ಪುಟ್ಟಕ್ಕನ ಮಕ್ಕಳು ಕಂಠಿ ಮತ್ತು ಅಮೃತಧಾರೆಯ ಗೌತಮ್ ಅವರು ಈ ಬಾರಿಯ ಜೀ ಕುಟುಂಬ ಅವಾರ್ಡ್ನ ನೆಚ್ಚಿನ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಅವರು ಹೇಳಿದ್ದೇನು?
ನವೆಂಬರ್ 10 ಮತ್ತು 11ರಂದು ನಡೆದಿದ್ದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಹಲವಾರು ಜೀ ಕನ್ನಡ ವಾಹಿನಿಯರ ಸೀರಿಯಲ್ ತಾರೆಯರು ಹಾಗೂ ಸೀರಿಯಲ್ ಹಿಂದೆ ದುಡಿದಂಥವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಲ್ಲಿ ನೆಚ್ಚಿನ ನಾಯಕ ನಟನಾಗಿ ಇಬ್ಬರು ನಾಯಕರು ಪ್ರಶಸ್ತಿ ಪಡೆದುಕೊಂಡರು. ಅವರಲ್ಲಿ ಒಬ್ಬರು ಅಮೃತಧಾರೆ ಸೀರಿಯಲ್ನ ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಹಾಗೂ ಇನ್ನೊಬ್ಬರು ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಂಠಿ ಪಾತ್ರಧಾರಿ ಧನುಷ್. ರಾಜೇಶ್ ನಟರಂಗ ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದರು. ಧನುಷ್ ಇದಾಗಲೇ ಇವರು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. 'ನನ್ನ ನಗು'ಎಂಬ ಹಾಡಿನ ಆಲ್ಬಂ ಕೂಡ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು.
ಇವರಿಬ್ಬರೂ ತಮಗೆ ಸಿಕ್ಕಿರೋ ಅವಾರ್ಡ್ ಬಗ್ಗೆ ಸಕತ್ ಖುಷಿ ಪಟ್ಟಿದ್ದಾರೆ. ಈ ವರ್ಷದ ನಾಯಕ ಪ್ರಶಸ್ತಿ ಸ್ವೀಕರಿಸುವುದಕ್ಕೆ ಖುಷಿಯಾಗಿದೆ. ಮ್ಯಾರಥಾನ್ ರೀತಿಯಲ್ಲಿ ಧಾರಾವಾಹಿ ಶುರುವಾಗಿದೆ. ಮ್ಯಾರಥಾನ್ ಮಾಡುವ ಸಂದರ್ಭದಲ್ಲಿ ಆಗ್ಗಾಗ್ಗೆ ಎನರ್ಜಿ ಬೂಸ್ಟ್ ಕೊಟ್ಟರೆ ಇನ್ನೂ ಚೆನ್ನಾಗಿ ಓಡಬಹುದು. ಅದೇ ರೀತಿ ಎನರ್ಜಿ ಬೂಸ್ಟ್ ರೀತಿಯಲ್ಲಿ ಅವಾರ್ಡ್ಗಳು ಕೆಲಸ ಮಾಡುತ್ತವೆ. ಇಂಥ ಅವಾರ್ಡ್ ಕೊಟ್ರೆ ಸ್ಫೂರ್ತಿ ಬರುತ್ತದೆ ಎಂದು ರಾಜೇಶ್ ನಟರಂಗ ಹೇಳಿದರೆ, ಧನುಷ್ ಅವರು, ಇಷ್ಟು ಪ್ರೀತಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು. ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ನೀವೇ ಕಾರಣ ಎಂದಿದ್ದಾರೆ. ನಿಮ್ಮ ಪ್ರೀತಿ ಮತ್ತು ಅಭಿಮಾನದಿಂದ ಈ ಅವಾರ್ಡ್ ಎತ್ತಲು ಶಕ್ತಿ ಕೊಟ್ಟಿದೆ ಎಂಧ ಧನುಷ್ ಅವರು ತುಂಬಾ ಖುಷಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇಬ್ಬರಿಗೂ ಸ್ಯಾಂಡಲ್ವುಡ್ ಸ್ಟಾರ್ ಶಿವರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.
ನಿಮ್ಮಪ್ಪ ಪಟಾಕಿ ಫ್ಯಾಕ್ಟರಿ ಇಟ್ಟಿದ್ದಾರಾ? ನೀವೊಂದು ಬಾಂಬ್ ಎಂದ ಅಮೃತಧಾರೆ ಗೌತಮ್!
ಅಮೃತಧಾರೆ ಸೀರಿಯಲ್ ಬಗ್ಗೆ ಹೇಳುವುದಾದರೆ, ಭೂಮಿಕಾ (Bhoomika) ಅಮೃತಧಾರೆ ಸೀರಿಯಲ್ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್. ಕೋಟ್ಯಧೀಶ್ವರ ಬಿಜಿನೆಸ್ಮೆನ್ ಆಗಿ ನಟಿಸುತ್ತಿರುವವರು ಗೌತಮ್. ಟಿಆರ್ಪಿಯಲ್ಲಿಯೂ ಮುಂದಿರೋ ಈ ಸೀರಿಯಲ್ನಲ್ಲಿ ಈ ಜೋಡಿಯನ್ನು ಪ್ರೇಕ್ಷಕರು ಸಕತ್ ಇಷ್ಟಪಡುತ್ತಿದ್ದಾರೆ. ಇವರನ್ನೇ ಜನರು ನೆಚ್ಚಿನ ನಾಯಕರಾಗಿ ಸ್ವೀಕರಿಸಿದ್ದು, ಜೀ ಕನ್ನಡ ಕೂಡ ಅವರನ್ನೇ ಆಯ್ಕೆ ಮಾಡಿದೆ.
ಇನ್ನು ಪುಟ್ಟಕ್ಕನ ಮಕ್ಕಳು (Puttakkana Makkalu). ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ. ಇದರಲ್ಲಿ ಹೈಲೈಟ್ ಆಗಿರುವ ಪಾತ್ರಗಳಲ್ಲಿ ಒಂದು ಕಂಠಿ. ಇವರ ಅಭಿನಯಕ್ಕೆ ಧಾರಾವಾಹಿ ಪ್ರಿಯರು ಫಿದಾ ಆಗಿದ್ದಾರೆ. ಇವರಿಗೂ ನೆಚ್ಚಿನ ನಾಯಕ ಪ್ರಶಸ್ತಿ ಸಿಕ್ಕಿದೆ.
ಅತ್ತೆಯನ್ನು ಸಕತ್ ಇಂಪ್ರೆಸ್ ಮಾಡೋದು ಹೇಗೆ? ಶ್ರೀಮಸ್ತು ಶುಭಮಸ್ತು ಸೊಸೆ ಸಿರಿ ಹೇಳಿದ್ದಾರೆ ಕೇಳಿ...