ಗಂಡ ಮತ್ತು ಹೆಂಡ್ತಿ ನಡುವೆ ಲವ್ ಜಾಸ್ತಿಯಾದಾಗ ಪರಸ್ಪರ ಹೇಗೆಲ್ಲಾ ಕರೆದುಕೊಳ್ತಾರೆ? ರಾಜಾ ರಾಣಿ ರೀಲೋಡೆಡ್ ಸ್ಪರ್ಧಿಗಳು ಹೇಳಿದ್ದೇನು ನೋಡಿ.
ಗಂಡನಿಗೆ ಹೆಂಡ್ತಿ ಮೇಲೆ ಅಥ್ವಾ ಹೆಂಡ್ತಿಗೆ ಗಂಡನ ಮೇಲೆ ಲವ್ ಜಾಸ್ತಿಯಾದಾಗ ಚಿನ್ನಾ, ಮುದ್ದು, ಬಂಗಾರ, ಡಾರ್ಲಿಂಗ್, ಮೈ ಲವ್ ಅಂತೆಲ್ಲಾ ಕರೆಯುವವರು ಸಾಕಷ್ಟು ಮಂದಿ ಇದ್ದಾರೆ. ಇನ್ನು ಕೆಲವರು ಕತ್ತೆ, ಕೋತಿ, ಗೂಬೆ, ಮಂಗ, ಕುನ್ನಿ... ಹೀಗೆ ಏನೇನೋ ಪ್ರಾಣಿಗಳ ಹೆಸರನ್ನೂ ಕರೆಯುತ್ತಾರೆ. ಕೆಲವರು ಹೀಗೆ ಪ್ರೀತಿಯಿಂದ ಕರೆಯುತ್ತಿದ್ದರೆ, ಮತ್ತೆ ಕೆಲವರಿಗೆ ಇದೇನಿದು ಅಸಹ್ಯ ಎನಿಸಲೂಬಹುದು. ಆದರೆ ಅದು ಅವರವರ ಪ್ರೀತಿಗೆ ಬಿಟ್ಟಿದ್ದು, ಪರಸ್ಪರ ಅರ್ಥ ಮಾಡಿಕೊಂಡಿರುವುದಕ್ಕೆ ಸಂಬಂಧ ಪಟ್ಟಿದ್ದು. ಮದುವೆಯಾದ ಹೊಸತರಲ್ಲಿ ಇಂಥ ಬಗೆ ಬಗೆ ಸೈಡ್ ಹೆಸರುಗಳು ಚಾಲ್ತಿಯಲ್ಲಿ ಇದ್ದರೂ ಕ್ರಮೇಣ ಅದು ಕಮ್ಮಿಯಾಗುವುದೂ ಹಲವು ಕುಟುಂಬಗಳಲ್ಲಿ ಇದದ್ದೇ. ಅದರೆ ಕೆಲವು ದಂಪತಿ ಮಾತ್ರ ಮದುವೆಯಾಗಿ ಎಷ್ಟೇ ವರ್ಷವಾಗಿದ್ದರೂ ತಮ್ಮ ಈ ಆರಂಭದ ಪ್ರೀತಿಯನ್ನು ಸದಾ ಉಳಿಸಿಕೊಂಡೇ ಇರುತ್ತಾರೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ರಾಜಾ ರಾಣಿ ರೀಲೋಡೆಡ್ನಲ್ಲಿನ ಸ್ಪರ್ಧಿಗಳು ತಮ್ಮ ಸಂಗಾತಿಯನ್ನು ಹೇಗೆಲ್ಲಾ ಕರೆಯುತ್ತಾರೆ ಎಂದು ಕೇಳಲಾಗಿದ್ದು, ಅದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಾಜ ರಾಣಿ ಷೋ ನಿರ್ಮಾಣಗೊಳ‌್ಳುತ್ತಿದೆ. ಜೂನ್ 8ರಿಂ ಈ ರಿಯಾಲಿಟಿ ಷೋ ಆರಂಭವಾಗಿದೆ. ಇದು ದಂಪತಿಯ ಗೇಮ್ ಷೋ ಆಗಿದ್ದು, ಮೂರನೇ ಸೀಸನ್ ಇದು.
ಪತ್ನಿಯನ್ನು ಯಾಮಾರಿಸೋದು ಹೇಗೆಂದು ನಟ ಲೋಕೇಶ್ ಟಿಪ್ಸ್! ಹೇಗಿದೆ ಪ್ಲ್ಯಾನ್ ಕೇಳ್ತಿದೆ ತಾರಾ ಜೋಡಿ
ಈ ಸೀಸನ್ ವಿಶೇಷತೆ ಕುರಿತು ಇದಾಗಲೇ ವಾಹಿನಿ ಹೇಳಿಕೊಂಡಿದ್ದು, ಇದರಲ್ಲಿ ಜೋಡಿಗಳ ನೃತ್ಯ ಕೌಶಲಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಎಂದಿನಂತೆ ದಂಪತಿ ನಡುವಿನ ಸಾಮರಸ್ಯ, ಭಾವನೆಗಳ ಸಂಘರ್ಷ, ತಮಾಷೆ, ನಗು ಎಲ್ಲವೂ ಇದರಲ್ಲಿದೆ. ಹಾಡುಗಾರರು, ನೃತ್ಯಗಾರರು, ತಮಾಷೆಗಾರರು ಎಲ್ಲರೂ ಈ ಷೋನಲ್ಲಿರುವುದಾಗಿ ಹೇಳಿದೆ. ಅಂದಹಾಗೆ ಹನ್ನೆರಡು ಜೋಡಿಗಳು ಇದರಲ್ಲಿ ಭಾಗವಹಿಸುತ್ತಿವೆ. ಈ 12 ಜೋಡಿಗಳಿಗೆ ಮೇಲಿನಂತೆ ಪ್ರಶ್ನೆ ಕೇಳಲಾಗಿದೆ. ತುಂಬಾ ಪ್ರೀತಿ ಉಕ್ಕಿದಾಗ ಪತಿ ಮತ್ತು ಪತ್ನಿಗೆ ಏನೆಂದು ಕರೆಯುವಿರಿ ಎಂದು. ಆಗ ಎಲ್ಲಾ ಸ್ಪರ್ಧಿಗಳು ತಾವು ಕರೆಯುವುದು ಏನೆಂದು ಹೇಳಿದ್ದಾರೆ.
ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿದೆ. ಇದರ ಪ್ರೊಮೋ ಬಿಡುಗಡೆ ಮಾಡಿರುವ ವಾಹಿನಿ, ನಿಮ್ಮವರಿಗೆ ನೀವು ಕೊಟ್ಟಿರುವ ಕ್ಯೂಟ್ ಹೆಸರನ್ನು ನಮಗೆ ತಿಳಿಸಿ ಎಂದು ಹೇಳಿದೆ. ಇನ್ನೇಕೆ ತಡ. ನಿಮ್ಮ ಸಂಗಾತಿಯನ್ನು ನೀವು ಏನು ಕರೆಯುತ್ತೀರಿ ಎಂದು ಕಮೆಂಟ್ ಮೂಲಕ ತಿಳಿಸಿ. ಅಂದಹಾಗೆ ಈ ಷೋನಲ್ಲಿ ನಿರೂಪಕಿಯಾಗಿ ನಿರುಪಮಾ ಗೌಡ ಅವರು ಇದ್ದು, ತೀರ್ಪುಗಾರರಾಗಿ ತಾರಾ ಅನುರಾಧ, ಸೃಜನ್ ಲೋಕೇಶ್ ಮತ್ತು ಅದಿತಿ ಪ್ರಭುದೇವ ಇದ್ದಾರೆ.
ಈ ವಯಸ್ಸಲ್ಲೂ ಬೇಕಿತ್ತಾ ಇದೆಲ್ಲಾ ಅನ್ನೋರಿಗೇ ಸವಾಲೆಸೆದು ರಾಜಾ ರಾಣಿ ವೇದಿಕೆ ಮೇಲೆ ರೀಲ್ಸ್ ಜೋಡಿ!