Kanyakumari serial: ತಮ್ಮನಿಗೆ ತಾಳಿ ಮಹತ್ವ ಹೇಳ್ತಿದ್ದಾಳೆ ಕನ್ನಿಕಾ, ಕಟ್ಟಿದ ತಾಳಿ ತೆಗೆದಿಟ್ಟರೆ ಏನಾಗುತ್ತೆ?

By Suvarna News  |  First Published Jun 3, 2022, 2:50 PM IST

Kanyakumari Serialನಲ್ಲಿ ತಾಳಿ ಅಂದರೆ ಮಂಗಲಸೂತ್ರದ ಡ್ರಾಮಾ ನಡೀತಿದೆ. ಅಷ್ಟಕ್ಕೂ ಹಿಂದೂಧರ್ಮದಲ್ಲಿ ತಾಳಿಗೆ ಯಾಕೆ ಅಷ್ಟು ಮಹತ್ವ ಕೊಡ್ತಾರೆ? ಅದನ್ನು ತೆಗೆದಿಟ್ಟರೆ ಏನಾಗುತ್ತೆ?


ಕಲರ್ಸ್ ಕನ್ನಡ(Colors Kannada)ದಲ್ಲಿ ಪ್ರಸಾರವಾಗುತ್ತಿರುವ ಕನ್ಯಾ ಕುಮಾರಿ(Kanyakumari) ಸೀರಿಯಲ್‌ನಲ್ಲಿ ಮಾಂಗಲ್ಯ ಅಥವಾ ತಾಳಿಯ ಮಹತ್ವವನ್ನು ನಾಯಕಿ ಕನ್ನಿಕಾ(Kannika) ತಿಳಿಸಿ ಹೇಳಿದ್ದಾಳೆ. ಆರಂಭದಿಂದಲೂ ವಿಭಿನ್ನ ಕಥೆ(story)ಯ ಮೂಲಕ ಗಮನ ಸೆಳೆಯುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಮ್ಮ ಶಾಸ್ತ್ರ, ಪರಂಪರೆ, ಧಾರ್ಮಿಕ ಆಚರಣೆಗಳ ಬಗೆಗೂ ಅಲ್ಲಲ್ಲಿ ತಿಳಿಸಿಕೊಡುವ ಪ್ರಯತ್ನ ನಡೆಯುತ್ತಿದೆ. 'ಕನ್ಯಾಕುಮಾರಿ' ದೈವಭಕ್ತೆ ಕನ್ನಿಕಾಳ ಕಥೆ. ಶ್ರೀಮಂತ ಮನೆತನದ ಅಪಾರ ದೈವಭಕ್ತಿಯ ಈ ಹುಡುಗಿ ಒಬ್ಬ ಕ್ಯಾಬ್ ಡ್ರೈವರ್(Cab Driver) ಗೆ ಹತ್ತಿರವಾಗುತ್ತಾಳೆ. ಕನ್ನಿಕಾ ದೇವರಿಗಾಗಿ ಧಾರ್ಮಿಕ ಶ್ರದ್ಧೆಗಾಗಿ ಏನು ಮಾಡಲೂ ಸಿದ್ಧ ಎನ್ನುವ ಮನಸ್ಥಿತಿಯವಳು. ಚಾಮುಂಡಿಪುರದ ಜೋಗಿಹಟ್ಟಿ ಹುಡುಗ ಚರಣ್ ಕಾಯಕವೇ ಕೈಲಾಸ ಎಂದು ಬದುಕುತ್ತಿರುವ ಹುಡುಗ. ನಮ್ಮ ಕೆಲಸ(Work)ವನ್ನು ಶ್ರದ್ಧೆಯಿಂದ ಮಾಡಿದರೆ ಯಾವ ದೇವರನ್ನು ಆರಾಧಿಸೋದೂ ಬೇಡ ಅಂದುಕೊಂಡಿದ್ದಾನೆ. ಈ ಎರಡು ವಿಭಿನ್ನ ಧ್ರುವಗಳನ್ನು ಒಂದು ಮಾಡಿರೋದು ಇವರಿಬ್ಬರ ಮದುವೆ (Wedding).

ಹುಟ್ಟು ಶ್ರೀಮಂತೆಯಾಗಿದ್ದರೂ ಬಡವ ಚರಣ್ ನನ್ನು ಕಟ್ಟಿಕೊಂಡು ಬಡತನದ ಬದುಕನ್ನೇ ನಡೆಸುತ್ತಿರುವ ಕನ್ನಿಕಾಗೆ ಈಗ ತಮ್ಮ ಧ್ರುವ ತನ್ನ ಗಂಡನ ತಂಗಿ ಐಶ್ವರ್ಯಾಗೆ ತಾಳಿ ಕಟ್ಟಿರೋದು ನುಂಗಲಾರದ ತುತ್ತಾಗಿದೆ. ಆತ ಐಶ್ವರ್ಯಾಗೆ ತಾಳಿಯನ್ನೇನೋ ಕಟ್ಟಿದ, ಆದರೆ ಅವಳ ಜೊತೆಗೆ ಬದುಕೋದಕ್ಕೆ ಸುತಾರಾಂ ರೆಡಿ ಇಲ್ಲ. ಸಿಟ್ಟಲ್ಲೇನೋ ತಾಳಿ ಕಟ್ಟಿದೆ, ಹಾಗಂದ ಮಾತ್ರಕ್ಕೆ ಅವಳ ಜೊತೆಗೇ ಇಡೀ ಬದುಕು (Life) ಗಂಡನ (Husband) ಹಾಗೆ ಬದುಕೋದಕ್ಕಾಗಲ್ಲ, ಕಟ್ಟಿದ ತಾಳಿಯನ್ನು ಬೇಕಿದ್ದರೆ ನಾನೇ ತೆಗೆಯುವ ಎಂಬ ಆತನ ಮಾತು ಕನ್ನಿಕಾಳನ್ನು ಕೆರಳಿಸಿದೆ. ಆಕೆ ಆತನಿಗೆ ತಾಳಿಯ ಮಹತ್ವ ಹೇಳುತ್ತಾಳೆ. ತಾನು ಈ ಹೆಣ್ಣಿನ ಜೊತೆಗೆ ಬದುಕಲು ಸಾಧ್ಯವಾ, ಆಕೆಯ ಜೊತೆಗೆ ಬದುಕಿದರೆ ತಾನು ಚೆನ್ನಾಗಿರುತ್ತೀನಾ ಅನ್ನೋದನ್ನು ಗಂಡು ತಾಳಿ ಕಟ್ಟುವ ಮೊದಲೇ ಯೋಚಿಸಬೇಕೇ ಹೊರತು ತಾಳಿ ಕಟ್ಟಿದ ಮೇಲಲ್ಲ. ಸಿಟ್ಟಲ್ಲೋ, ಬೇಜಾರದಲ್ಲೋ, ಖುಷಿಯಲ್ಲೋ, ನೋವಲ್ಲೋ ಒಮ್ಮೆ ತಾಳಿ ಕಟ್ಟಿದರೆ ಮುಗಿದೇ ಹೋಯ್ತು. ಆಮೇಲೆ ಅವಳ ಜೊತೆಗೇ ಬಾಳ್ವೆ ಮಾಡಬೇಕು ಅಂತ ನೀತಿ ಪಾಠ ಹೇಳುತ್ತಾಳೆ. ಚರಣ್ ತಾಳಿ ಕಟ್ಟಿದ ಕಾರಣಕ್ಕೆ ಎಲ್ಲ ಶ್ರೀಮಂತಿಕೆ ತ್ಯಜಿಸಿ ಆತನ ಜೊತೆ ಬಾಳ್ವೆ ಮಾಡುತ್ತಿರುವ ತನ್ನ ಉದಾಹರಣೆಯನ್ನೇ ಕನ್ನಿಕಾ ತಮ್ಮ ಧ್ರುವನಿಗೆ ಕೊಟ್ಟಿದ್ದಾಳೆ. ಇನ್ನೂ ಮೂರು ದಿನದೊಳಗೆ ಐಶ್ವರ್ಯಾ ಜೊತೆ ಬದಕಲು ಸಿದ್ಧನಾಗಬೇಕು ಅಂತ ಹೇಳಿ ಕಳಿಸುತ್ತಾಳೆ.

Tap to resize

Latest Videos

Lakshana: ಕೋಟ್ಯಧಿಪತಿ ಮಗಳಾಗಿ ಮೆರೆದ ಶ್ವೇತಾ ಬೀದಿಗೆ ಬಿದ್ದಿದ್ದಾಳೆ, ಇನ್ಮೇಲೆ ಲೈಫ್ ಹೇಂಗೋ!

ಭಾರತೀಯ ಸಂಪ್ರದಾಯದಲ್ಲಿ ಹಿಂದಿನಿಂದಲೂ ತಾಳಿಗೆ ಮಹತ್ವವಿದೆ. ಇದಕ್ಕೆ ಮಂಗಲಸೂತ್ರ ಅನ್ನುವ ಹೆಸರೂ ಇರುವ ಕಾರಣ ಈ ತಾಳಿ ಗಂಡನಿಗೆ ಹಾಗೂ ಇಡೀ ಸಂಸಾರಕ್ಕೆ ಮಂಗಲವನ್ನೇ ತರುತ್ತದೆ ಎಂಬ ನಂಬಿಕೆ ಇದೆ. ಆದಿಯಲ್ಲಿ ಶಿವ ಪಾರ್ವತಿಗೆ ಮಂಗಲಸೂತ್ರ ಕಟ್ಟಿದ. ಆಮೇಲಿಂದ ಆ ಪರಂಪರೆ(Tradition) ಎಲ್ಲ ದಂಪತಿಗಳಲ್ಲೂ ಮುಂದುವರಿಯಿತು ಅನ್ನುವ ನಂಬಿಕೆ ಇದೆ. ಈ ತಾಳಿ ಕಟ್ಟುವಾಗ ಹಾಕುವ ಮೂರು ಗಂಟುಗಳು ಮೂರು ವಿಚಾರಗಳನ್ನು ಸೂಚಿಸುತ್ತವೆ. ಈ ಮೂಲಕ ಪತಿಯಾದವನು, ಧರ್ಮದೊಂದಿಗೆ ನಾನು ಪತ್ನಿಯೊಂದಿಗೆ ನಡೆದುಕೊಳ್ಳುತ್ತೇನೆ, ಧನವನ್ನು ಅವಳೊಂದಿಗೆ ಅನುಭವಿಸುತ್ತೇನೆ, ತನ್ನ ಕೋರಿಕೆಗಳನ್ನು, ಕಾಮನೆಗಳನ್ನು ಅವಳೊಂದಿಗೆ ತೀರಿಸಿಕೊಳ್ಳುತ್ತೇನೆ ಎಂಬ ಆಚರಣೆಗೆ ಬದ್ಧನಾಗುತ್ತಾನೆ. ಮುಂದೆ ಬದುಕಿನುದ್ದಕ್ಕೂ ಪತಿ ಪತ್ನಿಯರಾಗಿ ಎಲ್ಲ ಧರ್ಮಕಾರ್ಯಗಳನ್ನು ಜೊತೆಯಾಗಿ ಮಾಡಬೇಕು ಎಂಬ ನಂಬಿಕೆ ಇದರ ಹಿಂದಿದೆ.

ಬಿಗ್ ಬಾಸ್ ಖ್ಯಾತಿಯ Dimpy Ganguly ಪ್ರೆಗ್ನೆನ್ಸಿ ಫೋಟೋಶೂಟ್‌ ವೈರಲ್‌

ಈ ತಾಳಿ ಧರಿಸೋದರಿಂದ ಆರೋಗ್ಯದ ಪ್ರಯೋಜನಗಳೂ ಇವೆ ಎನ್ನುತ್ತದೆ ಶಾಸ್ತ್ರ. ಇದು ಹೆಣ್ಣಿನ ದೇಹದಲ್ಲಿರುವ ನೆಗೆಟಿವ್ ಎನರ್ಜಿ(Negative enery)ಯನ್ನು ತೆಗೆದುಹಾಗುತ್ತದೆ. ಯಾವುದೇ ಕಷ್ಟ ಬಂದರೂ ಸಹಿಸುವ ಶಕ್ತಿ ನೀಡುತ್ತದೆ. ಮಗುವಿಗೆ ಎದೆಹಾಲು ನೀಡಲು ಸಹಕಾರಿ ಇತ್ಯಾದಿ ನಂಬಿಕೆಗಳು ತಾಳಿಯ ಕುರಿತಾಗಿ ಇವೆ. ಕಟ್ಟಿದ ತಾಳಿ ತೆಗೆದಿಟ್ಟರೆ ಅಪಚಾರ, ಅದರಿಂದ ಹೆಣ್ಣಿಗೆ ಮಾತ್ರ ಅಲ್ಲ ಗಂಡಿಗೆ, ಆತನ ಸಂಸಾರಕ್ಕೆ ಸಾಕಷ್ಟು ವಿಘ್ನಗಳು ಬರುತ್ತವೆ ಎಂಬ ನಂಬಿಕೆ. ತಾಳಿ ತೆಗೆದಿಟ್ಟರೆ ಗಂಡನ ಆಯುಸ್ಸು, ಆರೋಗ್ಯ ಕ್ಷೀಣವಾಗುತ್ತದೆ. ಆತನ ಹಾಗೂ ಸಂಸಾರದ ಚೈತನ್ಯ ಉಡುಗುತ್ತದೆ ಎಂಬ ನಂಬಿಕೆಯೂ ಇದೆ.

ಅಣ್ಣ-ತಂಗಿ ಧಾರಾವಾಹಿಯಿಂದ ಹೊರ ನಡೆದ ನಟಿ ಮಾನ್ಸಿ ಜೋಶಿ; ಕಾರಣವೇನು?

click me!