ಇದೇನಿದು ಸೀರಿಯಲ್​ ಟ್ವಿಸ್ಟು? ಗೆಟಪ್ಪೇ ಚೇಂಜಾಯ್ತು! ತುಳಸಿ ಬಿಟ್ಟು ಶಾರ್ವರಿ ಹಿಂದೆ ಹೋದ ಮಾಧವ್​

Published : May 03, 2025, 09:55 PM ISTUpdated : May 05, 2025, 11:36 AM IST
ಇದೇನಿದು ಸೀರಿಯಲ್​ ಟ್ವಿಸ್ಟು? ಗೆಟಪ್ಪೇ ಚೇಂಜಾಯ್ತು! ತುಳಸಿ ಬಿಟ್ಟು ಶಾರ್ವರಿ ಹಿಂದೆ ಹೋದ ಮಾಧವ್​

ಸಾರಾಂಶ

"ಶ್ರೀರಸ್ತು ಶುಭಮಸ್ತು" ಧಾರಾವಾಹಿ ಅಂತಿಮ ಘಟ್ಟದಲ್ಲಿದೆ. ಶಾರ್ವರಿಯ ಕುತಂತ್ರ ಬಯಲಾಗುತ್ತಿದ್ದು, ಮಾಧವ್ ಮತ್ತು ಅವಿಗೆ ಮಾತ್ರ ತಿಳಿದಿಲ್ಲ. ಧಾರಾವಾಹಿ ತಾರೆಯರು ವಿಭಿನ್ನ ಗೆಟಪ್‌ನಲ್ಲಿ "ಸ್ಮೈಲ್ ಒರೆ ಸ್ಮೈಲ್" ಹಾಡಿಗೆ ರೀಲ್ಸ್ ಮಾಡಿದ್ದಾರೆ. ದೀಪಿಕಾ ಪಾತ್ರಧಾರಿ ದರ್ಶಿನಿ ಡೆಲ್ಟಾ, ನೃತ್ಯ ನಿರ್ದೇಶಕಿಯೂ ಹೌದು. ತುಳಸಿ ಮತ್ತು ಶಾರ್ವರಿ ನಡುವಿನ ಕಾದಾಟ ತಾರಕಕ್ಕೇರಿದೆ.

 ಶ್ರೀರಸ್ತು ಶುಭಮಸ್ತು ಸೀರಿಯಲ್​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿಯುತ್ತಿದೆ. ಇನ್ನು ಮಾಧವ್​  ಮತ್ತು ಅವಿಗೆ ತಿಳಿಯುವುದು ಒಂದೇ ಬಾಕಿ ಇದೆ. ಅದು ಕೂಡ ತಿಳಿಯುವ ಕಾಲವೂ ಕೂಡಿ ಬಂದಿದೆ. ಇನ್ನು ಎಳೆಯದಿದ್ದರೆ ಸೀರಿಯಲ್ ಇನ್ನು ಕೆಲವೇ ದಿನಗಳಲ್ಲಿ ಮುಗಿಸಬಹುದಾಗಿದೆ. ಆದರೆ ಇದರ ನಡುವೆಯೇ ಇದೀಗ ಇನ್ನೊಂದು ಟ್ವಿಸ್ಟ್​ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಮಾಧವ್​, ಶಾರ್ವರಿ, ದೀಪಿಕಾ, ಪೂರ್ಣಿಮಾ, ಅವಿ ಮತ್ತು ಅಭಿ ಎಲ್ಲರೂ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧವ್​ ತುಳಸಿಯ ಹಿಂದೆ ಹೋಗೋದು ಬಿಟ್ಟು ಶಾರ್ವರಿಯ ಹಿಂದೆ ಬಿದ್ದಿದ್ದಾನೆ! ಇದೇನಿದು ಟ್ವಿಸ್ಟ್​ ಅಪ್ಪಾ ಎಂದುಕೊಂಡ್ರಾ?

ಅಷ್ಟಕ್ಕೂ ಇದು ಸೀರಿಯಲ್​ನ ಲೈಫ್ ಅಲ್ಲ. ಬದಲಿಗೆ ರಿಯಲ್​ ಲೈಫ್​. ಸೀರಿಯಲ್​ ತಾರೆಯರು ತಮಗೆ ಬಿಡುವಾಗಿದ್ದಾಗಲೆಲ್ಲಾ ರೀಲ್ಸ್​ ಮಾಡುವುದು ಇದ್ದೇ ಇದೆ.ಅದರಲ್ಲಿಯೂ ಕೆಲವರು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವುದು ಇದೆ. ಅದರಲ್ಲಿ ಒಬ್ಬರು ದೀಪಿಕಾ ಪಾತ್ರಧಾರಿ ನಟಿ ದರ್ಶಿನಿ ಡೆಲ್ಟಾ. ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ, ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದವನ ಬಗ್ಗೆ ತಿಳಿಸಿದ ಶ್ರೀರಸ್ತು ಶುಭಮಸ್ತು ದೀಪಿಕಾ!

ಇವರ ಜೊತೆ ಮಾಧವ್​ ಪಾತ್ರಧಾರಿ ಅಜಿತ್​ ಹಂದೆ, ಶಾರ್ವರಿ ಪಾತ್ರಧಾರಿ ಸ್ವಪ್ನಾ ದೀಕ್ಷಿತ್, ಅವಿ ಮತ್ತು ಅಭಿ ಪಾತ್ರಧಾರಿ ಅರ್ಫಾತ್ ಶರೀಫ್ ಮತ್ತು ನಕುಲ್ ಶರ್ಮಾ ಹಾಗೂ ಪೂರ್ಣಿ ಪಾತ್ರಧಾರಿ ಲಾವಣ್ಯ ಭಾರಧ್ವಾಜ್​ ಸಕತ್​ ರೀಲ್ಸ್​  ಮಾಡಿದ್ದಾರೆ. ಸ್ಮೈಲ್​ ಒರೆ ಸ್ಮೈಲ್​ ಹಾಡಿಗೆ ಎಲ್ಲರೂ ರೀಲ್ಸ್​  ಮಾಡಿದ್ದಾರೆ. ಕುತೂಹಲದ ಸಂಗತಿ ಏನೆಂದರೆ, ಇದರಲ್ಲಿ ಎಲ್ಲರೂ ಡಿಫರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಮಿನಿ ಸ್ಕರ್ಟ್​ ಧರಿಸಿದ್ದರೆ, ಪೂರ್ಣಿ ಪ್ಯಾಂಟ್​ ಹಾಕಿದ್ದಾಳೆ. ಇನ್ನು ಶಾರ್ವರಿ ಕುರ್ತಾ ಹಾಕಿಕೊಂಡಿದ್ದರೆ, ಮಾಧವ್​, ಅವಿ ಅಭಿ ಕೂಡ ಫುಲ್ ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ರೀಲ್ಸ್​ಗೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಇಂಥ ವಿಡಿಯೋ ಇನ್ನಷ್ಟು ಮಾಡಿ ಎಂದು ಒತ್ತಾಯ ಕೇಳಿಬರುತ್ತಿದೆ.  

ಇನ್ನು ಶ್ರೀರಸ್ತು, ಶುಭಮಸ್ತು ಸೀರಿಯಲ್​ ವಿಷಯಕ್ಕೆ ಬರುವುದಾದರೆ,  ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ.  ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.  ಅದೇ ಇನ್ನೊಂದೆಡೆ,  ಸಮರ್ಥ್​, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. 

ಶ್ರೀರಸ್ತು ಶುಭಮಸ್ತು ಶೂಟಿಂಗ್​ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್