Nagini 2: ಧಾರಾವಾಹಿಯಿಂದ ಹೊರ ನಡೆದ ನಟಿ ಜೆನ್ನಿಫರ್ ಆ್ಯಂಟೋನಿ?

By Contributor AsianetFirst Published Dec 4, 2021, 3:31 PM IST
Highlights

ವೈಯಕ್ತಿಕ ಕಾರಣಗಳಿಂದ ದಮಯಂತಿ ಪಾತ್ರಕ್ಕೆ ಗುಡ್ ಬೈ ಹೇಳಿದ ನಟಿ ಜೆನ್ನಿಫರ್ ಆ್ಯಂಟೋನಿ. ಹೊಸ ಪಾತ್ರಧಾರಿ ಯಾರು? 
 

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರೈಮ್ ಟೈಮ್‌ ವೇಳೆ ಪ್ರಸಾರವಾಗುತ್ತಿರುವ ನಾಗಿಣಿ  2 (Nagini 2) ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಜೆನಿಫರ್ ಆ್ಯಂಟೋನಿ (Jennifer Antony) ಹೊರ ಬಂದಿದ್ದಾರೆ. ಇಷ್ಟು ದಿನಗಳ ಕಾಲ ದಮಯಂತಿ (Damayanti) ಪಾತ್ರದಲ್ಲಿ ವೀಕ್ಷಕರನ್ನು ಮನೋರಂಜಿಸುತ್ತುದ್ದವರು ಧಾರಾವಾಹಿ ಬಿಡಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಜೆನಿಫರ್ ಮಾತ್ರ ಎಲ್ಲಿಯೂ ಬಾಯಿ ಬಿಟ್ಟಿಲ್ಲ. 

ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಚೆನ್ನಿಫರ್ ಅವರು ವೈಯಕ್ತಿಕ ಕಾರಣಗಳಿಂದ ಧಾರಾವಾಹಿ ಮತ್ತು ತಂಡಕ್ಕೆ ಬೈ ಹೇಳಿದ್ದಾರೆ. ತುಂಬಾನೇ ವಿಭಿನ್ನವಾಗಿ ಅಲಂಕರಿಸಿಕೊಂಡು, ವಿಭಿನ್ನವಾಗಿ ಮಾತನಾಡುತ್ತಿದ್ದ ಜೆನಿಫರ್‌ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ನೋಡಲು ಕೊಂಚ ಸಮಯ ಹಿಡಿಯುತ್ತದೆ. ಆದರೆ ಇನ್ನು ಮುಂದೆ ದಮಯಂತಿ ಪಾತ್ರದಲ್ಲಿ ರೇಖಾ ಸಾಗರ್ (Rekha Sagar) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಧಾರಾವಾಹಿ ತಂಡ, ಜೆನಿಫರ್ ಅಥವಾ ರೇಖಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. 

ಹುಟ್ಟುಹಬ್ಬದ ದಿನ ಕಣ್ಣೀರಿಟ್ಟ ನಾಗಿಣಿ ನಟಿ ನಮ್ರತಾ ಗೌಡ; 'ಯಾರೂ ಹೀಗೆ ಮಾಡಿರಲಿಲ್ಲ'!

ಕೆಲವು ದಿನಗಳ ಹಿಂದೆ ನಾಗಿಣಿ 2 ಧಾರಾವಾಹಿ 400 ಸಂಚಿಕೆಗಳನ್ನು ಪೂರೈಸಿದೆ. ಅದಲ್ಲದೆ ಪ್ರಸಾರವಾದ ದಿನದಂದಲೂ TRP ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಪ್ರತಿಯೊಬ್ಬ ಪಾತ್ರಧಾರಿಯೂ ವಿಭಿನ್ನವಾಗಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಜೀ ಕುಟುಂಬ ಅವಾರ್ಡ್ಸ್‌ನಲ್ಲಿ (Zee Kutumba Awards) ನಾಗಿಣಿ 2 ಬಹುತೇಕ ಅವಾರ್ಡ್‌ಗಳನ್ನು ಬಾಚಿಕೊಂಡಿದೆ.  ನಾಗಿಣಿ ಪಾತ್ರದಲ್ಲಿ ನಮ್ರತಾ ಗೌಡ (Namrata Gowda) ಹಾಗೂ ಅದಿಶೇಷ ಪಾತ್ರದಲ್ಲಿ ನಿನಾದ್ ಹರ್ಷಿತ್ (Ninaad Harshit) ಕಾಣಿಸಿಕೊಂಡಿದ್ದಾರೆ. ಶಿವಾನಿ ಮತ್ತು ತ್ರಿಶುಲ್ ಪ್ರೇಮ ಕಥೆಯನ್ನು ಈ ಧಾರಾವಾಹಿಯಲ್ಲಿ ಸರಳವಾಗಿ ತೋರಿಸಲಾಗಿದೆ. 

'ನಾಗಿಣಿ'ಯ ಖ್ಯಾತಿಯ ನಿನಾದನ ಜೊತೆ ಸಂವಾದ

ದಮಯಂತಿ ಪತಿ ದಿಗ್ವಿಜಯನ (Digvijaya) ಪಾತ್ರದಲ್ಲಿ ನಟ ಮೋಹನ್ (Mohan) ಕಾಣಿಸಿಕೊಂಡಿದ್ದರು. ಇವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ (Salt and Pepper look) ವೀಕ್ಷಕರ ಗಮನ ಸೆಳೆದಿತ್ತು. ಆದರೆ ಕೊರೋನಾ ಎರಡನೇ ಲಾಕ್‌ಡೌನ್‌ ಸಮಯದಲ್ಲಿ ಪೋಷಕರಿಗೆ ಕೊರೋನಾ ವೈರಸ್ ತಗುಲಿ, ಅವರ ಆರೈಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಲವು ತಿಂಗಳ ಕಾಲ ಧಾರಾವಾಹಿಯಿಂದ ಮೋಹನ್ ಸಹ ಹೊರ ಬಂದಿದ್ದರು. ಈ ಸಮಯದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನಟನೆಯ ರವಿ ಬೋಬಣ್ಣ  (Ravi Bopanna) ಸಿನಿಮಾದಲ್ಲಿ ವಿಶೇಷ ಪಾತ್ರ ಪಡೆದುಕೊಂಡಿದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿ ಮತ್ತು ಸಿನಿಮಾ ಕೆಲಸ ಮುಗಿಸಿದ ನಂತರ ಮತ್ತೆ ಧಾರಾವಾಹಿಗೆ ಮರುಳಿದ್ದಾರೆ. 

'ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ನಾನು ದಿಗ್ವಿಜಯನ ಪಾತ್ರವನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ. ನೆಗೆಟಿವ್ ಶೇಡ್ ಹೊಂದಿರುವ ಪಾತ್ರವಾಗಿರುವ ಕಾರಣ ವೀಕ್ಷಕರಲ್ಲಿ ಅದೇ ತುಂಬಿ ಕೊಂಡಿತ್ತು. ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ಇದು ನನ್ನ ಮೊದಲ ಧಾರಾವಾಹಿ ಅಗಿತ್ತು. ಪ್ರತಿ ಮನೆಗಳಲ್ಲೂ ನನ್ನ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟರ ಮಟ್ಟಕ್ಕೆ ಕಿರುತೆರೆ ಪ್ರಭಾವ ಬೀರಿದೆ. ಎಲ್ಲವೂ ಅಂತ್ಯ ಕಂಡುಕೊಳ್ಳುತ್ತಿದ್ದಂತೆ, ನಾನು ಕೂಡ ವೀಕ್ಷಕರಿಗೆ ಬೈ ಹೇಳುವ ಸಮಯ ಬಂದಿದೆ. ಧಾರಾವಾಹಿಯಲ್ಲಿ ಕೆಲವೊಂದು ಕ್ರಿಯೇಟಿವ್ ಬದಲಾವಣೆ ಮಾಡಲಾಗುತ್ತಿದೆ. ಇಡೀ ತಂಡ ನನ್ನ ಕುಟುಂಬದ ರೀತಿ ಇತ್ತು,' ಎಂದು ಮೋಹನ್ ಧಾರಾವಾಹಿಯನ್ನು ಬಿಡುವ ಸಮಯದಲ್ಲಿ ಮಾತನಾಡಿದ್ದರು.

click me!