ಆ ಲೀಕ್, ಈ ಲೀಕ್ ನೆಲ್ಲ ನಂಬಬೇಡಿ; ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ್!

By Web Desk  |  First Published Oct 13, 2019, 4:01 PM IST

ಬಿಗ್ ಬಾಸ್ 7 ಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರುವುದಿಲ್ಲ. ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಅವಕಾಶ ಎನ್ನಲಾಗಿದೆ. ಕಲರ್ಸ್ ಕನ್ನಡ ಮೊದಲ ಬಾರಿಗೆ ಬಿಬಿಕೆ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. 


ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಬಹುದು ಎಂಬ ಕುತೂಹಲ ಜೋರಾಗಿಯೇ ಇದೆ. ಸಂಭಾವ್ಯ ಪಟ್ಟಿಯಲ್ಲಿ ಹೆಸರುಗಳು ಬಿಗ್ ಬಾಸ್ ಮನೆ ಸುತ್ತ ಗಿರಕಿ ಹೊಡೆಯುತ್ತಿವೆ. ಅದರಲ್ಲಿ ಫೈರ್ ಬ್ರಾಂಡ್ ಪತ್ರಕರ್ತ ರವಿ ಬೆಳಗೆರೆ ಹೋಗಿಯೇ ಹೋಗುತ್ತಾರೆ ಎನ್ನಲಾಗಿತ್ತು. ಈಗ ಕಲರ್ಸ್ ಕನ್ನಡ ಮೊದಲ ವಿಡಿಯೋ ರಿಲೀಸ್ ಮಾಡಿದ್ದು ರವಿ ಬೆಳಗೆರೆ ಹಾಗೂ ಕುರಿ ಪ್ರತಾಪ್ ಇಬ್ಬರೂ ಮನೆಯೊಳಗೆ ಹೋಗಿದ್ದಾರೆ. 

ಬಿಗ್ ಬಾಸ್-7 ಗೆ ಸರ್ವಸಂಗ ಪರಿತ್ಯಾಗಿ: ದೊಡ್ಮನೆ ಶೋನಲ್ಲಿ ಗುರುಲಿಂಗ ಸ್ವಾಮಿ ಭಾಗಿ!

ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ!

First On Twitter!
ಬಿಗ್‌ಬಾಸ್ Grand Opening | ಇಂದು ಸಂಜೆ 6ಕ್ಕೆ pic.twitter.com/AgJfsiV39k

— Colors Kannada (@ColorsKannada)

Tap to resize

Latest Videos

undefined

ಮನೆಯೊಳಗೆ ಹೋಗುತ್ತಿದ್ದಂತೆ ರವಿ ಬೆಳಗೆರೆ ‘ನನ್ನ ಸಿಗರೇಟ್ ಏನಾಯ್ತು’? ತುಂಬಾ ಹೊತ್ತು ಸೇದದೇ ಇರಬಾರದು ಅಂತ ಡಾಕ್ಟರ್ ಹೇಳಿದ್ದಾರೆ, ಬೇಗ ಕೊಡಿ ಎಂದು ಬಿಗ್ ಬಾಸ್ ಗೆ ಕೇಳುತ್ತಾರೆ. ಅವರಿಗೆ ಸಿಗರೇಟ್ ಸಿಗುತ್ತಾ, ಇಲ್ಲವಾ ಕಾದು ನೋಡಬೇಕಿದೆ. 

ಬಿಗ್ ಬಾಸ್ ಮನೆಗೆ ರಾಜಾರಾಣಿ ಚುಕ್ಕಿ ಹೋಗೋದು ಪಕ್ಕಾ?

ರವಿ ಬೆಳಗೆರೆ ನಿನ್ನೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ವೊಂದನ್ನು ಹಾಕಿದ್ದರು. ನಾನು ಕೆಲ ದಿನಗಳ ಕಾಲ ಅಜ್ಞಾತ ಜಾಗವೊಂದಕ್ಕೆ ತೆರಳುತ್ತಿದ್ದೇನೆ. ಮೊಬೈಲ್, ಟಿವಿ ಸಂಪರ್ಕ ಇರುವುದಿಲ್ಲ. ಅಲ್ಲಿಂದ ಬಂದ ಮೇಲೆ ನಿಮ್ಮ ಜೊತೆ ಸಂಪರ್ಕದಲ್ಲಿರುತ್ತೇನೆ’ ಎಂದು ಹಾಕಿದ್ದರು. ಅದು ಬಿಗ್ ಬಾಸ್ ಮನೆಗೆ ಎಂದು ಸೂಚನೆ ಸಿಗುತ್ತಿದ್ದಂತೆ ಕೂಡಲೇ ಡಿಲೀಟ್ ಮಾಡಿದ್ದಾರೆ. 

ಕುರಿ ಪ್ರತಾಪ್, ಜೈ ಜಗದೀಶ್, ರಾಜಾ- ರಾಣಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ ಚಂದನ ಅನಂತಕೃಷ್ಣ, ಹಾಸ್ಯಗಾರ ರಾಜು ತಾಳಿಕೋಟೆ, ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಗಾಯಕ, ನಟ ವಾಸುಕಿ ವೈಭವ್ , ದುನಿಯಾ ರಶ್ಮಿ, ಪಂಕಜ್ ಎಸ್ ನಾರಾಯಣ್, ನಿರೂಪಕಿ ಚೈತ್ರಾ ವಾಸುದೇವನ್, ರಾಧಾ ರಮಣ ವಿಲನ್ ಸುಜಾತಾ, ಮನೆಯೊಳಗೆ ಹೋಗುತ್ತಾರೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಕುರಿ ಪ್ರತಾಪ್, ರವಿ ಬೆಳಗೆರೆ ಹೋಗಿರುವುದು ಅಧಿಕೃತವಾಗಿದೆ. ಇಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಶುರುವಾಗಲಿದ್ದು ಉಳಿದ ಸ್ಪರ್ಧಿಗಳ ಬಗ್ಗೆ ಆಗಲೇ ಗೊತ್ತಾಗುತ್ತದೆ. 

ಅಕ್ಟೋಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:


 

click me!