ತಾಯಿ ನೆನೆದು ಭಾವುಕರಾದ ಮುನಾವರ್ ಫಾರುಕಿ, ತಬ್ಬಿಕೊಂಡು ಧೈರ್ಯ ಕೊಟ್ಟ ಕರಣ್ ಕುಂದ್ರಾ!

By Suvarna News  |  First Published Mar 26, 2022, 2:49 PM IST

ಇತರ ಸ್ಪರ್ಧಿಗಳು ಪೋಷಕರ ಜೊತೆ ಮಾತನಾಡುತ್ತಿರುವುದನ್ನು ನೋಡಿ ಭಾವುಕರಾದ ಮುನಾವರ್ ಫಾರುಕಿ. ಇಡೀ ದೇಶವೇ ನಿನ್ನ ಜೊತೆಗಿದ ಎಂದ ಕರಣ್. 


ಗುಜರಾತಿ ಕುಟುಂಬಕ್ಕೆ ಸೇರಿದ ಮುಸ್ಲಿಂ ಸ್ಟ್ಯಾಂಡಪ್‌ ಕಾಮಿಡಿಯನ್ ಮುನಾವರ್‌ ಖಾಸಗಿ ಕಾರ್ಯಕ್ರಮದಲ್ಲಿ ಹಾಸ್ಯ ಮಾಡುವಾಗ ಒಂದು ಸಮುದಾಯವನ್ನು ನಿಂಧಿಸಿದ್ದಾರೆಂದು ಇನ್‌ಡೋರ್‌ ಜೈಲಿನಲ್ಲಿ ಒಂದು ತಿಂಗಳು ಕಳೆದರು. ಜೀವನವೇ ಸಾಕಪ್ಪ ಹಾಸ್ಯ ಇಷ್ಟರ ಮಟ್ಟಕ್ಕೆ ಜೀವನ ಹಾಳು ಮಾಡುತ್ತದೆ ಎಂದು ಕೂತಿದ್ದ ಮುನಾವರ್‌ಗೆ ದೊಡ್ಡ ಅವಕಾಶ ಕೊಟ್ಟಿದ್ದು ಏಕ್ತಾ ಕಪೂರ್ ಮತ್ತು ಕಂಗನಾ ಲಾಕಪ್ ರಿಯಾಲಿಟಿ ಶೋ. 'Joke Gone Wrong' ವಿಭಾಗದಿಂದ ಮುನಾವರ್ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದಾರ. 

ಲಾಕಪ್ ಕಾರ್ಯಕ್ರಮದಲ್ಲಿ ಮುನಾವರ್ ಫಾರುಕಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ, ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದಾರೆ. ನಾಮಿನೇಟ್ ಆದರೂ ಲಕ್ಷಾಂತರ ಜನರು ವೋಟ್ ಮಾಡಿ ಸೇವ್ ಮಾಡುತ್ತಿದ್ದಾರೆ. ಕಳೆದು ಎರಡು ಮೂರು ದಿನಗಳಿಂದ ಆರೇಂಜ್‌ ಮತ್ತು ಬ್ಲೂ ಟೀಂ ನಡುವೆ ಸ್ಪರ್ಧೆ ನಡೆಯುತ್ತಿದೆ. ಟಾಸ್ಕ್‌ನಲ್ಲಿ ಗೆದ್ದವರು ಬಜರ್ ಹೊಡೆದು ತಮ್ಮ ಫ್ಯಾಮಿಲಿ ಜೊತೆ ಮಾತನಾಡುವ ಅವಕಾಶ ಪಡೆದುಕೊಳ್ಳಬಹುದು ಎಂದು ಕರಣ್ ಕುಂದ್ರಾ ಹೇಳುತ್ತಾರೆ. ಇಡೀ ಆರೇಂಜ್‌ ಟೀಂ ಆಲಿ ಮರ್ಚೆಂಟ್‌ ಬಜರ್ ಹೊಡೆಯುವುದಕ್ಕೆ ಅವಕಾಶ ನೀಡುತ್ತಾರೆ. 

Tap to resize

Latest Videos

ಆಲಿ ಮರ್ಚೆಂಟ್ ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಮತ್ತು ತಾಯಿಗೂ ಆರೋಗ್ಯ ಸಮಸ್ಯೆಗಳಿದೆ. ಹೀಗಾಗಿ ಅವರಿಬ್ಬರೂ ಮಾತನಾಡುವಾಗ ಮನೆಯಲ್ಲಿದ್ದ ಪ್ರತಿಯೊಬ್ಬ ಸ್ಪರ್ಧಿನೂ ಭಾವುಕರಾಗಿದ್ದಾರೆ. ಪಕ್ಕದಲ್ಲಿದ್ದ ಮುನಾವರ್ ಫಾರುಕಿ ಜೋರಾಗಿ ಅಳುವುದಕ್ಕೆ ಶುರು ಮಾಡುತ್ತಾರೆ. 'ನನಗೆ ಈ ರೀತಿ ಯಾರೂ ಕರೆ ಮಾಡುವುದಿಲ್ಲ ನನಗೆಂದು ಯಾರೂ ಇಲ್ಲ ನನಗೆ  ಯಾರ ಧ್ವನಿ ಕೂಡ ಬರುವುದಿಲ್ಲ' ಎಂದು ಹೇಳಿದ್ದಾರೆ. ತಕ್ಷಣವೇ ಕರಣ್ ಕುಂದ್ರಾ ಮುನಾವರ್ ಫಾರುಕಿನ ತಬ್ಬಿಕೊಳ್ಳುತ್ತಾರೆ. ಗಟ್ಟಿಯಾಗಿ ತಬ್ಬಿಕೊಂಡು ಧೈರ್ಯ ತಂಬುವ ದೃಶ್ಯ ವೀಕ್ಷಕರ ಮನಸ್ಸು ಮುಟ್ಟಿದೆ. 

Munawar Faruqui: ಬೆಂಗಳೂರು ನಂತರ ಮುನಾವರ್ ಮತ್ತೊಂದು ಶೋ ಕ್ಯಾನ್ಸಲ್, ಮುನಾವರ್ ವಿರುದ್ಧ BJP ದೂರು

'ನೀನು ನಕ್ಕಾಗ ಇಡೀ ದೇಶವೇ ನಗುತ್ತದೆ. ಇವತ್ತು ನೀನು ಅಳುತ್ತಿರುವೆ, ನಿನ್ನ ಜೊತೆ ನಾನು ಮತ್ತು ಇಡೀ ದೇಶವೇ ಆಳುತ್ತಿದೆ. ನೀನು ಸ್ವೀಟ್‌ ಹಾರ್ಟ್‌ ಆಳಬೇಡ. ನಿನಗೆ ಕರೆ ಮಾಡಲು ಜನರು ಕಾಯುತ್ತಿದ್ದಾರೆ. 24 ಗಂಟೆಗಳ ಕಾಲ ನಿನ್ನನ್ನು ಟಿವಿ ಮೂಲಕ ನೋಡುತ್ತಿದ್ದಾರೆ. ಅವರು ನಿನ್ನ ಪರವಾಗಿದ್ದಾರೆ. ಇಡೀ ದೇಶವೇ ನಿನ್ನ ಖುಷಿ ಮತ್ತು ಯಶಸ್ಸಿಗೆ ಪ್ರಾರ್ಥನೆ ಮಾಡುತ್ತಿದೆ' ಎಂದು ಕರಣ್ ಕುಂದ್ರಾ ಹೇಳಿದ್ದಾರೆ.

ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?

ಕರಣ್ ಮಾತುಗಳನ್ನು ಮನೆಯಲ್ಲಿದ್ದವರು ಮೆಚ್ಚಿಕೊಂಡಿದ್ದಾರೆ. ' ಪಾಯಲ್ ಮತ್ತು ಮುನಾವರ್ ಫಾರುಕಿ ಜೊತೆ ಕರಣ್ ಅದ್ಭುತವಾಗಿ ಮಾತನಾಡಿದ್ದಾರೆ. ಇಡೀ ಸಂದರ್ಭವನ್ನು ಚೆನ್ನಾಗಿ ಮ್ಯಾನೇಜ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಇಷ್ಟೊಂದು ಸ್ವೀಟ್ ಎಂದು ಗೊತ್ತಿರಲಿಲ್ಲ. ಬಿಬಿ ಮನೆಯಲ್ಲೂ ಕೂಡ ಕರಣ್‌ಗೆ ಸಪೋರ್ಟ್‌ ಮಾಡುವವರು ಇದ್ದರೆ ಅವನು ಕೂಡ ಟ್ರೋಫಿ ಗೆಲ್ಲುತ್ತಿದ್ದ' ಎಂದು ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. 

 ಮುನಾವರ್ ಫಾರುಕಿ ಅವರ ತಾಯಿ 2002ರಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.  16 ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ಜೀವನದಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸಿದ್ದಾರೆ. ಗುಜರಾತಿನಲ್ಲಿ ನಡೆದ communal riotsನಲ್ಲಿ ಮುನಾವರ್ ಮನೆ ಕಳೆದುಕೊಂಡರು.  ಮುಂಬೈಗೆ ಇಡೀ ಕುಟುಂಬ ಶಿಫ್ಟ್‌ ಆಗಿತ್ತು. 

click me!