ಶೈನ್ ಬದಿಗೆ ಸರಿಸಿ ದೀಪಿಕಾ ದಾಸ್ ತಾಯಿ ಮಗಳಿಗೆ ಕೊಟ್ಟ 'ಆ' ಎಚ್ಚರಿಕೆ

By Suvarna News  |  First Published Jan 1, 2020, 10:47 PM IST

ಬಿಗ್ ಬಾಸ್ ಮನೆಯಲ್ಲಿ ಪರ್ಸನಲ್ ಟಾಸ್ಕ್| ಮನೆಗೆ ಬಂದ ದೀಪಿಕಾ ತಾಯಿ ಕೊಟ್ಟ ಎಚ್ಚರಿಕೆ| ಶೈನ್ ಶೆಟ್ಟಿಯಿಂದ ದೂರವಿರಲು ಸಲಹೆ ಕೊಟ್ರಾ| 


ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ಟಾಸ್ಕ್ ನೀಡಿ ಅಂಕ ಗಳಿಸುವ ಸವಾಲು ನೀಡಲಾಗಿದೆ.  ಜಾಸ್ತಿ ಅಂಕ ಗಳಿಸುವವರು ಮುಂದಿನ ಸಾರಿಗೆ ಇಮ್ಯೂನಿಟಿ ಪಡೆದುಕೊಳ್ಳಲಿದ್ದಾರೆ ಎಂದು ಬಿಗ್ ಬಾಸ್ ಹೇಳಿರುವುದು  ಮನೆಯಲ್ಲಿ ಕಿಚ್ಚು ಹೆಚ್ಚಿಸಿದೆ.

ಇದೆಲ್ಲದರ ನಡುವೆ ಮನೆಗೆ ಸದಸ್ಯರ ಪೋಷಕರು ಭೇಟಿ ಕೊಡುತ್ತಿದ್ದಾರೆ. ಚಂದನಾ ಅವರ ತಾಯಿ ಮಂಗಳವಾರದ ಎಪಿಸೋಡ್ ನಲ್ಲಿ ಬಂದು ಹೋದರೆ ಬುಧವಾರದ ಎಪಿಸೋಡ್ ನಲ್ಲಿ ದೀಪಿಕಾ ದಾಸ್ ತಾಯಿ ಬಂದಿದ್ದರು.

Tap to resize

Latest Videos

undefined

ದೀಪಿಕಾ ದಾಸ್ ತಾಯಿ ಬರುತ್ತಾ ಕೈಯಲ್ಲೊಂದು ವಸ್ತ್ರ ಮತ್ತು ತಿಂಡಿಯನ್ನು ಹಿಡಿದು ತಂದಿದ್ದರು. ತಾಯಿ ಬಂದಾಗ ದೀಪಿಕಾ ಅವರನ್ನು ಅಪ್ಪಿಕೊಳ್ಳಲು ಮುಂದಾದರು. ಆಗ ಶೈನ್ ಆ ಪೊಟ್ಟಣ ಇಸಿದುಕೊಳ್ಳಲು ಮುಂದಾದರು. ಆದರೆ ದೀಪಿಕಾ ತಾಯಿ ಶೈನ್ ಅವರನ್ನು ಸೈಡಿಗೆ ಕಳುಹಿಸಿದರು.

ಬಿಗ್ ಬಾಸ್ ಮನೆಯಲ್ಲಿ ದೀಪಿಕಾಳಿಂದ ಮುತ್ತು ಪಡೆದುಕೊಂಡವರು ಯಾರು

ಜತೆಗೆ ಮಗಳಿಗೆ ಒಂದಿಷ್ಟು ತಿಳಿವಳಿಕೆ ನೀಡಿದರು. ಮನೆಯಲ್ಲಿ ನನಗೆ ಕಿಶನ್ ಮಾತ್ರ ಮೆಚ್ಚುವಂಥ ವ್ಯಕ್ತಿ ಎಂದು ಹೇಳಿದರು. ಕಿಶನ್ ಹತ್ತಿರ ಬಂದಾಗ ನನ್ನ ಮಗಳಿಗೆ ಎಷ್ಟು ಮುತ್ತು ಕೊಟ್ಟಿದ್ದೀಯಾ ಎಂದು ಕಿಶನ್ ಬಳಿ ಪ್ರಶ್ನೆ ಮಾಡಿದರು.

ಮಾತಿನ ಉದ್ದಕ್ಕೂ ಎಚ್ಚರಿಕೆಯನ್ನೇ ಹೇಳುತ್ತ ಶೈನ್ ಶೆಟ್ಟಿಯಿಂದ ದೂರ ಇರಿ ಎಂಬ ಸಲಹೆ ನೀಡಿದ್ದು ಎಲ್ಲರಿಗೂ ಗೊತ್ತಾಯಿತು.  ಬಲೂನ್ ಹಾರಿಸುವುದು ಶೈನ್ ಅವರಿಗೆ ಟಾಸ್ಕ್ ಬಂದಿದ್ದು ಮಾತ್ರ ವಿಚಿತ್ರ.

ಇನ್ನೂ ಮನೆ ಮಂದಿ ಎಲ್ಲ ಸೇರಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶೈನ್ ಮತ್ತು ದೀಪಿಕಾ ಅವರ ಜತೆಯಾಗಿಯೇ ಏನಮ್ಮಿ ಏನಮ್ಮಿ ಹಾಡಿಗೆ ಹೆಜ್ಜೆ ಹಾಕಿದರು.

click me!