ʼಬಿಗ್ ಬಾಸ್ ಕನ್ನಡ 11ʼ ಶೋನಲ್ಲಿ ರಜತ್ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಈಗ ಅವರು ತಮ್ಮ ಮಗಳಿಗೆ ಅಮೂಲ್ಯವಾದ ಉಡುಗೊರೆ ಕೊಟ್ಟಿದ್ದಾರೆ. ಏನದು?
ʼಬಿಗ್ ಬಾಸ್ʼ ಮನೆಯಲ್ಲಿರುವಾಗ ರಜತ್ ಅವರು ಪದೇ ಪದೇ ಕಿಚ್ಚ ಸುದೀಪ್ ಬಳಿ ಪಾರ್ಟಿ ಮಾಡೋಣ ಸರ್ ಅಂತ ಹೇಳುತ್ತಿದ್ದರು. ಈಗ ಅವರು ಹೊರಗಡೆ ಬಂದ್ಮೇಲೆ ತಮ್ಮ ಮಗಳಿಗೆ ಕಿಚ್ಚ ಸುದೀಪ್‌ರನ್ನು ತೋರಿಸಿದ್ದಾರೆ. ಹೌದು, ಕಿಚ್ಚ ಸುದೀಪ್ ಅವರು ಮತ್ತೆ ರಜತ್ ಭೇಟಿ ಮಾಡಿದ್ದಾರೆ.
ರಜತ್ ಪೋಸ್ಟ್ ಏನು?
ಮಗಳನ್ನು ಕಿಚ್ಚ ಸುದೀಪ್ ಅವರು ಮಡಿಲು ಮೇಲೆ ಕೂರಿಸಿಕೊಂಡ ಫೋಟೋವನ್ನು ರಜತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ “ಇಲ್ಲಿಯವರೆಗೆ ನಾನು ನನ್ನ ಮಗಳಿಗೆ ಕೊಟ್ಟ ಅತ್ಯಮೂಲ್ಯ ಉಡುಗೊರೆ ಇದು. ಕಿಚ್ಚ ಸುದೀಪ್ ಅವರೇ ನೀವು ನಮಗೆ ಯಾವಾಗಲೂ ಸ್ಪೂರ್ತಿ. ನಿಮ್ಮಿಂದ ಕಲಿಯೋದು ತುಂಬ ಇದೆ. ನಾನು ನಿಮ್ಮನ್ನು ಹೊಗಳೋದನ್ನು ನಿಲ್ಲಿಸೋದಿಲ್ಲ. ಧನ್ಯವಾದಗಳು” ಎಂದು ಹೇಳಿದ್ದಾರೆ. ʼಬಿಗ್ ಬಾಸ್ʼ ಶೋ ಮುಗಿದ ಬಳಿಕ ಕಿಚ್ಚ ಸುದೀಪ್ ಜೊತೆ ಎಲ್ಲ ಸ್ಪರ್ಧಿಗಳು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ.
ನಟ ದರ್ಶನ್-ಕಿಚ್ಚ ಸುದೀಪ್ ವಿಷಯ; ʼತಿರುಪತಿಯಲ್ಲಿ ಗುಂಡು ಹೊಡೆಸ್ಕೊಳ್ತೀನಿʼ ಎಂದ Bigg Boss ರಜತ್
ವೈಲ್ಡ್ ಕಾರ್ಡ್ ಎಂಟ್ರಿ!
ಇನ್ನು ರಜತ್ ಅವರು ಈ ಬಾರಿಯೇ ಬಿಗ್ ಬಾಸ್ ಹೋಗಲು ಕಿಚ್ಚ ಸುದೀಪ್ ಕೂಡ ಕಾರಣವಂತೆ. ಕಿಚ್ಚ ಸುದೀಪ್ ಅವರು ಈ ಶೋವನ್ನು ಕೊನೆಯ ಬಾರಿಗೆ ನಿರೂಪಣೆ ಮಾಡ್ತಾರೆ ಎನ್ನುವ ಗಾಸಿಪ್ ಇತ್ತು. ಮುಂದಿನ ಸೀಸನ್‌ಗೆ ಹೋದರೆ ಸುದೀಪ್ ಸರ್ ಆಗ ಬಿಗ್ ಬಾಸ್ ಶೋನಲ್ಲಿ ಇಲ್ಲ ಅಂದ್ರೆ ಬೇಸರ ಆಗುತ್ತದೆ ಎನ್ನುವ ಕಾರಣಕ್ಕೆ ರಜತ್ ಅವರು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದರು.
ಮಗಳು ಅಂದ್ರೆ ತುಂಬ ಇಷ್ಟ
ಅಂದಹಾಗೆ ತಪಸ್ಯ ಅವರು ರಜತ್ ಮಗಳು. ಇವಳಿಗೆ ಈಗ ಐದು ವರ್ಷ ವಯಸ್ಸು. ಮಗಳು ಅಂದ್ರೆ ರಜತ್‌ಗೆ ತುಂಬ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಪತ್ನಿ ಅಕ್ಷಿತಾ ಬಂದಾಗಲೂ ಅವರು “ನೀನೊಬ್ಬಳೇ ಯಾಕೆ ಬಂದೆ? ನನ್ನ ಮಕ್ಕಳೆಲ್ಲಿ? ನನಗೆ ಮಗಳು ಬೇಕು ಬಿಗ್ ಬಾಸ್” ಅಂತ ಹೇಳಿದ್ದರು.
BBK 11: ಅಂದು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಜೊತೆ ನಡೆದ ಸಂಭಾಷಣೆ ಏನು? ಸತ್ಯ ಹೇಳಿದ ತ್ರಿವಿಕ್ರಮ್!
ಕಾಲೆಳೆದಿದ್ದ ಕಿಚ್ಚ ಸುದೀಪ್
ʼಬಿಗ್ ಬಾಸ್ʼ ಮನೆಯಲ್ಲಿ ಕೆಲ ಬಾರಿ ರಜತ್ ಅವರಿಗೆ ಕಿಚ್ಚ ಸುದೀಪ್ ಕೆಲ ಬುದ್ಧಿ ಮಾತು ಹೇಳಿದ್ದರು. ಇನ್ನು ಸುದೀಪ್ ಅವರ ಕೆಲ ಮಾತುಗಳನ್ನು ರಜತ್ ನೆನಪಿಟ್ಟುಕೊಂಡು ಪಾಲಿಸಿದ್ದೂ ಇದೆ. “ನಾವು ಯಾರ ಹತ್ರ ಏನು ಹೇಳ್ತೀವಿ ಎನ್ನೋದು ಮುಖ್ಯ ಅಲ್ಲ, ಯಾವಾಗ ಯಾರ ಹತ್ರ ಏನು ಹೇಳ್ತೀವಿ ಎನ್ನೋದು ಮುಖ್ಯ ಆಗುತ್ತದೆ” ಎಂದು ರಜತ್ ಹೇಳಿದ್ದರು. ಇನ್ನು ಸುದೀಪ್ ಅವರು ರಜತ್‌ಗೆ ತಮಾಷೆಯಿಂದ ತಾಯ್ನಾಡಿನ ಮಗ, ಪೈಲ್ವಾನ್ ಅಂತ ಕೂಡ ಕರೆದಿದ್ದುಂಟು. ಎಲ್ಲ ಹುಡುಗಿಯರನ್ನು ರಜತ್ ರೇಗಿಸ್ತಾರೆ, ಚೆನ್ನಾಗಿದ್ದೀರಾ ಅಂತ ಹೇಳ್ತಾರೆ ಎಂದು ಕೂಡ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದೂ ಇದೆ.
BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್ ಯು ಅಂದಿದ್ದೆ: ನಟ ತ್ರಿವಿಕ್ರಮ್ ಮುಕ್ತ ಮಾತು!
ಮೂರನೇ ಸ್ಥಾನ ಸಿಕ್ಕಿದೆ.
ಅಂದಹಾಗೆ ಈ ಬಾರಿ ಹನುಮಂತ ಅವರು ʼಬಿಗ್ ಬಾಸ್ ಕನ್ನಡ 11ʼ ಶೋ ವಿಜೇತರಾಗಿದ್ದಾರೆ. ತ್ರಿವಿಕ್ರಮ್ ಅವರು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ರಜತ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ. ರಜತ್ ಅವರು ಈ ಸೀಸನ್‌ನ ಗೇಮ್ ಚೇಂಜರ್ ಎಂದು ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಪಡೆದವರು ಬಹುಬೇಗ ಮನೆಯಿಂದ ಹೊರಗಡೆ ಬರುತ್ತಾರೆ. ಆದರೆ ರಜತ್ ಅವರು ಮೂರನೇ ಸ್ಥಾನ ಪಡೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎನ್ನಬಹುದು. ಮುಂದೆ ರಜತ್ ನಡೆ ಏನು ಎಂದು ಕಾದು ನೋಡಬೇಕಿದೆ.