ಮಂಗಳೂರಿನ ಕನ್ನಡ ಬಿಟ್ಟ ಮೇಲೆ ಆಂಕರ್ ಆಗಿ ಕೆಲಸ ಸಿಗ್ತು: ನಿರೂಪಕಿ ಅನುಶ್ರೀ

By Gowthami KFirst Published May 13, 2024, 6:37 PM IST
Highlights

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದಾರೆ. 

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದಾರೆ. ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಬಂದಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಲಭ್ಯವಿದೆ. ತನ್ನ ತಾಯಿ, ಬಾಲ್ಯ ಜೀವನ, ಕಷ್ಟದ ದಿನಗಳು ಶೂನ್ಯದಿಂದ ಆರಂಭಿಸಿ ಸ್ಟಾರ್‌ ನಿರೂಪಕಿಯಾಗಿ ಬೆಳೆದ ಬಗ್ಗೆ ಅನುಶ್ರೀ ಸಂಪೂರ್ಣವಾಗಿ ತುಳುವಿನಲ್ಲಿ ಹೇಳಿಕೊಂಡಿದ್ದು, ಅವರ ಮೊದಲ ತುಳು ಸಂದರ್ಶನಕ್ಕೆ ಕರಾವಳಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ನಿರೂಪಣೆ ಮಾಡುತ್ತಿರುವ ಕಾರಣ ನಿಮ್ಮ ತುಳು ಕೇಳಲು ಉತ್ಸುಕರಾಗಿದ್ದೇವೆ. ನೀವು ತುಳು ಮಾತನಾಡುವುದನ್ನು ಕೇಳಲು ಖುಷಿ ಎಂದು ಅನುಶ್ರಿಯವರ ಬಳಿ ನಿರೂಪಕ ಹೇಳಿದಾಗ ಅದ್ಯಾಕೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅನುಶ್ರೀ. ನಿಮ್ಮ ಮಾತೃಭಾಷೆ ತುಳುವಿನ ಬಗ್ಗೆ ಅತೀ ವಿರಳ ವಿಡಿಯೋಗಳು ಸಿಗುತ್ತದೆ. ಅದಕ್ಕಾಗಿ ನಾವೆಲ್ಲ ಗೂಗಲ್ ಮಾಡಿ ನಿಮ್ಮ ತುಳು ಭಾಷೆಯನ್ನು ಕೇಳುತ್ತೇವೆ ಆದರೆ ಬಹಳ ಅಪರೂಪ ಎಂಬಂತೆ ಸಿಗುತ್ತವೆ ಎಂದು ನಿರೂಪಕ ಹೇಳಿದ್ದಾರೆ.

Latest Videos

ನಾನು ನಟ ಶ್ರೀಮುರಳಿ ಡ್ಯಾನ್ಸ್ ಶೋಗೆ ಬ್ಯಾಕ್ ಡಾನ್ಸರ್‌ ಆಗಿದ್ದೆ: ನಿರೂಪಕಿ ಅನುಶ್ರಿ ಮೊದಲ ತುಳು ಸಂದರ್ಶನ

ನಿಮ್ಮದು ತುಳುವಿನಲ್ಲಿ ಸಂದರ್ಶನ ಇದೆಯೇ ಎಂದು ನಿರೂಪಕ ಕೇಳಿದಾಗ ಅನುಶ್ರೀ, ನನ್ನನ್ನು ಯಾರೂ ಕೂಡ  ಈವರೆಗೆ ತುಳು ಸಂದರ್ಶನಕ್ಕೆ ಕರೆದಿಲ್ಲ ಎಂದು ಜೋರಾಗಿ ನಕ್ಕರು. ಎಷ್ಟು ಜನಕ್ಕೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ವೃತ್ತಿ  ಜೀವನ ಆರಂಭವಾಗಿದ್ದೇ ಮಂಗಳೂರಿನ ಚಾನೆಲ್‌ ವೊಂದರಿಂದ ಆಗ ಕನ್ನಡ ಮಾತನಾಡುವ ರೀತಿ ಬೇರೆ ತರ ಇತ್ತು. ವೃತ್ತಿ ಜೀವನಕ್ಕೆ ಬೆಂಗಳೂರಿಗೆ ಬಂದ ನಂತರ ನನ್ನ ಕನ್ನಡದಲ್ಲಿ  ಬದಲಾವಣೆಯಾಗಿದೆ.

ವಿದ್ಯಾರ್ಥಿಯಾಗಿದ್ದಾಗ ನಾನು ಕನ್ನಡದಲ್ಲಿ ಔಟ್‌ ಆಫ್‌ ಔಟ್‌ ಸ್ಟೂಟೆಂಟ್‌ ಗೀತಾ ಮೇಡಂ ನನಗೆ ಕನ್ನಡ ಶಿಕ್ಷಕಿ. ಅವರಿಗೆ ನನ್ನ ಕನ್ನಡವೆಂದರೆ ತುಂಬಾ ಇಷ್ಟ, 100, 99 ಅಂಕಗಳು ಕನ್ನಡದಲ್ಲಿ ಸಿಗುತ್ತಿತ್ತು. ಆದರೆ ನಾನು ಕನ್ನಡ ಮಾತನಾಡುವ ಬದಲಾವಣೆ ಆಗಬೇಕಿತ್ತು. ನಿರೂಪಣೆಗೆ ಮೊದಲ ಬಾರಿಗೆ ಹೋಗಿದ್ದಾಗ ನಿಮ್ಮ ಕನ್ನಡ ಅಷ್ಟು ಚೆನ್ನಾಗಿಲ್ಲ ಅಂತ ಹೇಳಿದ್ದರು. ನಾನು ಶಾಕ್ ಆದೆ.  ಅದು ಹೇಗೆ ಹೇಳಿದ್ರಿ ಅಂತ ಕೇಳಿದೆ. ನನಗೆ ಆಮೇಲೆ ಮನವರಿಕೆ ಆಯ್ತು  ಏನಂದ್ರೆ ನಾವೆಲ್ಲ ಇಲ್ಲಿ (ದಕ್ಷಿಣ ಕನ್ನಡ)  ಕನ್ನಡದ ಪ್ರತಿಯೊಂದು ಪದಗಳಿಗೆ ಒತ್ತು ಕೊಟ್ಟು ಬಿಡಿಸಿ ಹೇಳಿ ಮಾತನಾಡುತ್ತೇವೆ. ಆದರೆ ಅಲ್ಲಿ (ಬೆಂಗಳೂರು) ಸ್ಲಾಂಗ್ ಬೇರೆ ತರ ಹೀಗಾಗಿ ನನ್ನ ಜೀವನ ಕಟ್ಟಿಕೊಳ್ಳಲು ಹೋಗಿರುವ ಕಾರಣಕ್ಕೆ ಕೆಲಸಕ್ಕೆ ಬೆಲೆ ಕೊಟ್ಟು ಕನ್ನಡ ಮಾತನಾಡುವುದರಲ್ಲಿ ಬದಲಾವಣೆ ಮಾಡಿಕೊಂಡೆ ಎಂದಿದ್ದಾರೆ.

 ಅನುಶ್ರೀ-ಪುನೀತ್‌ ಮೊದಲ ಭೇಟಿ ಆಗಿದ್ದೆಲ್ಲಿ? ಅಪ್ಪು ನೆನೆದು ಭಾವುಕರಾದ ನಿರೂಪಕಿ

ನಾನು ಮೊದ ಮೊದಲ ಚಿಪ್ಸ್ ಮಾರುವರು, ಪಕೋಡ ಮಾರುವವರು, ತರಕಾರಿ ಮಾರುವವರು, ಹಣ್ಣು-ಹಂಪಲು ಮಾರುವವರ ಬಳಿ ಹೋಗಿ ಸುಮ್ಮ ಸುಮ್ಮನೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಆಗ ಅವರು ಇವಳೇನು ಬಹಳ ಪರಿಚಯದವರ ಥರ ಮಾತನಾಡುತ್ತಿದ್ದಾಳೆ ಎಂದು ಅಂದುಕೊಳ್ಳುತ್ತಿದ್ದರು.  ದಿನ ಕಳೆದಂತೆ ಅವರೆಲ್ಲ ಕ್ಲೋಸ್‌ ಆದ್ರು. ನಿಧಾನವಾಗಿ ಅವರ ಸ್ಲಾಗ್‌ ಅನ್ನು ಕಲಿಯಲು ಶುರು ಮಾಡಿದೆ. ಹೀಗಾಗಿ ನನ್ನ ಕನ್ನಡ ನಿರೂಪಣೆಗೆ ಸೆಟ್ಟಾಯಿತು. ಅಲ್ಲಿ ನಾನು ಮಂಗಳೂರಿನವಳೆಂದು ಯಾರಿಗೂ ಗೊತ್ತಿರಲಿಲ್ಲ. ಅವರ ಯೋಚನೆ ಅಂದ್ರೆ ಮಂಗಳೂರಿನವರ ಕನ್ನಡ ಅಂದ್ರೆ ಬೇರೆ ತರ ಎಂದು. ಹೀಗಾಗಿ ಮಂಗಳೂರಿನ ಕನ್ನಡವನ್ನು ನಾನು ಮಾತನಾಡುತ್ತಿರಲಿಲ್ಲ. ಮಂಗಳೂರಿಗೆ ಬಂದರೆ ನಾನು ತುಳುವನ್ನೇ ಮಾತನಾಡುತ್ತೇನೆ. ನೂರು ಸಲ ಇಲ್ಲಿಗೆ ಬಂದರೂ ಗಿರಿಮಂಜಾಸ್‌, ಪಬ್ಬಾಸ್‌ ಗೆಲ್ಲ ಹೋಗುತ್ತಿರುತ್ತೇನೆ  ಎಂದಿದ್ದಾರೆ.

ನನ್ನ ಜನನವಾಗಿದ್ದು ಮಂಗಳೂರಿನಲ್ಲೇ, ಆದರೆ ನನ್ನ ಅಪ್ಪ ಮತ್ತು ಅಮ್ಮ ಇದ್ದಿದ್ದು ಬೆಂಗಳೂರಿನಲ್ಲೇ 5 ನೇ ತರಗತಿವರೆಗೂ ನಾನು ಬೆಂಗಳೂರಿನಲ್ಲೇ ಓದಿದ್ದು, 5 ತರಗತಿ ನಂತರ ನಮ್ಮ ಜೀವನದಲ್ಲಿ ಊಹಿಸಲಾಗದ ತಿರುವಾಯ್ತು. ಅಪ್ಪ ನಮ್ಮನ್ನು ಬಿಟ್ಟು ಹೋದರು. ಆಗ ವಿಧಿ ಇಲ್ಲದೆ ನನ್ನ ಮಾವಂದಿರು ಮತ್ತೆ ನಮ್ಮನ್ನು ಊರಿಗೆ ಕರೆದುಕೊಂಡು ಬಂದರು. ಹಾಗಾಗಿ 6 ನೇ ತರಗತಿಯಿಂದ ನಾನು ಮಂಗಳೂರಿನಲ್ಲೇ ಇದ್ದೇನೆ.  ನಾರಾಯಣ ಗುರು ಮತ್ತು ಗಣಪತಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ದು, ಕೋಡಿಕಲ್‌ ನಲ್ಲಿ ಚಿಕ್ಕ ಮನೆಯಲ್ಲಿ ಇದ್ದೆವು. ಶಾಲೆಗೆ ಹೋಗಲು ಉರ್ವ ಸ್ಟೋರ್‌ ನಲ್ಲಿ ಬರುತ್ತಿದ್ದ ಪಾಪ್ಯೂಲರ್‌, ಭಗವತಿ ಬಸ್‌ ಗೆ ಹತ್ತುತ್ತಿದ್ದೆ. ನಮಗೆಲ್ಲ ಆಗ ಟಿಕೆಟ್‌ ಇರ್ಲಿಲ್ಲ. ಬಸ್‌ ಹತ್ತಿದ ನಂತರ ಡೈವರ್‌ ಬಳಿ ಇರುವ ಬಸ್‌ ಇಂಜಿನ್‌ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದೆವು. ಅಲ್ಲಿಂದ ಬಾಲ್ಯ ಜೀವನ ಆರಂಭ ಎನ್ನಬಹುದು.

ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. 500 ರೂ ಬಾಡಿಗೆ ಕಟ್ಟುವ ಚಿಕ್ಕ ಮನೆಯಲ್ಲಿ ನಾವು ಜೀವನ ನಡೆಸುತ್ತಿದ್ದೆವು. ಅದು ಎತ್ತರದ ಪ್ರದೇಶದಲ್ಲಿತ್ತು. ಮಳೆ ಬಂತೆಂದರೆ ಸ್ವಿಮ್ಮಿಂಗ್ ಪೂಲ್‌ ಥರ ಫುಲ್‌ ಮನೆಯೊಳಗೆ ನೀರು ಬರುತ್ತಿತ್ತು. ಆ ರೀತಿಯ ಒಂದು ಮನೆಯಲ್ಲಿ  ನಾನು , ನನ್ನಮ್ಮ ಮತ್ತು ತಮ್ಮ ಇದ್ದೆವು. ಎಲ್ಲರಿಗೂ ಜೀವನದಲ್ಲಿ ಕಷ್ಟದ ದಿನಗಳೆಂಬುದು ಇದ್ದೇ ಇದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಕಥೆ ಇದೆ. ನನ್ನ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು. ಅದನ್ನು ಹೇಳಬೇಕೆಂದಿಲ್ಲ ಎಂದಿದ್ದಾರೆ.

click me!