗದೇ ಒದ್ದಾಡುವ ಸ್ಥಿತಿ ಚರಣ್‌ದು. 

ಆಸಿಯಾ ಫಿರ್ದೋಸೆ ಕನ್ನಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಗೌಡ ಚರಣ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: Kannadathi serial : ಫಸ್ಟ್‌ನೈಟ್‌ ಶಾಸ್ತ್ರಕ್ಕೆ ಭುವಿಯಿಂದಲೇ ಬಂತು ಸಿಗ್ನಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?