ಈ ಕಾರಣಕ್ಕೆ ಯೂಟ್ಯೂಬ್‌ ಡಿಲೀಟ್ ಮಾಡಲು ಮುಂದಾಗ ನಟ ವಿಶಾಲ್ ಹೆಗ್ಡೆ!

Published : Apr 23, 2022, 11:27 AM IST
ಈ ಕಾರಣಕ್ಕೆ ಯೂಟ್ಯೂಬ್‌ ಡಿಲೀಟ್ ಮಾಡಲು ಮುಂದಾಗ ನಟ ವಿಶಾಲ್ ಹೆಗ್ಡೆ!

ಸಾರಾಂಶ

ಬೇಸರದಿಂದ ಯೂಟ್ಯೂಬ್ ಖಾತೆ ಡಿಲೀಟ್ ಮಾಡುವುದಾಗಿ ತಿಳಿಸಿದ ನಟ ವಿಶಾಲ್. ನಾವಿದ್ದೀವಿ ಎಂದು ಸಪೋರ್ಟ್‌ಗೆ ನಿಂತ subscribers....

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ವಿಶಾಲ್ ಹೆಗ್ಡೆ ಕಳೆದ ಒಂದೂವರೆ ವರ್ಷದಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಪರ್ಸನಲ್ ಲೈಫ್‌, ಶೂಟಿಂಗ್ ದಿನಗಳು, ಡಿಫರೆಂಟ್ ಸ್ಥಳಗಳು ಮತ್ತು ಹೋಟೆಲ್‌ಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ ಮೂಲಕ ಜನರಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಸುಮಾರು 13 ಸಾವಿರ 600 ಫಾಲೋವರ್ಸ್‌ ಹೊಂದಿರುವ ಖಾತೆಯನ್ನು ರಿಲೀಟ್ ಮಾಡಲು ನಿರ್ಧರಿಸಿರುವುದಾಗಿ ವಿಡಿಯೋ ಮುಖಾಂತರ ತಿಳಿಸಿದ್ದಾರೆ.

ವಿಶಾಲ್ ಮಾತು:

'ಎರಡು ವಾರಗಳಿಂದ ನಾನು ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದೆ. ಏನೆಂದರೆ ನಾನು ಯೂಟ್ಯೂಬ್ ಚಾನೆಲ್‌ನ ಮುಂದುವರೆಸಿಕೊಂಡು ಹೋಗಬಾರದು ಎಂದು ನಿರ್ಧಾರ ಮಾಡಿದ್ದೀನಿ. ಶೀಘ್ರದಲ್ಲಿ ನಿಲ್ಲಿಸಬಹುದು. ಎರಡು ಮೂರು ವಾರಗಳಿಗೆ ಆಗುಷ್ಟು ವಿಡಿಯೋ ಶೂಟಿಂಗ್ ಮಾಡಿದ್ದೀನಿ ಅದನ್ನು ಎಡಿಟ್ ಮಾಡಿ ಹಂಚಿಕೊಳ್ಳುತ್ತೀನಿ ಅದಾದ ಮೇಲೆ ಈ ಚಾನೆಲ್‌ನ ನಿಲ್ಲಿಸಬೇಕು ಅಂದುಕೊಂಡಿರುವೆ' ಎಂದು ವಿಶಾಲ್ ಮಾತನಾಡಿದ್ದಾರೆ.

'ಈ ರೀತಿ ಯೋಚನೆ ಯಾಕೆ ಬಂತು ಅಂದ್ರೆ ನನ್ನ vlog ಅನೇಕರಿಗೆ ಇಷ್ಟ ಆಗುತ್ತಿಲ್ಲ ಇಷ್ಟ ಆಗದೇ ಇರಲು ಕಾರಣ ಏನು ಎಂದು ಗೊತ್ತಿಲ್ಲ ಹೀಗಾಗಿ ವಿಡಿಯೋಗಳು ಶೇರ್ ಆಗುತ್ತಿಲ್ಲ ಅಷ್ಟು ವೀಕ್ಷಣೆ ಬರುತ್ತಿಲ್ಲ. ಚಾನೆಲ್ ತೆರೆದು ಒಂದು ವರ್ಷ ಆಯ್ತು ಪ್ರತಿಯೊಂದು ವಿಡಿಯೋಗೂ ಶ್ರಮ ಹಾಕಿದ್ದೀನಿ ನನಗೆ organic ಫಾಲೋವರ್ಸ್‌ ಇದ್ದಾರೆ ಚೆನ್ನಾಗಿ ನಡೆಯುತ್ತಿದೆ. ಆದರೆ ಈ ಎಡಿಟ್ ಮಾಡುವುದು ಮ್ಯೂಸಿಕ್ ಹಾಕುವುದು ಎಲ್ಲಾ ಜಾಸ್ತಿ ಶ್ರಮ ತೆಗೆದುಕೊಳ್ಳುತ್ತದೆ. ನಾನು ಮಾಡುವ ವಿಡಿಯೋ ನೋಡುವವರಿಗೆ ಸಖತ್ ಆಗಿರಬೇಕು ಎಂದು ಶ್ರಮ ಹಾಕುತ್ತೀನಿ. ಪ್ರತಿಯೊಬ್ಬರೂ ಮಾಡುವ ಕಾಮೆಂಟ್, ಲೈಕ್ ಮತ್ತು ಸಬ್‌ಸ್ಕ್ರೈಬರ್‌ಗೆ ಧನ್ಯವಾದಗಳನ್ನು ಹೇಳುತ್ತೀನಿ' ಎಂದು ವಿಶಾಲ್ ಹೇಳಿದ್ದಾರೆ. 

ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ Vishal Hegde; ಗುಡ್‌ ನ್ಯೂಸ್ ಫೋಟೋ!

'ಈ ಚಾನೆಲ್ ಆರಂಭಿಸಿ ಒಂದು ವರ್ಷ ಎರಡು ತಿಂಗಳು ಆಯ್ತು. ಈ ಚಾನೆಲ್ ಇಷ್ಟು ದಿನಗಳಲ್ಲಿ ಹೇಗೆ ಬೆಳೆಯಬೇಕಿತ್ತು ಆ ರೀತಿ ಬೆಳೆಯುತ್ತಿಲ್ಲ. ನನ್ನ vlog ಜನರಿಗೆ ಅಷ್ಟಕ್ಕೆ ಅಷ್ಟೆ ಸರ್ಕ್ಯೂಲೆಟ್ ಆಗುತ್ತಿಲ್ಲ. ಪ್ರತಿ ವಿಡಿಯೋದಲ್ಲೂ ನಾನು ಲೈಕ್ ಮತ್ತು ಕಾಮೆಂಟ್ ಮಾಡಿ ಎಂದು ಕೇಳಿಕೊಳ್ಳುವುದು ಈ ಕಾರಣಕ್ಕೆ. ಸಪೋರ್ಟ್ ಮಾಡಿರುವ ಪ್ರತಿಯೊಬ್ಬರಿಗೂ ಥ್ಯಾಂಕ್ಸ್‌. ಇದು ನಿರ್ಧಾರ ಅಲ್ಲ ಆದರೆ ಈ ರೀತಿ ಯೋಚನೆ ಮಾಡಿದ್ದೀನಿ. ತುಂಬಾ ಜನ ಹೇಳಿದ್ದಾರೆ ಹುಡುಗಿಯರು ಮಾಡಿದರೆ ಹೆಚ್ಚಿಗೆ ಜನ ನೋಡುತ್ತಾರೆ. ನಾವು ಕಂಪೇರ್ ಮಾಡುವುದು ಬೇಡ ಆದರೆ 95% ವಿಡಿಯೋ ನೋಡುವ ಜನರಿಗೆ ನಾನು ಯೂಟ್ಯೂಬ್ ಮಾಡುತ್ತಿರುವುದು ಗೊತ್ತಿಲ್ಲ. ಈ ವಿಡಿಯೋ ಶೇರ್ ಆಗುತ್ತಿಲ್ಲ ಅದಿಕ್ಕೆ ಕಡಿಮೆ ವೀಕ್ಷಣೆ ಬರುತ್ತಿದೆ. ಇದೆಲ್ಲಾ ನೋಡಿದಾಗ ನನಗೆ ಸಿಕ್ಕಾಪಟ್ಟೆ ಬೇಸರವಾಗಿದೆ. ನಾನು ಯೂಟ್ಯೂಬ್ ಮುಂದೆವರೆಸಿಕೊಂಡು ಹೋಗುತ್ತಿಲ್ಲ ಇದು ಹೇಳೋಕೆ ಕಷ್ಟ ಆಗುತ್ತಿದೆ ಏಕೆಂದರೆ ನಾನು ತುಂಬಾನೇ ಶ್ರಮ ಪಟ್ಟು ಈ ಚಾನೆಲ್ ಆರಂಭಿಸಿದ್ದು. ತುಂಬಾ ಶ್ರಮ ಪಡ್ತಿದ್ದೀನಿ ಆದರೆ ವರ್ಕೌಟ್ ಆಗುತ್ತಿಲ್ಲ. ನನಗೆ ಅನಿಸುತ್ತಿದೆ ಯೂಟ್ಯೂಬ್‌ಗೆ ನಾನು ಫಿಟ್ ಅಲ್ಲ ಅಂತ' ಎಂದಿದ್ದಾರೆ ವಿಶಾಲ್. 

Love Mocktail 2 ಸಿನಿಮಾ ಹೇಗಿದೆ? ನಟ Vishal Hegde ವಿಮರ್ಶೆ ಇದು!

'ನನ್ನ ಪತ್ನಿ ಮತ್ತು ಫ್ಯಾಮಿಲಿಗೆ ಸಮಯ ಕೊಡಬೇಕು. ಪತ್ನಿ ಗರ್ಭಿಣಿ ಆಕೆ ಡೇಟ್ ಹತ್ತಿರ ಬರುತ್ತಿದೆ. ನನ್ನ ಕೊನೆ ವಿಡಿಯೋ ಆದಷ್ಟು ಚೆನ್ನಾಗಿ ಮಾಡಿ ಅಪ್ಲೋಡ್ ಮಾಡ್ತೀನಿ. ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತೀನಿ. ನನ್ನ ಕಡೆಯಿಂದ ಏನೋ ತಪ್ಪಾಗುತ್ತಿದೆ ಹುಡುಕುತ್ತೀನಿ. ಹುಡುಗ ಹುಡುಗಿ ಅಂತ ಕಂಪೇರ್ ಮಾಡುತ್ತಿಲ್ಲ. ನನಗೆ ವೀಕ್ಷಣೆ ಇಲ್ಲದೆ ವಿಡಿಯೋ ಮಾಡುವುದಕ್ಕೆ ಬೇಸರವಾಗುತ್ತದೆ. ನನ್ನ ಕೊನೆ ವಿಡಿಯೋ ಧಮಾಕ್ ಆಗಿರುತ್ತದೆ. ತುಂಬಾನೇ ಪ್ರೀತಿ ಕೊಟ್ಟಿದ್ದೀರಾ ನನಗೆ, ನಾನು ಮೂರ್ನಾಲ್ಕು ದಿನಗಳಲ್ಲಿ ಒಂದು ನಿರ್ಧಾರ ಮಾಡ್ತೀನಿ. ಬ್ರೇಕ್ ತೆಗೆದುಕೊಳ್ಳಬೇಕಾ ಅಥವಾ ಸಂಪೂರ್ಣವಾಗಿ ನಿಲ್ಲಿಸಬೇಕಾ ಯೋಚನೆ ಮಾಡುತ್ತೀನಿ' ಎಂದು ವಿಶಾಲ್ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?