ಇದ್ದಕ್ಕಿದ್ದಂತೆ ರಿಯಾಲಿಟಿ ಶೋಯಿಂದ ಕಾಣಿಯಾದ ಸಾನ್ಯಾ ಅಯ್ಯರ್. ಸೋಷಿಯಲ್ ಮೀಡಿಯಾದಲ್ಲಿ ಕಾರಣ ಹಂಚಿಕೊಂಡ ಸುಂದರಿ...
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಮೂಲಕ ಪುಟ್ಟಗೌರಿ (Puttagowri) ಆಗಿ ಗುರುತಿಸಿಕೊಂಡಿದ್ದ ಸಾನ್ಯಾ ಐಯ್ಯರ್ (Saanya Iyer) ಬಿಗ್ ಕಮ್ ಬ್ಯಾಕ್ ಮಾಡಿದ್ದರು. ಅದ್ಭುತ ಪರ್ಫಾರ್ಮೆನ್ಸ್ ಕೊಟ್ಟು ವಾರ ವಾರವೂ ಅತಿ ಹೆಚ್ಚು ವೋಟ್ ಪಡೆದುಕೊಂಡಿದ್ದ ಜೋಡಿ ಇದ್ದಕ್ಕಿದ್ದಂತೆ ಶೋಯಿಂದ ಮಿಸ್ಸಿಂಗ್. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯಾ ಆಕ್ಟೀವ್ ಆಗಿರುವ ಕಾರಣ ನೆಟ್ಟಿಗರು ಪರ್ಸನಲ್ ಆಗಿ ಮೆಸೇಜ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಉತ್ತರ ಕೊಡಲು ಆಗುವುದಿಲ್ಲ ಎಂದು ಸಾನ್ಯಾ ವಿಡಿಯೋ ಹಂಚಿಕೊಂಡಿದ್ದಾರೆ.
'ಸಾನ್ಯಾ ಅವರ ಜೋಡಿಯಾಗಿದ್ದ ನಿಹಾಲ್ ಅವರು ಮದುವೆ (Marriage) ಆಗುತ್ತಿರುವ ಒಂದು ಕಾರಣಕ್ಕೆ, ನಿಹಾಲ್ ಮತ್ತು ಸಾನ್ಯಾ ಜೋಡಿ ಕ್ವಾಟರ್ ಫಿನಾಲೆ ಹಂತದಲ್ಲಿ ಸೆಲ್ಫ್ ಎಲಿಮಿನೇಷನ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ನಾವು ಹೊರಗಡೆ ಕಳುಹಿಸಿಲ್ಲ ಅವರೇ ಸೆಲ್ಫಿ ಡಿಕ್ಲರೇಷನ್ ತೆಗೆದುಕೊಂಡು ಹೊರ ನಡೆಯುತ್ತಿದ್ದಾರೆ. ಖುಷಿ ಖುಷಿಯಾಗಿ ಬಂದಿದ್ದಾರೆ, ಖುಷಿ ಖುಷಿಯಾಗಿ ಹೋಗ್ತಿದ್ದಾರೆ. ನಿಹಾಲ್ ನೀನು ಮದುವೆ ಕಾರ್ಯಕ್ರಮವನ್ನು ಖುಷಿಯಾಗಿ ಎಂಜಾಯ್ ಮಾಡು. ಹ್ಯಾಪಿ ಹ್ಯಾಪಿ ಮ್ಯಾರಿಡ್ ಲೈಫ್' ಎಂದು ನಿರೂಪಕ ಅಕುಲ್ ಬಾಲಾಜಿ (Akul Balaj) ವೇದಿಕೆ ಮೇಲೆ ಹೇಳಿದ್ದಾರೆ.
'ಇಷ್ಟು ದಿನ ಸ್ಪರ್ಧಿಸಿ ನನಗೆ ಖುಷಿ ಇದೆ. ಮೊದಲನೇ ದಿನ ಏನೂ ಇರಲಿಲ್ಲ ಎರಡನೇ ಎಪಿಸೋಡ್‌ಗೆ ಕಾಲು ಗಾಯ ಮಾಡಿಕೊಂಡೆ. ಒಂದೆರಡು ಸಲ ಡಬ್ ಡಬ್ ಪರ್ಫಾರ್ಮೆನ್ಸ್ ಕೂಡ ಕೊಟ್ಟಿದ್ದೀನಿ. ಇದಾದ ಮೇಲೆ ಕೋರಿಯೋಗ್ರಾಫರ್ ಸಮಸ್ಯೆ ಆಯ್ತು ಅವರು ಬದಲಾದರು. ಸಮಸ್ಯೆಗಳು ಅಲ್ಲಿಗೆ ನಿಂತುಕೊಂಡ ನಂತರ ನಾನು ಒಂದರ ಮೇಲೆ ಒಂದು ಸೂಪರ್ ಪರ್ಫಾರ್ಮೆನ್ಸ್. ಮೇಲೆ ಹೋದ ಮೇಲೆ ಮತ್ತೆ ಕೇಳಗೆ ಬಂದೆ. ಮನುಷ್ಯ ಕೆಳ ಮಟ್ಟದಲ್ಲಿ ಏನಾದರೂ ನೋಡಿದ ಮೇಲೆನೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ. ನನಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅವಕಾಶಗಳು ಕಾಯುತ್ತಿರಬೇಕು' ಎಂದು ಸಾನ್ಯಾ ಮಾತನಾಡಿದ್ದಾರೆ.
'ಪುಟ್ಟಗೌರಿ ಮದುವೆ'ಯ ಪುಟ್ಟ ಗೌರಿ ಈಗೆಷ್ಟು ಗ್ಲಾಮರ್ ಆಗಿದ್ದಾಳೆ ನೋಡಿ!
'ಎಲ್ಲರಿಗೂ ನಮಸ್ಕಾರ. ಅನೇಕರು ನನಗೆ ಮೆಸೇಜ್ ಮಾಡಿ ನಾವು ಯಾಕೆ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಅವರಿಗೆ ಈ ವಿಡಿಯೋ ಮೂಲಕ ಕಾರಣ ತಿಳಿಸುತ್ತಿರುವೆ. ಈ ವಿಡಿಯೋ ಯಾಕೆ ಟಿವಿಯಲ್ಲಿ ಪ್ರಸಾರ ಆಗಲಿಲ್ಲ ಎಂದು ನನಗೆ ಗೊತ್ತಿಲ್ಲ.ನನ್ನ ಡ್ಯಾನ್ಸಿಂಗ್ ಪಾರ್ಟನರ್ ನಿಹಾಲ್ ಅವರು ಮದುವೆಯಾಗುತ್ತಿದ್ದಾರೆ, ಅವರ ಜೀವನದ ಬಹು ಮುಖ್ಯವಾದ ಘಟನೆ ಇದು ಹೀಗಾಗಿ ನಾನು ಏನೂ ಮಾಡುವುದಕ್ಕೆ ಆಗೋಲ್ಲ ಒಪ್ಪಿಕೊಳ್ಳಬೇಕು. ಫಿನಾಲೆ ಹಂತ ತಲುಪುವುದಕ್ಕೆ ನಮಗೆ ಕೇವಲ ನಾಲ್ಕು ಎಪಿಸೋಡ್ ಇತ್ತು. ಪಾರ್ಟನರ್ ಬದಲಾಯಿಸಬೇಕು ಎಂದು ಮನವಿ ಮಾಡಿಕೊಂಡೆ ಆದರೆ ಆಗಲಿಲ್ಲ. ಕೆಲವೊಮ್ಮೆ ಕೆಲವೊಂದು ಘಟನೆಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಬದಲಾವಣೆಗಳನ್ನು ಒಪ್ಪಿಕೊಂಡು ಮುಂದೆ ಸಾಗಬೇಕು' ಎಂದು ಸಾನ್ಯಾ ಬರೆದುಕೊಂಡಿದ್ದಾರೆ.
'ನೀವೆಲ್ಲರೂ ತೋರಿಸಿರುವ ಪ್ರೀತಿ ಮತ್ತು ಸಪೋರ್ಟ್‌ಗೆ ಧನ್ಯವಾದಗಳು. ನನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಒಳ್ಳೆಯ ಅವಕಾಶ ಇದಾಗಿತ್ತು. ಈಗ ನನ್ನ ಜರ್ನಿ ಶುರುವಾಗಿದೆ' ಎಂದಿದ್ದಾರೆ ಸಾನ್ಯಾ.