ಡ್ರಾಮ ಜೂನಿಯರ್ಸ್‌ ಶೋಯಿಂದ ವಾರ ವಾರವೂ ಬೆಂಗಳೂರಿಗೆ ಬರುತ್ತಿರುವೆ: ನಟಿ ಲಕ್ಷ್ಮಿ

Published : Mar 26, 2022, 04:45 PM IST
ಡ್ರಾಮ ಜೂನಿಯರ್ಸ್‌ ಶೋಯಿಂದ ವಾರ ವಾರವೂ ಬೆಂಗಳೂರಿಗೆ ಬರುತ್ತಿರುವೆ: ನಟಿ ಲಕ್ಷ್ಮಿ

ಸಾರಾಂಶ

ತ್ರಿಕೋನ ಸಿನಿಮಾ ಮತ್ತು ಮಕ್ಕಳ ರಿಯಾಲಿಟಿ ಶೋ ಬಗ್ಗೆ ಮಾತನಾಡಿದ ಹಿರಿಯ ನಟಿ ಲಕ್ಷ್ಮಿ. ವೀಕೆಂಡ್ ಮನೋರಂಜನೆಗೆ ರೆಡಿಯಾಗಿ..... 

80-90ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ನಟಿ ಲಕ್ಷ್ಮಿ ಈಗಲೂ ತಮ್ಮ ನಟನೆ ಮತ್ತು ಮಾತನ ಶೈಲಿಯಿಂದ ಕನ್ನಡಿಗರ ಮನಸ್ಸಿಗೆ ಹತ್ತಿರವಿದ್ದಾರೆ. ಲಕ್ಷ್ಮಿ ಅವರು ತುಂಬಾ ತುಂಬಾ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ವಿಶ್ ಮಾಡುತ್ತಾರೆ. ಡ್ರಾಮ ಜೂನಿಯರ್ಸ್‌ ಶೋ ಆರಂಭದಿಂದಲ್ಲೂ ಲಕ್ಷ್ಮಿ ಅವರು ತೀರ್ಪುಗಾರರಾಗಿದ್ದಾರೆ. ಪ್ರತಿ ವಾರವೂ ಅವರು ಅಲಂಕಾರ ಮಾಡಿಕೊಳ್ಳುವ ರೀತಿ, ಅವರ ಸೀರೆ ಮತ್ತು ಮಾತನಾಡುವ ಶೈಲಿ ನೋಡಬೇಕೆಂದು ತಪ್ಪದೆ ಟಿವಿ ಮುಂದೆ ಅಭಿಮಾನಿಗಳು ಹಾಜರಾಗುತ್ತಾರೆ.

ತ್ರಿಕೋನ ಸಿನಿಮಾ:

'ಕೊರೋನಾ ಪ್ಯಾಂಡಮಿಕ್‌ಗೂ ಮೊದಲೇ ನಾವು ಸಿನಿಮಾ ಚಿತ್ರೀಕರಣ ಮಾಡಿದ್ದು. ಪ್ಯಾಂಡಮಿಕ್‌ ಎಲ್ಲಾ ಮುಗಿದ ಮೇಲೆ ನಾನು ಪರಭಾಷೆ ಸಿನಿಮಾಗಳ ಚಿತ್ರೀಕರಣ ಮಾಡಿದೆ. ನಿರ್ದೇಶಕರು ನನಗೆ ಕಥೆ ಹೇಳಿದ ಶೈಲಿ ಕುತೂಹಲ ಕೆರಳಿಸಿದೆ.  ತುಂಬಾನೇ ಫ್ರೆಶ್‌ ಕಥೆ ಹಾಗೂ ಕೇಳಿದ ತಕ್ಷಣವೇ ಇಷ್ಟ ಆಯ್ತು. ಮನುಷ್ಯ ಅಂದ್ಮೇಲೆ ಪ್ರತಿಯೊಬ್ಬರಿಗೂ ಸಮಸ್ಯೆ ಇರುತ್ತದೆ ಆದರೆ ಪ್ರತಿಯೊಬ್ಬರು ಅದನ್ನು ನಿಭಾಯಿಸುವ ರೀತಿ ಬೇರೆ ಆಗಿರುತ್ತದೆ. ಸಿನಿಮಾ ಈ ವಿಚಾರವನ್ನು ಹೇಳುತ್ತದೆ. ಪ್ರತಿಯೊಂದು ಜನರೇಷನ್‌ ಪ್ರತಿಯೊಂದು ಸಮಸ್ಯೆಯನ್ನು ಡಿಫರೆಂಟ್ ಆಗಿ ನೋಡುತ್ತದೆ. ಡ್ರಾಮ ಜೂನಿಯರ್ಸ್ ಸೀಸನ್ 3 ಚಿತ್ರೀಕರಣ ಮಾಡುವಾಗ ನಿರ್ದೇಶಕರು ನನಗೆ ಕಥೆ ಹೇಳಿದ್ದು. 2019ರಲ್ಲಿ ತುಂಬಾನೇ ಬ್ಯುಸಿಯಾಗಿದ್ದೆ. ನನಗಿದ್ದ ಡೇಟ್‌ಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡಿದ್ದಾರೆ' ಎಂದು ನಟಿ ಲಕ್ಷ್ಮಿ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಡ್ರಾಮಾ ಜೂನಿಯರ್ಸ್ 3 ಗೆದ್ದ ಕುಂದಾನಗರಿ ಕುವರಿ ಸ್ವಾತಿ!

'ಸಿನಿಮಾನ ಮೊದಲು ಚಿತ್ರೀಕರಣ ಮಾಡಿದ್ದು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ. ನನಗೆ ಇಡೀ ತಂಡ ಇಷ್ಟವಾಗಿತ್ತು, ಹೊಸ ನಿರ್ದೇಶಕನಾದರೂ ಯಾವುದೇ ಗೊಂದಲವಿಲ್ಲದೆ ಕೆಲಸ ಮಾಡಿದ್ದಾರೆ. ನಾವು ಕೊಟ್ಟ ದಿನಾಂಕವನ್ನು ವೇಸ್ಟ್‌ ಮಾಡಿಲ್ಲ. ಸಿನಿಮಾ ಬರುವುದು ತಡವಾಗುತ್ತಿರಬಹುದು ಆದರೆ ಒಳ್ಳೆ ಕಥೆ ಆಗಿರುವುದರಿಂದ ಒಳ್ಳೆಯ ರಿಲೀಸ್ ಸಿಗಬೇಕು. ಈಗ ಇದು ಸರಿಯಾದ ಸಮಯ. ವೀಕ್ಷಕರು ವಿಭಿನ್ನ ಕಥೆಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ' ಎಂದು ಲಕ್ಷ್ಮಿ ಅವರು ಹೇಳಿದ್ದಾರೆ. 

'ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡುವವರಿಗೆ ಓಟಿಟಿ ಒಳ್ಳೆಯ ಸಾಥ್ ಕೊಟ್ಟಿದೆ ಏಕೆಂದರೆ ಅವರ ಕೈಯಲ್ಲಿ ಒಳ್ಳೆಯ ಪ್ರಾಡೆಕ್ಟ್‌ ಇದೆ. ಚಿತ್ರಮಂದಿರಕ್ಕೆ ಬಂದು ಕೈ ಸುಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ ಹೀಗಾಗಿ ಅವರ ಟ್ಯಾಲೆಂಟ್‌ನ ತೋರಿಸುವುದಕ್ಕೆ ಇದು ಒಳ್ಳೆಯ ಜಾಗ' ಎಂದು ಓಟಿಟಿ ಬಗ್ಗೆ ಮಾತನಾಡಿದ್ದಾರೆ. 

ನಟಿ ರಚಿತಾ ರಾಮ್ ಕಿಡ್ನ್ಯಾಪ್, ಏರ್‌ಪೋರ್ಟ್‌ನಲ್ಲಿ ಸಿಕ್ಕರು ನಟ ರವಿಚಂದ್ರನ್ ಮತ್ತು ಲಕ್ಷ್ಮಿ!

'ಕೊರೋನಾದಿಂದ ನಮ್ಮ ಶೋನ ನಿಲ್ಲಿಸಬೇಕಾಗಿತ್ತು ಏಕೆಂದರೆ ಈ ಶೋ ಇರುವುದು ಮಕ್ಕಳಿಗೆ. ನಾನು ಈ ಮಾಡುವ ಪ್ರಾಸೆಸ್‌ನ ಮಜಾ ಮಾಡುತ್ತಿರುವೆ ಪ್ರತಿ ವಾರವೂ ಬೆಂಗಳೂರಿಗೆ ಬರುತ್ತಿರುವೆ. ನನ್ನ co- judge ಆಗಿರುವ ರಚಿತಾ ರಾಮ್‌ ಜೊತೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತಿದೆ ಆಕೆ ವಂಡರ್‌ಫುಲ್‌ ಕಿಡ್‌ ಸದಾ ನಗುತ್ತಿರುತ್ತಾರೆ.' ಎಂದಿದ್ದಾರೆ. 

'ನನಗೆ ಜೀವನದಲ್ಲಿ ಒಳ್ಳೆಯ ಪ್ರೀತಿ ಸಿಕ್ಕಿದೆ ನಾನು ಪುಣ್ಯ ಮಾಡಿರುವೆ. ನಾನು ಪ್ರತಿಯೊಂದು ತಂಡದ ಜೊತೆ ಕೆಲಸ ಮಾಡಿದಾಗ ಹೊಸ ವಿಚಾರಗಳನ್ನು ಕಲಿಯುತ್ತಿರುವೆ. ಈಗ ಬಂದಿರುವ ಹೊಸ ಟೆಕ್ನಾಲಜಿ ನನ್ನ ಕೆಲಸವನ್ನು ಇನ್ಟ್ರೆಸ್ಟಿಂಗ್ ಮಾಡಿದೆ. ಮಕ್ಕಳು ತುಂಬಾನೇ ಮುದ್ದು ಅವರು ಈ ವಯಸ್ಸಿನಲ್ಲಿ ಮಾತನಾಡುವುದು ವರ್ತನೇ ಎಲ್ಲವೂ ಚೆನ್ನಾಗಿರುತ್ತದೆ. ನನಗೆ ನಗಲು ಚಾನ್ಸ್‌ ಸಿಕ್ಕಿದ್ರೆ ಸಾಕು ಬಿದ್ದು ಬಿದ್ದು ನಗುತ್ತೇನೆ. ಮಕ್ಕಳ ಜೊತೆ ಶೂಟಿಂಗ್ ಹೋಗಿ ಬಂದರೆ ಸಿಕ್ಕಾಪಟ್ಟೆ ಫ್ರೆಶ್ ಆಗಿರುತ್ತೇನೆ' ಎಂದು ಲಕ್ಷ್ಮಿ ಅವರು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?