ಪತ್ನಿ ಮೇಲೆ ಕೈ ಮಾಡಿದ ನಿರಂಜನ್ ದೇಶಪಾಂಡೆ; ನೋವು ತಡೆಯಲಾರದೆ ಒದ್ದಾಡಿದ ಯಶು!

Published : Oct 02, 2023, 04:05 PM IST
ಪತ್ನಿ ಮೇಲೆ ಕೈ ಮಾಡಿದ ನಿರಂಜನ್ ದೇಶಪಾಂಡೆ; ನೋವು ತಡೆಯಲಾರದೆ ಒದ್ದಾಡಿದ ಯಶು!

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಿರಂಜನ್ ದೇಶಪಾಂಡೆ ಯಶಸ್ವಿನಿ ಫೈಟಿಂಗ್ ವಿಡಿಯೋ.... 

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಶೂಟಿಂಗ್, ಫ್ರೀ ಟೈಂ, ಶಾಪಿಂಗ್, ಅಡುಗೆ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗೆ ಮನೋರಂಜನೆ ನೀಡುತ್ತಾರೆ. ಹೀಗೆ ತಮಾಷೆ ಮಾಡಲು ಹೋಗಿ ಅಮವಾಸ್ಯೆ ಮಾಡಿಕೊಂಡಿದ್ದಾರೆ. 

ಮನೆಯ ಲೀವಿಂಗ್ ಏರಿಯಾದ ಸೋಫಾ ಮೇಲೆ ನಿರಂಜನ್ ದೇಶಪಾಂಡೆ ಮೊಬೈಲ್ ನೋಡಿಕೊಂಡು ಕುಳಿತಿದ್ದರು ಒಂದೆರಡು ಸಲ ಪತ್ನಿ ಯಶಸ್ವಿನಿ ಕರೆಯುತ್ತಾರೆ ಆದರೂ ಕೇರ್ ಮಾಡದೆ ಮೊಬೈಲ್ ನೋಡುತ್ತಿದ್ದ ಕಾರಣ ಹಾಗೆ ಸುಮ್ಮನೆ ಮೊಬೈಲ್ ಬಿಡುವಂತೆ ನೂಕುತ್ತಾರೆ. ಸಿಟ್ಟು ಮಾಡಿಕೊಂಡು ನಿರಂಜನ್ 'ಹೊಡೆಯುವುದು ಇಟ್ಟಿಕೊಳ್ಳಬೇಕು ಆಗಲಿಂದ ಹೇಳುತ್ತಿದ್ದೀನಿ' ಎನ್ನುತ್ತಾರೆ. ಅಷ್ಟರಲ್ಲಿ ಹೈ ಡ್ರಾಮಾ ಕ್ರಿಯೇಟ್ ಮಾಡಿದ ಯಶಸ್ವಿನಿ ಹೊಡೆದೇ ಬಿಟ್ಟರು ಎನ್ನುವ ರೀತಿಯಲ್ಲಿ ಸೋಫಾದಿಂದ ನೆಲಕ್ಕೆ ಬೀಳುತ್ತಾರೆ.

ಸ್ನೇಹಿತೆಯರಿಂದ ನಟಿ ತೇಜಸ್ವಿನಿ ಪ್ರಕಾಶ್‌ಗೆ ಸರ್ಪ್ರೈಸ್‌ ಬೇಬಿ ಶವರ್; ಫೋಟೋ ವೈರಲ್

'ಅಯ್ಯೋ ನನ್ನ ಗಂಡ ನನಗೆ ಹೊಡೆದೇ ಬಿಟ್ಟ ಸಾಯಿಯೇ ಬಿಟ್ಟ ಅಯ್ಯೋ ಕಾಪಾಡಿ' ಎಂದು ಯಶಸ್ವಿನಿ ಕೂಗಾಡುತ್ತಾರೆ. ನಿರಂಜನ್ ಎಬ್ಬಿಸಲು ಪ್ರಯತ್ನ ಪಟ್ಟರೂ ನಾನು ಎಷ್ಟು ಪ್ರೀತಿ ಮಾಡುತ್ತೀನಿ ನಿನ್ನನ್ನು ಯಾರೆ ನೀನು ಮಾತ್ರ ಹೇಗೆ ಹೊಡೆಯುತ್ತೀನಾ ನೋಡು ತುಂಬಾ ರಕ್ತ ಬರುತ್ತಿದೆ' ಎಂದು ಯಶಸ್ವಿನಿ ಹೇಳುತ್ತಾರೆ. ರಕ್ತನಾ ಎಲ್ಲಿದೆ ಏನೋ ಕಾಣಿಸುತ್ತಿಲ್ಲ ಏನೂ ಆಗಿಲ್ಲ ನಿನಗೆ ಎನ್ನುತ್ತಾರೆ ನಿರಂಜನ್ ...internal ಬ್ಲೀಡಿಂಗ್ ಆಗುತ್ತಿದೆ ನಿಮಗೆ ಕಾಣಿಸುವುದಿಲ್ಲ ಎಂದು ಯಶು ಹೇಳುತ್ತಾರೆ. 

ಅಬ್ಬಬ್ಬಾ! ಇಷ್ಟು ಚಿಕ್ಕ ವಯಸ್ಸಿಗೆ ನಟಿ ಅಮೂಲ್ಯ ಮಕ್ಕಳು ಎಷ್ಟು ಸ್ಟೈಲ್ ಮಾಡ್ತಾರೆ ನೋಡಿ....

ಯಶು ಮಾಡುತ್ತಿರುವುದನ್ನು ನೋಡಿ ನಿರಂಜನ್ ಒಮ್ಮೆ ಯೋಚಿಸಿ ಉಪಾಯ ಹುಡುಕುತ್ತಾರೆ. ಇರು ನಿಮ್ಮ ತಾಯಿಗೆ ಕರೆ ಮಾಡುತ್ತೀನಿ ಎಲ್ಲಾ ಸರಿಹೋಗುತ್ತದೆ ಎನ್ನುತ್ತಾರೆ ಅಷ್ಟರಲ್ಲಿ ಯಶಸ್ವಿನಿ ಎದ್ದು ಪರ್ಫೆಕ್ಟ್‌ ಆಗಿ ಎದ್ದು ನಾಟಕ ಮಾಡಿಕೊಂಡು ಎದ್ದು ಓಡಿ ಹೋಗುತ್ತಾರೆ. ಇದನ್ನು ನೋಡಿ ನಿರಂಜನ್ ಶಾಕ್ ಆಗಿ ನಿಜಕ್ಕೂ ತಲೆ ಸುತ್ತಿ ಬೀಳುತ್ತಾರೆ. ಹೀಗೆ ಫಾಲೋವರ್ಸ್‌ಗೆ ಮನೋರಂಜನೆ ನೀಡಲು ಈ ಜೋಡಿ ಫನಿ ಫನಿ ವಿಡಿಯೋ ಕ್ರಿಯೇಟ್ ಮಾಡುತ್ತಾರೆ. ನೀವಿಬ್ಬರೂ ಸೂಪರ್ ಕಪಲ್ಸ್‌ ಬೆಸ್ಟ್ ಕಪ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?