ಬೀದಿ ಜಗಳ ಮನೆವರೆಗೂ ತರಬಾರದು ಅಂತಾರೆ..! ಮನೆಗೆ ತಂದ್ರೆ ಏನಾಗುತ್ತೆ ಗೊತ್ತಾ..?

By Sathish Kumar KH  |  First Published Dec 16, 2023, 4:56 PM IST

ನಾನು ನಂದಿನಿ ಬೆಂಗಳೂರಿಗೆ ಬಂದೀನಿ ವಿಡಿಯೋ ಸಾಂಗ್ ಖ್ಯಾತಿಯ ವಿಕ್ಕಿಯಿಂದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಬೆಂಗಳೂರು (ಡಿ.16): 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ' ಹಾಡನ್ನು ರಚಿಸಿ ಅತಿಹೆಚ್ಚು ಪ್ರಸಿದ್ಧಿ ಗಳಿಸಿದ ವಿಕ್ಕಿಪೀಡಿಯಾ ಅವರು, ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೈರಲ್ ಆಗುವಂತಹ ವಿಡಿಯೋವನ್ನು ಮಾಡಿದ್ದಾರೆ. ಅದೇನೆಂದರೆ, ಬೀದಿ ಜಗಳವನ್ನು ಮನೆಗೆ ತರಬಾರದು ಎಂದು ಹಿರಿಯರು ಗಾದೆ ಮಾಡಿದ್ದಾರೆ. ಒಂದು ವೇಳೆ ಬೀದಿ ಜಗಳವನ್ನು ಮನೆಗೆ ತಂದೆ ಏನಾಗುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ಮಾತಿದೆ. ಆದ್ದರಿಂದ ನಮ್ಮ ಹಿರಿಯರು ಮಾಡಿದ ಅನೇಕ ಗಾದೆಗಳು ಆಗಿಂದಾಗ್ಗೆ ಜೀವನದ ಕೆಲವು ಕ್ಷಣಗಳಿಗೆ ಹೊಂದಾಣಿಕೆ ಆಗುತ್ತಲೇ ಇರುತ್ತವೆ. ಅದೇ ರೀತಿಯಾಗಿ ಬೀದಿ ಜಗಳವನ್ನು ಮನೆಗೆ ತರಬಾರದು ಎನ್ನುವ ಗಾದೆಯನ್ನೂ ನೀವು ಕೇಳಿರಬಹುದು. ಒಂದು ವೇಳೆ ಬೀದಿ ಜಗಳವನ್ನು ಮನೆಗೆ ತಂದರೆ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಹಾಸ್ಯಾತ್ಮಕವಾಗಿ ವೀಡಿಯೋ ಒಂದರಲ್ಲಿ ತೋರಿಸಲಾಗಿದೆ. ಇಲ್ಲಿದೆ ಈ ವಿಡಿಯೋ..

Tap to resize

Latest Videos

ಭಾರತದಲ್ಲಿ ವಾಸಿಸೋಕೆ ಅತ್ಯುತ್ತಮ ನಗರ ಯಾವುದು? ಬೆಂಗಳೂರಿಗೆ ಎಷ್ಟನೇ ಸ್ಥಾನ?

ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರಿಗೆ ಸಂಬಂಧಪಟ್ಟ ನಾನು ನಂದಿನಿ, ಬೆಂಗಳೂರಿಗೆ ಬಂದೀನಿ ಹಾಡು ಎಲ್ಲೆಡೆ ವೈರಲ್ ಆಗಿತ್ತು. ಈ ಹಾಡನ್ನು ಕ್ರಿಯೇಟ್‌ ಮಾಡಿದ್ದ ವಿಕ್ಕಿಪೀಡಿಯಾ ದೇಶಾದ್ಯಂತ ಖ್ಯಾತಿ ಗಳಿಸಿದ್ದನು. ಇನ್ನು ಈತ ವಿಡಿಯೋ ಕ್ರಿಯೇಟರ್ ಆಗಿದ್ದು, ಹಲವು ಹಾಸ್ಯಾತ್ಮಕ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾನೆ. ಈತನೊಂದಿಗೆ ವಿಡಿಯೋದಲ್ಲಿ ಅಮಿತ್ ಹಾಗೂ ಹೊಸ ಮಾತ್ರವಾಗಿ ಅಲ್ವಿನ್ ಡಿಸೋಜ ಕೂಡ ಸೇರಿಕೊಂಡಿದ್ದಾನೆ. ಇಲ್ಲಿ ಮಹಿಳೆ ಹಾಗೂ ಪುರುಷ ಸೇರಿದಂತೆ ಎಲ್ಲ ಪಾತ್ರಗಳನ್ನು ಇವರೇ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ಹಾಸ್ಯ ಮತ್ತಷ್ಟು ಮನರಂಜನಾತ್ಮಕವಾಗಿ ಕಾಣಿಸುತ್ತದೆ.

ವಿಡಿಯೋ ಸಾರಾಂಶವೇನು?
ಅಮ್ಮ ತರಕಾರಿ ತರಲು ಮಗನನ್ನು ಕಳಿಸಿರುತ್ತಾಳೆ. ಆತ, ದಾರಿಯಲ್ಲಿ ಹೋಗುವಾಗ ಒಬ್ಬನಿಗೆ ಡಿಕ್ಕಿ ಹೊಡೆದು ಅವಾಜ್ ಹಾಕುತ್ತಾನೆ. ನಂತರ, ನಮ್ಮ ಅಮ್ಮ ತರಕಾರಿ ತರಲು ಕಳಿಸಿದ್ದಾಳೆ. ಇಲ್ಲವೆಂದರೆ ನಿನ್ನನ್ನು ನೊಡಿಕೊಳ್ಳುತ್ತಿದ್ದೆ ಎಂದು ಹೇಳುತ್ತಾನೆ. ಈತನೊಂದಿಗೆ ಹೋದ ಡಿಕ್ಕಿ ಹೊಡೆದ ವ್ಯಕ್ತಿ ತರಕಾರಿ ತರಲೂ ಹೋಗುತ್ತಾನೆ. ತರಕಾರಿ ತಗೊಂಡಾಯ್ತಲ್ಲ ಈಗೇನು ಮಾಡ್ತೀಯಾ ಎಂದು ಕೇಳ್ತಾನೆ. ಆಗ ಆತ ನಮ್ಮಮ್ಮ 2 ಗಂಟೆಯೊಳಗೆ ತರಕಾರಿ ತರಲು ಹೇಳಿದ್ದು ತಾನು ತುರ್ತಾಗಿ ಮನೆಗೆ ಹೋಗಬೇಕಿದೆ. ಇಲ್ಲವೆಂದರೆ ನಿನ್ನನ್ನು ನೋಡಿಕೊಳ್ಳುತ್ತಿದ್ದೆ ಎಂದು ಅವಾಜ್ ಹಾಕುತ್ತಾನೆ.

ಹಚ್ಚೆ ನೋಡಿ ಕಳೆದು ಹೋದ ಮಗನನ್ನು ಗುರುತಿಸಿದ ತಾಯಿ:
ಇದರಿಂದ ಪುನಃ ಸಿಟ್ಟಾದ ಮತ್ತೊಬ್ಬ ಯುವಕ ನಿಮ್ಮ ಮನೆಗೆ ನಾನೇ ಡ್ರಾಪ್ ಮಾಡ್ತೀನಿ ಅಂತ ಅವನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದು ಮನೆಗೆ ಬಿಡುತ್ತಾನೆ. ಅಷ್ಟಕ್ಕೆ ಸುಮ್ಮನಾಗದೇ ಮನೆ ಬಾಗಿಲ ಬಳಿ ಬಂದು ತರಕಾರಿಯನ್ನು ಅವರ ಅಮ್ಮನಿಗೆ ಕೊಟ್ಟ ನಂತರ ನೀನು ಅದೇನೋ ನೊಡ್ಕೊಳ್ತೀನಿ ಅಂದಿದ್ದೆಲ್ಲ ಈಗ ಬಾ ಎಂದು ಕರೆಯುತ್ತಾನೆ. ಆದರೆ, ಅಲ್ಲಿ ಅವನ ತಾಯಿ ಯಾರೋ ಇದು ನಿನ್ನ ಫ್ರೆಂಡ್‌ ಕರೆದುಕೊಂಡು ಬಂದಿದ್ದೀಯಾ? ಬಾರಪ್ಪ ಒಳಗೆ ಊಟ ಮಾಡಿಕೊಂಡೇ ಹೋಗುವಂತೆ ಎಂದು ಕರೆಯುತ್ತಾರೆ. ಆಗ ಊಟಕ್ಕೆ ಕುಳಿತಾಗ ಕೈಯಲ್ಲಿದ್ದ ಹಚ್ಚೆಯನ್ನು ನೋಡಿ ಜಗಳ ಮಾಡಲು ಬಂದಿದ್ದ ಯುವಕನಿಗೆ ಕೇಳುತ್ತಾಳೆ. ಅವನು ನಾನು ಚಿಕ್ಕವಯಸ್ಸಿನಲ್ಲಿ ಜಾತ್ರೆಯಲ್ಲಿ ಕಳೆದು ಹೋದೆ. ಆಗ ನನ್ನ ತಾಯಿ ನೆನಪಿಗೆ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತಕ್ಷಣ ಊಟ ಬಡಿಸುತ್ತಿದ್ದ ತಾಯಿ 'ಅಕ್ಷಯ್' ಎಂದು ಕರೆಯುತ್ತಾಳೆ. 

ಪರೀಕ್ಷೆಯಲ್ಲಿ ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಹಾಡು ಬರೆದ ವಿದ್ಯಾರ್ಥಿ: ಫುಲ್‌ ಮಾರ್ಕ್ಸ್‌ ಕೊಡಬೇಕೆಂದ ನೆಟ್ಟಿಗರು!

ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ, ಜಗಳ ಮಾಡಲು ಬಂದಿದ್ದವನಿಗೆ ನೀನು ನನ್ನ ಮಗ ಎಂದು ಆ ತಾಯಿ ಹೇಳುತ್ತಾಳೆ. ಆಗ ತರಕಾರಿ ತರಲು ಹೋಗಿ ಬೀದಿ ಜಗಳವನ್ನು ಮನೆಗೆ ತಂದಿದ್ದವನು ಹಾಗಾದೆ ನಾನು? ಎಂದು ಕೇಳುತ್ತಾನೆ. ನನ್ನ ಮಗ ಕಳೆದು ಹೋಗಿದ್ದಕ್ಕೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತಂದಿದ್ದಾಗಿ ತಾಯಿ ಹೇಳುತ್ತಾಳೆ. ಇಲ್ಲಿ ಸ್ವಂತ ಮಗ ಸಿಕ್ಕಿದ ನಂತರ ದತ್ತು ಮಗನನ್ನು ಮನೆಯಿಂದ ಪುನಃ ಅನಾಥಾಶ್ರಮಕ್ಕೆ ಕಳುಹಿಸುತ್ತಾಳೆ. 

ಒಟ್ಟಾರೆ ಈ ಪುಟ್ಟ ವಿಡಿಯೋದ ಸಾರಾಂಶ ಬೀದಿ ಜಗಳವನ್ನು ಮನೆಗೆ ತಂದ ಯುವಕ ತಾನು ಮನೆಯನ್ನೇ ಬಿಟ್ಟು ಹೋಗುವ ಪರಿಸ್ಥಿತಿಯನ್ನು ತಾನಾಗಿಯೇ ತಂದುಕೊಂಡ ಎನ್ನುವುದು ಇಲ್ಲಿ ಕಂಡುಬಂದಿದೆ. ಇಂತಹ ಅನೇಕ ವಿಡಿಯೋಗಳನ್ನು ವಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ವಿಕ್ಕಿಪೀಡಿಯಾ ತಮ್ಮ ಇನ್ಸ್‌ಸ್ಟಾಗ್ರಾಂ ಪೇಜ್‌ನಲ್ಲಿ 41 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ.

click me!