Colors Kannada Habba: ತಿಂಗಳು ಪೂರ್ತಿ ಭರ್ಜರಿ ಟ್ವಿಸ್ಟ್;‌ ಯಾವ ಧಾರಾವಾಹಿಯಲ್ಲಿ ಏನಾಗಲಿದೆ?

Published : Nov 01, 2025, 12:53 PM IST
colors kannada serial

ಸಾರಾಂಶ

Colors Kannada Serials Kannada Habba: ಕಲರ್ಸ್ ಕನ್ನಡ ವಾಹಿನಿಯು ತನ್ನ ಧಾರಾವಾಹಿಗಳಲ್ಲಿಯೂ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಿದೆ. ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಜೋರಾಗಿ ನಡೆಯಲಿದೆ.

ಕಲರ್ಸ್‌ ಕನ್ನಡ ವಾಹಿನಿಯ ಪ್ರೋಮೋದಲ್ಲಿ ಸೀರಿಯಲ್‌ಗಳಲ್ಲಿ ಕತೆಗಳಲ್ಲಿ ಕನ್ನಡತನ ತರುವ ಈ ಪ್ರಯತ್ನವನ್ನು ಮಾಡಲಾಗಿದೆ. ಕನ್ನಡದ ವೀಕ್ಷಕರು ಈ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.

ರಾಮಾಚಾರಿ ಧಾರಾವಾಹಿ

ಚಾರು ದೇವಸ್ಥಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ, ಮಗುವಿಗೆ ಅರಿಶಿನ-ಕುಂಕುಮದಿಂದ ಕೂಡಿದ ಕನ್ನಡ ಧ್ವಜದ ಬಣ್ಣದ ಸೀರೆ ಹಾಕಲಾಗುತ್ತದೆ. ರಾಮಾಚಾರಿ ತನ್ನ ಮಗುವಿನ ಜನ್ಮವನ್ನು ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಎಂದು ಹೇಳಿ ಪ್ರತಿಜ್ಞೆ ಮಾಡುತ್ತಾನೆ.

ಪ್ರೇಮ ಕಾವ್ಯ ಧಾರಾವಾಹಿ

ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ರಾಮ್‌ ಇರುವ ಆಸ್ಪತ್ರೆಯಲ್ಲಿ ಹಬ್ಬದ ಅಲಂಕಾರ ಮಾಡಲಾಗುತ್ತದೆ. ಧನರಾಜ್, ರಾಮ್, ಶ್ರಿಯಾ ವೇದಿಕೆಗೆ ಬರುತ್ತಾರೆ, ತನ್ನ ಹಳ್ಳಿಗೆ ಮಾಡಿದ ಸೇವೆಗೆ ರಾಮ್ ಹೆಮ್ಮೆಪಡುತ್ತಾನೆ, ರಾಮ್‌ಗೆ ಹಲವಾರು ವಿದೇಶಿ ಅವಕಾಶಗಳಿದ್ದರೂ ಅವನು ಹಳ್ಳಿಯಲ್ಲಿ ಕೆಲಸ ಮಾಡುತ್ತಾನೆ. ರಾಜ್ಯದ ಮೇಲಿರುವ ಪ್ರೀತಿ, ಭಾಷೆಯ ಬಗ್ಗೆ ರಾಮ್ ಮಾತನಾಡುತ್ತಾನೆ. ಆಗ ಅವನಿಗೆ ಸಿಗೋ ಸರ್ಪ್ರೈಸ್‌ ಏನು?

ಭಾಗ್ಯಲಕ್ಷ್ಮಿ ಧಾರಾವಾಹಿ

ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಸಕಲೇಶಪುರದ ಶಾಲೆಯಲ್ಲಿ ಭಾಗ್ಯ, ಆದಿಯನ್ನು ಗೌರವಿಸಲಾಗುತ್ತದೆ. ಬಿಗ್‌ ಬಾಸ್ ಸ್ಪರ್ಧಿ ಕರಿಬಸಪ್ಪ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ.

ಮುದ್ದು ಸೊಸೆ ಧಾರಾವಾಹಿ

ವಿದ್ಯಾ ತನ್ನ ಮಾವನಿಗೋಸ್ಕರ ಗ್ರಾಮದಲ್ಲಿ ಪ್ರಚಾರ ಮಾಡುತ್ತಾಳೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಯೋಜನೆ ರೂಪಿಸುತ್ತಾಳೆ. ಈಶ್ವರಿ ಇದನ್ನು ಹಾಳು ಮಾಡಲು ನೋಡುತ್ತಾಳೆ. ಅದು ನೆರವೇರುತ್ತಾ?

ಗಂಧದ ಗುಡಿ ಧಾರಾವಾಹಿ

ಪೊಲೀಸ್ ಠಾಣೆಯಲ್ಲಿ ವಿಶೇಷವಾಗಿ ಪೋಲೀಸ್ ಪಾತ್ರದಲ್ಲಿ ರವಿ ಕಾಳೆ ಕಾಣಿಸುತ್ತಾರೆ, ಕನ್ನಡ ನಾಡಿನ ಹಾಡೊಂದನ್ನು ಹಾಡುತ್ತಾರೆ. ತಿಂಗಳ ಕೊನೆಯಲ್ಲಿ ನಾಯಕ ನಾಯಕಿಯರು ರಾಜ್ಯೋತ್ಸವ ಸಂಬಂಧಿತ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ.

ಭಾರ್ಗವಿ LLB ಧಾರಾವಾಹಿ

ಜೆಪಿ ಪಾಟೀಲ್ ಏನೇ ಮಾಡಿದರೂ ವಿಕ್ಕಿಯನ್ನು ರಕ್ಷಿಸಲು ಆಗುವುದಿಲ್ಲ. ನ್ಯಾಯಾಲಯದಲ್ಲಿ ವಿಕ್ಕಿಗೆ ಜಾಮೀನು ಸಿಗುವುದಿಲ್ಲ. ನ್ಯಾಯಾಲಯದಲ್ಲಿ ಭಾರ್ಗವಿ ವಿಜಯ ಸಾಧಿಸುತ್ತಾಳೆ. ಕನ್ನಡದ ಹೆಣ್ಣು ಮಕ್ಕಳಿಗೆ ಅವಮಾನಿಸಿದರೆ ಇದೇ ಗತಿ ಎಂದು ಉದಾಹರಣೆ ಸಮೇತ ವಿಕ್ಕಿಗೆ ಭಾರ್ಗವಿ ವಾರ್ನಿಂಗ್ ಕೊಡುತ್ತಾಳೆ. ನ್ಯಾಯಾಲಯದ ಹೊರ ಭಾಗದಲ್ಲಿಯೂ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯುವುದು.

ನಂದ ಗೋಕುಲ ಧಾರಾವಾಹಿ

ಗಿರಿಜಾ ಯಾವ ರಂಗೋಲಿ ಇಡುವುದೆಂದು ಯೋಚನೆ ಮಾಡುತ್ತಿರುತ್ತಾಳೆ, ಆಗ ಮೀನಾ ಅವಳಿಗೆ ಇವತ್ತು ವಿಶೇಷ ದಿನ ಎಂದು ನೆನಪಿಸುತ್ತಾಳೆ —ಭುವನೇಶ್ವರಿ ದೇವಿ , ರಾಜ್ಯೋತ್ಸವದ ಆಚರಣೆ ಬಗ್ಗೆ ಮಾತನಾಡಿ ಅಮೂಲ್ಯ ಸೇರಿಕೊಂಡು ಕನ್ನಡ ರಾಜ್ಯೋತ್ಸವ ಸಂಬಂಧಿತ ರಂಗೋಲಿ ಇಡುತ್ತಾರೆ.

ಮೀನಾ ತನ್ನ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಕನ್ನಡ ಪುಸ್ತಕ ಮಳಿಗೆ ಇಡುತ್ತಾಳೆ. ಅಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುವ ವ್ಯಕ್ತಿ ಕನ್ನಡವನ್ನು ನಿಂದಿಸಿದಾಗ, ಮೀನಾ ಅವನಿಗೆ ಹೇಗೆ ಪಾಠ ಕಲಿಸುತ್ತಾಳೆ ಎಂಬ ಟ್ವಿಸ್ಟ್‌ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿನಟ 90% ಸುಳ್ಳು 10% ಮಾತ್ರ ಸತ್ಯ; ಕಾವ್ಯಾ ನೋಟಕ್ಕೆ ನಾಚಿ ನೀರಾದ ಮಂಡ್ಯದ ಹೈದ!
ಲವ್​ ಅಜ್ಜಿಯ ಮಾಸ್ಟರ್​ ಪ್ಲ್ಯಾನ್​ನಿಂದ ರೋಚಕ ಟ್ವಿಸ್ಟ್​​: Amruthadhaare Serial ಯಾವಾಗ ಮುಗಿಯತ್ತೆ?