Divya Suresh Accident: ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ಗೆ ಆ್ಯಕ್ಸಿಡೆಂಟ್

Published : Jan 19, 2022, 03:43 PM ISTUpdated : Jan 19, 2022, 04:02 PM IST
Divya Suresh Accident: ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ಗೆ ಆ್ಯಕ್ಸಿಡೆಂಟ್

ಸಾರಾಂಶ

Bigg Boss Season 8: ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ಗೆ ಅಪಘಾತವಾಗಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ದಿವ್ಯಾ ಸುರೇಶ್ ಅಪಘಾತಕ್ಕೊಳಗಾಗಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಗೆ(Divya Suresh) ಅಪಘಾತವಾಗಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ದಿವ್ಯಾ ಸುರೇಶ್ ವಾಹನ ಅಪಘಾತವಾಗಿದೆ(Accident). ಸೋಮವಾರ ಅಪಘಾತವಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೈ ಕಾಲು ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಿವ್ಯಾ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಬಾಸ್ ಸೀಸನ್ 8 ರ ಕಂಟೆಸ್ಟೆಂಟ್ ಆಗಿದ್ದ  ದಿವ್ಯಾ ಸುರೇಶ್ ಮಂಜು ಪಾವಗಡ ಜೊತೆಗಿನ ಫ್ರೆಂಡ್‌ಶಿಪ್ ಮೂಲಕ ಸುದ್ದಿಯಾಗಿದ್ದರು. ಬೆಂಗಳೂರಿನ ಹುಚ್ಚಳ್ಳಿ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿದೆ. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ನಡೆದಿರುವ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ದಿವ್ಯಾ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಹಲವುಭಾಗಗಳಲ್ಲಿ ಬೀದಿ ನಾಯಿಗಳ ಕಾಟದಿಂದ ವಾಹನ ಸವಾರರು ತೊಂದರೆಗೊಳಗಾಗುತ್ತಿದ್ದಾರೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಬೀದಿ ನಾಯಿಗಳ ಹಾವಳಿಯಿಂದ ತೊಂದರೆಗೊಳಗಾಗುತ್ತಿರುವ ಘಟನೆ ನಡೆಯುತ್ತಲೇ ಇದೆ. ಬೀದಿ ನಾಯಿಗಳು ಎಟ್ಯಾಕ್ ಮಾಡಿದಂತಹ ಬಹಳಷ್ಟು ಘಟನೆಗಳೂ ವರದಿಯಾಗುತ್ತಿರುತ್ತವೆ. ಪ್ರಮುಖವಾಗಿ ರಾತ್ರಿಯ ವೇಳೆಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿರುತ್ತದೆ.

ಪೊಲೀಸ್​​ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಗ್​ ಬಾಸ್​ ಸ್ಪರ್ಧಿ ವಿರುದ್ದ ದಾಖಲಾಗುತ್ತಾ ಎಫ್‌ಐಆರ್?

ಇತ್ತೀಚೆಗೆ ದಿವ್ಯಾ ಸುರೇಶ್ ಅವರು ಪೊಲೀಸರೊಂದಿಗೆ ಜಗಳ ಮಾಡಿದ ಘಟನೆಯಿಂದ ವಿವಾದಕ್ಕೆಡೆಯಾಗಿದ್ದರು. ಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್‌ (Divya Suresh) ಅವರು ನಗರದಲ್ಲಿ ರಾತ್ರಿ 10ಕ್ಕೆ ಕರ್ಫ್ಯೂ (Night Curfew) ಜಾರಿಯಾದ ನಂತರವೂ ಎಂ.ಜಿ.ರಸ್ತೆಯ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಇವರ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ರಾಜ್ಯದಲ್ಲಿ ಓಮಿಕ್ರಾನ್ (Omicron) ಪ್ರಕರಣ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಮಂಗಳವಾರದಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದೇ ಸಂದರ್ಭ ದಿವ್ಯಾ ಅವರು ಹೊರಗೆ ಸುತ್ತಾಡುತ್ತಿದ್ದರು. 

ಈ ಹಿನ್ನಲೆಯಲ್ಲಿ ಪಬ್ ಕೋಸ್ಲ್ ಮಾಡುವಂತೆ ಕಬ್ಬನ್ ಪಾರ್ಕ್ ಪೊಲೀಸರು ಹೇಳಿದ್ದರು. ಈ ವೇಳೆ ಪಬ್ ಒಳಗೆ ಸ್ನೇಹಿತರ ಜತೆ ಇದ್ದ ದಿವ್ಯಾ ಸುರೇಶ್, ಪೊಲೀಸರ ಜತೆ ಪಬ್ ಒಳಗೆ ಮಾತಿನ ಚಕಮಕಿ ನಡೆಸಿರುವ ಮಾಹಿತಿ ತಿಳಿದುಬಂದಿದೆ. ಬಳಿಕ ಹೊರಗೆ ಬಂದು ಮಾಧ್ಯಮಗಳ ಕ್ಯಾಮರಾ ಕಿತ್ತುಕೊಳ್ಳಲು ದಿವ್ಯಾ ಪ್ರಯತ್ನಿಸಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ಜತೆ ಇದ್ದ ಇಬ್ಬರು ಸ್ನೇಹಿತರು ಮಾಧ್ಯಮದವರಿಗೆ ಧಮ್ಕಿ ಹಾಕಿದ್ದಾರೆ. ಘಟನೆ ಬಗ್ಗೆ ಕರ್ತವ್ಯ‌ನಿರತ  ಸಬ್ ಇನ್ಸ್ಪೆಕ್ಟರ್ ಠಾಣೆಗೆ ಮಾಹಿತಿ ನೀಡಿದ್ದರು.

ಘಟನೆ ಬಗ್ಗೆ ದಿವ್ಯಾ ಹೇಳಿದ್ದೇನು ?

'ನಡೆದ ಘಟನೆ ಬಗ್ಗೆ ನಾನು ಮಾತನಾಡಬೇಕು. 9 ಗಂಟೆಗೆ ನಾವಿದ್ದ ಹೋಟೆಲ್‌ (Hotel) ಕ್ಲೋಸ್ ಆಗುತ್ತೆ ನಾನು 9.10ಕ್ಕೆ ಕೆಳಗೆ ಬರ್ತೀವಿ. ಆಗ ನಾನು ಕ್ಯಾಬ್ (Cab) ಕೂಡ ಬುಕ್ ಮಾಡ್ತೀವಿ. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೆವು ಕೂಡ. ಪೊಲೀಸರು (Police) ಸರಿ ನೀವು ಬುಕ್ ಮಾಡಿ ಹೊರಡಿ ಅಂತ ಹೇಳಿದ್ರು. ಅಲ್ಲಿದ್ದ ಕ್ಯಾಮೆರಾಗಳು ನನ್ನ ನೋಡಿದ ತಕ್ಷಣ ನನ್ನ ಮೇಲೆ ಅಟ್ಯಾಕ್ ಮಾಡುತ್ತಾರೆ. ಕಲಾವಿದೆ ಆಗಿ ನನಗೂ ಭಯ ಇದ್ದೇ ಇರುತ್ತೆ ಪಬ್ಲಿಕ್‌ನಲ್ಲಿ ಯಾರಾದ್ರೂ ವಿಡಿಯೋ ಮಾಡಿದ್ರೆ ಏನು ಆಗಬಹುದು. ನಾನು ಹೊರಡಬೇಕಿತ್ತು. ಅವರ ಜೊತೆ ಅಲ್ಲೇ ವಾದ ಮಾಡಿಕೊಂಡು ನಿಂತಿದ್ದರೆ ರಾತ್ರಿ  10 ಗಂಟೆ ಆದರೂ ಮನೆಗೆ ಹೋಗಲು ಆಗುತ್ತಿರಲಿಲ್ಲ' ಎಂದು ದಿವ್ಯಾ ಖಾಸಗಿ ಸಂದರ್ಶನದಲ್ಲಿ ಸ್ಪಷ್ಟನೆ ಕೊಟ್ಟಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ