
ಬೆಂಗಳೂರು (ಅ.17): ನಟ ಚಿರಂಜೀವಿ ಸರ್ಜಾ ಅವರಿಗೆ ಶುಕ್ರವಾರ 40ನೇ ವರ್ಷದ ಹುಟ್ಟಿದ ಹಬ್ಬ. 2020ರ ಜೂನ್ 7 ರಂದು ಅಕಾಲಿಕವಾಗಿ ತಮ್ಮ 35ನೇ ವರ್ಷದಲ್ಲಿ ಸಾವು ಕಂಡಿದ್ದ ಚಿರಂಜೀವಿ ಸರ್ಜಾ ಅವರನ್ನು ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್‌ಹೌಸ್‌ನಲ್ಲಿ ಸಮಾಧಿ ಮಾಡಲಾಗಿತ್ತು. ಶುಕ್ರವಾರ ಪತ್ನಿ ಮೇಘನಾ ರಾಜ್ ಹಾಗೂ ಪುತ್ರ ರಾಯನ್ ರಾಜ್ ಸರ್ಜಾ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಚಿರಂಜೀವಿ ಸರ್ಜಾ ನಿಧನರಾದ ವೇಳೆ ಮೇಘನಾ ರಾಜ್, ರಾಯನ್‌ಗೆ ಗರ್ಭಿಣಿಯಾಗಿದ್ದರು. ಅದೇ ವರ್ಷದ ಅಕ್ಟೋಬರ್ 22 ರಂದು ಮೇಘನಾ ರಾಜ್, ರಾಯನ್‌ಗೆ ಜನ್ಮ ನೀಡಿದ್ದರು.
ತಂದೆಯ ಸಮಾಧಿಗೆ ತಾಯಿಯ ಜೊತೆ ಭೇಟಿ ನೀಡಿದ ರಾಯನ್ ಸರ್ಜಾ ಸಮಾಧಿಯ ಎದುರು ಆಡಿರುವ ಮಾತುಗಳು ಭಾವುಕವಾಗಿದೆ. ಮಗನಿಗೆ ಸಮಾಧಿಗೆ ಕೈಮಗಿಸಿರುವ ಮೇಘನಾ ರಾಜ್, ಬಳಿಕ ಮಗ ಹೇಳುತ್ತಿರುವುದನ್ನು ಕೇಳುತ್ತಾ ನಿಂತಿದ್ದಾರೆ. ಈ ವೇಳೆ ರಾಯನ್ ಸರ್ಜಾ, 'ನಿಮಗೆ ನಾನು ಏನು ಹೇಳಬೇಕು ಗೊತ್ತಾ? ಅಪ್ಪ ನೀವು ಆಮೇಲೆ ಕಾರಲ್ಲಿ ಬನ್ನಿ.. ನಾನು ನಿಂಗೆ ಗಿಫ್ಟ್ ಕೊಡ್ತೀನಿ..' ಎಂದು ಹೇಳಿದ್ದಾರೆ.
ಇನ್ನೊಂದೆಡೆ ಮೇಘನಾ ರಾಜ್ ತಮ್ಮ ಇನ್ಸ್‌ಟಾಗ್ರಾಮ್ ಪೋಸ್ಟ್‌ಲ್ಲಿ ಚಿರು ಸರ್ಜಗೆ ಜನ್ಮದಿನದ ವಿಶ್ ಮಾಡಿದವರ ಫೋಟೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿಕೊಡಿದ್ದಾರೆ. ಧ್ರುವ ಸರ್ಜಾ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ ನಮ್ಮ ಅಣ್ಣ ಎಂದು ಬರೆದುಕೊಂಡಿದ್ದಾರೆ. ಇದನ್ನು ಮೇಘನಾ ರಾಜ್ ಶೇರ್ ಮಾಡಿದ್ದಾರೆ.
ಪೂರ್ತಿಯಾಗಿ ಅಮ್ಮನ ಆರೈಕೆಯಲ್ಲಿಯೇ ಬೆಳೆದಿರುವ ರಾಯನ್ ರಾಜ್ ಸರ್ಜಾ ಬಗ್ಗೆ ಮೇಘನಾ ರಾಜ್ ಇತ್ತೀಚಗೆ ಒಂದು ದೂರು ಹೇಳಿದ್ದರು. ಶಾಲೆಗೆ ಹೋದಾಗ ಆತ ತನ್ನ ಫ್ರೆಂಡ್ಸ್‌ಗೆಲ್ಲಾ ಬೈಸೆಪ್ಸ್ ತೋರಿಸ್ತಾನೆ. ಇದಕ್ಕೆ ಧ್ರುವ ಸರ್ಜಾನೇ ಕಾರಣ ಎಂದು ತಮಾಷೆಯಾಗಿ ಹೇಳಿದ್ದರು.
ಖಾಸಗಿ ಟಿವಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ್ದ ಮೇಘನಾ ರಾಜ್, ಗಂಡು ಮಗುವಾದರೆ ಹೇಗೆ ಲೈಫ್‌ನ ಬ್ಯಾಲೆನ್ಸ್ ಮಾಡಬೇಕು ಅನ್ನೋದನ್ನ ಮದುವೆಯಾದ ಆರಂಭದ ಎರಡು ವರ್ಷಗಳಲ್ಲೇ ಕಳಿತುಕೊಂಡೆ. ಅದರಲ್ಲೂ ಧ್ರುವ ಸರ್ಜಾನನ್ನು ಬ್ಯಾಲೆನ್ಸ್ ಮಾಡೋದು ಬಹಳ ಕಷ್ಟ ಎಂದು ಹೇಳಿದ್ದರು.
ಇದೇ ವೇಳೆ ಮೇಘನಾ ರಾಜ್, ಧ್ರುವ ಸರ್ಜಾಗೆ ಒಮ್ಮೆ ಬೈದಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು. 'ತುಂಬಾ ಮಳೆ. ರಾಯನ್‌ನನ್ನು ಸ್ಕೂಲ್‌ಗೆ ಹೋಗಲು ರೆಡಿ ಮಾಡುತ್ತಿದ್ದೆ. ಹೊರಗಡೆ ತುಂಬಾ ಚಳಿ ಇದ್ದ ಕಾರಣ, ಫುಲ್ ಓವರ್ ಹಾಕೋ ಎನ್ನುತ್ತಿದ್ದೆ. ಆದರೆ, ಆತ ನನಗೆ ಫುಲ್‌ಓವರ್ ಬೇಡ. ಟಿಶರ್ಟ್ ಬೇಕು ಎನ್ನುತ್ತಿದ್ದ. ಯಾಕೆ ಟಿಶರ್ಟ್ ಬೇಕು ಅಂತಾ ಅಷ್ಟು ಹಠ ಮಾಡ್ತಿದ್ದೀಯಾ ಅಂತಾ ಹೇಳಿದ್ದಕ್ಕೆ, ಪುಲ್‌ಓವರ್ ಹಾಕಿಕೊಂಡರೆ ಶಾಲೆಯಲ್ಲಿ ನನ್ನ ಬೈಸೆಪ್ಸ್ ಕಾಣಲ್ಲ ಎಂದಿದ್ದ. ಇಂಥವೆಲ್ಲಾ ಸ್ಕೂಲ್ ಆಫ್ ಸರ್ಜಾ ಫ್ಯಾಮಿಲಿಯಿಂದಲೇ ಆತ ಕಲಿತಿರೋದು. ಅವನು ಈ ಸ್ಕೂಲ್‌ಗೆ ಹೋಗ್ತಾ ಇದ್ದಾನೆ. ಆದ್ರೆ ನಾನು ಮಾತ್ರ ಅವನನ್ನು ಬೇರೆ ಸ್ಕೂಲ್‌ಗೆ ಕಳಿಸ್ತಾ ಇದ್ದೇನೆ. ಆದ್ರೆ ಅವನಿಗೆ ಎಜುಕೇಷನ್ ಧ್ರುವನಿಂದ ಆಗ್ತಿದೆ' ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.