
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗಳಿಂದಲೇ ಬೆಳ್ಳಿ ಪರದೆಗೆ ಕಾಲಿಟ್ಟ ಅದಿತಿ ಈಗ ರಾಜಾ ರಾಣಿ ಸೀಸನ್ 3ರ ತೀರ್ಪುಗಾರ್ತಿ ಆಗಿದ್ದಾರೆ. ವಾರಕ್ಕೆ ಒಂದೆರಡು ದಿನ ಶೂಟಿಂಗ್ ಇದ್ದರೂ ಇಡೀ ದಿನ ನಡೆಯುತ್ತದೆ. ಪುಟ್ಟ ಮಗುವಿನೊಂದು ಫ್ಯಾಮಿಲಿ ಮ್ಯಾನೇಜ್ ಮಾಡುತ್ತಿರುವ ಅದಿತಿ ಬಗ್ಗೆ ಮೆಚ್ಚುಗೆಯ ಮಾತುಗಳು.....
ನಿನ್ನ ಜೊತೆ ರಾಜಾ ರಾಣಿ ಸೀಸನ್ 3 ಚಿತ್ರೀಕರಣಕ್ಕೆ ಬಂದಿರುವ ಖುಷಿ ಇದೆ ಏಕೆಂದರೆ ನೀನು ಸದಾ ಓಡಾಡಿಕೊಂಡು ಪಟ್ಟ ಮಾತನಾಡಿಕೊಂಡು ಕೆಲಸ ಮಾಡುವ ಹುಡುಗಿ ಆದರೆ ಸ್ವಲ್ಪ ದಿನ ಕೈ ಬಾಯಿ ಕಟ್ಟಿದಂತೆ ಆಗಿಬಿಟ್ಟಿತ್ತು. ಪ್ರೋಮೋ ಶೂಟಿಂಗ್ ಸಮಯಲ್ಲಿ ಕಳೆ ಕಾಣುತ್ತಿತ್ತು ಆದರೆ ಮೊದಲ ದಿನದ ಚಿತ್ರೀಕರಣದಂದು ಕಳೆ ಇನ್ನು ಎದ್ದು ಕಾಣುತ್ತಿದೆ. ನೀನು ಮತ್ತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾನೇ ಖುಷಿಯಾಗಿದೆ. ಕಲರ್ಸ್ ಅವರು ಇನ್ನು ಒಂದೆರಡು ಕಪಲ್‌ಗಳನ್ನು ಸೇರಿಸಬಹುದು ಅಂದ್ರೆ ನಮ್ಮ ನಿಮ್ಮ ಅಪ್ಪ ಅಮ್ಮ ಅವರನ್ನು ಕಳುಹಿಸೋಣ. ಪರಿಹಾರ ಸಿಗದೆ ತೊಂದರೆಗಳಿಗೆ ಪರಿಹಾರ ಸಿಗಬಹುದು ಎಂದು ಅದಿತಿ ಪತಿ ಯಶಸ್ ಯೂಟ್ಯೂಬ್‌ನಲ್ಲಿ ಮಾತನಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡ ಯಾರು?
ಅದಿತಿ ಚಿತ್ರೀಕರಣ ಆರಂಭಿಸುವುದು ತುಂಬಾನೇ ಖುಷಿ ಇದೆ. ರಾಜಾ ರಾಣಿ ಸೀಸನ್ 3ರ ತೀರ್ಪುಗಾರ್ತಿ ಸ್ಥಾನದಲ್ಲಿ ಇರುವುದಕ್ಕೆ ಅರ್ಹತೆ ಇದೆ. ನಾವು ಬಾಣಂತಿ ಆಗಿದ್ದಾಗ ಮೂರ್ನಾಲ್ಕು ತಿಂಗಳು ಓಡಾಡುತ್ತಿರಲಿಲ್ಲ ಆದರೆ ನೀನು 15 ದಿನವೂ ರೆಸ್ಟ್ ತೆಗೆದುಕೊಂಡಿಲ್ಲ. ಈ ಹುಡುಗಿ ತುಂಬಾ ಟ್ಯಾಲೆಂಟ್ ಇದೆ ಸುಮ್ಮನೆ ಮನೆಯಲ್ಲಿ ಕೂರಿಸಿಕೊಂಡಿದ್ದೀವಿ ಅನ್ನೋ ಬೇಸರ ತುಂಬಾನೇ ಇತ್ತು ಏಕೆಂದರೆ ಸಣ್ಣ ಯೂಟ್ಯೂಬ್ ವ್ಲಾಗ್ ಮಾಡುವಾಗಲೇ ಹೆಚ್ಚಿನ ಶ್ರಮ ಹಾಕುವೆ ಅಲ್ಲದೆ ನಾನು ಹೊರಗಡೆ ಇದ್ದಾಗ ಅನೇಕರು ಸಿಕ್ಕಾಗ ಅದಿತಿ ಎಷ್ಟು ಇಷ್ಟವಾಗುತ್ತಾಳೆ ಎಂದು ಹೇಳಿದನ್ನು ಕೇಳಿ ಖುಷಿಯಾಗುತ್ತದೆ. ತುಂಬಾ ಹೆಮ್ಮೆ ಪಡುವ ವಿಚಾರ ಎಂದು ಅದಿತಿ ಅತ್ತೆ ಮಾತಾಡಿದ್ದಾರೆ.
N ಮತ್ತು C ಅಕ್ಷರದವರು ಮದ್ವೆ ಆದ್ರೆ ಹೊಂದಾಣಿಕೆ ಇರಲ್ಲ ಡಿವೋರ್ಸ್ ಆಗುತ್ತೆ: ಮುನ್ಸೂಚನೆ ಕೊಟ್ಟಿದ್ರಾ ಪ್ರಶಾಂತ್
ನನ್ನ ಮಗಳು ಚಿತ್ರೀಕರಣಕ್ಕೆ ಹೋಗುತ್ತಿರುವುದರಿಂದ ಮಗು ಒಂದು ದಿನ ನನಗೆ ಸಿಗುತ್ತದೆ ಇಲ್ಲವಾದರೆ ನಾನು ಮಗು ನೋಡಿಕೊಳ್ಳಬೇಕು ನಾನು ಕೆಲಸ ಮಾಡಬೇಕು ಎನ್ನುತ್ತಾರೆ ಅದಿತಿ ಎಂದು ತಾಯಿ ಹೇಳಿದ್ದಾರೆ.
ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆ ಮತ್ತು ಮಗು ಆದ ಮೇಲೆ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಎನೋ ಕೆಲಸ ಮಾಡುತ್ತಿರುತ್ತೀವಿ ಮದ್ವೆ ಆದ್ಮೇಲೆ ಮತ್ತೊಂದು ಜಾಗಕ್ಕೆ ಹೋಗಬೇಕು ಅದಾಗಿ ಮಗು ಆದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಪೂರ್ಣ ಬದಲಾಗುತ್ತೀವಿ. ಒಬ್ರೆ ಎಲ್ಲ ಕೆಲಸ ಮಾಡಲು ಸಾಧ್ಯವಾಗುವಿದಿಲ್ಲ ಇದಕ್ಕೆ ಫ್ಯಾಮಿಲಿ ಸಪೋರ್ಟ್ ಮುಖ್ಯ. ನನ್ನ ಮಗಳು ನಗುತ್ತಾ ಖುಷಿಯಾಗಿರುತ್ತದೆ ಏನೋ ಸಮಸ್ಯೆ ಕೊಡುವುದಿಲ್ಲ ಎಂದಿದ್ದಾರೆ ಅದಿತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.