
ಕನ್ನಡ ಜನತೆಗೆ ಸೋನು ಗೌಡ ಎಂದು ಪರಿಚಿತ ಆಗಿರುವ ಶಾಂಭವಿ ಶ್ರೀನಿವಾಸ್ ಗೌಡ ಅವರು ತಾವು ನಡೆದು ಬಂದ ಹಾದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1999ರಲ್ಲಿ ಜನಿಸಿದ ಸೋನು ಶ್ರೀನಿವಾಸ್ ಗೌಡ, ಇಂದು ವಿವಾದಗಳು, ಟ್ರೋಲ್‌ಗಳ ಮಧ್ಯೆಯೇ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ YouTube ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ತಮ್ಮ ಬಾಲ್ಯ, ತಂದೆಯ ಅಗಲಿಕೆ, ಪ್ರೇಮ ವೈಫಲ್ಯ ಮತ್ತು ವಿಡಿಯೋ ಲೀಕ್ ವಿವಾದದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಸೋನು ಅವರು ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ಅಜ್ಜಿ ಹತ್ತಿರ ಬೆಳೆದ ಇವರಿಗೆ ಅಜ್ಜಿಯೇ ಸರ್ವಸ್ವ ಆಗಿದ್ದರು. ಇವರು ಒಂದನೇ ತರಗತಿಯಲ್ಲಿರುವಾಗಲೇ ತಂದೆ ಹಾರ್ಟ್ ಅಟ್ಯಾಕ್‌ನಿಂದ ನಿಧನರಾದರು. ತಂದೆಯ ಜೊತೆಗಿನ ನೆನಪುಗಳು ತುಂಬ ಕಮ್ಮಿ ಇವೆಯಂತೆ.
ಅಜ್ಜಿಯೇ ಇವರಿಗೆ ಶಿಸ್ತು, ಸಂಸ್ಕಾರ, ಅಡುಗೆಯನ್ನು ಕಲಿಸಿಕೊಟ್ಟಿದ್ದರಂತೆ. ಅಜ್ಜಿಯ ನಿಧನ ಸೋನು ಅವರ ಜೀವನದ ಅತಿದೊಡ್ಡ ಆಘಾತವಾಗಿತ್ತು, ಹೀಗಾಗಿ ಅವರು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತಂತೆ.
ಸೋನುಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರು ಐಟಿಐ (ITI) ಮಾಡಲು ಬಯಸಿದ್ದರು, ಆದರೆ ತಾಯಿ ಬಲವಂತವಾಗಿ PCMB ಸೈನ್ಸ್ ಸೇರಿಸಿದರು. ದಿನಕ್ಕೆ ಸುಮಾರು 150 ಕಿಲೋಮೀಟರ್ ಪ್ರಯಾಣಿಸಿ ಡಿಪ್ಲೋಮಾ ಮುಗಿಸಿದ ಅವರು, ಇಂಜಿನಿಯರಿಂಗ್ ಓದಲಿಲ್ಲ.
ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ ಲವ್ ಮಾಡಿದ್ದರು. ಸಾಕಷ್ಟು ದಿನಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಿದ್ದರು, ಆಮೇಲೆ ವಿಡಿಯೋ ಕಾಲ್ ಮಾಡಿದ್ದರು. ಅವನಿಗೋಸ್ಕರ ಇಂಟರ್‌ನ್ಯಾಶನಲ್ ರಿಚಾರ್ಜ್ ಮಾಡಿಸಿದ್ದೆ. ಚೈಲ್ಡ್ ಆಗಿದ್ದಕ್ಕೆ ನನಗೂ ಕೂಡ ಎಲ್ಲ ವಿಷಯ ಗೊತ್ತಾಗುತ್ತಿರಲಿಲ್ಲ. ಮೂರು ತಿಂಗಳಲ್ಲಿ ರಿಲೇಶನ್‌ಶಿಪ್ ಹಾಳಾಗೋಯ್ತು, 20 ವರ್ಷದಲ್ಲಿ ಸಂಬಂಧ ಹಾಳಾಯ್ತು ಎನ್ನೋ ಥರ ಆಡುತ್ತಿದ್ದೆ, ಈ ಹುಡುಗನನ್ನು ಮದುವೆ ಆಗ್ತೀನಿ ಎಂದು ಹೇಳುತ್ತಿದ್ದೆ.
ಒಂದಿನ ಅವನು ಆ ಥರ ವಿಡಿಯೋ ಕಾಲ್ ಮಾಡು ಅಂತಾನೆ, ನಾನು ಆಗೋದಿಲ್ಲ ಎಂದೆ. ನೀನು ಪ್ರೀತಿ ಮಾಡಿದ್ರೆ ಮಾತ್ರ ಆ ಥರ ವಿಡಿಯೋ ಕಾಲ್ ಮಾಡು ಎಂದರು. ನಾನು ಪ್ರೀತಿ ಉಳಿಸಿಕೊಳ್ಳೋದಕ್ಕೋಸ್ಕರ ವಿಡಿಯೋ ಕಾಲ್ ಮಾಡಿದೆ. ಕೆಲವು ದಿನಗಳ ಕಾಲ ಹೀಗೆ ನಡೆಯುತ್ತಿತ್ತು. ಒಂದಿನ ಅವನು ಫೋನ್ ಮಾಡಿ ನೀನು ದುಡ್ಡು ಕಳಿಸಿಲ್ಲ ಅಂದ್ರೆ ಮಾನ ಮರ್ಯಾದೆ ತೆಗೆಯುವ ಕೆಲಸ ಮಾಡ್ತೀನಿ ಎಂದನು, ಆಮೇಲೆ ವಾಟ್ಸಪ್‌ನಲ್ಲಿ ನನ್ನ ವಿಡಿಯೋ ಕಳಿಸಿದ. ಆಗ ನನ್ನ ಹೃದಯವೇ ಒಡೆದು ಹೋಯ್ತು. ಆಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೂ ಪ್ರಯೋಜನವೇ ಆಗಲಿಲ್ಲ. ಒಂದಿನ ಅವನು ವಿಡಿಯೋ ರಿಲೀಸ್ ಮಾಡಿದ. ಆ ಹುಡುಗನ ಅಡ್ರೆಸ್ ಕೂಡ ಗೊತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಅವನನ್ನು ವಿಡಿಯೋಕೆ ಆಗಲಿಲ್ಲ. ಆ ಹುಡುಗನನ್ನು ಬ್ಲ್ಯಾಕ್ ಮಾಡಿದ್ದೆ. ನನ್ನ ಕಾಂಟ್ಯಾಕ್ಟ್‌ನಲ್ಲಿರುವವರು ಎಲ್ಲರೂ ಫೋನ್ ಮಾಡಿ, ಆ ವಿಡಿಯೋದಲ್ಲಿ ಇರೋದು ನೀನಾ ಎಂದು ಪ್ರಶ್ನೆ ಮಾಡಿದ್ದರು. ಮುಂದೆ ಜೀವನ ಹೇಗೆ? ಏನು ಅಂತ ಯೋಚನೆ ಆಗಿತ್ತು. ಆ ಸಮಯದಲ್ಲಿ ಸೋನು ಆತ್ಮ*ಹತ್ಯೆಯ ಆಲೋಚನೆ ಮಾಡಿದ್ದೆ. ನಾನು ಸತ್ತು ಹೋದ್ಮೇಲೆ ಅಮ್ಮ, ತಮ್ಮನ ಬಗ್ಗೆ ಮಾತನಾಡ್ತಾರೆ ಅಂತ ಮನಸ್ಸಿನಲ್ಲಿ ಬಂತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.