ವಿದಾಯ ಹೇಳ್ತಿದೆ 'ಕನ್ನಡತಿ' ಧಾರಾವಾಹಿ; ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಲಾವಿದರು

By Shruthi Krishna  |  First Published Jan 18, 2023, 10:38 AM IST

ಕನ್ನಡ ಧಾರಾವಾಹಿಯ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಕಲಾವಿದರು ಕಣ್ಣೀರಾಕಿದ್ದಾರೆ. ಕೊನೆಯ ದಿನದ ಶೂಟಿಂಗ್ ವಿಡಿಯೋ ವೈರಲ್ ಆಗಿದೆ. 


ಕನ್ನಡ ಕಿರುತೆರೆ ಲೋಕದ ಪ್ರಸಿದ್ಧ ಧಾರಾವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಅಪ್ಪಟ ಕನ್ನಡ ಮಾತನಾಡುತ್ತಾ ಪ್ರೇಕ್ಷಕರಿಗೂ ಕನ್ನಡ ಕಲಿಸುತ್ತ ಮುನ್ನುಗ್ಗಿತ್ತಿದ್ದ ಕನ್ನಡತಿ ಧಾರಾವಾಹಿ ಮುಕ್ತಾಯವಾಗುತ್ತಿದೆ. ಕನ್ನಡತಿ ಧಾರಾವಾಹಿ ಪ್ರೇಕ್ಷಕರಿಗೆ ವಿದಾಯ ಹೇಳ್ತಿದೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿತ್ತು. ಇದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಕನ್ನಡತಿ ತಂಡ ಕೊನೆಯ ದಿನದ ಶೂಟಿಂಗ್ ಕೂಡ ಮುಗಿಸಿದೆ. ಅಭಿಮಾನಿಗಳು ಮಾತ್ರವಲ್ಲದೇ ಕನ್ನಡತಿ ತಂಡಕ್ಕೂ ದುಃಖದ ವಿಚಾರವಾಗಿದೆ. ಇತ್ತೀಚಿಗಷ್ಟೆ ಈ ಧಾರಾವಾಹಿಯ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಿದ್ದು ಕೊನೆಯ ದಿನದ ಶೂಟಿಂಗ್‌ನಲ್ಲಿ ಕಲಾವಿದರು ಭಾವುಕರಾಗಿದ್ದಾರೆ, ಕಣ್ಣೀರು ಹಾಕಿದ್ದಾರೆ. 

ಆಸಕ್ತಿದಾಯಕ ಕಥಾಹಂದರ ಹೊಂದಿದ್ದ ಕನ್ನಡತಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿತ್ತು. ಆದರೀಗ ಮುಕ್ತಾಯವಾಗುತ್ತಿರುವುದು ಪ್ರೇಕ್ಷಕರು ಮತ್ತು ಧಾರಾವಾಹಿ ತಂಡಕ್ಕೆ ಭಾರಿ ಬೇಸರ ಮೂಡಿಸಿದೆ. ಶೂಟಿಂಗ್ ಮುಗಿಸಿ ಕೊನೆಯ ದಿನ ಕನ್ನಡತಿ ಸೆಟ್‌ನಲ್ಲಿ ಕಳೆದ ನಟಿ ಸಮೀಕ್ಷಾ, ದಿವ್ಯಾ ಗೋಪಾಲ್ ಇಬ್ಬರೂ ಜೋರಾಗಿ ಅಳುತ್ತಿರುವ ವಿಡಿಯೋ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುವಂತಿದೆ. 'ಕನ್ನಡತಿ ಧಾರಾವಾಹಿ ಶೂಟಿಂಗ್ ಕೊನೆಯ ಕ್ಷಣ' ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ಮಿಸ್ ಯೂ ಆಲ್ ಎಂದು ಹೇಳಿದ್ದಾರೆ. 

Tap to resize

Latest Videos

ನಟಿ ಸಮೀಕ್ಷಾ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಮತ್ತೆ ಇದೇ ತಂಡ ಹೊಸ ಧಾರಾವಾಹಿ ಮೂಲಕ ಬಗ್ಗೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವರು ಕಾಮೆಂಟ್ 'ನೆನಪಿನಲ್ಲಿ ಸದಾ ಉಳಿಯುವ ಧಾರಾವಾಹಿ'  ಎಂದು ಹೇಳಿದ್ದಾರೆ. ಪ್ರೇಕ್ಷಕರು ಕೂಡ ಭಾರವಾದ ಮನಸ್ಸಿನಿಂದ ಬೈ ಬೈ ಕೇಳುತ್ತಿದ್ದಾರೆ. ಹರ್ಷ ಮತ್ತು ಭುವಿಯನ್ನು ಪ್ರೇಕ್ಷಕರು ತುಂಬಾ ಮಿಸ್ ಮಾಡಿಕೊಳ್ಳಲಿದ್ದಾರೆ.

ಕಿರುತೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿ; ಮುಕ್ತಾಯವಾಗುತ್ತಿದೆ 'ಕನ್ನಡತಿ' ಧಾರಾವಾಹಿ

ಕನ್ನಡತಿ ಧಾರಾವಾಹಿಯಲ್ಲಿ ನಾಯಕಿಯಾಗಿ ರಂಜನಿ ರಾಘವನ್ ಭುವನೇಶ್ವರಿ ಪಾತ್ರದಲ್ಲಿ ಕಾಣಿಸಿಕಂಡಿದ್ದರು.  ಅಪ್ಪಟ ಕನ್ನಡ ಮಾತನಾಡುತ್ತಾ ತಪ್ಪಾಗಿ ಮಾತನಾಡಿದವರನ್ನೂ ತಿದ್ದುವ ನಾಯಕಿ ಪಾತ್ರದಲ್ಲಿ ರಂಜನಿ ಕಾಣಿಸಿಕೊಂಡಿದ್ದರು. ನಾಯಕ ಹರ್ಷ ಯುವ ಉದ್ಯಮಿ. ತನ್ನ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಮಯ ಮತ್ತು ಹಣವನ್ನು ಗೌರವಿಸುವ ವ್ಯಕ್ತಿ. ಮಾಡ್ರನ್ ಹರ್ಷ ಸಂಪ್ರದಾಯಸ್ಥ ಭುವಿಯ ಲವ್ ಸ್ಟೋರಿ ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು. 

ಸದ್ಯ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿಯ ಮದುವೆಯಾಗಿದೆ. ಹರ್ಷನ ತಾಯಿ ಅಮ್ಮಮ್ಮ ನಿಧನ ಹೊಂದಿದ್ದು ಅಮ್ಮಮ್ಮನ ಜಾಗವನ್ನು ಭುವಿ ಅಲಂಕರಿಸಿದ್ದಾರೆ. ಅಮ್ಮಮ್ಮನ ಅಧಿಕಾರ ವಹಿಸಿಕೊಂಡಿರುವ ಭುವಿ ಹೇಗೆ ಮನೆ, ಆಫೀಸ್ ಎಲ್ಲವನ್ನೂ ನಿಭಾಯಿಸುತ್ತಾಳೆ. ನಾಯಕ ಹರ್ಷನ ನೆನಪಲ್ಲೇ ದಿನ ಕಳೆಯುತ್ತಿದ್ದ ವರೂದಿನಿ ಪಾತ್ರಕ್ಕೂ ಹ್ಯಾಪಿ ಎಂಡಿಂಗ್ ಕೊಡಲಾಗುತ್ತಿದೆ. ಹೀರೋ ಹರ್ಷನ ಬಿಟ್ರೆ ಯಾರನ್ನು ಮದುವೆಯಾಲ್ಲ ಎನ್ನುತ್ತಿದ್ದ ವರೂದಿನಿ ಈಗ ಮದುವೆಗೆ ಸಿದ್ಧ ಆಗಿದ್ದಾಳೆ. ಲಾಯರ್‌ನನ್ನು ಮದುವೆಯಾಗಲು ವರು ಮನಸ್ಸು ಮಾಡಿದ್ದಾಳೆ.

Kannadathi Serial: ಕನ್ನಡ ದ್ವೇಷಿ ಮ್ಯಾನೇಜರ್ ಮುಖಕ್ಕೆ ಮಸಿ, ಇದು ಪಾಠ ಆಗ್ಲಿ ಅಂತಿದ್ದಾರೆ ಕನ್ನಡಾಭಿಮಾನಿಗಳು!

ವಿಲನ್ ಸಾನಿಯಾ ಇನ್ನೂ ಬದಲಾಗಿಲ್ಲ ಕೊನೆಯಲ್ಲಿ ಸಾನಿಯಾ ಬದಲಾಗ್ತಾಳಾ, ಎಲ್ಲರ ಮನಸ್ಸು ಗೆದ್ದಿರುವ ಭುವಿ ಸಾನಿಯಾಳನ್ನು ಬದಲಾಯಿಸುತ್ತಾಳಾ ಎನ್ನುವುದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗಲಿದೆ. ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಕನ್ನಡ ಪ್ರಸಾರವಾಗಲಿದೆ. ಈ ತಿಂಗಳ ಕೊನೆಯಲ್ಲಿ ಕನ್ನಡತಿ ಧಾರಾವಾಹಿ ಕೂಡ ಕೊನೆಗೊಳ್ಳುತ್ತಿದೆ. ಮತ್ತೆ ಯಾವ ಪಾತ್ರ, ಯಾವ ಧಾರಾವಾಹಿ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.  
 

click me!