ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

Published : Mar 14, 2025, 10:35 PM ISTUpdated : Mar 15, 2025, 07:25 AM IST
ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

ಸಾರಾಂಶ

ಬಿಗ್ ಬಾಸ್‌ನಿಂದ ಹೊರಬಂದ ಹಂಸಾ, 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ನಿರ್ಗಮಿಸಿ ತಂಡಕ್ಕೆ ಮೋಸ ಮಾಡಿದ ಆರೋಪ ಎದುರಿಸಿದರು. ಇತ್ತೀಚೆಗೆ, ಸ್ಮಶಾನಕ್ಕೆ ಭೇಟಿ ನೀಡಿ, ಸಮಾಧಿಗಳನ್ನು ನೋಡುತ್ತಾ ಜೀವನದ ಅನಿತ್ಯತೆ ಮತ್ತು ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಬದುಕಿರುವಾಗ 'ನಾನು, ನನ್ನದು' ಎನ್ನುತ್ತೇವೆ, ಆದರೆ ಸತ್ಯವೆಂದರೆ ಕೊನೆಗೆ ಎಲ್ಲರೂ ಇಲ್ಲಿಗೆ ಬರುತ್ತೇವೆ ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ  4 ವಾರಗಳ ಕಾಲ ಇದ್ದು ಎಲಿಮಿನೇಟ್​ ಆಗಿ ಹೊರಬಂದವರು ಹಂಸಾ ನಾರಾಯಣಸ್ವಾಮಿ ಉರ್ಫ್​ ಹಂಸಾ ಪ್ರತಾಪ್​. ಬಿಗ್​ಬಾಸ್​ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್​ ಮಾಡಿದ್ದರು. ಇವರು ಸಕತ್​ ಸದ್ದು ಮಾಡಿದ್ದು, ಲಾಯರ್​ ಜಗದೀಶ್​ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು. ಇದು ಬಿಗ್​ಬಾಸ್​ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಮಾಯವಾಗಿಬಿಟ್ಟಳು. ದಿಢೀರ್​ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಿದ್ದಳು. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್​ ಆಗಿದ್ದಂತೂ ದಿಟ. ಕೊನೆಗೆ ಹೇಳದೇ ಕೇಳದೇ ಹಂಸಾ ಅವರು, ಸೀರಿಯಲ್​ ತಂಡಕ್ಕೆ ಮೋಸ ಮಾಡಿದ್ದಾರೆ ಎಂದು ನಿರ್ದೇಶಕ ಆರೂರು ಜಗದೀಶ್​ ಅವರು ಮಾಧ್ಯಮಗಳ ಎದುರು ಆರೋಪ ಮಾಡಿದ್ದೂ ಆಯಿತು, ಅದಕ್ಕೆ ಹಂಸಾ ತಿರುಗೇಟು ನೀಡಿದ್ದೂ ಆಯ್ತು.

ಇವೆಲ್ಲಾ ಸದ್ಯ ತಣ್ಣಗಾಗುತ್ತಿದ್ದಂತೆಯೇ, ಹಂಸಾ ಅವರು ಇದೀಗ ಸ್ಮಶಾನದಲ್ಲಿ ಓಡಾಡಿದ್ದಾರೆ. ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಸಮಾಧಿಗಳನ್ನು ನೋಡುತ್ತಲೇ ಭಾವುಕರಾಗಿರುವ ನಟಿ, ಜೀವನದ ಪಾಠ, ಜೀವನದ ಮೌಲ್ಯಗಳನ್ನು ಅರ್ಥ ಮಾಡಿಸಿದ್ದಾರೆ. ಬದುಕಿನ ಅತಿದೊಡ್ಡ ಸತ್ಯವನ್ನು ಅವರು ಹೇಳಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದ್ದರೂ, ಬದುಕಿನ ಜಂಜಾಟದಲ್ಲಿ ಅದನ್ನು ಮರೆತು ಮತ್ತದೇ ತಪ್ಪು ಮಾಡುವುದು ಮಾನವಸಹಜ ಗುಣವಾಗಿಬಿಟ್ಟಿದೆ. ಬದುಕು ಎನ್ನುವುದು ಮೂರು ದಿನಗಳ ಬಾಳು ಎನ್ನುವುದು ತಿಳಿದಿದ್ದರೂ ಜೀವನದಲ್ಲಿ ಅದೇನು ಕನಸು, ಅದೇನು ವ್ಯಾಮೋಹ, ತನ್ನದು, ತನ್ನವರು, ಎಲ್ಲವೂ ನನಗೇ ಬೇಕು ಎನ್ನುವ ಭಾವ, ಜಗಳ, ಹತಾಶೆ... ಅಬ್ಬಬ್ಬಾ.. ಒಂದಾ... ಎರಡಾ..? ಇದರ ಬಗ್ಗೆಯೇ ಹಂಸಾ ಅವರು ಈಗ ಮಾತನಾಡಿದ್ದಾರೆ. 

ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್​ಬಾಸ್​ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?

ಸ್ಮಶಾನದಲ್ಲಿರುವ ಸಮಾಧಿಗಳನ್ನು ನೋಡುತ್ತಲೇ ಹಂಸಾ ಅವರು ಹೇಳಿದ್ದೇನೆಂದರೆ, ಕೊನೆಗೂ ಎಲ್ಲರೂ ಬಂದು ಸೇರುವ ಜಾಗ ಇದು. ಇದುವೇ ಬದುಕಿನ ಸತ್ಯ.  ಬದುಕಿರುವವರೆಗೆ ನಾನು, ನನ್ನದು ಎನ್ನುತ್ತಲೇ ಇರುತ್ತೇವೆ. ಸತ್ತ ಮೇಲೆ ಮನೆಯಲ್ಲಿಯೂ ಜಾಗ ಇರುವುದಿಲ್ಲ. ಊರಾಚೆ  ಇರುವ ಸ್ಮಶಾನದಲ್ಲಿ ತಂದು ಹಾಕುತ್ತಾರೆ. ಬದುಕಿರುವಾಗಿ ಬೇರೆಯವರು ಹಾಳಾಗಲಿ, ನಾವು ಹೇಗೆ ಉದ್ಧಾರ ಆಗಬೇಕು ಎಂದೇ ಕಾಯುತ್ತಿರುತ್ತೇವೆ ಎನ್ನುವ ಮೂಲಕ ಬದುಕು ಎಂದರೇನು ಎನ್ನುವ ಬಗ್ಗೆ ಸೂಕ್ಷ್ಮವಾಗಿ ನಟಿ ಹಂಸಾ ವಿವರಿಸಿದ್ದಾರೆ. ಆದರೆ ನಟಿಗೆ ಏಕಾಏಕಿ ಏನಾಯಿತು ಎನ್ನುವ ಚಿಂತೆ ಅಭಿಮಾನಿಗಳಲ್ಲಿ ಕಾಡುತ್ತಿದೆ! 

ಇನ್ನು ಹಂಸ ಅವರ ಕುರಿತು ಹೇಳುವುದಾದರೆ, ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.  ಅಂದಹಾಗೆ ಹಂಸ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟಿವ್​.  ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ.  ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ. 

ನನ್ನಿಂದ್ಲೇ ನೀವ್‌ ಕಾಸ್‌ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್‌ ಇಲ್ಲ ಅಂತೀರಾ? ಹಂಸಾ ಗರಂ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್