
ಹಿಂದಿ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ Nach Baliye season 7ನ ಜೋಡಿ ಹಿಮಾಂಶು ಮಲ್ಹೋತ್ರಾ (Himanshu Malhotra) ಮತ್ತು ಅಮೃತಾ ಖಾನ್ವಿಲ್ಕರ್ (Amruta Khanvilkar) ಅವರ ಪ್ರೀತಿಸಿ, ಮದುವೆಯಾಗಿದ್ದಾರೆ. 2017ರಲ್ಲಿಯೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರಿಬ್ಬರ ಡ್ಯಾನ್ಸ್ (Dance) ನೋಡಿ ಬೋಲ್ಡ್ ಆದವರು ಈ ಲವ್ ಬರ್ಡ್ಸ್ ಸ್ಟೋರಿ (Love Story) ಕೇಳಿ ಕ್ರೇಜಿ ಆಗೋಗಿದ್ದರಂತೆ! ಅಂತಹ ಲವ್ ಟ್ರೆಂಡ್ ಕ್ರಿಯೇಟ್ ಮಾಡಿದ ಜೋಡಿ ಇದು.
ಹಿಮಾಂಶ ಮಲ್ಹೋತ್ರಾ ಮತ್ತು ಅಮೃತಾ ಖಾನ್ವಿಲ್ಕರ್ ಲವ್ ಸ್ಟೋರಿ ಒಂದು ರೀತಿ ಚೇತನ್ ಭಗತ್ (Chetan Bhagat) ಅವರ 2 ಸ್ಟೇಸ್ಟ್ (2 States) ಸಿನಿಮಾ ಇದ್ದಂತೆ. ಇಬ್ಬರೂ ವಿಭಿನ್ನ ರಾಜ್ಯಕ್ಕೆ ಸೇರಿದವರು. ಬೇರೆ ಬೇರೆ ಭಾಷೆಯವರು, ಸ್ನೇಹಿತರಾಗಿ (Friends) ಆನಂತರ ಪ್ರೇಮಿಗಳಾಗಿ (Lovers) ಪೋಷಕರನ್ನು ಒಪ್ಪಿಸಿ ಮದುವೆಯಾದವರು. 'ನನಗೆ ರೊಮ್ಯಾಂಟಿಕ್ (Romantic) ಆಗಿರುವುದಕ್ಕೆ ತುಂಬಾ ಕಷ್ಟ. ನಾನು ಸದಾ ಫನ್ನಿಯಾಗಿರಲು ಇಷ್ಟ ಪಡುವೆ. ಆದರೆ ಹಿಮಾಂಶು ತುಂಬಾ ಆಪೋಸಿಟ್. ನಾವಿಬ್ಬರೂ ಆಪೋಸಿಟ್ ವ್ಯಕ್ತಿತ್ವದವರು,' ಎಂದು ಅಮೃತಾ ಹೇಳಿದ್ದರು.
'ಚಿಕೂ ಕಿ ಮಮ್ಮಿ ದುರ್ ಕೀ' ಧಾರಾವಾಹಿಯಲ್ಲಿ ಹಿಮಾಂಶು ನಟಿಸುತ್ತಿದ್ದಾರೆ. ಇ-ಟೈಮ್ಸ್ ಜೊತೆ ಮಾತನಾಡಿದ ಅವರು ನೆಟ್ಟಿಗರು ಸದಾ ಕೇಳುವ ಪ್ರಶ್ನೆ 'ಹಿಮಾಂಶು ಮತ್ತು ಅಮೃತಾ ಒಟ್ಟಿಗೆ ನಟಿಸುವುದಿಲ್ವಾ?' ಎಂದಿದ್ದಾರೆ.
'ಅಮೃತಾ ತುಂಬಾನೇ ನಾಚಿಕೆ ಸ್ವಭಾವದ (Shy personality) ಹುಡುಗಿ. ನನ್ನ ಮುಂದೆ ಆ್ಯಕ್ಟ್ ಮಾಡಲು ನಾಚಿಕೊಳ್ಳುತ್ತಾಳೆ. ಹೀಗಾಗಿ ನಾವಿಬ್ಬರೂ ಒಟ್ಟಿಗೆ ನಟಿಸುವುದನ್ನು ನೀವು ನೋಡಲು ಸಾಧ್ಯವೇ ಆಗುವುದಿಲ್ಲ. ಈಗ ನಾನು ಊಟ (Lunch) ಮಾಡುವ ಸಮಯದಲ್ಲೂ ಇದೇ ಮಾತನಾಡುತ್ತಿದ್ದೆವು. ನಾವಿಬ್ಬರೂ ಒಟ್ಟಿಗೆ ಮಾಡುವಂಥ ಪ್ರಾಜೆಕ್ಟ್‌ಗಳನ್ನು ನಮಗೆ ಕೊಟ್ಟಿದ್ದಾರೆ. ಆದರೆ ಅಮೃತಾ 'ಒಟ್ಟಿಗೆ ನೃತ್ಯ ಮಾಡುವುದು ಬೇರೆ, ನಟಿಸುವುದು ಬೇರೆ. ತೆರೆ ಮೇಲೆ ಆ್ಯಕ್ಟಿಂಗ್ ಮಾಡುವಂತೆ ನಮ್ಮ ಜೀವನ ಆಗಬಾರದು. ನಾವು ರಿಯಲ್ ಲೈಫ್‌ನಲ್ಲಿ ತುಂಬಾನೇ ರಿಯಲ್ ಆಗಿದ್ದೀವಿ' ಎನ್ನುತ್ತಾಳೆ. ಹೀಗಾಗಿ ನಿಜ ಜೀವನ ಹೀಗೆ ಇರಬೇಕು ಅಂತ ಪ್ಲಾನ್ ಮಾಡಿದ್ದೀವಿ. ಆಕೆಗೆ ಬೇರೆ ಟೀಂ ಇದೆ ನನಗೆ ಬೇರೆ ಟೀಂ ಇದೆ,' ಎಂದು ಹಿಮಾಂಶು ಮಾತನಾಡಿದ್ದಾರೆ.
'ನಾನು ಜೀವನದಲ್ಲಿ ತುಂಬಾನೇ ಖುಷಿಯಾಗಿರುವೆ. ಇದರಿಂದ ಎಲ್ಲಾ ದೂರ ಇರೋದೆ ಒಂದು ಬ್ಯೂಟಿಫುಲ್ ಜೀವನದ (Beautiful Life) ಭಾಗ ಎಂದುಕೊಂಡಿರುವೆ. ಒಂದು ಸಲ ನೀವು ವೃತ್ತಿ ಜೀವನ (Professional Life) ಮತ್ತು ವೈಯಕ್ತಿಕ ಜೀವನವನ್ನ (Personal Life) ಲಿಂಕ್ ಮಾಡಿದರೆ, ಅದರಲ್ಲೂ ನಟಿಸಿದರೆ ಸಂಸಾರದಲ್ಲಿ ದೊಡ್ಡ ಜಗಳ ಶುರುವಾಗುತ್ತದೆ. ಇದೆಲ್ಲಾ ಪಕ್ಕಕ್ಕಿಟ್ಟು, ಜೀವನವನ್ನ ಸಂತೋಷದಿಂದ ನಡೆಸಿಕೊಂಡು ಹೋಗುವುದು ಮುಖ್ಯ. ನಾನು ಚಿತ್ರೀಕರಣದಿಂದ (Shooting) ಮನೆಗೆ ಹಿಂದಿರುಗಿದಾಗ ನಾನು ಎಲ್ಲ ವಿಚಾರಗಳನ್ನೂ ಹಂಚಿ ಕೊಳ್ಳುತ್ತೇನೆ. ಜೀವನದ ಕ್ರಾ ಫ್ಟಿಂಗ್, ಡ್ಯಾನ್ಸ್, ನಿರ್ಮಾಣ, ಕಂಟೆನ್ಟ್ ಕ್ರಿಯೇಟಿಂಗ್ ಎಲ್ಲದರ ಬಗ್ಗೆಯೂ ನಾವು ಮಾತನಾಡುತ್ತೇವೆ,' ಎಂದು ಅಮೃತಾ ಹೇಳಿದ್ದಾರೆ.
ಈ ಹಿಂದೆ ಹಿಮಾಂಶ ಐಫೆಲ್ ಟವರ್ (Effile Tower) ಎದುರು ನಿಂತಿರುವ ಫೋಟೋ ಹಂಚಿ ಕೊಂಡಿದ್ದರು. 'ನಮ್ಮ 11 ವರ್ಷದ ಜರ್ನಿ ಅದ್ಭುತವಾಗಿತ್ತು. ಅದೆಷ್ಟೋ ಅದ್ಭುತ ಕ್ಷಣಗಳನ್ನು ಒಟ್ಟಿಗೇ ಕಳೆದಿದ್ದೀವಿ. ನಾವು 17 ದಿನಗಳ ಕಾಲ ಯುರೋಪ್ ಟ್ರಿಪ್ (Europe trip) ಹೋಗಿದ್ದೇ, ನಾವು ಮೊದಲು ಒಟ್ಟಿಗೆ ಪ್ರವಾಸ ಮಾಡಿದ್ದು. ಅದನ್ನು ನಾನು ಎಂದೂ ಮರೆಯುವುದಿಲ್ಲ. ಅದರಲ್ಲೂ ಐಫೆಲ್ ಟವರ್ ಎದುರು ಕಳೆದ ಕ್ಷಣಗಳನ್ನು ಮರೆಯುವುದಿಲ್ಲ,' ಎಂದು ಬರೆದುಕೊಂಡಿದ್ದರು.
ಈ ಜೋಡಿ ಮತ್ತೊಂದು ವಿಶೇಷತೆ ಎನೆಂದರೆ ಈಗನ ಪ್ರೇಮಿಗಳಿಗೆ ಸ್ಪೂರ್ತಿ (lover inspiration) ಆಗಿರುವುದು, ಮಾತ್ರವಲ್ಲದೆ ಆಗಾಗ ಯುವ ಜೋಡಿಗೂ ಸಲಹೆ ಕೂಡ ಕೊಡುತ್ತಾರೆ. ನಾನು ಜಗಳ ಆಡಿದ ನಂತರ 5 ಸಲ ಕ್ಷಮೆ ಕೇಳುತ್ತೇವೆ. ಆನಂತರ ನಾರ್ಮಲ್ ಜೀವನ ಶುರು ಮಾಡುತ್ತೇವೆ. ನಾನು ಹೆಚ್ಚು ದಿನಗಳ ಕಾಲ ಜಗಳವನ್ನು (Fight) ಎಳೆಯುವುದಿಲ್ಲ. ಆದಷ್ಟು ಬೇಗ ಸರಿ ಮಾಡಿಕೊಳ್ಳುತ್ತೇವೆ. ನಮ್ಮ ನಡುವೆ ಜಗಳ ಕಡಿಮೆ ಆಗಿದೆ. ಹಾಗೂ ಪ್ರತಿ ಸಲವೂ ಅಮೃತಾ ಜಗಳದಲ್ಲಿ (Arguement) ಗೆಲ್ಲುತ್ತಾಳೆ ಎಂದಿದ್ದಾರೆ ಹಿಮಾಂಶು. 'ಅವರು ಎಷ್ಟೋ ಕೋಪ ಮಾಡಿಕೊಂಡಿದ್ದರೂ ,ಜಗಳದಲ್ಲಿ ಗೆಲ್ಲುವುದು ನಾನೇ. ಏಕೆಂದರೆ ನಾನು ಜಗಳಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ,' ಎಂದು ಅಮೃತಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.