2007ರಲ್ಲಿ ತೆರೆಗೆ ಬಂದ ಹೆವ್ವಿ ಬಾಬ್ಬಿ (Heyy Babyy) ಚಿತ್ರವು ಸೂಪರ್ ಹಿಟ್ ದಾಖಲಿಸಿತು. ಆದರೆ ಈ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದು ಅಕ್ಷಯ್ ಕುಮಾರ್.
ಹನ್ನೆರಡು ವರ್ಷದಲ್ಲಿ ಬರೋಬ್ಬರಿ 19 ಫ್ಲಾಪ್ ಸಿನಿಮಾ ಕೊಟ್ಟ ನಟನೊಬ್ಬನ ಕಥೆಯಿದು. ಆತನ ಅಕೌಂಟ್‌ನಲ್ಲಿ ಕೇವಲ ಒಂದು ಹಿಟ್ ದಾಖಲಾಗಿದೆ. ಆ ಸಿನಿಮಾದಲ್ಲಿ ಕೂಡ ಈ ನಟ ಹೀರೋ ಅಲ್ಲ, ಕ್ಯಾರಾಕ್ಟರ್ ನಟ. ಅಕ್ಷಯ್ ಕುಮಾರ್ ಹಾಗು ವಿದ್ಯಾ ಬಾಲನ್ ಜೋಡಿಯ ಈ ಚಿತ್ರದಲ್ಲಿ ಈ ಫ್ಲಾಪ್ ನಟ ಒಂದು ಪ್ರಮುಖ ಪಾತ್ರದಲ್ಲಿ ವಿಲನ್ ಆಗಿ ನಟಿಸಿದ್ದಾನೆ ಅಷ್ಟೇ. ಇದೀಗ ಬರೋಬ್ಬರಿ 13 ವರ್ಷದ ಬಳಿಕ ಈ ನಟ ತಮ್ಮ 49ನೇ ವಯಸ್ಸಿನಲ್ಲಿ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಮಗನಾಗಿ ಹುಟ್ಟಿರುವ ಈ ನಟ ಸಹಜವಾಗಿಯೇ ತಾವೊಬ್ಬ ಸೂಪರ್ ಸ್ಟಾರ್ ಆಗಬೇಕೆಂದು ಕನಸು ಹೊತ್ತು ಬಾಲಿವುಡ್ ಜಗತ್ತಿಗೆ ಕಾಲಿಟ್ಟಿದ್ದಾನೆ. ತಂದೆಯೇ ಸೂಪರ್ ಸ್ಟಾರ್ ಹಾಗೂ ನಿರ್ಮಾಪಕ. ತನ್ನ ಮಗನನ್ನು ಬಾಲಿವುಡ್ ಸೂಪರ್ ಸ್ಟಾರ್ ಮಾಡಬೇಕೆಂದು ಅಪ್ಪನೇ ಸ್ವತಃ ತನ್ನ ಮಗನಿಗಾಗಿ ಪ್ರೇಮ್ ಅಗ್ಗಾನ್ (Prem Aggan) ಸಿನಿಮಾವನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಆದರೆ, ಚಿತ್ರವು ಫ್ಲಾಪ್ ಆಯ್ತು. ಆದರೆ ಈ ನಟ ಹೋಪ್ ಕಳೆದುಕೊಳ್ಳಲಿಲ್ಲ. ಪುನಃ ಪುನಃ ಪ್ರಯತ್ನಿಸು ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದ, ಆದರೆ ಅದೃಷ್ಟ ಕೈಕೊಟ್ಟಿತ್ತು, ಸಕ್ಸಸ್ ಸಿಗಲೇ ಇಲ್ಲ.
undefined
2007ರಲ್ಲಿ ತೆರೆಗೆ ಬಂದ ಹೆವ್ವಿ ಬಾಬ್ಬಿ (Heyy Babyy) ಚಿತ್ರವು ಸೂಪರ್ ಹಿಟ್ ದಾಖಲಿಸಿತು. ಆದರೆ ಈ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದು ಅಕ್ಷಯ್ ಕುಮಾರ್. ಅಕ್ಷಯ್ ಜೋಡಿಯಾಗಿ ವಿದ್ಯಾ ಬಾಲನ್ ನಟಿಸಿದ್ದರು. ರಿತೇಶ್ ದೇಶ್‌ಮುಖ್, ಫರ್ದೀನ್ ಖಾನ್, ಅನುಪಮ್ ಖೇರ್ ಮತ್ತು ಬೊಮ್ಮನ್ ಇರಾನಿ ಸೇರಿದಂತೆ ಹಲವರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಈ ಕಾರಣಕ್ಕೆ ಹೆವ್ವಿ ಬಾಬ್ಬಿ ಚಿತ್ರವು ಸೂಪರ್ ಹಿಟ್ ಆಗಿದ್ದರೂ ಈ ಚಿತ್ರದ ಕ್ರೆಡಿಟ್ ಈ ನಟನಿಗೆ ಸಿಗಲಿಲ್ಲ. ಆ ನಟ ಬೇರಾರೂ ಅಲ್ಲ, ಫರ್ದೀನ್ ಖಾನ್ (Fardeen Khan).ಆದರೆ, ಈ ಚಿತ್ರದ ಬಳಿಕ ತನ್ನ ಲಕ್ ಬದಲಾಗುವುದೆಂದು ಫರ್ದಿನ್ ಖಾನ್ ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ.
ಹೆವ್ವಿ ಬಾಬ್ಬಿ ಚಿತ್ರದ ಬಳಿಕ ತೆರೆಗೆ ಬಂದ ಡಾರ್ಲಿಂಗ್, ಜೈ ವೀರು ಮತ್ತು ಲೈಫ್ ಪಾರ್ಟ್‌ನರ್ ಚಿತ್ರಗಳೂ ಕೂಡ ಸೋಲಿನ ಹಾದಿಯನ್ನೇ ಹಿಡಿದವು. ಮತ್ತೆ ಸತತ ಮೂರು ಚಿತ್ರಗಳ ಸೋಲಿನಿಂದ ಫರ್ದೀನ್ ಖಾನ್ ಕಂಗೆಟ್ಟು ಬಾಲಿವುಡ್ ಸಿನಿಮಾ ಜಗತ್ತನ್ನೇ ತೊರೆದುಬಿಟ್ಟರು. ಸಾಕಷ್ಟು ನೊಂದಿದ್ದ ನಟ ಫರ್ಧೀನ್ ಖಾನ್ ಈಗ ಮತ್ತೆ ಬಾಲಿವುಡ್‌ನಲ್ಲಿ ವಾಪಸ್ ಬಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸೌಂದರ್ಯದ ಬಗ್ಗೆ 'ಬ್ಯೂಟಿ ಕ್ವೀನ್' ಪಾಠ; ಕತ್ರಿನಾ ಕೈಫ್ ಮಾತು ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ!
ವಿಸ್‌ಪಾಟ್ (Visfot)ಚಿತ್ರವು ವೆನೆಜ್ಯುಲಾನ್'ದ 2012ರಲ್ಲಿ ಬಿಡುಗಡೆಯಾಗಿದ್ದ 'ರಾಕ್ ಪೇಪರ್, ಮತ್ತು ಸೀಜರ್ಸ್' ಚಿತ್ರದ ರೀಮೇಕ್ ಚಿತ್ರವಾಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದೆ. ಈ ಚಿತ್ರವನ್ನು ಕೂಕಿ ಜುಲಾಟಿ ನಿರ್ದೇಶನ ಮಾಡಿದ್ದು, ಸಂಜತ್ ಗುಪ್ತಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಫರ್ದೀನ್ ಖಾನ್ ಜತೆ ರಿತೇಶ್ ದೇಶ್‌ಮುಖ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಫಿರೋಜ್ ಖಾನ್ ((Feroz Khan) ಮಗ ಇನ್ನಾದರೂ ನೆಲೆ ನಿಲ್ಲಲು ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕು.
ರಶ್ಮಿಕಾ ಮಂದಣ್ಣ 'ಅನಿಮಲ್'ನಲ್ಲಿ ಮಿಂಚಿದ ತೃಪ್ತಿ ಧಿಮ್ರಿ; ಹಾಟ್ ಅವತಾರಕ್ಕೆ ಭಾರತ ಫಿದಾ!
ವಿಸ್‌ಪಾಟ್ ಚಿತ್ರವು ವೆನೆಜ್ಯುಲಾನ್ ಚಿತ್ರದ ರೀಮೇಕ್ ಆಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದ್ದು, 2012ರಲ್ಲಿ ಬಿಡುಗಡೆಯಾಗಿದ್ದ 'ರಾಕ್ ಪೇಪರ್, ಮತ್ತು ಸೀಜರ್ಸ್'. ಈ ಚಿತ್ರವನ್ನು ಕೂಕಿ ಜುಲಾಟಿ ನಿರ್ದೇಶನ ಮಾಡಿದ್ದು, ಸಂಜತ್ ಗುಪ್ತಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಫರ್ದೀನ್ ಖಾನ್ ಜತೆ ರಿತೇಶ್ ದೇಶ್‌ಮುಖ್ ಕೂಡ ನಟಿಸುತ್ತಿದ್ದಾರೆ.