ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಗುಲ್ಲೆದ್ದಿದೆ. ಅದೂ ದೇವರ ರೂಪದಲ್ಲಿ ಎನ್ನಲಾಗುತ್ತಿದೆ.
ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಗುಲ್ಲೆದ್ದಿದೆ. ಹಾಗಿದ್ದರೆ ಯಾವ ಸಿನಿಮಾ, ಯಾರು ನಿರ್ದೇಶಕರು, ಯಾವ ಬ್ಯಾನರ್, ನಿರ್ಮಾಪಕರು ಯಾರು ಹೀಗೆ ಸಾಲು ಸಾಲು ಪ್ರಶ್ನೆಗಳು ಸ್ಯಾಂಡಲ್‌ವುಡ್ ಸಿನಿ ಪ್ರೇಕ್ಷಕರ ತಲೆ ಕೊರೆಯತೊಡಗುತ್ತವೆ. ಆದರೆ, ಅದಕ್ಕೆ ಉತ್ತರ 'ದೇವರು'. ಗಾಬರಿಯಾಗಬೇಡಿ, ಜ್ಯೂನಿಯರ್ ಎನ್‌ಟಿಆರ್ ನಟನೆಯ ಸಿನಿಮಾದ ಹೆಸರು ದೇವರು.
ಜವಾನ್ ಡೈರೆಕ್ಟರ್ ಮುಂದಿನ ಸಿನಿಮಾಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್; ಪುಷ್ಪಾ 2 ಕಥೆ ಏನಾಯ್ತು?
ಕೊರಟಾಲ ಶಿವ ನಿರ್ದೇಶನದ ದೇವರು ಚಿತ್ರವು ಕೊನೆಯ ಶೂಟಿಂಗ್ ಹಂತದಲ್ಲಿದೆ. ಈ ಚಿತ್ರಕ್ಕೆ ಸ್ವತಃ ಜ್ಯೂನಿಯರ್ ಎನ್‌ಟಿಆರ್ (Junior NTR ) ಅವರೇ ಕನ್ನಡಕ್ಕೆ ವೈಸ್ ಡಬ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೊದಲು ಪುನೀತ್ ನಟನೆಯ 'ಚಕ್ರವ್ಯೂಹ' ಚಿತ್ರಕ್ಕೆ 'ಗೆಳೆಯ ಗೆಳೆಯ..' ಎಂಬ ಹಾಡು ಹಾಡಿ ಆ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಮೊಟ್ಟಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರದ ಕನ್ನಡ ಅವತರಣಿಕೆಗೆ ಸ್ವತಃ ಜ್ಯೂನಿಯರ್ ಎನ್‌ಟಿಆರ್ ಧ್ವನಿ ನೀಡಿದ್ದರು. ಈಗ ದೇವರು ಚಿತ್ರಕ್ಕೆ ಕೂಡ ಅದೇ ದಾರಿಯಲ್ಲಿ ಹೊರಟಿದ್ದಾರೆ.
ಮಮತಾ ಬ್ಯಾನರ್ಜಿ ಕಾರಿನಲ್ಲಿ ಶಾರುಕ್ ಖಾನ್; ವಿಮಾನ ನಿಲ್ದಾಣದಲ್ಲಿ ನೋಡಿ ಜನ ಶಾಕ್!
ಅಂದರೆ, ಜ್ಯೂನಿಯರ್ ಎನ್‌ಟಿಆರ್ ನಟನೆಯ ದೇವರು ಚಿತ್ರವು ಕನ್ನಡಕ್ಕೆ ಡಬ್ ಆಗುತ್ತಿದ್ದು, ಅದಕ್ಕೆ ಸ್ವತಃ ನಾಯಕ ನಟ ಜ್ಯೂನಿಯರ್ ಎನ್‌ಟಿಆರ್ ಅವರೇ ತಮ್ಮ ಧ್ವನಿ ನೀಡಲಿದ್ದಾರೆ. ಆ ಮೂಲಕ ಅವರು ಮತ್ತೆ ಕನ್ನಡಕ್ಕೆ ತಮ್ಮ ಧ್ವನಿಯ ಮೂಲಕ ಬರುತ್ತಿದ್ದಾರೆ. ಪರಭಾಷೆಯ ನಟರೊಬ್ಬರು ಕನ್ನಡಕ್ಕೂ ತಾವೇ ಡಬ್ ಮಾಡುತ್ತಿದ್ದಾರೆ ಎಂದರೆ ಅವರ ಕನ್ನಡಾಭಿಮಾನವನ್ನು ಮೆಚ್ಚಲೇಬೇಕು. ಹೀಗಾಗಿ ಸಹಜವಾಗಿಯೇ ಜ್ಯೂನಿಯರ್ ಎನ್‌ಟಿಆರ್ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ಹೆಚ್ಚಿನ ಅಭಿಮಾನ ಮೂಡಲಿದೆ ಎನ್ನಬಹುದು.
ಕಮಲ್ ಹಾಸನ್ ಬಗ್ಗೆ ನಟಿ ಶ್ರುತಿ ಹಾಸನ್ ಹೀಗಾ ಹೇಳೋದು; ತಪ್ಪೇನಿದೆ ಅಂತಿದಾರಲ್ಲ ನೆಟ್ಟಿಗರು!
ಒಟ್ಟಿನಲ್ಲಿ, ಭಾರತದ ಸಿನಿಮಾ ಉದ್ಯಮದಲ್ಲಿ ಒಮ್ಮತ ಮೂಡತೊಡಗಿದೆ. ಒಮ್ಮತ ಯಾವತ್ತು ಇತ್ತು ಎನ್ನಬಹುದಾದರೂ ಸ್ವಲ್ಪ ಹೆಚ್ಚು ಮೂಡತೊಡಗಿದೆ ಎನ್ನಬಹುದಲ್ಲವೇ? ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ಸಿನಿಮಾ ಉದ್ಯಮ ಕೂಡ ಈಗ ಸಾಕಷ್ಟು ಬೆಳೆದಿದೆ. ಹಂತಹಂತವಾಗಿ ಬೆಳೆದಿದೆಯಾದರೂ ಅದು ಕೆಜಿಎಫ್ ಸಿನಿಮಾ ಮೂಲಕ ಸಡನ್ನಾಗಿ ಹೈಪ್‌ಗೆ ಹೋಗಿದೆ ಎನ್ನಬಹುದು. ಅಂದಹಾಗೆ, ಜ್ಯೂನಿಯರ್ ಎನ್‌ಟಿಆರ್ ನಟನೆಯ ದೇವರು ಸಿನಿಮಾದಲ್ಲಿ ಅತಿಲೋಕ ಸುಂದರಿ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ (Janhvi Kapoor) ಮೊದಲ ಬಾರಿಗೆ ಬಾಲಿವುಡ್ ಹೊರತಾಗಿ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ.