
ಕನ್ನಡದ ಅಗ್ನಿ ಸಾಕ್ಷಿ ಹಾಗೂ ಸೀತಾ ರಾಮ ಧಾರಾವಾಹಿಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಮದುವೆಯಾಗಿ ಉತ್ತರ ಭಾರತದ ಮೂಲದ ಗಂಡನ ಮನೆಗೆ ಸೇರಿದ್ದಾರೆ. ಆದರೆ, ಅವರ ಐಷಾರಾಮಿ ಮನೆಯಲ್ಲಿ ಕತ್ತಲೆಯಲ್ಲಿ ವಿಚಿತ್ರ ಪ್ರಾಣಿಯೊಂದನ್ನು ಕಂಡು ತುಂಬಾ ಭಯಭೀತರಾಗಿದ್ದಾರೆ. ತಾವು ನೋಡಿದ ಪ್ರಾಣಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ.
ಮದುವೆಯಾಗಿ ಗಂಡನ ಮನೆಯಲ್ಲಿ ಸುಖ ಸಂಸಾರ ಮಾಡುತ್ತಿರುವ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿನ ಸಂಪರ್ಕವನ್ನು ಮಾತ್ರ ಬಿಟ್ಟಿಲ್ಲ. ತಮ್ಮ ಡ್ಯಾನ್ಸ್, ಗಂಡನೊಂದಿಗೆ ಪ್ರವಾಸ, ರೀಲ್ಸ್ ಮಾಡಿದ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ವೈಷ್ಣವಿ ತಮ್ಮ ಮನೆಯಲ್ಲಿ ಒಬ್ಬಳೇ ಇರುವಾಗ ಮನೆಯಲ್ಲಾ ಕತ್ತಲೆ ಆವರಿಸಿದ್ದಾಗ ವಿಚಿತ್ರ ಪ್ರಾಣಿಯೊಂದನ್ನು ನೋಡಿ ಭಯಗೊಂಡಿದ್ದಾರೆ.ಕೂಡಲೇ ಮನೆಯ ಎಲ್ಲ ಲೈಟ್‌ಗಳನ್ನು ಆನ್ ಮಾಡಿ ಏನದು ಎಂದು ಭಯದಿಂದಲೇ ಮೊಬೈಲ್ ಹಿಡಿದು ಬಾಗಿಲು ತೆರೆದು ನೋಡಲು ಬಂದಿದ್ದಾರೆ.
ಇನ್ನು ಭಯದಲ್ಲೇ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ಬಾಗಿಲು ತೆರದು ಏನೆಂದು ನೋಡಿದ್ದಾರೆ. ಆದರೆ, ಹುಲಿ ಸೀರೆ ಧರಿಸಿ ಡ್ಯಾನ್ಸ್ ಮಾಡುವಂತಹ ಎಐ ವಿಡಿಯೋವನ್ನು ತೋರಿಸಿ ಏಪ್ರಿಲ್ ಫೂಲ್ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕುತೂಹಲದ ವಿಡಿಯೋವನ್ನು ಶೇರ್ ಮಾಡಿಕೊಂಡು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಜನರನ್ನ ಮೂರ್ಖರನ್ನಾಗಿ ಮಾಡಿದ್ದಾರೆ.
ಕಳೆದ 10 ವರ್ಷಗಳ ಕಾಲ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಭಾರೀ ಪ್ರಸಿದ್ಧಿ ಪಡೆದಿದ್ದ ನಟಿಯರ ಪೈಕಿ ವೈಷ್ಣವಿ ಗೌಡ ಕೂಡ ಒಬ್ಬರು. ಅಗ್ನಿ ಸಾಕ್ಷಿ ಧಾರಾವಾಹಿಯ ಮುದ್ದಿನ ಸೊಸೆ ಸನ್ನಿಧಿಯಾಗಿ ಪಾತ್ರ ನಿರ್ವಹಣೆ ಮಾಡಿದ್ದ ವೈಷ್ಣವಿ ಗೌಡ ಅವರು ಎಲ್ಲರ ಮನೆ ಮಗಳಾಗಿದ್ದರು. ಇತ್ತೀಚೆಗೆ ಸೀತಾ ರಾಮ ಧಾರಾವಾಹಿ ಮೂಲಕ ಇತ್ತೀಚಿನ ಜನರಿಗೂ ತುಂಬಾ ಹತ್ತಿರವಾಗಿದ್ದರು. ಆದರೆ, ಸೀರಿಯಲ್ ಕೊನೆಯ ಹಂತದಲ್ಲಿರುವಾಗ ಮದುವೆಗೆ ಬಂದ ಪ್ರಪೋಸಲ್‌ಗೆ ಒಪ್ಪಿಗೆ ಸೂಚಿಸಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು.
ಇತ್ತ ಸೀತಾ ರಾಮ ಧಾರಾವಾಹಿ ಪ್ರಸಾರ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಉತ್ತರ ಪ್ರದೇಶ ಮೂಲದ ವಾಯುಪಡೆ ಅಧಿಕಾರಿ ಅನುಕೂಲ್ ಮಿಶ್ರಾ ಜೊತೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಇದು ಅರೇಂಜ್ ಮ್ಯಾರೇಜ್, ಮನೆಯವರು ನೋಡಿ ಮಾಡಿದ ಬಂಧ ಎಂದು ವೈಷ್ಣವಿ ಈ ಹಿಂದೆ ಹೇಳಿದ್ದರು. ಈ ವಿವಾಹವು ಅದ್ಧೂರಿಯಾಗಿ ಉತ್ತರ ಭಾರತೀಯ ಶೈಲಿಯಲ್ಲಿಯೇ ನಡೆದಿತ್ತು. ಇಬ್ಬರೂ ಮ್ಯಾಟ್ರಿಮೊನಿಯಲ್ಲಿ ನೋಡಿ ಪರಸ್ಪರ ಒಪ್ಪಿಕೊಂಡು ಮನೆಯವರನ್ನುಒಪ್ಪಿಸಿ ಮದುವೆ ಮಾಡಿಕೊಂಡಿದ್ದಾರೆ.
ವೈಷ್ಣವಿ ಗೌಡ ಕಾಶ್ಮೀರ, ಮನಾಲಿಯಲ್ಲಿ ಹನಿಮೂನ್ ಮಾಡಿಕೊಂಡಿದ್ದರು. ಗಂಡನ ಜೊತೆಗೂ ಸಹ ಒಂದಷ್ಟು ರೀಲ್ಸ್ ಮಾಡಿದ್ದರೂ ಕೂಡ. ಅಷ್ಟೇ ಅಲ್ಲ ಇತ್ತೀಚೆಗೆ ನವರಾತ್ರಿ ಸಂದರ್ಭದಲ್ಲಿ ತಮ್ಮ ಪತಿ ಜೊತೆ ಮಂಗಳೂರಿಗೂ ಭೇಟಿ ಕೊಟ್ಟು, ಅಲ್ಲಿನ ಹುಲಿವೇಷ, ಶಾರದಾ ಮಾತೆ ದರ್ಶನ ಪಡೆದು, ಮಂಗಳೂರಿನ ಊಟ ಸವೆದಿದ್ದರು.ಇತ್ತೀಚೆಗೆ ಉತ್ತರ ಭಾರತದ ಸಂಪ್ರದಾಯದಂತೆ ಕರ್ವಾ ಚೌತ್ ಕೂಡ ಆಚರಣೆ ಮಾಡಿದ್ದರು. ಜೊತೆಗೆ ನೀವ್ಯಾಕೆ ತಾಳಿ ಧರಿಸಿಲ್ಲ ಎಂದು ಪ್ರಶ್ನೆ ಮಾಡಿದ ನೆಟ್ಟಿಗರಿಗೆ ನನ್ನ ಗಂಡನ ಮನೆಯಲ್ಲಿ ತಾಳಿ ಧರಿಸುವ ಸಂಪ್ರದಾಯವಿಲ್ಲ ಎಂದು ಹೇಳಿದ್ದರು.
ವೈಷ್ಣವಿ ಗೌಡ ಸೀರಿಯಲ್‌ನಿಂದ ದೂರಾದರು ಎನ್ನುವ ಮಾತು ಕೇಳಿ ಬರುತ್ತಿದ್ದಂತೆ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ ಎಂಬ ಸಿಹಿಸುದ್ದಿ ನೀಡಿದರು. ಇನ್ನು ವೈಷ್ಣವಿ ಗೌಡ ಇದೀಗ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಇದು ಪ್ರೀತಮ್ ಗುಬ್ಬಿ ನಿರ್ದೇಶನದ ಕಥೆಯಾಗಿದೆ. ಆದರೆ ಅದು ಯಾವಾಗ ಪ್ರಸಾರವಾಗಲಿದೆ ಅನ್ನೋದು ತಿಳಿದು ಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.