
ಹಿಂದಿ ಕಿರುತೆರೆ ಜನಪ್ರಿಯ ನಟಿ ಕಾಮ್ಯಾ ಪಂಜಾಬಿ (Kamya Panjabi) ಕೆಲವು ದಿನಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾ (Social Media) ಖಾತೆಯಲ್ಲಿ ಮಹಿಳಾ ಉದ್ಯಮಿಗಳ ಫೋಟೋ ಹಂಚಿಕೊಂಡಿದ್ದರು. ಇಂಡಿಪೆಂಡೆಂಟ್ ಮೆಹಿಳೆಯರ (Independent Women) ಬಗ್ಗೆ ಬರೆದುಕೊಂಡಿರುವ ಕಾರಣ ನೆಟ್ಟಿಗರನೊಬ್ಬ ಕಾಮ್ಯಾ ಅವರು ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮಗಳನ್ನು ಸೋಷಿಯಲ್ ಮೀಡಿಯಾದಿಂದ (Social media) ದೂರ ಇಟ್ಟಿರುವ ಕಾರಣ ಯಾರೆಲ್ಲಾ ಏನೆಲ್ಲಾ ಪ್ರಶ್ನೆ ಮಾಡಿದ್ದಾರೆ ಅವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಕಾವ್ಯಾ ಪರ ಅನೇಕ ಮಹಿಳಾ ಉದ್ಯಮಿಗಳು ಧ್ವನಿ ಎತ್ತಿದ್ದಾರೆ.
'ನೀನು ನಿನ್ನ ಮದುವೆಯನ್ನು (marriage) ಉಳಿಸಿಕೊಳ್ಳಲು ಆಗಲಿಲ್ಲ ಹೀಗಾಗಿ ಡಿವೋರ್ಸ್ (Divorce) ಪಡೆದುಕೊಂಡಿರುವೆ. ಅದು ಸಾಲದು ಎಂದು ಎರಡನೇ ಮಾದುವೆ ಆಗಿರುವೆ. ಇಷ್ಟೇ ಸಾಕಾ ಇಲ್ಲ ಇನ್ನೂ ಏನಾದರೂ ಪ್ಲಾನ್ ಮಾಡಿದ್ಯಾ?' ಎಂದು ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾನೆ. ಈ ಕಾಮೆಂಟ್ (Comment) ಸಖತ್ ವೈರಲ್ ಆಗುವುದಕ್ಕೆ ಕಾರಣವೇ ಕಾಮ್ಯಾ ಕೊಟ್ಟ ಉತ್ತರ, 'ದಯವಿಟ್ಟು ನನ್ನನ್ನು ವೀಕ್ ಮಹಿಳೆ (Weak Women) ಎಂದು ತಿಳಿದುಕೊಳ್ಳಬೇಡಿ. ನಾನು ಗಟ್ಟಿ ಮಹಿಳೆ ಹಾಗೂ ಬಂದ ಎಲ್ಲಾ ಕಷ್ಟಗಳನ್ನು ಒಬ್ಬಳೇ ಎದುರಿಸುತ್ತಿರುವೆ' ಎಂದು ಉತ್ತರ ನೀಡಿದ್ದಾರೆ.
ಕಾಮ್ಯಾ ಮಾತುಗಳನ್ನು ಕೇಳಿ ನಿರ್ದೇಶಕಿ ಪೂಜಾ ಭಟ್ (Pooja Bhat) ಅವರ ಪರ ನಿಂತಿದ್ದಾರೆ. 'ಸತ್ತ ದಾಂಪತ್ಯದಿಂದ ದೂರವಿರಲು ಮತ್ತು ತಮ್ಮ ಜೀವನದಲ್ಲಿ ಪುರುಷನಿಲ್ಲದೆ ತಾನು ಏನೂ ಅಲ್ಲ ಎಂದು ಹೇಳುವ ಜಗತ್ತಿನಲ್ಲಿ ತಮ್ಮಗೆ ತಾವು ಚೇತರಿಸಿಕೊಳ್ಳುವ ಶಕ್ತಿಯನ್ನು ಒಟ್ಟುಗೊಡಿಸುವ ನಿಮ್ಮಂತ ಮಹಿಳೆಯರಿಗೆ ಇನ್ನು ಹೆಚ್ಚು ಶಕ್ತಿ ಸಿಗಲಿ. ಒಬ್ಬಂಟಿಯಾಗಿ ನಡೆಯಲು ಮತ್ತು ಒಬ್ಬರ ಜೀವನದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಧೈರ್ಯ ಬೇಕು' ಎಂದು ಪೂಜಾ ಟ್ವೀಟ್ (Tweet) ಮಾಡಿದ್ದಾರೆ.
ಶಕ್ತಿ ಧಾರವಾಹಿಯಲ್ಲಿ ನಟಿಸುತ್ತಿರುವ ಕಾಮ್ಯಾ 2013ರಲ್ಲಿ ಬಂಟಿ ನೇಗಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೈಯಕ್ತಿಕ ಮುನಿಸು, ಕಾರಣಗಳಿಂದ 2013ರಲ್ಲಿ ವಿಚ್ಛೇದನ ಪಡೆದುಕೊಂಡರು. ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಲಭ್ ದಂಗ್‌ರನ್ನು 2019ರಲ್ಲಿ ಮದುವೆಯಾದರು.
'ಸಾಕಷ್ಟು ವರ್ಷಗಳಿಂದ ಈ ಟ್ರೋಲ್ ಪೇಜ್‌ಗಳಿವೆ (troll Pages). ನಾವೇನು ಹೊಸದನ್ನು ಎದುರಿಸುತ್ತಿಲ್ಲ.ಸೋಷಿಯಲ್ ಮೀಡಿಯಾದಲ್ಲಿರುವ ಜನರು ನನ್ನ ಮಗಳ ಬಗ್ಗೆ ಮಾತನಾಡುತ್ತಾರೆ, ನಮ್ಮ ಮೊದಲ ಮದುವೆ ಬಗ್ಗೆ ಮಾತನಾಡುತ್ತಾರೆ, ಡಿವೋರ್ಸ್ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಈಗ ನಾನು ಮತ್ತೆ ಮದುವೆಯಾಗಿರುವೆ. ಬಹುತೇಕ ಸಮಯ ಇದನ್ನೆಲ್ಲಾ ನಿರ್ಲಕ್ಷ್ಯ ಮಾಡಿರುವೆ. ಅವರಲ್ಲಿ ನಾವು ಬದಲಾವಣೆ ತರಬೇಕು ಅಂದ್ರೆ ಮೊದಲು ಅವರು ಮಾಡುತ್ತಿರುವ ತಪ್ಪುಗಳನ್ನು ತೋರಿಸಬೇಕು' ಎಂದು ಕಾಮ್ಯಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಈಗಿನ ಜನರೇಷನ್‌ನಲ್ಲಿ (Generaation) ಹುಟ್ಟಿದ ಮಗು ಕೂಡ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿರುತ್ತದೆ. ಆದರೆ ನಾನು ನನ್ನ ಮಗಳನ್ನು ಇದರಿಂದ ದೂರ ಇಟ್ಟಿರುವೆ. ಆಕೆಗೆ 12 ವರ್ಷ, ಜನರು ಮಾಡುವ ಕೆಟ್ಟ ಕಾಮೆಂಟ್‌ನಿಂದ ದೂರ ಇಟ್ಟಿರುವೆ. ಆಕೆಗೆ ಈ ಟ್ರೋಲ್ ಪೇಜ್‌ಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಆದರೆ ನಾನು ಮಾತನಾಡುವುದನ್ನು ಮಾತ್ರ ಕೇಳಿಸಿಕೊಳ್ಳುತ್ತಾಳೆ ಹೀಗಾಗಿ ಸಣ್ಣ ಪುಟ್ಟ ವಿಚಾರಗಳು ಅಷ್ಟೇ ಆಕೆಗೆ ಗೊತ್ತಿರುವುದು. ಆದಷ್ಟು ವರ್ಷ ನಾನು ದೂರ ಇಡುವ ಪ್ರಯತ್ನ ಮಾಡುತ್ತೇನೆ ಆದರೆ ಮುಂದೆ ಒಂದು ದಿನ ಆಕೆ ಕ್ಷೇತ್ರಕ್ಕೆ ಬಂದರೆ ಈ ಕೆಟ್ಟ ಕಾಮೆಂಟ್‌ಗಳನ್ನು ಎದುರಿಸುವ ಶಕ್ತಿ ಅವಳಿಗೆ ಇದೆ ಎಂದು ಭಾವಿಸುವೆ. ತನ್ನ ತಾಯಿ ವರ್ಷಗಳಿಂದ ಹೇಗೆ ಇದನ್ನೆಲ್ಲಾ ಎದುರಿಸುತ್ತಿದ್ದಾಳೆ ಎಂದು ಅವಳಿಗೆ ತಿಳಿದಿರುತ್ತದೆ' ಎಂದು ಕಾಮ್ಯಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.