Bigg Boss ಮನೆಯೊಳಗೇ ಸೌಂದರ್ಯ ಶೆಟ್ಟಿಗೆ ಕಚ್ಚಿದ ಹಾವು? ಹಲ್ಲಿನ ಗುರುತು ನೋಡಿ ಡಾಕ್ಟರ್​ ಶಾಕ್​

Published : Nov 14, 2026, 04:29 PM IST
Bigg Boss Soundarya Shetty

ಸಾರಾಂಶ

ಬಿಗ್‌ಬಾಸ್ ಮನೆಯ ಟಾಸ್ಕ್ ಒಂದರಲ್ಲಿ ಗಾನವಿ ಅವರಿಂದ ಸೌಂದರ್ಯ ಶೆಟ್ಟಿಗೆ ಸಣ್ಣ ಗಾಯವಾಗಿದೆ. ಇದನ್ನು ತಮಾಷೆಯಾಗಿ ತೆಗೆದುಕೊಂಡ ಸೌಂದರ್ಯ, ತನಗೆ ಹಾವು ಕಚ್ಚಿದೆ ಎಂದು ಡಾಕ್ಟರ್ ಬಳಿ ಲೇವಡಿ ಮಾಡಿದ್ದಾರೆ. ಈ ಘಟನೆ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾರಿಯ ಬಿಗ್​ಬಾಸ್​ ಹೇಳಿಕೊಳ್ಳುವಷ್ಟು ಸದ್ದೇನೂ ಮಾಡುತ್ತಿಲ್ಲ. 12ನೇ ಸೀಸನ್​ ಇಷ್ಟೊತ್ತಿಗಾಗಲೇ ಹಂಗಾಮಾ ಸೃಷ್ಟಿಸಿತ್ತು. ಆದರೆ ಏನೇ ಸರ್ಕಸ್​ ಮಾಡಿದರೂ ಬಿಗ್​ಬಾಸ್​ 13ರ ಬಗ್ಗೆ ವೀಕ್ಷಕರು ನಿರಾಸಕ್ತರಾಗಿದ್ದಾರೆ ಎಂದೇ ಅಂದುಕೊಳ್ಳಲಾಗುತ್ತಿದೆ. ಅದೇನೇ ಇದ್ದರೂ, ಸೌಂದರ್ಯ ಶೆಟ್ಟಿ (Bigg Boss Soundarya Shetty) ಮಾತ್ರ ಬಿಗ್​ಬಾಸ್​ ಮನೆಯನ್ನು ಸದಾ ಖುಷಿಯಾಗಿ ಲವಲವಿಕೆಯಿಂದ ಇಡುವಲ್ಲಿ ಸಕ್ಸಸ್​ ಆಗಿದ್ದಾರೆ. ಇಂತಿಪ್ಪ ಸೌಂದರ್ಯ ಶೆಟ್ಟಿ ಅವರಿಗೆ ಬಿಗ್​ಬಾಸ್​ ಮನೆಯೊಳಗೇ ಈಗ ಹಾವು ಕಚ್ಚಿ ಸಕತ್​ ಸದ್ದು ಮಾಡುತ್ತಿದ್ದಾರೆ. ಬಿಗ್​ಬಾಸ್​ ಮನೆಯೊಳಕ್ಕೆ ಡಾಕ್ಟರ್​ ಕೂಡ ಎಂಟ್ರಿ ಕೊಟ್ಟಿದ್ದು, ಸೌಂದರ್ಯ ಶೆಟ್ಟಿ ಅವರಿಗೆ ಟ್ರೀಟ್​ಮೆಂಟ್​ ಕೊಡುತ್ತಿದ್ದಾರೆ.

ಹಾಗಂತ ಸೌಂದರ್ಯ ಶೆಟ್ಟಿ ಅಭಿಮಾನಿಗಳೇನೂ ಶಾಕ್​ ಆಗಬೇಕಾಗಿಲ್ಲ. ಅಷ್ಟಕ್ಕೂ ಸೌಂದರ್ಯ ಅವರಿಗೆ ಕಚ್ಚಿದ್ದು ರಿಯಲ್​ ಹಾವಲ್ಲ, ಬದಲಿಗೆ, ಟಾಸ್ಕ್​ ಒಂದರ ವೇಳೆ ಗಾನವಿ ಅವರು ಅಕಸ್ಮಾತ್​ ಮಾಡಿದ್ದ ಚಿಕ್ಕ ಗಾಯದಿಂದ, ತಮಗೆ ಹಾವು ಕಚ್ಚಿರುವುದಾಗಿ ಸೌಂದರ್ಯ ಹೇಳಿಕೊಂಡಿದ್ದಾರೆ. ಗಾನವಿ ಅವರು ಕೂಡ ಈ ಟಾಸ್ಕ್​ ಅನ್ನು ಎಂಜಾಯ್​ ಮಾಡಿದ್ದಾರೆ. ಅಷ್ಟಕ್ಕೂ ಸೌಂದರ್ಯ ಶೆಟ್ಟಿ ಅವರ ಪಂಚಿಂಗ್‌ ಡೈಲಾಗ್‌ಗಳು, ತಮಾಷೆಯ ವಿಷಯಗಳನ್ನೇ ಸೀರಿಯಸ್‌ ಆಗಿ ಹೇಳಿ ನಿಜವಿರುವಂತೆ ನಂಬಿಸಿ ಎಲ್ಲರನ್ನೂ ನಕ್ಕು ನಗಿಸುವಲ್ಲಿ ನಿಸ್ಸೀಮರು. ಅದೇ ರೀತಿಯ ಒಂದು ಘಟನೆಯಲ್ಲಿ ತಮಗೆ ಹಾವು ಕಚ್ಚಿರುವುದಾಗಿ ಅಲ್ಲಿಗೆ ಬಂದ ಲೇಡಿ ಡಾಕ್ಟರ್​ ಬಳಿ ಅವರು ಹೇಳಿದ್ದಾರೆ. ತಮಗೆ ಹಲ್ಲಿನ ಗುರುತು ಕೂಡ ಆಗಿದ್ದು, ಇದು ಹಾವಿನದ್ದು ಎಂದು ಹೇಳಿ ತಮಾಷೆ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬಣ್ಣ ಹಚ್ಚು ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ಅವರಿಗೆ ಗಾನವಿ ಗೌಡ ಅವರ ಹಲ್ಲು ಮೂಡುತ್ತೆ, ಇದರಿಂದ ಸಣ್ಣ ಗಾಯವಾಗುತ್ತೆ. ಇತ್ತ ಗಾನವಿ ಗೌಡ ಅವರು ಕೂಡ ಸುಮಾರು 20 ನಿಮಿಷಗಳವರೆಗೂ ಟಾಸ್ಕ್‌ ಆಡಲಿಲ್ಲ. ತಲೆ ಸುತ್ತಿ ಬಿದ್ದರು. ಮೊದಲು ಡಾಕ್ಟರ್‌ ಬಳಿ ಹೋಗುವ ಗಾನವಿ ಗೌಡ ಅವರು, ನನಗೆ ಏನೂ ನೆನಪಿಲ್ಲ, ನಾನು ಏಕೆ ಡಾಕ್ಟರ್‌ ಬಳಿ ಹೋಗಿದ್ದೆ? ಎಂದು ಡ್ರಾಮಾ ಮಾಡಿದರು. ಈ ಡ್ರಾಮಾವನ್ನು ಪ್ರಶಾಂತ್‌, ಕಿರಣ್‌ ಶಾಸ್ತ್ರಿ ನಂಬಿದರು ಕೂಡ.

ಇತ್ತ ಸೌಂದರ್ಯ ಶೆಟ್ಟಿ ಅವರು ಗಾನವಿ ಅವರನ್ನು ಅಣುಕಿಸುವ ರೀತಿಯಲ್ಲಿ "ನನಗೆ ಹಾವು ಕಚ್ಚಿದೆ ಡಾಕ್ಟರ್. ಬೇಗ ಚಿಕಿತ್ಸೆ ಕೊಡಿ, ಬಿಗ್‌ ಬಾಸ್‌ ಮನೆಯ ಹಾವು ಇದು. ನನ್ನನ್ನು ನಾನು ಬಚಾವ್‌ ಮಾಡಿಕೊಂಡು ಆಟ ಆಡುತ್ತಿದ್ದೆ, ಆದರೆ, ಆ ಹಾವು ಕಚ್ಚಿದೆ, ನನಗೆ ಫುಲ್‌ ತಲೆ ನೋವು ಆಗುತ್ತಿದೆ. ಗಾಯ ಚಿಕ್ಕದಾದರೂ ಬ್ಯಾಂಡೇಜ್‌ ದೊಡ್ಡದಾಗಿ ಹಾಕಿ, ಆ ಹಾವಿಗೆ ನಾನು ತೋರಿಸಬೇಕು. ಏಕೆಂದರೆ, ಕಚ್ಚಿದ್ದು ನನಗೆ,ಆದರೆ ಮತಿಭ್ರಮಣೆ ಆಗಿರುವುದು ಆ ಹಾವಿಗೆ" ಎಂದು ಸೌಂದರ್ಯ ಶೆಟ್ಟಿ ಅವರು ಗಾನವಿ ಗೌಡ ವರ್ತನೆಯನ್ನು ಸಖತ್‌ ಲೇವಡಿ ಮಾಡಿದ್ದಾರೆ, ಡಾಕ್ಟರ್‌ ಬಳಿ ನಡೆದ ಈ ಮಾತುಕತೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ ಅತ್ಯಂತ ಕಿರಿಯ ನಿರ್ದೇಶಕ: ಶಂಕರ್ ನಾಗ್ ನಿರ್ದೇಶನದ ಕೊನೆಯ ಚಿತ್ರದ ರೋಚಕ ಸಂಗತಿಗಳು
ಕೊನೆಯ ಬಾರಿಗೆ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ಅಮೃತಧಾರೆ: ಜೈದೇವ್ ಕಥೆ ಏನಾಗಲಿದೆ?