ಶಿವರಾಜ್ ಕುಮಾರ್ ಜೊತೆ 'ಅಮೃತಧಾರೆ' ಸೀರಿಯಲ್​ ಭೂಮಿಕಾ! ಏನಿದು ವಿಷ್ಯ?

By Suvarna News  |  First Published Oct 2, 2023, 2:42 PM IST

ಒಂದೇ ವೇದಿಕೆಯಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಮತ್ತು ಅಮೃತಧಾರೆ ಸೀರಿಯಲ್​ ಖ್ಯಾತಿಯ ಛಾಯಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಏನಿದು ಹೊಸ ವಿಷ್ಯ?
 


ಭೂಮಿಕಾ (Bhoomika) ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರೋ ಛಾಯಾ ಸಿಂಗ್​ ಆಗಾಗ್ಗೆ ಕೆಲವೊಂದು ರೀಲ್ಸ್​ ಮಾಡುತ್ತಿರುತ್ತಾರೆ, ಕೆಲವೊಂದು ಮಾಹಿತಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರ ಜೊತೆಗೆ ಹೇಳಿರುವ ಡೈಲಾಗ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿ ಛಾಯಾ ಸಿಂಗ್​ ಬೆಳ್ಳಿ ಪರದೆಯ ಮೇಲೆ ಮತ್ತೆ ಎಂಟ್ರಿ ಕೊಡಲಿದ್ದಾರಾ ಎನ್ನುವ ಪ್ರಶ್ನೆ ಏಳುತ್ತಿದೆ. ಈ ಡೈಲಾಗ್​ ನೋಡಿದರೆ ಶಿವರಾಜ್​ ಕುಮಾರ್​ ಅವರ ತಂಗಿಯ ಪಾತ್ರದಲ್ಲಿ ಛಾಯಾ ನಟಿಸಿರುವುದು ತಿಳಿಯುತ್ತದೆ. ಹಾಗಿದ್ದರೆ ಇದೇನಿದು ಡೈಲಾಗ್​? ಇವರಿಬ್ಬರೂ ಅಣ್ಣತಂಗಿಯಾಗಿ ಹೊಸ ಸಿನಿಮಾದಲ್ಲಿ ಆ್ಯಕ್ಟ್​ ಮಾಡಲಿದ್ದಾರಾ ಎನ್ನುವ ಸಂಶಯ ಮೂಡುವುದು ಸಹಜ.

ಅಸಲಿಗೆ ಇದು ಹೊಸ ಸಿನಿಮಾದ ಅಪ್​ಡೇಟ್​ ಅಲ್ಲ. 2017ರಲ್ಲಿ ಬಿಡುಗಡೆಯಾಗಿದ್ದ ಮಫ್ತಿ ಚಿತ್ರದ ಡೈಲಾಗ್​, ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಪುನಃ ಆ ಚಿತ್ರದ ಡೈಲಾಗ್​ ಹೇಳಿದ್ದು, ಅದನ್ನೀಗ ಪುನಃ ಛಾಯಾ ಸಿಂಗ್​ ಶೇರ್​ ಮಾಡಿಕೊಂಡಿದ್ದಾರೆ. ಅದು ಸಕತ್​ ವೈರಲ್​ ಆಗುತ್ತಿದೆ.   ಅಂದಹಾಗೆ ಶಿವರಾಜ್ ಕುಮಾರ್ ಜೊತೆ ಛಾಯಾ ಸಿಂಗ್ ರೌಡಿ ಅಳಿಯ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ   ಸೂಪರ್ ಹಿಟ್ ಮಫ್ತಿ ಸಿನಿಮಾದಲ್ಲೂ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್ ಮಿಂಚಿದ್ದರು. ಅಣ್ಣ-ತಂಗಿಯ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು.  

Tap to resize

Latest Videos

GHOST: ಸಾಮಾನ್ಯವಾಗಿ ಯಾರ್​ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್​ ಪಂಚ್​

ಅಷ್ಟಕ್ಕೂ ಈ ಸಿನಿಮಾದಲ್ಲಿರುವ ಈ ಡೈಲಾಗ್​ನಲ್ಲಿ ಛಾಯಾ (Chaya Singh), ಅಣ್ಣಾ ನಿನ್ನ ಗಂಡ ಕೆಟ್ಟವನು, ಅದಕ್ಕೆ ಕೊಂದೆ ಅಂತ ಒಂದು ಮಾತನ್ನಾದರೂ ಹೇಳ್ಬೋದಿತ್ತಲ್ಲ ಅಣ್ಣ ಎನ್ನುತ್ತಾರೆ, ಅದಕ್ಕೆ ಶಿವರಾಜ್​ ಕುಮಾರ್​, ಹೇಗಂತ ಹೇಳಲಿ? ನಿನ್ನ ಗಂಡ ಕೆಟ್ಟವನು ಅಂತ ಹೇಳಿದ್ರೆ ನಿನ್ನ ಮನಸ್ಸು ಎಷ್ಟು ನೋವಾಗತ್ತೆ? ಅದಕ್ಕಿಂತ ನಿಮ್ಮಣ್ಣನೇ ಕೆಟ್ಟವನು ಎನ್ನುವುದು ಒಳ್ಳೆಯದು ಎನ್ನಿಸಿತು ಎನ್ನುತ್ತಾರೆ. ಆಗ ಛಾಯಾ ಅಣ್ಣನ ಪಾತ್ರಧಾರಿಯ ಕಾಲಿಗೆ ಬಿದ್ದು ಕಣ್ಣೀರು ಸುರಿಸುತ್ತಾಳೆ. ಮಫ್ತಿ ಚಿತ್ರದ ಈ ದೃಶ್ಯವನ್ನು ವೇದಿಕೆಯ ಮೇಲೆ ಮರುಸೃಷ್ಟಿ ಮಾಡಲಾಗಿತ್ತು. ಅದೀಗ ಪುನಃ ವೈರಲ್​ ಆಗಿದೆ. ಅಣ್ಣನ ಜೊತೆ ಕೆಲಸ ಮಾಡುವಾಗ ಗ್ಲಿಸರಿನ್ ಹಾಕಿಕೊಳ್ಳೋದು ಏನ್ ಇಲ್ಲ. ಭಾವನೆಗಳು ಹಾಗೆ ಬರುತ್ತೆ ಎಂದೂ ಅಂದು ಛಾಯಾ ಹೇಳಿದ್ದರು.

ಸದ್ಯ ಶಿವರಾಜ್​ ಕುಮಾರ್​ (Shivarajkumar) ಅವರು, ಘೋಸ್ಟ್​ ಚಿತ್ರದ ಬಿಜಿಯಲ್ಲಿದ್ದಾರೆ. ಇದರ ಟ್ರೇಲರ್​ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಿವರಾಜ್​ಕುಮಾರ್​ ಅವರ ಯಂಗ್​ ಮತ್ತು ಈಗಿನ ಲುಕ್​ ಫ್ಯಾನ್ಸ್​ಗಳನ್ನು ಮರುಳು ಮಾಡಿದೆ. ಟ್ರೇಲರ್​ನಲ್ಲಿ ಶಿವಣ್ಣನವರ ಸಖತ್ ಲುಕ್,  ಥ್ರಿಲ್ಲಿಂಗ್ ಆ್ಯಕ್ಷನ್ಸ್ ಹೈಲೈಟ್ ಆಗಿದ್ದು, ಪಂಚಿಂಗ್​ ಡೈಲಾಗ್​ ಇದೆ.  ಇವರ ಗ್ಯಾಂಗ್‌ಸ್ಟರ್‌ ಲುಕ್‌, ಖಡಕ್‌ ಡೈಲಾಗ್‌ಗಳು ಹೈಲೈಟ್​ ಆಗಿವೆ. ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಡಲ್ಲ. ಸಾಮ್ರಾಜ್ಯ ಧ್ವಂಸ ಮಾಡುವ ನನ್ನಂಥವರನ್ನು ಸಮಾಜ, ಇತಿಹಾಸ ಎಂದೂ ಮರೆತಿಲ್ಲ ಎನ್ನುವ ಮೂಲಕ ಶುರುವಾಗುವ ಟ್ರೇಲರ್​ನಲ್ಲಿ ಶಿವರಾಜ್​ ಕುಮಾರ್​ ಅವರು ದೆ ಕಾಲ್​ ಮಿ ಘೋಷ್ಟ್ ಎನ್ನುತ್ತಾರೆ.  ಕನ್ನಡ, ತೆಲುಗು, ತಮಿಳಿನಲ್ಲಿ ಘೋಸ್ಟ್‌ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ತೆಲುಗು ಟ್ರೈಲರ್‌ ಅನ್ನು ರಾಜಮೌಳಿ ಬಿಡುಗಡೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ‘ಘೋಸ್ಟ್​’ ಸಿನಿಮಾದ  ಒರಿಜಿನಲ್​ ಗ್ಯಾಂಗ್​ಸ್ಟರ್​ ಮ್ಯೂಸಿಕ್​ ರಿಲೀಸ್​ ಆಗಿತ್ತು. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿಸಲಾಗಿತ್ತು. ಈಗ ಟ್ರೇಲರ್​ ಅಬ್ಬರಿಸುತ್ತಿದೆ.  ಶಿವರಾಜ್​ಕುಮಾರ್​ ಅವರ ಗೆಟಪ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

'ನಾನು ನಂದಿನಿ' ಹಾಡಿಗೆ ಕುಣಿದ ಸಾರಾ ಅಣ್ಣಯ್ಯ, ಅಮೃತಧಾರೆ ಸೀರಿಯಲ್ ಟೀಂ ಜೊತೆ ರೀಲ್ಸ್‌

 

click me!