ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ಸಮೀಪದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಏಕೈಕ ದೇವಾಲಯವಿದೆ. ಸಿರಿಗನ್ನಡಕ್ಕೆ ಮಹತ್ವ ನೀಡಿ ಬಂದಿರುವ ಅಪರೂಪದ ಸೀರಿಯಲ್ ಕನ್ನಡತಿಯ ನಾಯಕ ನಾಯಕಿ ಹರ್ಷ ಭುವಿ ಮದುವೆ ಅಂದುಕೊಂಡ ಕನ್ನಡ ಮದುವೆ ಇಲ್ಲೇ ನಡೆಯುತ್ತಾ?
ಕಲರ್ಸ್ ಕನ್ನಡ ವೀಕೆಂಡ್‌ನಲ್ಲಿ 'ಕನ್ನಡತಿ' ಅಭಿಮಾನಿಗಳಿಗೆ ಹೊಸದೊಂದು ಅಚ್ಚರಿ ನೀಡಿದೆ. ಸಾಮಾನ್ಯವಾಗಿ ವೀಕೆಂಡ್‌ಗಳಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗೋ ರಿಯಾಲಿಟಿ ಶೋಗಳನ್ನೇ ಬಗ್ಗೆಯೇ ಹೆಚ್ಚು ಪ್ರೋಮೋ ನೀಡಿ ಪ್ರಮೋಶನ್ ಮಾಡೋದು ರೂಢಿ. ಆದರೆ ಈ ಬಾರಿ ಮಾತ್ರ ಇದು ವೀಕೆಂಡ್ ಅನ್ನೋದನ್ನೂ ಮರೆತು ಮುಂದಿನ ವಾರದ ಕನ್ನಡತಿಯ ಗ್ಲಿಂಪ್ಸ್ಅನ್ನು ನೀಡಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದೆ. ಸಿದ್ಧಾಪುರ ಸಮೀಪದ ಭುವನಗಿರಿ ಎಂಬ ಕನ್ನಡ ತಾಯಿ ಭುವನೇಶ್ವರಿಯ ದೇವಾಲಯದಲ್ಲಿ ಹರ್ಷ ಭುವಿ ಇರೋದನ್ನು ತೋರಿಸಿದೆ. ಈಗಾಗಲೇ ಹಿಂದಿನ ಎಪಿಸೋಡ್‌ನಲ್ಲಿ ಭುವಿ ಹಾಗೂ ಹರ್ಷ 'ಕನ್ನಡದ ಮದುವೆ' ಆಗ್ತಿರೋ ಬಗ್ಗೆ ಸೂಚನೆ ನೀಡಲಾಗಿದೆ. ಹಾಗಿದ್ದರೆ ಕನ್ನಡ ತಾಯಿ ಭುವನೇಶ್ವರಿಯ ಸನ್ನಿಧಾನದಲ್ಲೇ ಹರ್ಷ ಭುವಿಯ 'ಕನ್ನಡದ ಮದುವೆ' ನಡೆಯುತ್ತಾ ಅನ್ನೋ ಕುತೂಹಲ 'ಕನ್ನಡತಿ' ಪ್ರೇಕ್ಷಕರಲ್ಲಿ ಮೂಡಿದೆ.
'ಕನ್ನಡತಿ' ಸೀರಿಯಲ್ ನೋಡೋ ಪ್ರತಿಯೊಬ್ಬರಿಗೂ ಈ ಸೀರಿಯಲ್‌ನಲ್ಲಿ ಕನ್ನಡಕ್ಕೆ ಹೆಚ್ಚು ಮಹತ್ವ ನೀಡಿರೋದು ಗೊತ್ತು. ಈ ಸೀರಿಯಲ್‌ನ ಕೊನೆಯಲ್ಲಿ ಬರುವ 'ಸಿರಿಗನ್ನಡಂ ಗೆಲ್ಗೆ' ಅನ್ನೋ ತುಣುಕನ್ನು ನೀವೆಲ್ಲರೂ ನೋಡಿರ್ತೀರಿ. ಅದರಲ್ಲಿ ಕನ್ನಡ ಟೀಚರ್ ಕನ್ನಡ ಭಾಷೆಯ ಯಾವುದೋ ಒಂದು ಸ್ವಾರಸ್ಯಕರ ಸಂಗತಿಯನ್ನು ತೆಗೆದುಕೊಂಡು ಅದರ ಬಗ್ಗೆ ಹೇಳ್ತಾಳೆ. ಈ ತುಣುಕುಗಳು ಸೀರಿಯಲ್ಲಿನ ಜೊತೆಗೂ ಪ್ರತ್ಯೇಕವಾಗಿಯೂ ವೈರಲ್ ಆಗುತ್ತಿದ್ದವು. ಕನ್ನಡ ಭಾಷಾಪ್ರಿಯರಿಗಂತೂ ಇದು ತುಂಬಾನೇ ಪ್ರಿಯವಾಗಿತ್ತು. ಕನ್ನಡ ಸೀರಿಯಲ್ ಗಳಲ್ಲೇ ಇದು ಮಾದರಿ ಅಂತಾನೂ ಹೇಳಲಾಗುತ್ತದೆ. ಇಂಥ ಭುವಿಯ ಮದುವೆ ಕನ್ನಡ ದೇವಿಯ ದೇವಾಲಯದಲ್ಲೇ ಆಗುತ್ತಿರೋದು ವಿಶೇಷ.
ಇದನ್ನೂ ಓದಿ: Kannadathi :ಕನ್ನಡತಿಯಲ್ಲಿ ಕನ್ನಡದ ಮದುವೆ! ವೆಡ್ಡಿಂಗ್ ಪ್ಲಾನರ್ ವರೂ ಇದಕ್ಕೆ ರೆಡಿನಾ?
ಯಾವುದೀ ಭುವನಗಿರಿ ದೇವಸ್ಥಾನ ?
ಭುವನಗಿರಿ ಎಂಬುದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಅಲ್ಲಿನ ದೇವಸ್ಥಾನದಿಂದಾಗಿ ಅಲ್ಲಿಗೆ ಆ ಹೆಸರು ಬಂದಿದೆ. ಭುವನಗಿರಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಸ್ಥಾನವಿದೆ. ಸಿದ್ದಾಪುರದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದೆ. ತುಂಬ ಹಿಂದಿನ ಕಾಲದಲ್ಲಿಯೇ ಪ್ರಾರಂಭಗೊಂಡಿದ್ದ ಭುವನೇಶ್ವರಿ ದೇವಾಲಯದ ನಿರ್ಮಾಣವು ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿಯೂ ಮುಂದುವರೆಯಿತು, 1692ರಲ್ಲಿ ಬಿಳಗಿ ಸಾಮ್ರಾಜ್ಯದ ಅರಸರು ಆ ದೇವಸ್ಥಾನವನ್ನು ಪೂರ್ಣಗೊಳಿಸಿದರು. ಬಿಳಗಿ ಸಾಮ್ರಾಜ್ಯದ ಕೊನೆಯ ಆರಸ ಬಸವೇಂದ್ರ ಈ ದೇವಸ್ಥಾನ ಕಟ್ಟುವ ಸಾರಥ್ಯ ವಹಿಸಿದ್ದರು. ಶ್ವೇತಪುರ ಎಂದು ಬಿಳಗಿಯನ್ನು ಕರೆಯಲಾಗಿತ್ತು.
ಇದನ್ನೂ ಓದಿ: ಬ್ರಾ ಮಾತ್ರ ಹಾಕೋ, ನನ್ನನ್ನು ಆಶ್ಲೀಲವಾಗಿ ಯೂಟ್ಯೂಬ್‌ಗೆ ಬಳಸಿಕೊಳ್ಳುತ್ತಿದ್ದಾರೆ; ನಟಿ ಸ್ವಾತಿ ಆರೋಪ
ಕನ್ನಡ ಮಾತೆಯಾದ ಭುವನೇಶ್ವರಿ ತಾಯಿಯ ದೇವಾಲಯ ಇಲ್ಲಿ ಇರುವುದು. ಈ ದೇವಾಲಯದ ಬಳಿ ಒಂದು ತಿಳಿ ನೀರಿನ ಪುಷ್ಕರಿಣಿ ಇದೆ. ಆ ನೀರನ್ನು ದೇವಾಲಯದ ದೇವಿಯ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುವುದು. ಈ ದೇಗುಲ 300 ಅಡಿ ಎತ್ತರದ ಭುವನಗಿರಿ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ. ದೇವಸ್ಥಾನಕ್ಕೆ ಹೋಗಲು 250 ಮೆಟ್ಟಿಲು ಹತ್ತಬೇಕು. ಈ ದೇವಿಗೆ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ.
ಈ ದೇವಾಲಯ ಅರಣ್ಯದ ಮಧ್ಯಭಾಗದಲ್ಲಿ ಇದೆ. ಅದು ಪಶ್ಚಿಮಘಟ್ಟಗಳ ಒಂದು ಭಾಗ. ಭುವನೇಶ್ವರಿ ದೇವಿಯ ದೇವಾಲಯವಲ್ಲದೆ ಇನ್ನೂ ಹಲವಾರು ದೇವಸ್ಥಾನಗಳು ಗಣಪತಿ, ಗೋಪಾಲಕೃಷ್ಳ, ನಂದೀಕೇಶ್ವರನ ದೇವಸ್ಥಾನ ಮತ್ತು ನಾಗರದೇವತೆಗಳ ದೇವಾಲಯವಿದೆ. ಮುಂಜಾನೆ ಸಮಯದಲ್ಲಿ ಮಹಾಮಂಗಳಾರತಿ ಮಾಡುವುದು ರೂಢಿ. ಶ್ರೀ ಭುವನೇಶ್ವರಿ ದೇವಿಯ ಉದ್ಭವಲಿಂಗವು ಆ ದೇವಿಯ ಪಾದತಳದಲ್ಲಿದೆ. ಭುವನೇಶ್ವರಿ ದೇವಾಲಯದಷ್ಟೇ ಪುರಾತನವಾದ ಮತ್ತೊಂದು ದೇವಾಲಯ ಹನುಮಂತನ ದೇವಸ್ಥಾನ. ಆ ದೇವಸ್ಥಾನ ಸಿದ್ದಾಪುರದಿಂದ ೫ ಕಿಲೋಮೀಟರ್ ದೂರದಲ್ಲಿದೆ.
Kannadathi: ಭುವಿ ಅಮ್ಮಮ್ಮ ಮಧ್ಯೆ ಸಿಕ್ಕಾಕ್ಕೊಂಡ ಹರ್ಷನ್ನ ದೇವ್ರೇ ಕಾಪಾಡ್ಬೇಕು!