ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ ಅತ್ಯಂತ ಕಿರಿಯ ನಿರ್ದೇಶಕ: ಶಂಕರ್ ನಾಗ್ ನಿರ್ದೇಶನದ ಕೊನೆಯ ಚಿತ್ರದ ರೋಚಕ ಸಂಗತಿಗಳು

Published : Nov 14, 2026, 03:38 PM IST
Dr.Raj And Shankar Nag

ಸಾರಾಂಶ

ವರನಟ ಡಾ. ರಾಜ್‌ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಿದ ಅತ್ಯಂತ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಶಂಕರ್ ನಾಗ್ ಪಾತ್ರರಾಗಿದ್ದರು. ಶಂಕರ್ ನಾಗ್ ನಿರ್ದೇಶನದ ಕೊನೆಯ ಚಿತ್ರ 'ಒಂದು ಮುತ್ತಿನ ಕಥೆ' ಸಿನಿಮಾದ ರೋಚಕ ಸಂಗತಿಗಳು ಇಲ್ಲಿವೆ.

ಹೌದು ಬದುಕಲ್ಲಿ ದುರಾಸೆ ಹೆಚ್ಚಾದಾಗ ಮುಗ್ಧತೆ ಸಾವಾಗುವುದಂತು ನಿಶ್ಚಿತ. ಅದಕ್ಕು 90ರ ದಶಕದಲ್ಲಿನ ಒಂದು ಕಡಲತೀರದ ಕಥೆಯೇ ಸಾಕ್ಷಿ ಅದೇ ಒಂದು ಮುತ್ತಿನ ಕಥೆ. ಅಲ್ಲದೇ ಶಂಕರ್‍‌ನಾಗ್‌ ಆಕ್ಷನ್‌ ಕಟ್‌ ಹೇಳಿದ ಕೊನೇ ಸಿನೆಮಾ. ಇಲ್ಲಿ ನಡೆದ ಅನೇಕ ರೋಚಕ ಸಂಗತಿಗಳಿಗೆ ಈ ಸ್ಟೋರಿ ಸಾಕ್ಷಿಯಾಗಲಿದೆ. ಈ ನಿಟ್ಟಿನಲ್ಲಿ ಸ್ಟೋರಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿರಿಯ ನಿರ್ದೇಶಕ ಶಂಕರ್ ನಾಗ್!

ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ ಅತ್ಯಂತ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಅವರಿಗೆ ಆಗ ಸುಮಾರು 32-33 ವರ್ಷ ವಯಸ್ಸು. ಅಲ್ಲದೇ ಇದು ಶಂಕರ್ ನಾಗ್ ಅವರು ನಿರ್ದೇಶನ ಮಾಡಿದ ಕಟ್ಟಕಡೆಯ ಸಿನಿಮಾ. ಅದರಂತೆ 1987ರಲ್ಲಿ ಬಿಡುಗಡೆಯಾಯಿತು. 1990ರಲ್ಲಿ ಅವರು ಅಕಾಲಿಕ ಮರಣ ಹೊಂದುವ ಮುನ್ನ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ವಿಧಿಯ ಅವರನ್ನು ಕರೆಸಿಕೊಂಡಿತು.

ಅಪರೂಪದ ಕಾಂಬಿನೇಷನ್!

ಡಾ. ರಾಜ್‌ಕುಮಾರ್ ನಟಿಸಿದ ಮತ್ತು ಶಂಕರ್ ನಾಗ್ ನಿರ್ದೇಶನ ಮಾಡಿದ ಏಕೈಕ ಚಿತ್ರ ಇದಾಗಿದೆ. ಆದರೆ 'ಅಪೂರ್ವ ಸಂಗಮ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅಣ್ಣಾವ್ರು ಸಾಮಾನ್ಯವಾಗಿ ಹಿರಿಯ ಮತ್ತು ಅನುಭವಿ ನಿರ್ದೇಶಕರ ಜೊತೆ ಹೆಚ್ಚು ಕೆಲಸ ಮಾಡುತ್ತಿದ್ದರು. ಆದರೆ ಶಂಕರ್ ನಾಗ್ ಅವರ ತಾಂತ್ರಿಕ ದೂರದೃಷ್ಟಿ ಮತ್ತು ಕಥೆ ಹೇಳುವ ಶೈಲಿ ಮೆಚ್ಚಿ ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದರು.

ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಪ್ರಯೋಗ!

ಶಂಕರ್ ನಾಗ್ ಅವರು ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಆಕ್ಸಿಜನ್ ಮಾಸ್ಕ್ ಇಲ್ಲದೆ ಆಳ ಸಮುದ್ರದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಸಾಹಸ ಮಾಡಿದರು. ಅಷ್ಟೇ ಅಲ್ಲ 1987ರಲ್ಲೇ ಯಾವುದೇ ವಿಎಫ್‌ಎಕ್ಸ್ (VFX) ಇಲ್ಲದೆ ಮಾಲ್ಡೀವ್ಸ್ ಸಮುದ್ರದ ಆಳದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಇದಕ್ಕಾಗಿ ಕೆನಡಾದ ವಿಶೇಷ ಕ್ಯಾಮೆರಾ ಮತ್ತು ಜರ್ಮನ್ ಅಂಡರ್‌ವಾಟರ್ ಛಾಯಾಗ್ರಾಹಕರನ್ನು ಕರೆಸಲಾಗಿತ್ತು.

58ನೇ ವಯಸ್ಸಿನಲ್ಲಿ ಅಣ್ಣಾವ್ರ ಸಾಹಸ!

ಶಂಕರ್ ನಾಗ್ ಅವರ ಕನಸನ್ನು ನನಸು ಮಾಡಲು 58 ವರ್ಷ ವಯಸ್ಸಿನ ಡಾ. ರಾಜ್‌ಕುಮಾರ್ ಅವರು ವಿಶೇಷ ತರಬೇತಿ ಪಡೆದು, ನೀರಿನೊಳಗೆ ಕೃತಕ ಆಕ್ಟೋಪಸ್ ಜೊತೆ ನೈಜವಾಗಿ ಹೋರಾಡಿದ್ದರು. ಇಲ್ಲಿ ನೋಡಬೇಕಾದ ಇನ್ನೊಂದು ಅಂಶ ಎಂದರೆ, ಡಾ. ರಾಜ್‌ಕುಮಾರ್ ಅವರ ಸೂಪರ್‌ಸ್ಟಾರ್ ಇಮೇಜ್ ಪಕ್ಕಕ್ಕಿಟ್ಟು, ಒಬ್ಬ ಸಾಮಾನ್ಯ, ಅಸಹಾಯಕ ಮೀನುಗಾರ 'ಐತು' ಪಾತ್ರದಲ್ಲಿ ಅವರಿಂದ ಅತ್ಯಂತ ಸಹಜ ಅಭಿನಯವನ್ನು ಶಂಕರ್ ನಾಗ್ ತೆಗೆಸಿದ್ದರು. ಇದು ಅಣ್ಣಾವ್ರ ದೊಡ್ಡತನ ಹಾಗೂ ಕಲೆಯ ಮೇಲೆ ಅವರಿಗಿದ್ದ ಅಭಿಮಾನವನ್ನು ಎತ್ತಿ ತೋರಿಸುತ್ತದೆ.

ಇಬ್ಬರು ದಿಗ್ಗಜರ ಗಾಯನ!

ಈ ಚಿತ್ರದ ಮೇಲಿಂದ ಹುಣ್ಣಿಮೆ ಚಂದ್ರ ಎಂಬ ಹಾಡನ್ನು ಡಾ. ರಾಜ್‌ಕುಮಾರ್ ಮತ್ತು ಶಂಕರ್ ನಾಗ್ ಇಬ್ಬರೂ ಒಟ್ಟಿಗೆ ಹಾಡಿದ್ದಾರೆ. ಇದು ದುರಂತ ಅಂತ್ಯ ಇದ್ದ ಕಾರಣ ಅಂದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ಶಂಕರ್ ನಾಗ್ ಅವರ ನಿರ್ದೇಶನದ ತಾಕತ್ತಿನಿಂದಾಗಿ ಇಂದು ಇದು ಕನ್ನಡದ ಎವರ್‌ಗ್ರೀನ್ 'ಕಲ್ಟ್ ಕ್ಲಾಸಿಕ್' ಸಿನಿಮಾವಾಗಿ ಇನ್ನು ಉಳಿದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಯ ಬಾರಿಗೆ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ಅಮೃತಧಾರೆ: ಜೈದೇವ್ ಕಥೆ ಏನಾಗಲಿದೆ?
ಟಿವಿಯಲ್ಲಿ ಪ್ರಸಾರವಾದ ಮೊದಲ ಕನ್ನಡ ಸಿನಿಮಾ ಯಾವುದು ಗೊತ್ತಾ? ಡಾ. ರಾಜ್ ಅಭಿನಯದ ಈ ಚಿತ್ರಕ್ಕಿದೆ ವಿಶೇಷ ಇತಿಹಾಸ!