
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ 'ಹಿಟ್ಲರ್ ಕಲ್ಯಾಣ' ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಈ ಸೀರಿಯಲ್‌ನಲ್ಲೀಗ ಗಣೇಶ ಹಬ್ಬದ ಆಚರಣೆ ನಡೆಯುತ್ತಿದೆ. ಲೀಲಾ ಮನೆಯಲ್ಲಿ ನಡೆಯುವ ಗಣೇಶ ಹಬ್ಬ ಬಹಳ ಮಹತ್ವದ್ದು. ಅದರಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಪ್ರಾಣಕ್ಕೇ ಕಂಟಕ. ಇದಕ್ಕೊಂದು ಹಿನ್ನೆಲೆಯೂ ಇದೆ. ಇದೀಗ ಹಿಸ್ಟರಿ ರಿಪೀಟ್ಸ್ ಅನ್ನೋ ಹಾಗೆ ಹಿಂದಿನ ಕರಾಳತೆ ಮರುಕಳಿಸಲಿದೆಯಾ ಅನ್ನುವ ಅನುಮಾನಗಳೂ ಬರುತ್ತಿವೆ. ಏಜೆ ಮತ್ತು ಲೀಲಾ ಬದುಕಿನಲ್ಲಿ ಕೆಲವು ದಿನಗಳ ಕೆಳಗೆ ಮಹತ್ವದ ಬೆಳವಣಿಗೆ ಆಗಿತ್ತು. ಅದರಲ್ಲಿ ದೇವ್ ಬಂಡವಾಳ ಬಯಲಾಗಿತ್ತು. ಅದರ ಜೊತೆಗೆ ಏಜೆ ಮತ್ತು ಲೀಲಾ ನಡುವಿನ ಮಿಸ್ ಅಂಡರ್‌ಸ್ಟಾಂಡಿಂಗ್ ಸರಿ ಹೋಗಿತ್ತು. ಹಾವು ಮುಂಗುಸಿ ಥರ ಕಚ್ಚಾಡುತ್ತಿದ್ದ, ಒಬ್ಬರನ್ನು ಕಂಡರೆ ಒಬ್ಬರು ಸಿಟ್ಟಾಗುತ್ತಿದ್ದ ದಿನಗಳು ಕಳೆದು ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಥರ ಬದಲಾಗಿದ್ದರು. ತಮ್ಮಿಬ್ಬರ ಮನಸ್ಸಲ್ಲಿ ಇದ್ದ ಎಲ್ಲವನ್ನೂ ಪರಸ್ಪರ ಹಂಚಿಕೊಂಡಿದ್ದರು. ಲೀಲಾ ಮೇಲೆ ಏಜೆಗೆ ಸಿಟ್ಟು ಹೋಗಿದೆ. ಅವಳ ಮಾತಿನಂತೆ ಹಣದ ದರ್ಪದಲ್ಲಿ ಮೆರೆದಾಡುವ ಸೊಸೆಯರನ್ನು ಲೀಲಾ ಮನೆಗೆ ಕಳಿಸಿದ್ದಾರೆ. ಅಲ್ಲಿ ಲೀಲಾ ಮಲತಾಯಿ ಕೌಸಲ್ಯಾ ಅಷ್ಟೂ ಜನ ಸೊಸೆಯರಿಗೂ ಬುದ್ದಿ ಕಲಿಸುತ್ತಿದ್ದಾಳೆ. ಆದರೆ ಸೊಸೆಯರು ಅವಳ ಪ್ರಾಣಕ್ಕೇ ಕಂಟಕ ತರುವ ಪ್ಲಾನ್ ರೂಪಿಸಿದ್ದಾರೆ. ಒಂದು ವೇಳೆ ಈ ಪ್ಲಾನ್ ನಡೆದರೆ ಲೀಲಾ ಮನೆಯಲ್ಲಿ ಅವಘಡ ಆಗೋದು ಖಚಿತ.
ಲೀಲಾ ಮನೆಯಲ್ಲಿ ಗಣೇಶನ ಹಬ್ಬ ಬಹಳ ಸ್ಪೆಷಲ್. ಇದನ್ನು ಸ್ವಲ್ಪವೂ ವಿಘ್ನ ಬರದಂತೆ ಆಚರಿಸಬೇಕು. ಅದರಲ್ಲೂ ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಸ್ವಲ್ಪ ಸಮಯವೂ ಆಚೀಚೆ ಆಗಬಾರದು. ಹಿಂದೊಮ್ಮೆ ಗಣೇಶನ ಮೂರ್ತಿ ತರುವಾಗ ಏನೋ ಆಕಸ್ಮಿಕವಾಗಿ ಮೂರ್ತಿ ಮನೆಗೆ ತರುವುದು ತುಸು ವಿಳಂಬವಾಯ್ತು. ಆ ದಿನವೇ ಲೀಲಾಳ ಅಮ್ಮನ ಪ್ರಾಣವೂ ಹೋಯ್ತು. ಅಂದಿನಿಂದ ಇಂದಿನವರೆಗೂ ಈ ಮನೆಯಲ್ಲಿ ಗಣೇಶ ಕೂರಿಸುವಾಗ ಯಾವ ತಪ್ಪೂ ಆಗದ ಹಾಗೆ ಎಚ್ಚರಿಕೆ ಮಾಡ್ತಾರೆ.
ಅಣ್ಣಾವ್ರ ಹಾಡಿದ್ರೆ ಮಾತ್ರ ಊಟ ಮಾಡೋದು; ವಿಶೇಷಚೇತನ ಮಗನನ್ನು ನೆನೆದು ಕಣ್ಣೀರಿಟ್ಟ ಮಾಳವಿಕಾ
ಆದರೆ ಈ ಬಾರಿ ಹಿಂದಿನ ಆ ಕರಾಳತೆ ರಿಪೀಟ್ ಆಗುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಕಾರಣ ಮೂವರು ಸೊಸೆಯಂದಿರು. ಲೀಲಾ ಮಲತಾಯಿ ಕೌಸಲ್ಯ ಅವರ ದುಡ್ಡಿನ ಸೊಕ್ಕು ಇಳಿಸುತ್ತಿದ್ದಾಳೆ. ಇದಕ್ಕಾಗಿ ಅವರಿಂದ ಮನೆ ಕೆಲಸ ಮಾಡಿಸಿದ್ದಾಳೆ. ಹಬ್ಬಕ್ಕೆ ಮನೆಯನ್ನೆಲ್ಲ ತೊಳೆಸಿ ಬಳಸಿ ಪಾತ್ರೆ ತೊಳೆಸೋ ಕೆಲಸ ಎಲ್ಲ ಮಾಡಿದ್ದಾಳೆ. ಹಬ್ಬಕ್ಕೆ ಹಳೇ ಸೀರೆಯನ್ನೂ ನೀಡಿದ್ದಾಳೆ. ಇದರಿಂದ ಸಿಟ್ಟಲ್ಲಿ ಕನಲಿ ಕೆಂಡವಾದ ಸೊಸೆ ದುರ್ಗಾ ಲೀಲಾ ಅಮ್ಮ ಕೌಸಲ್ಯ ಪ್ರಾಣಕ್ಕೆ ಎರವಾಗುವ ಕೆಲಸ ಮಾಡುತ್ತಿದ್ದಾಳೆ.ಅವಳಿಗೆ ಹಿಂದಿನ ಗಣೇಶೋತ್ಸವದ ಕತೆ ಗೊತ್ತಾಗಿದೆ. ಈ ಬಾರಿಯೂ ಅದೇ ಥರ ಆಗಿ ಕೌಸಲ್ಯಾ ಪ್ರಾಣ ಹೋಗೋ ಹಾಗೆ ಮಾಡಬೇಕು ಅಂದುಕೊಂಡಿದ್ದಾಳೆ. ಗಣೇಶ ಮೂರ್ತಿ ತರಲು ಹೋದ ಲೀಲಾಳ ಅಪ್ಪನನ್ನು ಆಫೀಸ್ ಕೆಲಸಕ್ಕೆ ಕಳಿಸಿದ್ದಾಳೆ.
ಈಗ ಲೀಲಾ ಮನೆಗೆ ಗಣೇಶನ ಮೂರ್ತಿ ತರೋದು ವಿಳಂಬವಾಗ್ತಿದೆ. ಈ ವಿಳಂಬದಿಂದ ಯಾವ ಅನಾಹುತವೂ ಆಗಬಹುದು. ಹಿಂದೆ ಲೀಲಾಳ ಅಮ್ಮ ಹೋದಂತೆ ಈಗ ಅಮ್ಮನ ಸ್ಥಾನದಲ್ಲಿರುವ ಕೌಸಲ್ಯಾ ಜೀವಕ್ಕೆ ಕಂಟಕ ಆಗಬಹುದು. ಈ ಅನಾಹುತ ಆಗಿಯೇ ತೀರುತ್ತಾ ಅಥವಾ ಇದರಲ್ಲಿ ಮತ್ತೇನೋ ಟ್ವಿಸ್ಟ್ ಆಗುತ್ತಾ ಅನ್ನುವುದು ಸದ್ಯದ ಕುತೂಹಲ. ಈಗ ಅಂತೂ ಲೀಲಾಳ ತಂದೆ ಆಫೀಸಿಗೆ ಹೋಗಲೇ ಬೇಕಾದ ತುರ್ತು ಬಂದಿದೆ. ಮನೆಗೆ ಕರೆಕ್ಟ್ ಟೈಮ್‌ಗೆ ಗಣೇಶ ಬರ್ಬೇಕು ಅಂದರೆ ಸದ್ಯಕ್ಕಿರುವ ಒಂದೇ ಸಾಧ್ಯತೆ ಈ ಮನೆಯ ಮಗನ ಹಾಗಿರುವ ಏಜೆಯೇ ಮನೆಗೆ ಗಣೇಶನನ್ನು ತರುವುದು. ಆದರೆ ಅಷ್ಟು ದೊಡ್ಡ ವ್ಯಕ್ತಿ ಈ ಕೆಲಸ ಮಾಡ್ತಾರಾ? ಅದು ಸಾಧ್ಯವಾಗುತ್ತಾ ಅನ್ನೋದು ಸದ್ಯದ ಪ್ರಶ್ನೆ.
Ramachari serial: ರಾಮಾಚಾರಿ ಕೊಡ್ತಿರೋ ಶಾಕ್‌ಗೆ ಚಡಪಡಿಸ್ತಿದ್ದಾಳೆ ಚಾರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.