ತಾಯಿಯಾಗುವ ಸಂಭ್ರಮದಲ್ಲಿರುವ ‘ಸಂಘರ್ಷ’ ನಟಿ ತೇಜಸ್ವಿನಿ ಆಚಾರ್ ಅದ್ದೂರಿ ಸೀಮಂತ

Pavna Das   | ANI
Published : Nov 14, 2026, 10:17 PM IST
Tejaswini Achar

ಸಾರಾಂಶ

Tejaswini Achar: ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಬ್ಬರಾದ ತೇಜಸ್ವಿನಿ ಆಚಾರ್ ಹಾಗೂ ವಿರಾಟ್ ಪೋಷಕರಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದು, ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿದೆ. ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ತಾಯಿಯಾಗುವ ಸಂಭ್ರಮದಲ್ಲಿ ನಟಿ ತೇಜಸ್ವಿನಿ ಆಚಾರ್

ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿರುವ ಹಾಗೂ ಇದೇ ವರ್ಷದ ಆರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ತೇಜಸ್ವಿನಿ ಆಚಾರ್ ಇದೀಗ ಚೊಚ್ಚಲ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಇದೀಗ ನಟಿಗೆ ಏಳು ತಿಂಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಟಿಗೆ ಅದ್ದೂರಿ ಸೀಮಂತ ಕಾರ್ಯಕ್ರಮ ನಡೆದಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಏಳನೇ ತಿಂಗಳಲ್ಲಿ ಸೀಮಂತ

ಕೆಲವು ತಿಂಗಳ ಹಿಂದೆ ನಟಿ ತಾವು ಗರ್ಭಿಣಿ ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಇದೀಗ ಏಳನೇ ತಿಂಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಭ್ರಮದಿಂದ ಸೀಮಂತ ಸಮಾರಂಭ ನಡೆದಿದೆ. ತೇಜಸ್ವಿನಿ ಹಸಿರು ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದರೆ, ವಿರಾಟ್ ಆಫ್ ವೈಟ್ ಕುರ್ತಾ ಪೈಜಾಮ ಧರಿಸಿ ಮಿಂಚುತ್ತಿದ್ದಾರೆ. ಅಭಿಮಾನಿಗಳು ನಟಿಗೆ ತಾಯ್ತನದ ಶುಭ ಕೋರಿದ್ದು, ಆರೋಗ್ಯಯುತ ಮಗು ಜನಿಸಲಿ ಎಂದು ಹಾರೈಸಿದ್ದಾರೆ.

ತೇಜಸ್ವಿನಿ ಆಚಾರ್ ನಟಿಸಿದ ಧಾರಾವಾಹಿಗಳು

ಮೂಲತಃ ಮೈಸೂರಿನವರಾದ ನಟಿ ತೇಜಸ್ವಿನಿ ಆಚಾರ್‌ ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗಳ ಧಾರಾವಾಹಿಗಳಲ್ಲೂ ಸಹ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಘರ್ಷ’, ‘ರಾಧಿಕಾ’ ‘ಮಹಾನದಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಹಲವಾರು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟ ವಿರಾಟ್ ವತ್ಸಲ್ ಜೊತೆ ತೇಜಸ್ವಿನಿ ಸಪ್ತಪದಿ ತುಳಿದಿದ್ದಾರೆ. ಇವರ ವಿವಾಹವು ಇದೇ ವರ್ಷ ಫೆಬ್ರವರಿಯಲ್ಲಿ ನಡೆದಿತ್ತು.

ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್‌ ವತ್ಸಲ್ ಜೊತೆಯಾಗಿ ನಟಿಸಿದ್ದರು. ಈ ಸೀರಿಯಲ್ ಶೂಟ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಇದೀಗ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಈ ಜೋಡಿ ಕಳೆದ ಫೆಬ್ರವರಿ 6 ರಂದು ವಿವಾಹವಾಗಿದ್ದರು. ಫೆಬ್ರವರಿ 8 ರಂದು ಆರತಕ್ಷತೆ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ರಿಕೆಟರ್ ದೀಪಕ್ ಚಾಹರ್ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ? ಸಹೋದರಿ ಮಾಲ್ತಿ ಜನ್ಮದಿನದಂದೇ ಸಿಕ್ತು ಸೂಚನೆ
ಆಸೆ ಧಾರಾವಾಹಿಯಿಂದ ಸೂರ್ಯ ಔಟ್? ನಿನಾದ್ ಹರಿತ್ಸಾ ದಿಢೀರ್ ಬ್ರೇಕ್ ಹಿಂದಿನ ಅಸಲಿ ಕಾರಣವೇನು?