ನಿವೇದಿತಾ ಗೌಡ ನೀನು ಮುಖ ಮುಚ್ಚಿಕೊಳ್ಳದಿದ್ದರೂ, ಎದೆ ಮುಚ್ಚಿಕೋ ಎಂದ ನೆಟ್ಟಿಗರು!

By Sathish Kumar KH  |  First Published Aug 28, 2024, 1:25 PM IST

ನಟಿ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವಿಡಿಯೋಗಳಿಗೆ ನೆಟ್ಟಿಗರಿಂದ ಕೆಟ್ಟ ಕಾಮೆಂಟ್‌ಗಳು ಬರುತ್ತಿವೆ. ವಿಶೇಷವಾಗಿ ಅವರು ಮೇಕಪ್ ಮಾಡಿಕೊಳ್ಳುವ ಅಥವಾ ಸಂತೋಷದಿಂದ ಇರುವ ವಿಡಿಯೋಗಳಿಗೆ ಈ ರೀತಿಯ ಪ್ರತಿಕ್ರಿಯೆಗಳು ಹೆಚ್ಚು. 


ಬೆಂಗಳೂರು (ಆ.28): ನಟಿ ನಿವೇದಿತಾ ಗೌಡ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕೆಟ್ಟ ಕಮೆಂಟುಗಳು ವ್ಯಕ್ತವಾಗುತ್ತಿವೆ. ಅದರಲ್ಲಿಯೂ ಅವರು ಮೇಕಪ್  ಮಾಡಿಕೊಳ್ಳುವ ಹಾಗೂ ಸಂತಸದಿಂದ ಹಾಡನ್ನು ಹಾಡುವ ರೀಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈಗ ನಿವೇದಿತಾ ಗೌಡ ಅವರು ಸಿನಿಮಾ ಅಥವಾ ಜಾಹೀರಾತು ಸಂಬಂಧಿತ ವಿಚಾರಕ್ಕೆ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ. ಅದಕ್ಕೆ ಬಹುಪಾಲು ನೆಟ್ಟಿಗಳು ಕೆಟ್ಟದಾಗಿಯೇ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ನೆಟ್ಟಿಗನೊಬ್ಬ ನಿಮ್ಮ ಮುಖ ಮುಚ್ಚಿಕೊಳ್ಳದಿದ್ದರೂ ಪರವಾಗಿಲ್ಲ, ನಿಮ್ಮ ಎದೆಯನ್ನು ಮುಚ್ಚಿಕೊಳ್ಳಿ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಮತ್ತೊಬ್ಬ ವ್ಯಕ್ತಿ ಇದಕ್ಕೆ ಶೆಟ್ಟರ ಕೈವಾಡವೆ ಕಾರಣ. ಶೆಟ್ಟರು ಸಲುಗೆ ಕೊಟ್ಟಿದ್ದರ ಪರಿಣಾಮ ಎಂದು ಹೇಳಿದ್ದಾರೆ.

Tap to resize

Latest Videos

ನಿವೇದಿತಾ ಗೌಡ ಸೌಂದರ್ಯದ ಮುಂದೆ ಬೆಟ್ಟದಷ್ಟಿದ್ದ ಕೆಟ್ಟ ಕಾಮೆಂಟ್ ಕರಗಿಹೋದವು!

ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ರೀಲ್ಸ್ ಮಾಡುತ್ತಾ ಲಕ್ಷಾಂತರ ಫಾಲೋವರ್ಸ್ ಗಳನ್ನು ಪಡೆದಿರುವ ನಿವೇದಿತಾ ಗೌಡ ಇದೀಗ ಸಿನಿಮಾ ನಟಿಯಾಗಿ ಪಯಣ ಆರಂಭಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಮೇಕಪ್ ಮಾಡಿಸಿಕೊಂಡು ಶೂಟಿಂಗ್ ಮಾಡುತ್ತಾರೆ. ಕೆಲವೊಮ್ಮೆ ಮೇಕಪ್ ಮಾಡಿಸಿಕೊಳ್ಳುವ ವಿಡಿಯೋವನ್ನು ಹಾಗು ಮೇಕಪ್ ಮುಗಿದ ನಂತರ ಸುಂದರ ನೋಟವನ್ನು ಅಭಿಮಾನಿಗಳಿಗೆ ತೋರುತ್ತಾರೆ. ಇದಕ್ಕೆ ಕೆಲವರು ನಿವೇದಿತಾ ಗೌಡಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಅದರಲ್ಲಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿ ತಮ್ಮ ವ್ಯಕ್ತಿತ್ವ ಪ್ರದರ್ಶನ ಮಾಡುತ್ತಾರೆ.

ಚಂದನ್ ಶೆಟ್ಟಿಗೆ ಡೈವೋರ್ಸ್ ಕೊಟ್ಟಿದ್ದನ್ನು ಸಹಿಸಲಾರದ ಅಭಿಮಾನಿಗಳು: ನಟಿ ನಿವೇದಿತಾ ಗೌಡ ಮದುವೆಗೆ ಮುಂಚೆ ದಂತದ ಗೊಂಬೆಯಂತಿದ್ದರು. ತೆಳುವಾದ ಮೈಕಟ್ಟು, ಸುಂದರ ಕಣ್ಣೋಟ, ನಿಷ್ಕಲ್ಮಶ ಮುಗ್ಧ ಮುಖ, ಉದ್ದನೆಯ ಜಡೆ, ಮೈತುಂಬ ಬಟ್ಟೆ ಧರಿಸಿ ವಿಡಿಯೋ ಮಾಡಿ ಹರಿಬಿಟ್ಟರೆ ಲಕ್ಷಾಂತರ ಅಭಿಮಾನಿಗಳು ಭೇಷ್ ಎಂದು ಕಾಮೆಂಟ್ ಮಾಡುತ್ತಿದ್ದರು. ಈಗ ಅವರೇ ಕೆಟ್ಟ ಕಾಮೆಂಟ್ ಮಾಡಲು ಮುಂದಾಗಿದ್ದಾರೆ. ಏಕೆಂದರೆ ನಿವೇದಿತಾ ಗೌಡ ಅವರು ರ್ಯಪರ್ ಚಂದನ್ ಶೆಟ್ಟಿಗೆ ಡೈವೋರ್ಸ್ ಕೊಟ್ಟಿದ್ದಕ್ಕೆ. ಸಾಮಾಜಿಕ ಜಾಲತಾಣದ ಹಿನ್ನೆಲೆಯುಳ್ಳ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದರು. ಇದೇ ಸೀಸನ್ ನಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಅವರ ಕೂಡ ಸ್ಪರ್ಧಿಯಾಗಿ ಹೋಗಿದ್ದರು. ಅಲ್ಲಿ ಇಬ್ಬರಿಗೂ ಪ್ರೇಮಾಂಕುರ ಅಗಿದೆ.

ಬಿಗ್ ಬಾಸ್ ಸ್ಪರ್ಧಿಗಳಾಗಿ ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ದಿನಗಳನ್ನು ಕಳೆದ ಇವರು ಅಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರಲಿಲ್ಲ. ಆದರೆ, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಿವೇದಿತಾ ಗೌಡ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಚಂದನ್ ಶೆಟ್ಟಿ ಪ್ರೀತಿಯ ಬಲೆಯನ್ನು ಗಟ್ಟಿಯಾಗಿ ಹೆಣೆದಿದ್ದಾರೆ. ಆದರೆ ಚಂದನ್ ಶೆಟ್ಟಿಗೆ ಮೈಸೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಹಾಡಲು ಅವಕಾಶ ನೀಡಿದರೆ, ಅದೇ ವೇದಿಕೆಯಲ್ಲಿ ನಿವೇದಿತಾ ಗೌಡಗೆ ಸಾವಿರಾರು ಜನರ ಮುಂದೆ ಸರ್ಕಾರದ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಿವೇದಿತಾ ಕೂಡ ಒಪ್ಪಿಕೊಳ್ಳುತ್ತಾಳೆ.

'ಕರಿಮಣಿ'ಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ- ಮುಂದಿನ ಮಾಲೀಕ ಯಾರಮ್ಮಾ ಕೇಳ್ತಿದ್ದಾರೆ ನೆಟ್ಟಿಗರು!

ಇದಾದ ನಂತರ ಕೆಲವೇ ದಿನಗಳಲ್ಲಿ ಅದ್ಧೂರಿ ಎಂಗೇಜ್ ಮೆಂಟ್ ಹಾಗೂ ಅದ್ಧೂರಿ ಮದುವೆಯೂ ನಡೆದು ಹೋಗುತ್ತದೆ. ಆದರೆ, ಮೂರ್ನಾಲ್ಕು ವರ್ಷಗಳ ಸಂಸಾರ ಮಾಡಿದರೂ, ಮಕ್ಕಳನ್ನು ಮಾಡಿಕೊಳ್ಳಲಿಲ್ಲ. ಆದರೆ, ಸಿನಿಮಾ ಮತ್ತು ವೃತ್ತಿ ಜೀವನಕ್ಕಾಗಿ ಇಬ್ಬರು ದಂಪತಿ ಡೈವೋರ್ಸ್ ಕೊಡಲು ನಿರ್ಧರಿಸಿದ್ದಾರೆ. ಅಂದುಕೊಂಡಂತೆ ಒಪ್ಪಂದದ ಮೂಲಕ ಡಿವೋರ್ಸ್ ಕೊಟ್ಟಿದ್ದಾರೆ. ಇದನ್ನು ಮಾಧ್ಯಮಗಳ ಮುಂದೆಯೂ ಬಹಿರಂಗಪಡಿಸಿ ಕೈ ಕೈ ಹಿಡಿದುಕೊಂಡು ಡೈವೋರ್ಸ್ ವಿಚಾರ ತಿಳಿಸಿ ಪುನಃ ಕೈ ಕೈ ಹಿಡಿದುಕೊಂಡೆ ಮನೆಗೆ ಹೋಗಿ ಬೇರ್ಪಟ್ಟಿದ್ದಾರೆ. ಈಗ ಇಬ್ಬರೂ ತಮ್ಮ ತಮ್ಮ ಸಿನಿಮಾ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನು ರೀಲಗಳ ಮೂಲಕ ಪ್ರಸಿದ್ಧಿಗೆ ಬಂದಿದ್ದನ್ನು ಮರೆಯದ ನಿವೇದಿತಾ ಗೌಡ, ಎಂದಿಗೂ ಅದನ್ನು ಮರೆಯಿಲುವುದಿಲ್ಲ. ವಾರಕ್ಕೆ ಮೂರ್ನಾಲ್ಕು ಚೆಂದದ ರೀಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ. ಇದರಿಂದ ತಮ್ಮ ಫಾಲೋವರ್ಸ್ ಗಳನ್ನೂ ಹಿಡಿದಿಟ್ಟುಕೊಂಡಿದ್ದಾರೆ. ಆದರೆ, ಪ್ರತಿ ಪೋಸ್ಟ್ ಗೆ ಕೆಟ್ಟ ಕಾಮೆಂಟ್ ಗಳಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ.

click me!