ಖ್ಯಾತ ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಶಿಕ್ಷಣ ಏನು? ಏನು ಓದಿದ್ದಾರೆ?
ಕಿಚ್ಚ ಸುದೀಪ್ ಮಗಳು ಸಾನ್ವಿ ಸದ್ಯ ಸಂಗೀತದಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. 21 ವರ್ಷದ ಸಾನ್ವಿ ಈಗ ಚಿತ್ರರಂಗದಲ್ಲಿ ಆಕ್ಟಿವ್ ಆಗುತ್ತಿದ್ದಾರೆ. ಸಾನ್ವಿ ಏನು ಓದಿರಬಹುದು ಎಂಬ ಪ್ರಶ್ನೆ ಬಂದಿರಬಹುದು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಶಿಕ್ಷಣ ಏನು?
ಜಿನಲ್ ಮೋದಿ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಸಾನ್ವಿ ಸುದೀಪ್ ಅವರು, “ನನ್ನ ಶಿಕ್ಷಣದ ಬಗ್ಗೆ ಅನೇಕರು ಪ್ರಶ್ನೆ ಕೇಳುತ್ತಿದ್ದಾರೆ, ಯಾಕೆ ಅಂತ ಅರ್ಥ ಆಗುತ್ತಿಲ್ಲ. ನಾನು ಇನ್ನೂ ಏನೂ ಸಾಧನೆ ಮಾಡಿಲ್ಲ. ನಾನು ಬೆಂಗಳೂರಿನಲ್ಲಿ ಪಿಯುಸಿವರೆಗೆ ಓದಿದೆ. ಆಗಲೇ ನನಗೆ ಸಾಕಾಗಿತ್ತು. ಮನರಂಜನೆ ಕ್ಷೇತ್ರದಲ್ಲಿ ಇರುವವರಲ್ಲಿ ಅನೇಕರಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಇರೋದಿಲ್ಲ. ಪಿಯುಸಿ ಮುಗಿಸಿ ನಾನು ನಾಲ್ಕು ತಿಂಗಳುಗಳ ಕಾಲ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದೆ” ಎಂದು ಹೇಳಿದ್ದಾರೆ.
ʼಪ್ರೀತಿಯ ವರ್ತೂರು ಸಂತೋಷ್...ʼ ಸಾಲು ಸಾಲು ಫೋಟೋ ಹಂಚ್ಕೊಂಡು ತನಿಷಾ ಕುಪ್ಪಂಡ ಹೇಳಿದ್ದೇನು?
ʼಸರಿಗಮಪʼ ಶೋನಲ್ಲಿ ಹಾಡು!
ಸಾನ್ವಿ ಸುದೀಪ್ ಅವರು ಇತ್ತೀಚೆಗೆ ʼಸರಿಗಮಪʼ ಶೋಗೆ ಆಗಮಿಸಿದ್ದರು. ಮಗಳು ಶೋಗೆ ಬಂದು ಹಾಡಿರೋದು ನೋಡಿ ಕಿಚ್ಚ ಸುದೀಪ್ ಸರ್ಪ್ರೈಸ್ ಆಗಿದ್ದರು. ಈ ಹಾಡು ಹಾಡಲು ಸಾನ್ವಿ ಅವರು ಪ್ರಾಕ್ಟೀಸ್ ಕೂಡ ಮಾಡಿದ್ದರು. ಮಗಳ ಪ್ರಯತ್ನಕ್ಕೆ ಸುದೀಪ್ ಖುಷಿಯಾಗಿದ್ದರು.
ಸಣ್ಣ ಆದರು!
ತೂಕದ ಬಗ್ಗೆ ಮಾತನಾಡಿದ್ದ ಸಾನ್ವಿ ಸುದೀಪ್, “ನಾನು ತುಂಬ ದಪ್ಪಗಿದ್ದೆ, ಈಗ ಸಣ್ಣ ಆಗಿದ್ದೀನಿ. ನನ್ನ ಬಗ್ಗೆ ಗಮನಕೊಟ್ಟು ಜಿಮ್‌ಗೆ ಹೋದೆ, ಡಯೆಟ್ ಮಾಡಿದೆ, ಚರ್ಮದ ಬಗ್ಗೆ ಗಮನ ಕೊಟ್ಟೆ. ನಾನು ಕೂಡ ಒಮ್ಮೊಮ್ಮೆ ಸೋಂಬೇರಿ ಆಗ್ತೀನಿ, ಕನ್ಸಿಸ್ಟೆನ್ಸಿ ಇರೋದಿಲ್ಲ” ಎಂದು ಹೇಳಿದ್ದಾರೆ. ಅಂದಹಾಗೆ ಕೆಲದಿನಗಳ ಹಿಂದೆ ಸಾನ್ವಿ ಸುದೀಪ್ ಅವರು ಫೋಟೋಶೂಟ್ ಕೂಡ ಮಾಡಿಸಿದ್ದರು.
ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ರಾಗಿಣಿ ದ್ವಿವೇದಿ ವಿಡಿಯೋ ವೈರಲ್!
ಯಶ್ ಮೇಲೆ ಕ್ರಶ್ ಇಲ್ಲ!
ನಟ ಯಶ್ ಬಗ್ಗೆ ಪ್ರಶ್ನೆ ಬಂದಾಗ ಸಾನ್ವಿ ಸುದೀಪ್ ಅವರು, “ನನಗೆ ಅನೇಕ ವರ್ಷಗಳಿಂದ ಯಶ್ ಗೊತ್ತು. ತಂದೆ ಪಾರ್ಟಿಗಳಲ್ಲಿ ಯಶ್ ಇರುತ್ತಿದ್ದರು. ನಾನು ಅವರ ಜೊತೆ ಆಟ ಆಡುತ್ತಿದ್ದೆ, ನನಗೆ ಸಿದ್ದಾರ್ಥ್ ಮಲ್ಹೋತ್ರ, ಅಲ್ಲು ಅರ್ಜುನ್ ಮೇಲೆ ಕ್ರಶ್ ಇದೆ. ಯಶ್ ಅವರು ನನ್ನ ತಂದೆಯ ಫ್ರೆಂಡ್, ಅವರ ಮೇಲೆ ಕ್ರಶ್ ಬಂದಿಲ್ಲ. ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾ ರಿಲೀಸ್ ಅದಾಗ ಅಲ್ಲು ಅರ್ಜುನ್ ಮುಖ ಇರುವ ಟೀ-ಶರ್ಟ್ ಹಾಕಿಕೊಂಡು, ವೇಗಾ ಸಿಟಿ ಮಾಲ್‌ನಲ್ಲಿ ಸಿನಿಮಾ ನೋಡಲು ಹೋಗಿದ್ದೆ, ನಾನು ಅಪ್ಪನ ಮೂಲಕ ಅವರನ್ನು ಭೇಟಿ ಆಗೋಕೆ ಇಷ್ಟಪಡೋದಿಲ್ಲ, ನಾನು ಸಾಧನೆ ಮಾಡಿ ಗುರುತಿಸಿಕೊಳ್ಳಬೇಕಿದೆ” ಎಂದು ಹೇಳಿದ್ದರು.
ಈ ಹಿಂದೆ ಸಾಕಷ್ಟು ಬಾರಿ ಸಿದ್ದಾರ್ಥ್ ಮಲ್ಹೋತ್ರ ಅವರು ನನ್ನ ಕ್ರಶ್ ಎಂದು ಸಾನ್ವಿ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಅವರ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.