ರೀಲ್​ ಬಿಟ್ಟು ರಿಯಲ್​ನಲ್ಲೂ ಒಟ್ಟಿಗೇ ಕಾಲ ಕಳೆದ ಸೀತಾ-ರಾಮ: ನಿಜ ಜೀವನದಲ್ಲೂ ಒಂದಾಗಿ ಅಂತಿರೋ ಫ್ಯಾನ್ಸ್​

By Suchethana D  |  First Published Sep 2, 2024, 9:26 PM IST

ರೀಲ್​ ಬಿಟ್ಟು ರಿಯಲ್​ನಲ್ಲೂ ಒಟ್ಟಿಗೇ ಕಾಲ ಕಳೆದ ಸೀತಾ-ರಾಮ: ವಿಡಿಯೋ ಶೇರ್​ ಮಾಡಿದ ವೈಷ್ಣವಿ ಗೌಡ. ಈ ಜೋಡಿಯನ್ನು ನೋಡಿ ಅಭಿಮಾನಿಗಳು ಏನೆಲ್ಲಾ ಹೇಳ್ತಿದ್ದಾರೆ ಕೇಳಿ... 
 


ಸೀತಾರಾಮ ಸೀರಿಯಲ್​ಗೆ ಈಗ ಟ್ವಿಸ್ಟ್​ ಬಂದಿದೆ. ಚಿಕ್ಕಿ ಭಾರ್ಗವಿಯ ಕುತಂತ್ರ ಬಯಲಾಗುತ್ತಿದೆ. ಸಿಹಿಯ ತಲೆ ತುಂಬಿ ಬೋರ್ಡಿಂಗ್​ ಸ್ಕೂಲ್​ಗೆ ಕಳಿಸಿದ್ದು, ಮತ್ತೊಂದು ಮಗು ಬೇಡ ಎಂದು ಹೇಳುವಂತೆ ಆಕೆಯಲ್ಲಿ ವಿಷ ಬೀಜ ಬಿತ್ತುತ್ತಿರುವುದು ಭಾರ್ಗವಿನೇ ಎನ್ನುವ ಸತ್ಯ ತಿಳಿಯುತ್ತಲೇ ಸೀತಾ ಈಗ ಭಾರ್ಗವಿಗೆ ತಿರುಗೇಟು ಕೊಡಲು ಶುರು ಮಾಡಿದ್ದಾಳೆ. ಇದರಿಂದ ಅಭಿಮಾನಿಗಳಿಗೆ ಸೀತಾರಾಮ ಸೀರಿಯಲ್​ ಬಗ್ಗೆ ಈಗ ಮತ್ತಷ್ಟು ಕುತೂಹಲ ಹುಟ್ಟಲು ಶುರುವಾಗಿದೆ. ಇದರ ನಡುವೆಯೇ,  ಸೀತಾ ಮತ್ತು ರಾಮ ಆಗ್ಗಾಗ್ಗೆ ಮಾಡುತ್ತಿರುತ್ತಾರೆ. ಇದೀದ ಸೀತಾರಾಮ ಟೈಟಲ್​ ಸಾಂಗ್​ಗೆ ಇಬ್ಬರೂ ಜೊತೆಯಾಗಿ ಇರುವ ವಿಡಿಯೋ ಅನ್ನು ಸೀತಾ ಉರ್ಫ್​ ವೈಷ್ಣವಿ ಅವರು ಶೇರ್ ಮಾಡಿಕೊಂಡಿದ್ದು, ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಹಲವರು ಹಾರೈಸುತ್ತಿದ್ದಾರೆ.  

ಇನ್ನು ಸೀತಾ ಪಾತ್ರಧಾರಿ ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಅಷ್ಟಕ್ಕೂ ಇವರು ನಟನಾ ಲೋಕಕ್ಕೆ ಕಾಲಿಟ್ಟಿದ್ದೂ ಕುತೂಹಲ ವಿಷಯವಾಗಿದೆ. ಒಮ್ಮೆ ಇವರು  ತಾಯಿಯ ಜೊತೆ ದೇವಸ್ಥಾನಕ್ಕೆ  ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದ್ದರಂತೆ.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  ಇವರ ಕಾಲೇಜು ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.  ಪದವಿ ಅರ್ಧಕ್ಕೆ ಬಿಟ್ಟು, ಬಳಿಕ  ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆ.  ಭರತನಾಟ್ಯ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

Tap to resize

Latest Videos

ಸೀತಾರಾಮ ಸೀತಾ ಮದ್ವೆ ಯಾವಾಗ? ಹುಡುಗ ಯಾರು? ಸಂಪೂರ್ಣ ಡಿಟೇಲ್ಸ್​ ಕೊಟ್ಟ ನಟಿ ವೈಷ್ಣವಿ ಗೌಡ

ಇನ್ನು ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್​,  ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು  ಎರಡು ವರ್ಷ ಓಮನ್‌ ದೇಶದಲ್ಲಿ ಅದಾದ ಬಳಿಕ  ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್​ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು.  2014 ರಲ್ಲಿ ಫೋಟೋಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್​ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು. 

ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್​ ಆಗಲೇ ಇಲ್ಲ. ಸೀರಿಯಲ್​ಗಳಲ್ಲಿ ಆಡಿಷನ್​ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್​ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು  ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು.  ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು.  ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್​ಗೂ ಎಂಟ್ರಿ ಕೊಟ್ಟು ಈಗ  ಸೀತಾರಾಮ ಸೀರಿಯಲ್​ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ.  ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್​ ಅವರು,  ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು  ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ತೆಲಗು ಫ್ಯಾನ್ಸ್​ನಿಂದ ಸೀತಾರಾಮ ನಟಿಗೆ ಸಕತ್​ ಡಿಮಾಂಡ್​! ರೀಲ್ಸ್​ ನೋಡಿ ಸಿನಿಮಾಗೆ ಆಫರ್​..

click me!