ಬಿಗ್‌ ಬಾಸ್‌-7ಗೆ ಸರ್ವಸಂಗ ಪರಿತ್ಯಾಗಿ: ದೊಡ್ಮನೆ ಶೋನಲ್ಲಿ ಗುರುಲಿಂಗ ಸ್ವಾಮಿ ಭಾಗಿ!

By Web Desk  |  First Published Oct 12, 2019, 8:14 PM IST

ಎಲ್ಲೆಡೆ ಇದೀಗ ಬಿಗ್ ಬಾಸ್ ಸೀಸನ್ 7ರ ಸುದ್ದಿ. ಈ ಬಾರಿ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವುದೇ ಎಲ್ಲರಲ್ಲಿ ಕೌತಕ ಹುಟ್ಟಿಸಿದೆ. ಇದರ ಮಧ್ಯೆ ಅಚ್ಚರಿ ಎಂಬಂತೆ ಓರ್ವ ಸ್ವಾಮೀಜಿ  ಬಿಗ್ ಬಾಸ್ ಸೀಸನ್ 7ಗೆ ಸೆಲೆಕ್ಟ್ ಆಗಿದ್ದಾರೆ. ಅಚ್ಚರಿಯಾದರೂ ಇದು ಸತ್ಯ. ಅಷ್ಟಕ್ಕೂ ಯಾರು ಆ ಸ್ವಾಮೀಜಿ ಅಂತೀರಾ? ಮುಂದೆ ನೋಡಿ 


ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ಸೀಸನ್ 7 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆ ಅಂದ್ರೆ ಭಾನುವಾರ ಅಧಿಕೃತವಾಗಿ ಆರಂಭವಾಗುತ್ತಿದೆ. ಆದ್ರೆ ಅದು ಸೋಮವಾರದಿಂದ (ಅ.14) ರಾತ್ರಿ 9 ಗಂಟೆಗೆ ಟಿವಿನಲ್ಲಿ ಪ್ರಸಾರವಾಗಲಿದೆ.

ಈ ಸಲ ಒಟ್ಟು 17 ಜನ ಸ್ಪರ್ಧಿಗಳು ಬಿಗ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಸ್ವತಃ ಕಲರ್ಸ್ ಕನ್ನಡ ವಾಹಿನಿ ಖಚಿತಪಡಿಸಿದೆ.  ಆದ್ರೆ ಯಾರೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.  

Tap to resize

Latest Videos

undefined

ಬಿಗ್ ಬಾಸ್ ಗೆ ಕ್ಷಣಗಣನೆ; ಓಪನಿಂಗ್ ಕಾರ್ಯಕ್ರಮ ನೋಡಲು ಇಲ್ಲಿದೆ ಅವಕಾಶ!

ಯಾರೆಲ್ಲ ಹೋಗಬಹುದು ಎಂಬ ಹೆಸರು ಬಿಟ್ಟುಕೊಟ್ಟಿಲ್ಲ.  ಆದರೂ, ದೊಡ್ಮನೆಯೊಳಗೆ ಹೋಗುವ 7 ಜನರ ಸಂಭಾವ್ಯ ಪಟ್ಟಿ ಮೂಲಗಳಿಂದ ಬಹಿರಂಗವಾಗಿದ್ದು, ಅಧಿಕೃತವಾಗಿ ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎನ್ನುವುದು ಮಾತ್ರ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದಂತೂ ನಿಜ.

ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ಅವರು ಬಿಗ್ ಬಾಸ್ ಗೆ ಹೋಗುವುದು ಈಗಾಗಲೇ ನಿಮಗೆ ಗೊತ್ತೆ ಇದೆ. ಬಿಸ್ ಬಾಸ್ ಗೆ ಸೆಲೆಕ್ಟ್ ಆಗಿದ್ದೇನೆಂದು ಈಗಾಗಲೇ ಅವರು ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್ ಸಂಭಾವನೆ ಬಗ್ಗೆ ಕಡೆಗೂ ಬಾಯ್ಬಿಟ್ರು ಕಿಚ್ಚ ಸುದೀಪ್!

ಇದರ ಬೆನ್ನಲ್ಲೇ ಇದೀಗ ಮತ್ತೋರ್ವರು ಬಿಸ್ ಬಾಸ್ ಗೆ ಆಯ್ಕೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ವಿಶೇಷ ಅಂದ್ರೆ ಓರ್ವ ಸ್ವಾಮೀಜಿ ದೊಡ್ಮನೆಗೆ ಎಂಟ್ರಿಯಾಗುತ್ತಿದ್ದಾರೆ. 

ಹೌದು...ಅಚ್ಚರಿಯಾದರೂ ಸತ್ಯ. ಹಾವೇರಿಯ ಅಗಡಿ ಗ್ರಾಮದ ಅಕ್ಕಿ ಮಠದ ಗುರಲಿಂಗ ಸ್ವಾಮೀಜಿ ಬಿಗ್ ಬಾಸ್ ಸೀಸನ್ 7ರ ಕಂಟೆಸ್ಟೆಂಟ್ ಆಗಲಿದ್ದಾರೆ. ಈ ಬಗ್ಗೆ ಸ್ವತಃ ಸ್ವಾಮೀಗಳೇ ಖಚಿತಪಡಿಸಿದ್ದಾರೆ. 

ಬಿಗ್ ಬಾಸ್ ಶೋನ ಸ್ಪರ್ಧೆಯಲ್ಲಿ ಬಾಗಿಯಾಗುತ್ತಿದ್ದೇನೆ ನನಗೆ ಹೆಚ್ಚು ವೋಟ್ ಮಾಡಿ ಗೆಲ್ಲಿಸಿ ಎಂದು ವಾಯ್ಸ್ ಮೇಸೆಜ್ ಕಳುಹಿಸಿದ್ದಾರೆ. ಹಾವೇರಿಯಲ್ಲಿ ಲಕ್ಷ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದ ಈ ಸ್ವಾಮೀಜಿ ಲಿಮ್ಕಾ ಅವಾರ್ಡ್ಸ್ ಪಡೆದಿದ್ದಾರೆ.

"

click me!