
ಕೌನ್ ಬನೇಗಾ ಕರೋರ್ಪತಿಯಲ್ಲಿ ರೋಚಕ ಕ್ಷಣ: ರಜನಿ ಸ್ಟೈಲ್ನಲ್ಲಿ Rishab Shetty- ಬೆರಗಾದ ಅಮಿತಾಭ್
ಕಾಂತಾರ (Kantara) ನಟ ರಿಷಬ್ ಶೆಟ್ಟಿ ಅವರು ಇದೀಗ ಪ್ಯಾನ್ ಇಂಡಿಯಾ ಮೀರಿದ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಒಂದೇ ಒಂದು ರೋಲ್ಗಾಗಿ ಪರದಾಡುತ್ತಿದ್ದ, ಮಾಡಿದ ಸಿನಿಮಾಕ್ಕೆ ಒಂದೇ ಒಂದು ಥಿಯೇಟರ್ ಸಿಗದೇ ಪರದಾಡಿದ್ದ ನಟನೀಗ ಯಾವ ಪರಿಯಲ್ಲಿ ಡಿಮಾಂಡ್ ಕುದುರಿಸಿಕೊಂಡಿದ್ದಾರೆ ಎನ್ನುವುದು ಹೇಳುವುದೇ ಬೇಡ. 2023ರಲ್ಲಿ ಕಾಂತಾರ ಚಿತ್ರ ಮಾಡಿದಾಗಲೇ ನಟ ರಿಷಬ್ ಶೆಟ್ಟಿ (Rishab Shetty) ಅವರ ಲೆವೆಲ್ಲೇ ಬೇರೆ ಹೋಗಿತ್ತು. ಆದರೆ ಇದೀಗ ಕಾಂತಾರ ಚಾಪ್ಟರ್-1 ಬಂದ ಮೇಲಂತೂ ಕೇಳುವುದೇ ಬೇಡ.
ಇಂತಿಪ್ಪ ರಿಷಬ್ ಶೆಟ್ಟಿ ಅವರಿಗೆ ಈಗ ಎಲ್ಲಿಲ್ಲದ ಬೇಡಿಕೆ. ವಿವಿಧ ಭಾಷೆಗಳ ಘಟಾನುಘಟಿ ಸಿನಿಮಾ ತಾರೆಯರು, ಗಣ್ಯರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಕೂಡ ಹಾಡಿ ಹೊಗಳುತ್ತಿದ್ದಾರೆ. ಒಬ್ಬ ಕಲಾವಿದನನ್ನು ಇನ್ನೊಬ್ಬ ಕಲಾವಿದ ಹೊಗಳುವುದು ಸ್ವಲ್ಪ ಕಮ್ಮಿನೇ. ಆದರೆ ರಿಷಬ್ ಶೆಟ್ಟಿ ಅವರ ವಿಷಯದಲ್ಲಿ ಹಾಗಾಗುತ್ತಿಲ್ಲ. ಬಹುತೇಕ ಎಲ್ಲಾ ಭಾಷೆಗಳ ಸ್ಟಾರ್ ನಟರು ಕೂಡ ಕಾಂತಾರ-1ರ ಬಗ್ಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದೀಗ ನಟ ರಿಷಬ್ ಶೆಟ್ಟಿ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋರ್ಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು Kaun Banega Crorepathiಯ 17ನೇ ಸಂಚಿಕೆ. ಈ ಸಂಚಿಕೆಯಲ್ಲಿ ಆಗಮಿಸಿರುವ ರಿಷಬ್ ಶೆಟ್ಟಿ ಅವರು ರಜನಿಕಾಂತ್ ಅವರ ಕುರಿತು ಮಾತನಾಡಿದ್ದಾರೆ. ಆ ಸಮಯದಲ್ಲಿ ಅಲ್ಲಿದ್ದ ಒಬ್ಬರು ರಿಷಬ್ ಶೆಟ್ಟಿ ಅವರು ರಜನಿಕಾಂತ್ ಅವರ ನಡಿಗೆಯನ್ನು ಚೆನ್ನಾಗಿ ತೋರಿಸುತ್ತಾರೆ ಎಂದಾಗ ಅಮಿತಾಭ್ ಬಚ್ಚನ್ (Amitabh Bachchan) ತೋರಿಸುವಂತೆ ಹೇಳಿದ್ದಾರೆ.
ಆಗ ರಿಷಬ್ ಶೆಟ್ಟಿ ರಜನಿಕಾಂತ್ ಸ್ಟೈಲ್ನಲ್ಲಿ ವಾಕ್ ಮಾಡಿದ್ದಾರೆ. ಈ ಷೋಗೆ ಪಂಚೆಯಲ್ಲಿಯೇ ಬಂದಿರೋ ಶೆಟ್ಟಿ ಅವರು ರಜನೀ ಅವರ ಸ್ಟೈಲ್ ನೋಡಿ ಖುದ್ದು ಅಮಿತಾಭ್ ಬೆರಗಾಗಿದ್ದಾರೆ. ಕೊನೆಗೆ ರಿಷಬ್ ಶೆಟ್ಟಿ ಅವರು ಅಮಿತಾಭ್ ಅವರಿಗೆ ಅಗ್ನಿಪಥ್ ಚಿತ್ರದ ಡೈಲಾಗ್ ಹೇಳುವಂತೆ ಅಮಿತಾಭ್ ಅವರನ್ನು ಕೋರಿದ್ದಾರೆ. ಇಷ್ಟು ವರ್ಷವಾದರೂ ಆ ಸಿನಿಮಾದ ಡೈಲಾಗ್ ನೆನಪಿಟ್ಟುಕೊಂಡಿರುವ ಅಮಿತಾಭ್ ಅದನ್ನು ಹೇಳಿದಾಗ, ಇಡೀ ಸಭೆಯಲ್ಲಿ ಚಪ್ಪಾಳೆಗಳ ಸುರಿಮಳೆ. ಅದರ ವಿಡಿಯೋ ಇಲ್ಲಿದೆ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.