
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಇದಕ್ಕೆ ಮುಖ್ಯ ಕಾರಣ ಟಿ ಆರ್ ಪಿ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಜೋರಾಗಿದೆ. ಪ್ರೇಕ್ಷಕರನ್ನು ಮೆಚ್ಚಿಸುವ, ಅವರ ಗಮನ ಸೆಳೆಯುವ ಧಾರಾವಾಹಿಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವಾಗಿದೆ. ಪ್ರಾರಂಭದಲ್ಲಿ ಧಾರಾವಾಹಿಗಳು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿರುತ್ತವೆ. ಆದರೆ ಅದನ್ನು ಹೀಗೆ ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ. ಉತ್ತಮ ಸ್ಟಾರ್ ಕಾಸ್ಟ್ ಇದ್ದರೂ ಸಹ ಅನೇಕ ಧಾರಾವಾಹಿಗಳು ದಿಢೀರ್ ಪ್ರಸಾರ ನಿಲ್ಲಿಸಿದ ಉದಾಹರಣೆ ಅನೇಕ ಇವೆ. ಇದೀಗ ಪ್ರಸಾರ ನಿಲ್ಲಿಸಿದ ಧಾರಾವಾಹಿ ಲಿಸ್ಟ್‌ಗೆ ಮತ್ತೊಂದು ಸೀರಿಯಲ್ ಸೇರಿಕೊಳ್ಳುತ್ತಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿ ಸದ್ಯದಲ್ಲೇ ಪ್ರಸಾರ ನಿಲ್ಲಿಸಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚಿಗಷ್ಟೆ ದೊರೆಸಾನಿ ಧಾರಾವಾಹಿಯ ಪ್ರಸಾರ ನಿಲ್ಲಿಸಲಾಗಿದೆ. ದೊರೆಸಾನಿ 202 ಸಂಚಿಕಗಳು ಮಾತ್ರ ಪ್ರಸಾರವಾಗಿತ್ತು. ಆದರೆ ಆಗಲೇ ಧಾರಾವಾಹಿ ಪ್ರಸಾರ ದಿಢೀರ್ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿದರು. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕಿರುತೆರೆ ಪ್ರೇಕ್ಷಕರು ಹೆಚ್ಚು ಇಷ್ಟ ಪಟ್ಟಿದ್ದ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ ಕೂಡ ಒಂದು. ಈ ಧಾರಾವಾಹಿ ಇದೇ ತಿಂಗಳು ಮುಕ್ತಾಯ ಆಗಲಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಸೆಪ್ಟಂಬರ್ 24ರಂದು ಈ ಧರಾವಾಹಿಯ ಕೊನೆ ಸಂಚಿಕೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.
ಅಂದಹಾಗೆ ಸದ್ಯ ಧರಾವಾಹಿಯ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ನಡೆಯುತ್ತಿದೆಯಂತೆ. ಈ ಧಾರಾವಾಹಿ ಪ್ರಸಾರ ನಿಲ್ಲಿಸುವ ಮುಂಚೆ ಒಂದಿಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಲಿದೆ ಎನ್ನಲಾಗಿದೆ. ಧಾರಾವಾಹಿಯಲ್ಲಿ ಪ್ರಮುಖ ತಿರುವು ನೀಡಿ ಮುಕ್ತಾಯ ಮಾಡಲಾಗುತ್ತಿದೆ ಎನ್ನಲಾಗಿದೆ.
Ramachari serial: ರಾಮಾಚಾರಿ ಕೊಡ್ತಿರೋ ಶಾಕ್‌ಗೆ ಚಡಪಡಿಸ್ತಿದ್ದಾಳೆ ಚಾರು
ನನ್ನರಸಿ ರಾಧೆ ಧಾರಾವಾಹಿ ಹೆಚ್ಚು ಓದದ ಹುಡುಗಿ ಮತ್ತು ಯುವ ಉದ್ಯಮಿ ನಡುವಿನ ಪ್ರೇಮಕಥೆಯನ್ನು ವಿವರಿಸುವ ಧಾರಾವಾಹಿ. ಧಾರಾವಾಹಿಯ ನಾಯಕ ಅಗಸ್ತ್ಯ ಹೆಚ್ಚು ಓದಿ ತನ್ನದೆ ಕಂಪನಿಯನ್ನು ಹೊಂದಿರುತ್ತಾನೆ. ನಾಯಕಿ ಇಂಚರಾ ಹೆಚ್ಚು ಓದದೆ ಇರುವ ಹುಡುಗಿ. ಆದರೂ ಅಗಸ್ತ್ಯ ಎಂಟರ್ ಪ್ರೈಸಸ್ ಕಂನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ. ಅಗಸ್ತ್ಯನಿಗೆ ಇಂಚರಾ ಕಂಡರೆ ಧ್ವೇಷ. ಆದರೆ ಅದೇ ದ್ವೇಷ ಪ್ರೀತಿಗೆ ತಿರುಗಿ ಮದುವೆಯಾಗುತ್ತಾರೆ. ಪ್ರೀತಿ, ದ್ವೇಷದ ನಡುವೆ ಅಗಸ್ತ್ಯ ತನ್ನ ತಾಯಿಯನ್ನು ಹುಡುಕುವ ಭಾವನಾತ್ಮಕ ಕಥೆಯನ್ನು ಸೇರಿಸಲಾಗಿತ್ತು. ಅಗಸ್ತ್ಯ ಕೊನೆಗೂ ತನ್ನ ತಾಯಿನ್ನು ಹುಡುಕುತ್ತಾನೆ. ಸದ್ಯ ಈ ಧಾರಾವಾಹಿಯಲ್ಲಿ ಅಗಸ್ತ್ಯನ ತಾಯಿಯೆ ಮಗ, ಸೊಸೆಯನ್ನು ಬೇರೆ ಮಾಡಿದ್ದಾಳೆ. ಕೊನೆಲ್ಲಿ ಈ ಧಾರಾವಾಹಿಗೆ ಇನ್ನೇನು ಟ್ವಿಸ್ಟ್ ಸಿಗಲಿದೆ, ಇಬ್ಬರು ಒಂದಾಗುತ್ತಾರಾ ಎನ್ನುವುದು ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಗಾಲಿದೆ.
Kendasampige: ತನ್ನ ಭವಿಷ್ಯವಾ? ಅಪ್ಪನ ಪ್ರಾಣವಾ? ಸುಮಿ ಮುಂದೆ ಎರಡು ಆಯ್ಕೆ!
ಅಂದಹಾಗೆ ಈ ಧಾರಾವಾಹಿ ಇತ್ತೀಚೆಗೆ 600 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಇದರ ಸಂಭ್ರಮವನ್ನು ಧಾರಾವಾಹಿ ತಂಡ ಆಚರಿಸಿತ್ತು. ಸದ್ಯ ಈ ಧಾರಾವಾಹಿ ಮುಕ್ತಾಯವಾಗುತ್ತಿದ್ದು ಪ್ರೇಕ್ಷಕರು ಅಗಸ್ತ್ಯ- ಇಂಚರಾ ಜೋಡಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.