ಸಿಡ್ನಿ ಹುಡುಗನ ಜೊತೆ ಲಕ್ಷಣದ ಶ್ವೇತಾ ಮದ್ವೆಯಂತೆ?!

Published : Apr 07, 2023, 12:06 PM IST
ಸಿಡ್ನಿ ಹುಡುಗನ ಜೊತೆ ಲಕ್ಷಣದ ಶ್ವೇತಾ ಮದ್ವೆಯಂತೆ?!

ಸಾರಾಂಶ

ಸುಕೃತಾ ಮದ್ವೆ ಆಗ್ತಿದ್ದಾರೆ. ಯಾರು ಹುಡುಗ? ಸಿನಿಮಾ, ಸೀರಿಯಲ್ ಫೀಲ್ಡ್‌ನವ್ರಾ? ಲವ್ ಮ್ಯಾರೇಜಾ, ಅರೇಂಜ್ಡಾ? ಯಾವಾಗ ಮದ್ವೆ? ಹೀಗೆಲ್ಲ ಏನೇನೋ ಪ್ರಶ್ನೆಗೆ ತಲೆಗೆ ಬರಬಹುದು. ಅದಕ್ಕೆಲ್ಲ ಉತ್ತರವನ್ನು ಸುಕೃತಾ ಅವರೇ ಕೊಟ್ಟಿದ್ದಾರೆ.

ಸೀರಿಯಲ್ ಕಂಡ್ರಾಗದವ್ರೂ ಸೋಷಿಯಲ್ ಮೀಡಿಯಾದಲ್ಲಿ 'ಲಕ್ಷಣ' ಸೀರಿಯಲ್ ಗ್ಲಿಂಪ್ಸ್ ಬಂದ್ರೆ ಒಂದು ಕ್ಷಣ ವೀಡಿಯೋ ನೋಡಿ ಮುಂದೆ ಹೋಗ್ತಾರೆ. ಇದಕ್ಕೆ ಕಾರಣ ಈ ಸೀರಿಯಲ್ ಕಥೆ. ಆದ್ರೆ ಇದೀಗ ಒಂದು ಬ್ರೇಕಿಂಗ್ ಸುದ್ದಿ ಬಂದಿದೆ. ಈ ಸೀರಿಯಲ್‌ನಲ್ಲಿ ಸಂಚಿನ ಮೇಲೆ ಸಂಚು ಮಾಡ್ಕೊಂಡು ನಾಯಕಿ ನಕ್ಷತ್ರಳನ್ನು ಒಂದಲ್ಲ ಒಂದು ರೀತಿ ಹಣಿಯಲು ನೋಡ್ತಿರೋ ಪಾತ್ರ ಶ್ವೇತಾದು. ಈ ಪಾತ್ರ ನಿರ್ವಹಿಸ್ತಿರೋ ನಟಿ ಸುಕೃತಾ ನಾಗ್. ಈ ಹಿಂದೆ 'ಅಗ್ನಿಸಾಕ್ಷಿ' ಸೀರಿಯಲ್‌ನಲ್ಲಿ ಮುದ್ದು ಮುದ್ದಾಗಿ ಮಾತಾಡೋ ಮುದ್ದು ತಂಗಿಯಾಗಿ ಗಮನ ಸೆಳೆದಿದ್ದ ಸುಕೃತಾ ಈ ಸೀರಿಯಲ್‌ನಲ್ಲಿ ಮಾತ್ರ ಕಂಪ್ಲೀಟ್ ಉಲ್ಟಾ ರೋಲ್ ನಲ್ಲಿ ಮಿಂಚುತ್ತಿದ್ದಾರೆ. ಅದು ವಿಲನ್ ಪಾತ್ರ. ತಾನು ಮದುವೆ ಆಗಬೇಕಾಗಿರುವ ಹುಡುಗನನ್ನು ಮದುವೆ ಆದ ನಕ್ಷತ್ರ ಮೇಲೆ ಸೇಡು ತೀರಿಸಿಕೊಳ್ಳುವ ಪಾತ್ರ. ಆಕೆಯ ಮದುವೆಯನ್ನು ಮುರಿದು ಭೂಪತಿಯನ್ನು ತಾನೇ ಮದುವೆ ಆಗಬೇಕು ಅನ್ನೋ ಹುನ್ನಾರ ಮಾಡ್ತಿರ್ತಾಳೆ ಶ್ವೇತಾ. ಅದೇ ಶ್ವೇತಾ ಇದೀಗ ಹಸೆಮಣೆ ಏರೋದಕ್ಕೆ ರೆಡಿ ಆಗ್ತಿದ್ದಾಳೆ ಅಂದರೆ ನಂಬ್ತೀರಾ?

ಅರೆ, ಶ್ವೇತಾ ಭೂಪತಿ ಮದ್ವೆ ಆಗ್ತಿದ್ದಾರ, ಮತ್ತೆ ನಕ್ಷತ್ರ ಗತಿ? ಅನ್ನಬೇಡಿ ಮತ್ತೆ. ಸೀರಿಯಲ್‌ನಲ್ಲಿ ಶ್ವೇತಾಗೆ ಹಸೆಮಣೆ ಏರೋ ಭಾಗ್ಯ ತಪ್ಪಿಹೋದರೂ ಈ ಪಾತ್ರ ಮಾಡಿರೋ ಸುಕೃತಾಗೆ ಹಸೆಮಣೆ ಏರೋ ಭಾಗ್ಯ ಒದ್ದುಕೊಂಡು ಬಂದ ಹಾಗಿದೆ. ಹೌದು, ಸುಕೃತಾ ಮದ್ವೆ ಆಗ್ತಿದ್ದಾರೆ. ಯಾರು ಹುಡುಗ? ಸಿನಿಮಾ, ಸೀರಿಯಲ್ ಫೀಲ್ಡ್‌ನವ್ರಾ? ಲವ್ ಮ್ಯಾರೇಜಾ, ಅರೇಂಜ್ಡಾ? ಯಾವಾಗ ಮದ್ವೆ? ಹೀಗೆಲ್ಲ ಏನೇನೋ ಪ್ರಶ್ನೆಗೆ ತಲೆಗೆ ಬರಬಹುದು. ಅದಕ್ಕೆಲ್ಲ ಉತ್ತರವನ್ನು ಸುಕೃತಾ ಅವರೇ ಕೊಟ್ಟಿದ್ದಾರೆ.

ತಂಗಿ ಮದ್ವೆ ಹರಕೆ ತೀರಿಸೋಕೆ ಕಾಶಿಗೆ ಹೊರಟ್ರಾ ಭಾಗ್ಯ?: ಈಗಲೇ ಕಾಶಿ ಯಾತ್ರೆನಾ ಎಂದ ನೆಟ್ಟಿಗರು

ಅಂದಹಾಗೆ ಸುಕೃತಾ ಈ ವಿಚಾರ ತಿಳಿಸಿರೋದು ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ. ಅದು ಯೂಟ್ಯೂಬ್‌ನಲ್ಲಿ ನೇರವಾಗಿ ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ತಾನು ಸಿಡ್ನಿ ಹುಡುಗನನ್ನು ಮದ್ವೆ ಆಗ್ತಿದ್ದೀನಿ. ಈ ವರ್ಷದ ಕೊನೆಯಲ್ಲಿ ಮದುವೆ. ಅಮ್ಮನೆ ನೋಡಿರೋ ಹುಡುಗ. ಅರೇಂಜ್ಡ್ ಮ್ಯಾರೇಜ್ ಅನ್ನೋ ಸಂಗತಿಯನ್ನು ಸುಕೃತಾ ಹೇಳಿದ್ದಾರೆ. ಅದನ್ನು ಕೇಳಿ ಫ್ರೆಂಡ್ಸ್ ಎಲ್ಲ ಸಖತ್‌ ಖುಷಿಯಾಗಿ ವಿಶ್ ಮಾಡಿದ್ದಾರೆ. ಆದರೆ ಒಬ್ಬ ಬೆಸ್ಟ್ ಫ್ರೆಂಡ್ ಮಾತ್ರ ಈ ವಿಚಾರಕ್ಕೆ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ.

ಅಂದಹಾಗೆ ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ಲಕ್ಷಣ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ ಷಟಮರ್ಷನ್, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ. ಮೊದಲಿಗೆ ಪ್ರಿಯಾಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಅವರು ಸಖತ್ ಥ್ರಿಲ್ ಆದ್ರು. ತನ್ನ ಬೆಸ್ಟ್ ಫ್ರೆಂಡ್‌ಗೆ ಅಭಿನಂದನೆಯನ್ನು ತನ್ನದೇ ಸ್ಟೈಲಲ್ಲಿ ತಿಳಿಸಿದ್ರು. ಆಮೇಲೆ ವಿಜಯಲಕ್ಷ್ಮಿಗೆ ಕಾಲ್ ಮಾಡಿ ಹೇಳಿದಾಗಲೂ ಆಕೆ ಇದನ್ನು ಕೇಳಿ ಖುಷಿ ಪಟ್ರು. ಆದ್ರೆ ಬೆಸ್ಟ್ ಫ್ರೆಂಡ್(Best feriend) ಒಬ್ಬರು ಮಾತ್ರ ಎಲ್ಲ ಫೈನಲ್ ಆದಮೇಲೆ ಈ ವಿಷಯ ಹೇಳ್ತೀಯಾ, ಮೊದಲೇ ಒಂದು ಮಾತು ಹೇಳ್ಬೇಕು ಅಂತ ಅನಿಸಿಲ್ವಾ ಅಂತ ಸಕತ್ತಾಗೇ ಕ್ಲಾಸ್(Class) ತಗೊಂಡ್ರು.

ಪೋರ್ಚುಗಲ್ ಬೀದಿ ಬೀದಿಯಲ್ಲಿ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ ರಂಜನಿ ರಾಘವನ್

ಅಂದಹಾಗೆ ಸುಕೃತಾ ಈ ವೀಡಿಯೋ(Vedio) ಮಾಡಿರೋದು ಏಪ್ರಿಲ್ 1ಕ್ಕೆ. ಇಷ್ಟು ಹೇಳಿದಾಗ್ಲೇ ನಿಮಗೆಲ್ಲ ಗೊತ್ತಾಗಿರಬಹುದಲ್ವಾ, ವಿಷ್ಯ ಏನು ಅಂತ.. ಯೆಸ್, ಸುಕೃತಾ ತನ್ನ ಮದ್ವೆ ಅಂತ ಹೇಳಿ ಎಲ್ರನ್ನೂ ಬಕ್ರಾ(April fool) ಮಾಡಿದ್ದಾರೆ. ಹಿಂದಿನ ದಿನವೇ ನಾಳೆ ಒಂದು ವಿಷ್ಯ ಹೇಳ್ತೀನಿ ಅಂತ ಹೇಳಿದ ಕಾರಣ ಎಲ್ಲರೂ ನಂಬಿ ಬಿಟ್ಟಿದ್ದಾರೆ. ಕೊನೆಗೆ ತಾವು ಬಕ್ರಾ ಆಗಿರೋದು ಗೊತ್ತಾದ್ಮೇಲೂ ಸುಕೃತಾಗೆ ಒಳ್ಳೆ ಹುಡುಗನ ಜೊತೆ ಮದ್ವೆ ಆಗಲಿ ಅಂತ ಅವರೆಲ್ಲ ಶುಭ ಹಾರೈಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

God Exists Beware: ದೇವರಿದ್ದಾನೆ, ಹುಷಾರಾಗಿರಿ! ದಿಲೀಪ್‌ ರಾಜ್‌ ಪತ್ನಿ ಪೋಸ್ಟ್‌ ವೈರಲ್!
Karna Serial: ಅಬ್ಬಬ್ಬಾ...ಕರ್ಣ, ನಿಧಿ ಮದುವೆ ಆಯ್ತು! ಕರ್ಣನ ಮೇಲೆ ಕೆರಳಿ ಕೆಂಡವಾದ ವೀಕ್ಷಕರು!