ಕನ್ನಡತಿ ರಂಜನಿ ರಾಘವನ್‌ಗೆ Get well soon champs ಅಂದ್ರು ಕಿರಣ್ ರಾಜ್

Suvarna News   | Asianet News
Published : Jan 21, 2022, 02:39 PM IST
ಕನ್ನಡತಿ ರಂಜನಿ ರಾಘವನ್‌ಗೆ Get well soon champs ಅಂದ್ರು ಕಿರಣ್ ರಾಜ್

ಸಾರಾಂಶ

ಕನ್ನಡತಿ ಸೀರಿಯಲ್‌ನ ನಾಯಕಿ ಭುವಿ ಅಂದರೆ ರಂಜನಿ ರಾಘವನ್‌ ಅವರಿಗೇ ಕೋವಿಡ್‌ ಆಗಿದೆ. ಇದನ್ನವರು ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಎಲ್ಲ ಕಡೆ ಕೋವಿಡ್ (Covid-19) ಹಾವಳಿ. ಮನೆ ಮನೆಯಲ್ಲೂ ಶೀತ, ನೆಗಡಿ, ಕೆಮ್ಮಿನ ಹವಾ. ಇನ್ನು ನಮ್ಮ ಮನೆಯ ಟಿವಿ ಸ್ಕ್ರೀನ್‌ಗಳಲ್ಲಿ ಇಣುಕೋ ನಟ ನಟಿಯರ ಕಥೆಯೂ ಇದಕ್ಕಿಂತ ಹೊರತಾಗಿಲ್ಲ. ಕೋವಿಡ್‌ ಸೋಂಕು ಅವರಿಗೂ ತಗುಲಿದೆ. ಹಿಂದಿನ ಸಲ ಕೋವಿಡ್ ಬಂದಾಗ ಸ್ಮಾಲ್ ಸ್ಕ್ರೀನ್ ಇಂಡಸ್ಟ್ರಿಯಲ್ಲಿ ಶೂಟಿಂಗ್ ಗೆ ಅವಕಾಶ ಸಿಗುತ್ತೋ ಇಲ್ಲವೋ ಅನ್ನುವ ಭಯದ ವಾತಾವರಣ ಇತ್ತು. ಎಲ್ಲಿ ಲಾಕ್‌ಡೌನ್ (Lockdown) ಮಾಡಿ ಶೂಟಿಂಗ್‌ ಅವಕಾಶ ತಪ್ಪಿಹೋಗುತ್ತೋ, ಮತ್ತೆ ಹಳೆ ಎಪಿಸೋಡ್ ಪ್ರಸಾರ ಮಾಡ್ಬೇಕಾಗುತ್ತೋ ಅನ್ನುವ ಟೆನ್ಶನ್ ಇತ್ತು. ಆದರೆ ಈ ಸಲದ ರೂಲ್ಸ್ ನೋಡಿದರೆ ಈ ಸಾಧ್ಯತೆ ಕಡಿಮೆ. ಹಾಗಂತ ಸ್ಮಾಲ್‌ ಸ್ಕ್ರೀನ್ (Small screen) ಅವರು ಟೆನ್ಶನ್ ಫ್ರೀಯಾಗಿ ಕೂರೂ ಹಾಗೇ ಇಲ್ಲ. ಕಾರಣ ಕಿಲಾಡಿ ಕೋವಿಡ್ ಸ್ಮಾಲ್ ಸ್ಕ್ರೀನ್ ನಟ ನಟಿಯರಿಗೂ ತಗುಲಿ ಕಾರ್‌ಬಾರ್ ಮಾಡುತ್ತಿದೆ. ಸಿನಿಮಾ ನಟ ನಟಿಯರಿಗೆ ಕೋವಿಡ್ ಬಂದರೆ ಅಂಥಾ ಸಮಸ್ಯೆ ಆಗಲ್ಲ. ಆದರೆ ರೆಗ್ಯುಲರ್ ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳುವ ಆ್ಯಕ್ಟರ್‌ಗಳಿಗೆ ಕೋವಿಡ್‌ ಬಂದರೆ ಆ ಟೀಮ್‌ನವರ ಕಷ್ಟ ಯಾರಿಗೂ ಬೇಡ. ಹೋಗ್ಲಿ ಪೋಷಕ ಪಾತ್ರಗಳಿಗೆ ಬಂದರಾದರೂ ಹೇಗೋ ಮ್ಯಾನೇಜ್ ಮಾಡಬಹುದು. ಹೀರೋಯಿನ್‌ಗೇ (Heroine) ಬಂದರೆ ಏನ್ ಕತೆ?

Kannadathi Serial: ಕನ್ನಡತಿಯ ಟೀಚರ್ ರಂಜನಿಯ ಡಿಫರೆಂಟ್ ಸೀರೆ ಲುಕ್ಸ್ ಇವು

ಸದ್ಯ ಕನ್ನಡತಿ ಸೀರಿಯಲ್‌ ಇಂಥಾ ಸಮಸ್ಯೆ ಫೇಸ್‌ ಮಾಡುತ್ತಿದೆ. ಕನ್ನಡತಿ ಸೀರಿಯಲ್‌ನ ನಾಯಕಿ ಭುವಿ ಅಂದರೆ ರಂಜನಿ ರಾಘವನ್‌ (Ranjani Raghavan) ಅವರಿಗೇ ಕೋವಿಡ್‌ ಆಗಿದೆ. ಇದನ್ನವರು ಸೋಷಿಯಲ್‌ ಮೀಡಿಯಾದಲ್ಲಿ (Social media) ತಿಳಿಸಿದ್ದಾರೆ. ಎಲ್ಲೆಲ್ಲೂ ಇರುವ ಕೋವಿಡ್‌ ಶೂಟಿಂಗ್‌ ಸೆಟ್‌ನಿಂದಲೇ ಅವರಿಗೆ ಹರಡಿತಾ ಅನ್ನೋದು ಗೊತ್ತಿಲ್ಲ. ಒಂದು ವೇಳೆ ಹಾಗಾದರೆ ಅದು ಸಹ ನಟರಿಗೂ ಹರಡುವ ಸಾಧ್ಯತೆ ಇದೆ. ಹೀಗಾದರೆ ಸೀರಿಯಲ್‌ ಟೀಮೇ ಐಸೋಲೇಶನ್‌ (Isolation) ನಲ್ಲಿ ಇರಬೇಕಾಗುತ್ತದೆ. ಇಂಥದ್ದೇನೂ ಆಗದಿರಲಿ ಅನ್ನೋದು ಸೀರಿಯಲ್‌ ಅಭಿಮಾನಿಗಳ ಹಾರೖಕೆ.

ಸದ್ಯ ಕನ್ನಡತಿ (Kannadathi) ಸೀರಿಯಲ್ (Serial) ಸಾಕಷ್ಟು ಆಸಕ್ತಿಕರವಾಗಿ ನಡೆಯುತ್ತಿದೆ. ಇದರಲ್ಲಿ ಕಲ್ಮಶವಿಲ್ಲದ ಭುವಿ ಹರ್ಷನ ಪ್ರೀತಿ. ಅದಕ್ಕೆ ದೊಡ್ಡ ಕಲ್ಲು ಹಾಕಲು ಕಾಯುತ್ತಿರುವ ವಿಲನ್ ಸಾನಿಯಾ, ತನ್ನ ಪ್ರೀತಿಸುವ ಹುಡುಗನನ್ನು ತನ್ನ ಪ್ರಾಣ ಸ್ನೇಹಿತೆಯೇ ಪ್ರೀತಿಸುತ್ತಿದ್ದಾಳೆ ಅನ್ನೋ ಅನುಮಾನದಲ್ಲಿ ಒದ್ದಾಡುವ ವರೂಧಿನಿ, ಈ ವರೂಧಿನಿಗೆ ಹೇಗಾದರೂ ಮದುವೆ ಮಾಡಿ ತಮ್ಮ ಪ್ರೀತಿಯ ದಾರಿ ಕ್ಲಿಯರ್ ಮಾಡಿಕೊಳ್ಳುವ ಸಂಕಟದಲ್ಲಿರುವ ಹರ್ಷ ಮತ್ತು ಭುವಿ ಹೀಗೆ ಹತ್ತಾರು ಕವಲುಗಳಲ್ಲಿ ಸೀರಿಯಲ್‌ ಸಾಗುತ್ತಿದೆ. ಈ ಧಾರಾವಾಹಿಯನ್ನು ಜನ ಮೆಚ್ಚುಗೆಯಿಂದಲೇ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಹಾಗೆ ಇದೀಗ ಕತೆಯೂ ಬಹಳ ಇಂಟರೆಸ್ಟಿಂಗ್ ಆಗಿ ಸಾಗುತ್ತಿದೆ.

Ginirama ಧಾರಾವಾಹಿ ಮುಗಿಯುತ್ತಿಲ್ಲ, ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ನಟ Ritvvikk Mathad!

ಆದರೆ ಈಗ ಸೀರಿಯಲ್‌ ಟೀಮ್‌ಗೆ ಸಂಕಷ್ಟ ಎದುರಾಗಿದೆ. ಭುವಿಯ ಭಾಗ ಇರುವ ಸೀನ್‌ಗಳನ್ನು ಅವರು ಅವಾಯ್ಡ್ ಮಾಡಬೇಕಿದೆ. ಸಡನ್ನಾಗಿ ಬಂದಿರುವ ಈ ಸಂಕಷ್ಟವನ್ನು ಎದುರಿಸಲು ಟೀಮ್‌ ಸಿದ್ಧತೆಯಲ್ಲಿದೆ. ಬ್ಯಾಂಕಿಂಗ್‌ ಎಪಿಸೋಡ್‌ಗಳಿದ್ದರೆ ಪರವಾಗಿಲ್ಲ. ಆದರೆ ಬ್ಯಾಂಕಿಂಗ್‌ ಇಲ್ಲ ಅಂದರೆ ಸ್ವಲ್ಪ ದಿನ ಭುವಿಯ ಅನುಪಸ್ಥಿತಿಯಲ್ಲಿ ಇತರ ಪಾತ್ರಧಾರಿಗಳು ಕತೆಯನ್ನು ಮ್ಯಾನೇಜ್‌ ಮಾಡೋದು ಅನಿವಾರ್ಯ. ಇದಕ್ಕೋಸ್ಕರ ಕಥೆಯಲ್ಲೊಂದು ಸ್ಟ್ರಾಂಗ್ ರೀಸನ್‌ ಅನ್ನೂ ಸೀರಿಯಲ್‌ ಟೀಮ್‌ ಹುಡುಕಿ ಕೊಳ್ಳಬೇಕಿದೆ.

ಕೋವಿಡ್‌ಗೆ ಈ ಹಿಂದೆ ಆಂಕರ್ ಅನುಶ್ರೀ (Anchor Anushree), ಗಾಯಕ ವಿಜಯ ಪ್ರಕಾಶ್‌ (Vijay Prakash) ಮೊದಲಾದವರು ಸಿಲುಕಿದ್ದರು. ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋದ ಕಲಾವಿದರೂ ಕೋವಿಡ್‌ ಕಾರಣಕ್ಕೆ ಎಪಿಸೋಡ್‌ನಿಂದ ಕೊಂಚ ದಿನ ಬ್ರೇಕ್‌ ಪಡೆದಿದ್ದರು. ಈಗ ನಮ್ಮ ಭುವಿ ಅರ್ಥಾತ್ ರಂಜನಿ ಸರದಿ. ಇತ್ತ ಗೆಟ್‌ ವೆಲ್‌ ಸೂನ್‌ ಚಾಂಪ್ಸ್ ಅಂತ ಹರ್ಷ ಅಂದರೆ ಕಿರಣ್‌ ರಾಜ್‌ ಸೋಷಿಯಲ್‌ ಮೀಡಿಯಾದಲ್ಲಿ ವಿಶ್‌ ಮಾಡಿದ್ದಾರೆ. ಅದಕ್ಕೆ ರಂಜನಿ ಪ್ರೀತಿಯಿಂದ ಥ್ಯಾಂಕ್ಸ್ ಹೇಳಿದ್ದಾರೆ. ಇದನ್ನು ಕಂಡು ರಂಜನಿ ಅವರ ಫ್ಯಾನ್ಸ್ ಸಹ ಬೇಗ ಹುಷಾರಾಗಿ ಹೊರಬರಲು ವಿಶ್ ಮಾಡಿದ್ದಾರೆ. ಸೋ ನಮ್ ಕಡೆಯಿಂದಲೂ ರಂಜನಿ ರಾಘವನ್ ಬೇಗ ಹುಷಾರಾಗಲಿ ಅನ್ನೋ ಹಾರೖಕೆ.

ಅದ್ಧೂರಿಯಾಗಿ ನಡೆಯಿತು ನಟಿ Amulya ಸೀಮಂತ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!