ಆ ಪ್ರಸಾದ ತಿನ್ನುತ್ತಿದ್ದಂತೆ ಲೈಫ್‌ನಲ್ಲಿ ನಡೆದ ಪವಾಡ ಬಿಚ್ಚಿಟ್ಟ ಕನ್ನಡದ ಖ್ಯಾತ ಕಿರುತೆರೆ ನಟಿ ಇಳಾ ವಿಟ್ಲ

Published : May 03, 2025, 11:28 PM ISTUpdated : May 05, 2025, 11:17 AM IST
ಆ ಪ್ರಸಾದ ತಿನ್ನುತ್ತಿದ್ದಂತೆ ಲೈಫ್‌ನಲ್ಲಿ ನಡೆದ ಪವಾಡ ಬಿಚ್ಚಿಟ್ಟ ಕನ್ನಡದ ಖ್ಯಾತ ಕಿರುತೆರೆ ನಟಿ ಇಳಾ ವಿಟ್ಲ

ಸಾರಾಂಶ

ಶಿವಣ್ಣನ ಆರೋಗ್ಯಕ್ಕಾಗಿ ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಗೆಳೆಯನಿಂದ ಇಳಾ ವಿಟ್ಲಗೆ ಪ್ರಸಾದ ಸಿಕ್ಕಿತು. ಕಾಲುನೋವಿನಿಂದ ಬಳಲುತ್ತಿದ್ದ ಇಳಾ, ಪ್ರಸಾದ ಸೇವಿಸಿದ ಬಳಿಕ ನೋವು ಮಾಯವಾಯಿತು. ಇದನ್ನು ಕೊರಗಜ್ಜನ ಪವಾಡ ಎಂದು ನಂಬಿರುವ ಅವರು, ಆರೋಗ್ಯವೇ ಸಾಕು ಎಂದಿದ್ದಾರೆ.

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಇಳಾ ವಿಟ್ಲ ಅವರು ಕೊರಗಜ್ಜನ ಪವಾಡದಿಂದ ಕಾಲು ನೋವು ಮಂಗಮಾಯ ಆದ ಬಗ್ಗೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಶಿವಣ್ಣನಿಗೋಸ್ಕರ ಹರಕೆ ಹೊತ್ತಿದ್ರು! 
“ಪಾತೂರ್ ಸರ್ ಅಂತ ಒಬ್ಬರು ನನ್ನ ಫ್ರೆಂಡ್ ಇದ್ದಾರೆ, ನನಗೆ ಅವರು ತುಂಬಾ ಆತ್ಮೀಯರು. ಅವರು ಕೊರಗಜ್ಜನ ಭಕ್ತರು. ಶಿವರಾಜ್‌ಕುಮಾರ್ ಅವರಿಗೆ ಹುಷಾರಿಲ್ಲದಿದ್ದಾಗ ಇಲ್ಲಿಗೆ ಬಂದು ಹರಕೆ ಹೊತ್ತಿದ್ದರು. ಶಿವಣ್ಣನಿಗೆ ಬೇಗ ಹುಷಾರಾಗಲಿ, ಏನು ಆಗೋದು ಬೇಡ ಅಜ್ಜ ಎಂದು ಬೇಡಿಕೊಂಡಿದ್ದರು. ಶಿವರಾಜ್‌ಕುಮಾರ್ ಆರಾಮವಾಗಿ ಆಪರೇಷನ್ ಆಗಿ ಬಂದ್ರೆ ನಾನಿಲ್ಲಿ ಏನು ನಿನಗೆ ನಿನಗೆ ಹರಕೆ ಹೊತ್ತುಕೊಂಡಿದ್ದೇನೆ, ಅದನ್ನು ನೆರವೇರಿಸ್ತೀನಿ ಎಂದು ಅವರು ದೇವರ ಬಳಿ ಹೇಳಿಕೊಂಡಿದ್ದರು” ಎಂದು ನಟಿ ಇಳಾ ವಿಟ್ಲ ಹೇಳಿದ್ದಾರೆ. 

ನನಗೆ ಕೊರಗಜ್ಜನ ಪ್ರಸಾದ ಸಿಕ್ಕಿತು! 
“ಶಿವಣ್ಣನಿಗೆ ಕಡಿಮೆ ಆದ್ಮೇಲೆ, ಗುಣಮುಖರಾದಮೇಲೆ ಇವರು ಬಂದು ಇಲ್ಲಿ ಹರಕೆ ತೀರಿಸಿದ್ದರು. ಅವ್ರಿಗೆ ಶಿವಣ್ಣನಿಗೆ ಇಲ್ಲಿನ ಪ್ರಸಾದ ಕೊಡೋಕೆ ಮುಜುಗರ. ಅಜ್ಜನ ಪ್ರಸಾದ ಯಾರಿಗೆ ಕೊಡಬೇಕು? ಅಜ್ಜನನ್ನು ಯಾರು ನಂಬುತಾರೆ ಅವರಿಗೆ ಕೊಡಬೇಕು ಎಂದು ಪಾತೂರ್‌ ಸರ್‌ ನಂಬಿದ್ದರು. ಯಾರಿಗೆ ಪ್ರಸಾದ ಕೊಡೋದು ಅಂತ ಪಾತೂರ್‌ ಸರ್‌ ಅವರು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಅಂದುಕೊಂಡಾಗ ಅವರಿಗೆ ನನ್ನ ನೆನಪಾಯ್ತು. ನನಗೆ ಫೋನ್‌ ಮಾಡಿ, ಅಜ್ಜನ ಪ್ರಸಾದ ಇದೆ, ತಿನ್ನುತ್ತೀರಾ ಅಂತ ಕೇಳಿದ್ದರು. ನಾನು ಎಲ್ಲಿದ್ದೀರಾ, ಬೇಗ ಸಿಗಿರಿ, ನಾನು ಪ್ರಸಾದ ತಿನ್ನಬೇಕು ಎಂದು ಹೇಳಿದೆ. ನಾನು ಅಜ್ಜನನ್ನು ನಂಬುತ್ತಿದ್ದೆ” ಎಂದು ಇಳಾ ವಿಟ್ಲ ಹೇಳಿದ್ದಾರೆ. 

ನೆಗೆಟಿವ್‌ ಎನರ್ಜಿ ಮಂಗಮಾಯ ಆಯ್ತು! 
“ನನಗೆ ಕೆಟ್ಟ ಕಾಲನೋವು ಇತ್ತು. ಯಾಕೆ ನನಗೆ ಕಾಲನೋವು ಶುರುವಾಯ್ತು ಅಂತ ಗೊತ್ತಿಲ್ಲ. ಅದಂತೂ ಕೆಟ್ಟ ಕಾಲನೋವು. ನೆಗೆಟಿವ್ ಎನರ್ಜಿ ಅಂತಾರಲ್ಲ ಆ ಥರ ಇತ್ತು. ಯಾರೋ ಬಂದು ಹಿಡ್ಕೊಂಡವರ ತರ ಥರ ಕಾಲು ನೋವು ಇತ್ತು. ಕಾಲು ಇಡೋದಿಕ್ಕೂ ಆಗುತ್ತಿರಲಿಲ್ಲ. ಆ ಚಕ್ಕುಲಿ ಪ್ರಸಾದ ಮೂರು ತಿಂದ ತಕ್ಷಣ ನನ್ನ ಕಾಲು ನೋವು ಹೋಯ್ತು. ಇದನ್ನು ನಂಬುವವರು ನಂಬುತ್ತಾರೆ. ಆ ಪ್ರಸಾದ ತಿಂದಕೂಡಲೇ ನನ್ನ ಮೈಯೊಳಗಿದ್ದ ನೆಗೆಟಿವ್‌ ಎನರ್ಜಿ ಮಂಗಮಾಯ ಆಗಿತ್ತು. ಪಾತೂರ್‌ ಸರ್‌ಗೆ ಒಳ್ಳೆಯದಾಗಲಿ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಇದು ನಿಜಕ್ಕೂ ದೊಡ್ಡ ಪವಾಡ. ಆರೋಗ್ಯವಾಗಿದ್ದರೆ ಅಷ್ಟೇ ಸಾಕು, ಕೊರಗಜ್ಜನ ಬಳಿ ಇನ್ನೂ ಹೆಚ್ಚು ನಾನು ಏನೂ ಕೇಳೋದಿಲ್ಲ” ಎಂದು ಇಳಾ ವಿಟ್ಲ ಹೇಳಿದ್ದಾರೆ.  

ನಟಿ ಇಳಾ ವಿಟ್ಲ ಅವರು ಉದಯ ವಾಹಿನಿಯ ʼಕಾದಂಬರಿʼ ಧಾರಾವಾಹಿಯಲ್ಲಿ ತಾರಾ ಪಾತ್ರದಲ್ಲಿ ನಟಿಸಿದ್ದರು. ಕನ್ನಡ ಕಿರುತೆರೆಯ ಖ್ಯಾತ ವಿಲನ್‌ ಪಾತ್ರಧಾರಿ ಇವರು ಎಂದರೆ ತಪ್ಪಾಗಲಾರದು. ಇನ್ನು ಇಳಾ ವಿಟ್ಲ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಆಕ್ಟಿಂಗ್‌ ಕ್ಲಾಸ್‌ ನಡೆಸಿದ್ದಾರೆ. ಇಳಾ ವಿಟ್ಲ ಅವರು ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಗಟ್ಟಿದನಿಯಲ್ಲಿ ಮಾತನಾಡುವವರಲ್ಲಿ ಇವರೂ ಕೂಡ ಒರ್ವರು.

ಇತ್ತೀಚೆಗೆ ಅವರು ʼಶಾಂತಿ ನಿವಾಸʼ, ʼಯಜಮಾನʼ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ವರ್ಷಗಳ ಬಳಿಕ ಅವರು ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಿದ್ದಾರೆ. ಇಳಾ ವಿಟ್ಲ ನಟನೆಗೆ ದೊಡ್ಡ ಅಭಿಮಾನಿ ಬಳಗವಿದೆ, ಕಣ್ಣಿನಲ್ಲೇ ಅವರು ಎಲ್ಲವನ್ನು ವ್ಯಕ್ತಪಡಿಸುವ ಚಾಕಚಕ್ಯತೆ ಇದೆ ಎಂದು ಹೇಳಬಹುದು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ