
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಜನಿ ರಾಘವನ್ ಕೊರೋನಾ ವಿರುದ್ಧ ಹೊರಾಡಲು ಬೆಂಗಳೂರು ಪೊಲೀಸರ ಜೊತೆ ಸಿವಿಲ್ ವಾರ್ಡ್ ಆಗಿ ಕೈ ಜೋಡಿಸಿದ್ದಾರೆ.
ಮತ್ತೆ ಬ್ಯಾಕ್ ಟು ಪೆವಿಲಿಯನ್‌ಗೆ 'ಪುಟ್ಟಗೌರಿ'; ಕನ್ನಡತಿಯಾಗಿದ್ದಾರೆ ರಂಜನಿ ರಾಘವನ್!
ಸಿವಿಲ್ ವಾರ್ಡ್:
ಈ ಬಗ್ಗೆ ರಜನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನಿಮಗೆಲ್ಲಾ ತಿಳಿದಿರುವ ಹಾಗೆ ಬೆಂಗಳೂರಿನಲ್ಲಿ ಕೋವಿಡ್19 ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಎಲ್ಲರಿಗೂ ಇದೊಂದು ಕಷ್ಟದ ಸಮಯವೇ ಹೌದು. ಅದರಲ್ಲೂ ಪೊಲೀಸರಿಗೆ ಇನ್ನು ಹೆಚ್ಚಿನ ಕಷ್ಟ. ಪೊಲೀಸರಿಗೆ ಸಹಾಯ ಮಾಡಲು ನಮಗೊಂದು ಅವಕಾಶ. ಕೆಲವು ದಿನಗಳ ಹಿಂದೆ ಬೆಂಗಳೂರು ಸಿವಿಲ್ ವಾರ್ಡನ್ ಆಗಿ ಸೇವೆ ಮಾಡುವುದಕ್ಕೆ ಕರೆ ನೀಡಿದ್ದರು. ನಾನು ಈಗ ವಾರ್ಡನ್ ಆಗಿ ಕಾರ್ಯವಹಿಸುತ್ತಿದ್ದೇನೆ. ಸ್ವಯಂಸೇವಕರಾಗಿ ನೀವು ಸೇರುವಂತೆ ಸೂಚಿಸುತ್ತೇನೆ. ಇದರಿಂದ ಒಟ್ಟಾಗಿ ಮಹಾಮಾರಿ ವಿರುದ್ಧ ಹೋರಾಡಲು ಸುಲಭವಾಗುತ್ತದೆ' ಎಂದಿದ್ದಾರೆ.
ಸೂಪರ್ ಹಿಟ್ ಧಾರಾವಾಹಿ 'ಪುಟ್ಟಗೌರಿ ಮದುವೆ' ಭಾಗ 1ರ ನಂತರ 'ಇಷ್ಟದೇವತೆ' ಧಾರಾವಾಹಿ ನಿರ್ದೇಶನ ಮಾಡಿದ ರಂಜನಿ ಈಗ 'ಕನ್ನಡಿತಿ'ಯಲ್ಲಿ ಅಭಿನಯಿಸುತ್ತಿದ್ದಾರೆ. ಅಪ್ಪಟ ಕನ್ನಡ ಶಿಕ್ಷಕಿ ಪಾತ್ರ ಇದಾಗಿದ್ದು ನಡುವೆ ಕನ್ನಡ ಭಾಷೆ ಬಗ್ಗೆ ಜ್ಞಾನ ಹೆಚ್ಚಿಸ ಬೇಕೆಂದು ಒಂದು ಪದದ ಅರ್ಥ, ಅದರ ಸಮನಾರ್ಥ, ವಿರುದ್ಧ ಪದಗಳು ಮತ್ತು ಅದನ್ನು ಹೇಗೆ ಬಳಸ ಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಜ್ಞಾನ ಹೆಚ್ಚಿಸುವ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.