ಜಾಹ್ನವಿ-ವಿಶ್ವ ಪಾತ್ರವನ್ನ ಜನರು ಅದೆಷ್ಟು ಪ್ರೀತಿ ಮಾಡುತ್ತಿದ್ದಾರೋ, ಈಗ ಅಷ್ಟೇ ಅವಹೇಳನ ಮಾಡುತ್ತಿದ್ದಾರೆ. ಹಾಗೆಯೇ ಜಯಂತ್ ಪಾತ್ರ, ಅಭಿನಯವನ್ನು ಪ್ರಶಂಸೆ ಮಾಡುತ್ತಿದ್ದಾರೆ. ಕಾರಣವಿಷ್ಟೇ ಇಷ್ಟು ದಿನ ಜಯಂತ್ ಜಾಹ್ನವಿ ಎಲ್ಲಿದ್ದಾಳೆ ಎಂದು ಹುಡುಕುತ್ತಲೇ ಇದ್ದ. ಮೊದಲಿನಿಂದಲೂ ಜಯಂತ್‌ಗೆ ಜಾಹ್ನವಿ ಬದುಕಿದ್ದಾಳೆ ಎಂಬುದೇ ದಟ್ಟ ಅನುಮಾನ. ಆದರೆ ಜಯಂತ್ ನಡವಳಿಕೆಯ ಬಗ್ಗೆ ತಪ್ಪು ತಿಳಿದ ಮನಶಾಸ್ತ್ರಜ್ಞರು, ಜಯಂತ್‌ಗೆ ಜಾಹ್ನವಿ ಜೊತೆಗಿದ್ದಾಳೆ ಎಂಬ ಭ್ರಮೆ ಅಷ್ಟೇ ಎಂದು ಮೆಡಿಸಿನ್ ಕೊಡುತ್ತಿದ್ದರು.
ಜಯಂತ್ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡ ವಿಶ್ವ, "ನೀನೀಗ ಜಯಂತ್ ಎದುರು ಹೋದರೂ ಆತ ಭ್ರಮೆ ಎಂದು ಭಾವಿಸುತ್ತಾನೆ ಹೆದರಬೇಡ" ಎಂದು ಜಾಹ್ನವಿಗೆ ಧೈರ್ಯ ತುಂಬಿದ. ಆಗ ಜಾಹ್ನವಿ ಜಯಂತ್ ಕಣ್ಣೆದುರು ಬಂದರು ತನಗೆ ಭ್ರಮೆಯಾಗಿರಬೇಕೆಂದು ಭಾವಿಸಿದ. ಯಾಮಾರಿದ. ಆದರೆ ಹೀಗೊಂದು ದಿನ ಶಾಂತಮ್ಮನ ಬಳಿ ಮಾತನಾಡುವಾಗ ಸೋಫಾ ಬಳಿ ಹಸಿರು ಬಳೆಗಳು ಸಿಕ್ಕವು ನೋಡಿ ಅಲ್ಲಿಗೆ ಜಯಂತ್‌ಗೆ ಕನ್‌ಫರ್ಮ್ ಆಯ್ತು. ತಾನಿಷ್ಟ ದಿನ ನೋಡದ್ದು, ಕಂಡದ್ದು ಯಾವುದೂ ಕನಸಲ್ಲ, ಭ್ರಮೆಯಲ್ಲ. ಜಾನೂ ತನ್ನ ಮನೆಗೆ ಬಂದದ್ದು ನಿಜ ಎಂದು ಗೊತ್ತಾಯ್ತು.
ಈ ಘಟನೆಯ ನಂತರ ವಿಶ್ವನೇ ತನ್ನ ಜಾನೂನನ್ನ ರಕ್ಷಿಸುತ್ತಿದ್ದಾನೆ ಎಂಬ ಸುಳಿವು ಜಯಂತ್‌ಗೆ ಗೊತ್ತಾಯ್ತು. ಹಾಗಾಗಿ ಅವನ ಬಳಿ ಹೇಗಾದರೂ ಮಾಡಿ ತನ್ನ ಜಾಹ್ನವಿ ಬಗ್ಗೆ ತಿಳಿದುಕೊಳ್ಳಬೇಕೆಂದುಕೊಂಡು "ಸಂತಾಪ ಸಭೆ ಏರ್ಪಡಿಸಿದ್ದು, ನೀನಿಲ್ಲಿಗೆ ಬರಬೇಕು" ಎಂದು ವಿಶ್ವನನ್ನ ಜಯಂತ್ ಒತ್ತಾಯಿಸುತ್ತಾನೆ.
ಮೊದಲಿಗೆ ಬರಲು ಒಪ್ಪದ ವಿಶ್ವ ಕೊನೆಗೆ ಭಾಗವಹಿಸುತ್ತಾನೆ. ಅಲ್ಲಿ ನೋಡಿದರೆ ನೊಣ ಹೊಡೆಯುವುದಕ್ಕೂ ಯಾರೊಬ್ಬರೂ ಇರದುದನ್ನ ಕಂಡು ವಿಶ್ವ ವಿಚಾರಿಸಿದಾಗ "ಅವರೆಲ್ಲಾ ತಡವಾಗಿ ಬರುತ್ತಾರೆ. ನೀನು ನಾನು ಮಾತನಾಡುವ" ಎಂದು ಮಾತಿಗೆ ಶುರು ಹಚ್ಚಿಕೊಳ್ಳುತ್ತಾನೆ. ಆಗ ಮಾತನಾಡುತ್ತಾ ವಿಶ್ವನಿಗೆ ತನ್ನ ಇನ್ನೊಂದು ಅವತಾರವನ್ನ ತೋರಿಸುತ್ತಾ ಹೋಗುತ್ತಾನೆ ಜಯಂತ್. ಇದನ್ನೆಲ್ಲಾ ನೋಡಿದವರಿಗೆ "ಅಯ್ಯೋ ಪಾಪ ವಿಶ್ವ ಸಿಕ್ಕಿಹಾಕಿಕೊಂಡ" "ಜಯಂತ್ ಮುಂದೇನು ಮಾಡುತ್ತಾನೋ" ಅಂತ ಅಂದುಕೊಂಡವರೇ ಹೆಚ್ಚು. ಆದರೆ ಇಲ್ಲಾಗಿದ್ದೇ ಬೇರೆ. ಈ ಮೊದಲೇ ಹೇಳಿದ ಹಾಗೆ ಬಹುಶಃ ವಿಶ್ವನ ಫ್ಯಾನ್ಸ್ ಕೂಡ ಇದನ್ನ ಊಹಿಸಿರಲ್ಲ. ಯಾವಾಗ ವಿಶ್ವನ ಹಣೆಗೆ ಜಯಂತ್ ರಿವಾಲ್ವಾರ್ ಹಿಡಿದನೋ ಆಗ ವಿಶ್ವ ತಿರುಗಿ ಬಿದ್ದಿದ್ದಾನೆ. ಜಾಹ್ನವಿ ಬದುಕಿದ್ದಾಳೆ. ನೀನೇನು ಮಾಡ್ತಿ ಮೊಡ್ಕೊ ಅನ್ನೋ ರೀತಿ ಸವಾಲು ಹಾಕಿದ್ದಾನೆ. ಇದೇ ಕಾರಣಕ್ಕೆ ವಿಶ್ವನ ವಿರುದ್ಧವೂ ಕೆಲವು ವೀಕ್ಷಕರು ತಿರುಗಿಬಿದ್ದಿದ್ದಾರೆ. ಜೊತೆಗೆ ಜಾಹ್ನವಿ ಬಗ್ಗೆಯೂ ಈ ಕೆಳಗಿನಂತೆ ಕಾಮೆಂಟ್ ಮಾಡಿದ್ದಾರೆ.
ಹೌದು. ಮೊನ್ನೆಯಷ್ಟೇ ವಿಶ್ವನ ಪಾತ್ರದ ಕುರಿತು ಮೂಗುಮುರಿಯುತ್ತಿದ್ದ ವೀಕ್ಷಕರು, ಈಗೀಗ ಜಾಹ್ನವಿ ಪಾತ್ರದ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಏಕೆಂದರೆ ವಿಶ್ವನ ಮನೆಯಲ್ಲಿ ಜಾಹ್ನವಿ ಇರುವುದು ಯಾರಿಗೂ ಇಷ್ಟವಾಗುತ್ತಿಲ್ಲ. ಅವಳೀಗ ಎಲ್ಲದಕ್ಕೂ ವಿಶ್ವನನ್ನೇ ಡಿಪೆಂಡ್ ಆಗಿದ್ದಾಳೆ. ಇದರಿಂದ ಸ್ವಾಭಾವಿಕವಾಗಿಯೇ ಜನರು ಕೋಪ ಮಾಡಿಕೊಂಡಿದ್ದಾರೆ. ವಿಶ್ವ-ತನು ಇಬ್ಬರಿಗೂ ಮದುವೆಯಾಗುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವುದೇ. ಈ ಹೊತ್ತಿನಲ್ಲಿ ತನುವನ್ನ ಮರೆತ ವಿಶ್ವ ಹೀಗೆ ಸ್ನೇಹಿತೆಯನ್ನ ರಕ್ಷಿಸಲು ಅವಳ ಹಿಂದೆಯೇ ಓಡಾಡಿಕೊಂಡಿರುವುದು ಕೂಡ ಮುಜುಗರ ತರಿಸಿದೆ.
ಇಷ್ಟೆಲ್ಲಾ ಆದ್ರೂ ಮತ್ತೆ ಮತ್ತೆ ಜಾಹ್ನವಿ ವಿಶ್ವನಿಗಾಗಿ ಕಾಯುವುದು, ವಿಶ್ವ ತಾನು ಜಯಂತ್‌ನನ್ನ ಭೇಟಿ ಮಾಡಿ ಬಂದ ವಿಚಾರ ಮುಚ್ಚಿಟ್ಟಿರುವುದು ಇದೆಲ್ಲಾ ವೀಕ್ಷಕರಿಗೆ ಬೇಸರತಂದಿದೆ. ಸಹಜವಾಗಿಯೇ ನಿರ್ದೇಶಕರಿಗಾಗಿ ಮನವಿ ಮಾಡಿದ್ದಾರೆ. ಅವರು ನಿರ್ದೇಶಕರ ಬಳಿಯಿಟ್ಟ ಬೇಡಿಕೆಯೇನು? ಜಾಹ್ನವಿ, ವಿಶ್ವ, ಜಯಂತ್ ಕುರಿತು ಮಾಡಿರುವ ಕಾಮೆಂಟ್ಸ್‌ಗಳೇನು ನೋಡೋಣ ಬನ್ನಿ...
*"ಮದ್ವೆ ಆಗಿರೋ ಗಂಡ, ಮದ್ವೆ ಆಗಬೇಕಿರೋ ಹುಡುಗಿ ಇಟ್ಕೊಂಡು ನಿಮ್ಮ ಇಬ್ಬರದೂ ಏನು ಕಣ್ಣ ಮುಚ್ಚಾಲೆ. ಈ ಸ್ಟೋರಿ ಅದಷ್ಟು ಬೇಗ ಚೇಂಜ್ ಮಾಡಿ".
*"ಈ ವಿಶ್ವನ ಇನ್ನೊಂದು ಮುಖ ಈ ಪೆದ್ದಿ ಜಾಹ್ನವಿಗೆ ಗೊತ್ತಾಗ್ಬೇಕು. ಅದಕ್ಕೂ ಮುಂಚೆ ಇವರಿಬ್ಬರ ಈ ಕಣ್ಣಮುಚ್ಚಾಲೆ ಆಟ ತನುಗೆ ಗೊತ್ತಾಗ್ಬೇಕು".
*ಸರ್ ಆಗಲೇ ಜಾಹ್ನವಿ ಕ್ಯಾರೆಕ್ಟರ್ ಬಗ್ಗೆ ತುಂಬಾ ಬ್ಯಾಡ್ ಆಗಿ ಮಾತಾಡ್ತಾ ಇದ್ದಾರೆ. ನೀವು ಈ ತರ ಸೀನ್ ಗಳನ್ನು ತೋರ್ಸಿ ಅವ್ಳ ಕ್ಯಾರೆಕ್ಟರ್ ನಾ ಹಾಳು ಮಾಡ್ತಾ ಇದ್ದಿರಾ. atleast ಅವ್ಳನ್ನ ವೆಂಕಿ ಹತ್ರನಾದ್ರೂ ಕಳ್ಸಿ. ಅವ್ಳು ಸ್ವಂತ ಆಗದಿದ್ರೂ ಬದುಕೋ ತರ ತೋರ್ಸಿ. ವೆಂಕಿ ಹತ್ರ ಹೇಳ್ಕೊಂಡು ಎಲ್ಲಾ ಸಹಾಯ ಮಾಡ್ಲಿಕ್ಕೆ. ಚಂದನ ಅಭಿಮಾನಿಯಾಗಿ ಹೀಗೆಲ್ಲಾ ತೋರಿಸಬೇಡಿ ಸರ್ ನಮ್ಗೆ ತುಂಬಾ ನೋವಾಗ್ತಾ ಇದೆ ಕಾಮೆಂಟ್ ಮತ್ತು ಸೀನ್ ನೋಡಿ.
*ಈ ಜಾಹ್ನವಿ ಅವತ್ತೆ ನೀರಲ್ಲಿ ಬಿದ್ದು ಸತ್ತಿದ್ರೆ ಎಷ್ಟು ನೆಮ್ಮದಿ ಇರ್ತಿತ್ತು.
*ಇದರಿಂದನೇ ಗೊತ್ತಾಗ್ತಾ ಇದೆ ವಿಶ್ವ ಗೋಮುಖ ವ್ಯಾಘ್ರ ಅಂತ ಜಾಹ್ನವಿಯ ನಡವಳಿಕೆ ಸರಿ ಕಾಣ್ತಿಲ್ಲ ಡೈರೆಕ್ಟರ್ ಸರ್ ಒಂದು ಮದುವೆ ಆಗಿರುವ ಹೆಣ್ಣು ಬೇರೆ ಗಂಡಸಿನ ಬಗ್ಗೆ ಅತಿಯಾದ ಕಾಳಜಿ ವಹಿಸೋದು ಅವನಿಗಾಗಿ ಊಟ ಬಿಟ್ಟು ಕಾಯೋದು ಈ ಥರ ತೋರಿಸ್ತಾ ಇದ್ದೀರಾ ಇದು ಸರಿಯಲ್ಲ ಇದರಿಂದ ಜಾಹ್ನವಿಗೆ ಕೆಟ್ಟ ಹೆಸರು. ಹೀಗೆ ತರಹೇವಾರಿ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿರುವುದನ್ನ ನೀವಿಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.