Kannada Serial Off Air: ಮಂಗಳಗೌರಿ ಮದುವೆ, ಕಮಲಿ ಸೀರಿಯಲ್ಸ್ ಮುಗಿಯುತ್ತಾ?

Suvarna News   | Asianet News
Published : Dec 07, 2021, 01:01 PM IST
Kannada Serial Off Air: ಮಂಗಳಗೌರಿ ಮದುವೆ, ಕಮಲಿ ಸೀರಿಯಲ್ಸ್ ಮುಗಿಯುತ್ತಾ?

ಸಾರಾಂಶ

ಎರಡು ಕನ್ನಡ ಜನಪ್ರಿಯ ಧಾರಾವಾಹಿಗಳಿಗೆ ಬ್ರೇಕ್ ಬೇಳುತ್ತಿಲ್ಲ. ಪ್ರಸಾರ ಮುಂದುವರೆಯಲಿದೆ ಎಂದು ತಂಡಗಳು ಸ್ಪಷ್ಟಪಡಿಸಿವೆ. ಅಷ್ಟಕ್ಕೂ ಮಂಗಳಗೌರಿ ಮದುವೆ ಂತ್ತು ಕಮಲಿ ಸೀರಿಯಲ್ಸ್ ಬಗ್ಗೆ ಈ ಸ್ಪಷ್ಟನೆ ನೀಡಿದ್ಯಾಕೆ ತಂಡ?

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳಗೌರಿ ಮದುವೆ (Mangala gowri maduve) ಮತ್ತು ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ (Kamali) ಧಾರಾವಾಹಿಗಳು ಮುಕ್ತಾಯವಾಗುತ್ತವೆ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಸುದ್ದಿಯಾಗುತ್ತಿದೆ.  ಕಳೆದ ಎರಡು ಮೂರು ವರ್ಷಗಳಿಂದ ವೀಕ್ಷಕರಿಗೆ ಮನೋರಂಜನೆ ನೀಡುತ್ತಾ ಟಿಆರ್‌ಪಿಯಲ್ಲಿ (TRP) ಉತ್ತಮ ಸ್ಥಾನ ಪಡೆದುಕೊಂಡಿರುವ ಈ ಧಾರಾವಾಹಿಗಳು ಅಂತ್ಯವಾಗುತ್ತಾ ಇಲ್ಲವೋ ಎಂಬ ಗಾಳಿ ಸುದ್ದಿಗಲ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೆ. 

ಪುಟ್ಟ ಗೌರಿ ಮದುವೆ (Puttagowri Maduve) ಧಾರಾವಾಹಿಯ ಮುಂದುವರಿದ ಭಾಗವಾಗಿರುವ ಮಂಗಳಗೌರಿ ಮದುವೆ ಪ್ರಸಾರವಾಗಳು ಆರಂಭಗೊಂಡ ದಿನದಿಂದಲೂ ವಿಚಿತ್ರ ಹಾಗೂ ವಿಭಿನ್ನ ಟ್ವಿಸ್ಟ್‌ಗಳನ್ನು ನೀಡುವ ಮೂಲಕ ವೀಕ್ಷಕರಿಗೆ ಕುತೂಹಲ ಹೆಚ್ಚಿಸುತ್ತಿದೆ. ಒಂದು ವಾರ ರಾಜೀವ ಸರಿ ಇದ್ದರೆ, ಮತ್ತೊಂದು ವಾರ ಶಾಕ್‌ನಲ್ಲಿರುತ್ತಾರೆ. ಮದುವೆ ವಿಚಾರ ಮರೆಯುವ ರಾಜೀವ ಪೊಲೀಸ್ (Policappa Rajeeva) ಕೆಲಸಗಳನ್ನು ಹೇಗೆ ನೆನಪಿಟ್ಟುಕೊಂಡಿರುತ್ತಾನೆ, ಎಂದು ಟ್ರೋಲ್ ಆಗಿದ್ದಾನೆ. ಹೀಗೆ ವೀಕ್ಷಕರ ಜೊತೆ ಟ್ರೋಲ್ ಪೇಜ್‌ಗಳು (Troll Page) ಕೂಡ ಹೆಚ್ಚು ಗಮನ ಕೊಡುವ ಧಾರಾವಾಹಿ ಇದಾಗಿದ್ದು, ಸದ್ಯಕ್ಕೆ ಅಂತ್ಯವಾಗುತ್ತಿಲ್ಲ ಎಂದು ಕೆಲವು ಮೂಗಳಿಂದ ತಿಳಿದು ಬಂದಿದೆ. 

ಮನೆಯಲ್ಲಿದ್ದ ವಸ್ತು ಮಾರಿ ಜೀವಿಸಿದೆ, ತಿನ್ನೋಕೆ ಅನ್ನ ಇರಲಿಲ್ಲ: 'ಮಂಗಳ ಗೌರಿ' ಗಗನ್ ಚಿನ್ನಪ್ಪ!

ಹಾಗೆ ಕಮಲಿ ಧಾರಾವಾಹಿ ಮೂರು ವರ್ಷಗಳಿಂದ ಪ್ರಸಾರವಾಗುತ್ತಿದೆ. ಹಳ್ಳಿಯಿಂದ ಸಿಟಿಗೆ ಬಂದು rank ಪಡೆದು ವಿದ್ಯಾಭ್ಯಾಸ ಮುಗಿಸಿ, ಅಲ್ಲಿಯೇ ಕಾಲೇಜ್‌ ಉಪನ್ಯಾಸಕನ ಪ್ರೀತಿಸಿ, ಮದುವೆಯಾಗಿರುವ ಕಮಲಿ (Kamali love Marriage) ಅತ್ತೆ ಮನೆಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಿದ್ದಾಳೆ, ಎಂದು ಸದ್ಯಕ್ಕೆ ತೋರಿಸುತ್ತಿರುವ ಎಪಿಸೋಡ್. ಈ ಸೀರಿಯಲ್ ಕೂಡ ಮುಕ್ತಾಯವಾಗುತ್ತಿಲ್ಲ, ಪ್ರಸಾರ ಮುಂದುವರೆಸುತ್ತದೆ ಎಂದಿದ್ದಾರಂತೆ ತಂಡದವರು.

ಈ ಎರಡೂ ಧಾರಾವಾಹಿಗಳು ಕಲರ್ಸ್ ಕನ್ನಡ (Colors Kannada) ಮತ್ತು ಝೀ ಕನ್ನಡ (Zee Kannada) ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು,  ಹೊಸ ಧಾರಾವಾಹಿಗಳ ಪ್ರೋಮೋ ರಿಲೀಸ್ ಮಾಡಿದ್ದಾರೆ. ಹೀಗಾಗಿ ಈ ಬಹಳ ವರ್ಷಗಳಿಂದ ಪ್ರಸಾರ ಮಾಡುರುವ ಧಾರಾವಾಹಿ ಅಂತ್ಯವಾಗಬಹುದು ಎನ್ನುವ ಅನಿಸಿಕೆ ಜನರಿಗದೆ. ಆದರೆ ಈ ಎರಡೂ ಧಾರಾವಾಹಿಗಳು ಅತಿ ಹೆಚ್ಚು ಟಿಆರ್‌ಪಿ ತಂದು ಕೊಡುತ್ತಿರುವ ಕಾರಣ ಇನ್ನೂ ಕೆಲವು ವರ್ಷಗಳು ಮುಂದುವರೆಯಬಹುದು. ಡಾಕ್ಟರ್ ಕರ್ಣ (Doctor Karna), ಪುಟ್ಟಕ್ಕನ ಮಕ್ಕಳು (Puttakana Makkalu), ತ್ರಿಪುರ ಸುಂದರಿ (Tripura Sundari), ದೊರೆಸಾನಿ, ಸರ್ಕಾರಿ ನ್ಯಾಯಬೆಲೆ ಅಂಗಡಿ, ಪಾಂಡವಪುರ ಪ್ರೋಮೋಗಳು ರಿಲೀಸ್ ಆಗಿದ್ದು ಪ್ರಸಾರದ ದಿನಾಂಕವಿನ್ನೂ ಅನೌನ್ಸ್ ಮಾಡಿಲ್ಲ. 

ಇನ್ನು ಪೊಲೀಸ್ ರಾಜೀವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗಗನ್ ಚೆನ್ನಪ್ಪ (Gagan Chinappa) ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇನ್‌ಸ್ಟಾಗ್ರಾಂ ಲೈವ್ ಬರುವ ಮೂಲಕ ವಿಚಾರವನ್ನು ಅಧಿಕೃತ ಪಡಿಸಿದ್ದಾರೆ. 'ಸಾಕಷ್ಟು ದಿನಗಳಿಂದ ತುಂಬಾನೇ ಮೆಸೇಜ್‌ಗಳು ಬರ್ತಿವವೆ. ಗಗನ್ ಮಂಗಳಗೌರಿ ಮದುವೆ ಧಾರಾವಾಹಿಯಿಂಂದ ಹೊರ ಬಂದಿದ್ದಾರೆಂದು. ಹೌದು, ಇದು ನಿಜ. ಈಗ ಒಂದು ವಾರ ಆಯ್ತು, ಹೊರ ಬಂದು ಅಫೀಶಿಯಲ್ ಆಗಿ. ಯಾರಿಗೂ ಹೇಳೋಕೆ ಆಗಿಲ್ಲ. ಅದಕ್ಕೆ ಲೈವ್ ಮೂಲಕ ಮಾತನಾಡಲು ಬಂದೆ,' ಎಂದು ಗಗನ್ ಮಾತನಾಡಿದ್ದಾರೆ.

ಕಮಲಿಯ ಹ್ಯಾಂಡ್ಸಮ್ ಲೆಕ್ಚರರ್ ಇವರೇ ನೋಡಿ

'ಯಾಕೆ ಬಿಟ್ಟೆ ಅನ್ನೋದು ಎಲ್ಲರ ಪ್ರಶ್ನೆ. ನೋಡಿ ನಾನು ಆದಷ್ಟು ಸಿಂಪಲ್ ಆಗಿ ಹೇಳುವೆ. ಈಗ ನಾವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಹಲವು ವರ್ಷಗಳಿಂದ ಮಾಡಿ ಕೆಲಸ ಮೊನೋಟನಸ್ ಆದಾಗ ನಮ್ಮ ಪರ್ಸನಲ್ ಚೇಂಚ್ ಮತ್ತು ಬೆಳವಣಿಗೆಗೆ ಮೂ ಆನ್ ಆಗಬೇಕು, ಅಂತ ಪ್ಲಾನ್ ಮಾಡಿದೆ. ಇಷ್ಟು ದಿನ ಎಲ್ಲರ ಪೊಲೀಸಪ್ಪ ಆಗಿ ಕಾಣ್ತಿದ್ರಿ. ಈಗ ನನ್ನ ಜಾಗಕ್ಕೆ ಮತ್ತೊಬ್ಬರು ಬಂದಿದ್ದಾರೆ. ನನ್ನ ಎಲ್ಲಾ ಅಭಿಮಾನಿಗಳು ಇಷ್ಟು ದಿನ ನನ್ನ ಜರ್ನಿಯಲ್ಲಿ ಇದ್ದೀರಿ ನಿಮ್ಮ ಪ್ರೀತಿಗೆ ಧನ್ಯವಾದಗಳು,' ಎಂದಿದ್ದಾರೆ ಗಗನ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?