ಜೊತೆ ಜೊತೆಯಲಿ ಕಥೆ ಎತ್ತ ಸಾಗ್ತಾ ಇದೆ; ಯಾರಿಗಾದ್ರೂ ಗೊತ್ತಾಗ್ತಿದ್ಯಾ?

By Suvarna NewsFirst Published Nov 20, 2022, 5:08 PM IST
Highlights

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಸಾಕಷ್ಟು ಬದಲಾವಣೆಗಳಾದವು. ಆದರೆ ಈಗ ಕತೆ ಎಲ್ಲಿಂದ ಎಲ್ಲಿಗೆ ಸಾಗ್ತಾ ಇದೆ ಅಂತ ಗೊತ್ತಾಗದೇ ವೀಕ್ಷಕರು ಕನ್‌ಫ್ಯೂಶನ್‌ನಲ್ಲಿ ಬಿದ್ದಿದ್ದಾರೆ. ಹೀಗೇ ಆದರೆ ಸದ್ಯದಲ್ಲೇ ಈ ಸೀರಿಯಲ್‌ಗೆ ಬ್ರೇಕ್ ಬೀಳಬಹುದು ಅನ್ನೋ ಮಾತುಗಳೂ ಕೇಳಿಬರುತ್ತಿವೆ.

ಜೊತೆ ಜೊತೆಯಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್. ಈ ಸೀರಿಯಲ್‌ನಲ್ಲಿ ಹಿಂದೆ ಸಾಕಷ್ಟು ಬೆಳವಣಿಗೆಗಳಾಗಿದ್ದವು. ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಮಾಡಿದ್ರು ಅನ್ನೋ ಕಾರಣಕ್ಕೆ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದ ಅನಿರುದ್ಧ ಅವರನ್ನು ಟೀಮ್‌ನೊಳಗೆ ಸೇರಿಸಲಿಲ್ಲ. ಅದರ ಬದಲಿಗೆ ಕಥೆಯಲ್ಲೇ ಒಂದಿಷ್ಟು ಬದಲಾವಣೆ ಮಾಡಿ ಅವರ ಜಾಗಕ್ಕೆ ಮತ್ತೊಬ್ಬ ನಟನನ್ನು ತರಲಾಯಿತು. ಅವರೇ ಹರೀಶ್‌ ರಾಜ್. ಇವರ ಎಂಟ್ರಿ ಏನೋ ಇಂಟರೆಸ್ಟಿಂಗ್ ಆಗಿಯೇ ಇತ್ತು. ಆರ್ಯವರ್ಧನ್‌ಗೆ ಆಕ್ಸಿಡೆಂಟ್ ಆದ ಹಾಗೆ ಅದರಲ್ಲಿ ಮುಖ ಸಂಪೂರ್ಣ ನುಜ್ಜುಗೊಜ್ಜಾದ ಹಾಗೆ ಅದೇ ಹೊತ್ತಿಗೆ ಇವರ ತಮ್ಮ ವಿಶ್ವಾಸ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಂತೆ ಕಥೆಯನ್ನು ರಚಿಸಿ ತಮ್ಮನ ಮುಖವನ್ನೇ ಅಣ್ಣನ ಮುಖದ ಬದಲಿಗೆ ಟ್ರಾನ್ಸ್ ಪ್ಲಾಂಟ್ ಮಾಡಿದಂತೆ ಬಿಂಬಿಸಲಾಯ್ತು. ಆಕ್ಸಿಡೆಂಟ್‌ ಬಳಿಕ ಆರ್ಯವರ್ಧನ್‌ಗೆ ಎಲ್ಲ ಮರೆತುಹೋದ ಹಾಗೆ ಕಥೆ ಹೆಣೆಯಲಾಯ್ತು. ಇನ್ನೊಂದೆಡೆ ಆತನೇ ಆರ್ಯವರ್ಧನ್ ಅಂತ ಗೊತ್ತಾದರೆ ಪ್ರಾಣಕ್ಕೆ ಕಂಟಕ ಎಂದು ಆತನ ಐಡೆಂಟಿಟಿಯನ್ನು ಮುಚ್ಚಿಡಲಾಯ್ತು. ಇದೀಗ ತೀರಿಹೋದ ವಿಶ್ವಾಸ್ ದೇಸಾಯಿ ಪತ್ನಿ ಆರಾಧನಾ ಎಂಟ್ರಿ ಆಗಿದೆ. ಇತ್ತ ಝೇಂಡೆಗೆ ಆರ್ಯವರ್ಧನ್ ಬದುಕಿರೋ ವಿಷ್ಯ ಗೊತ್ತಾಗಿದೆ. ಮತ್ತೊಂದು ಕಡೆ ಅನು ಎರಡನೇ ಮದುವೆ ಥಾಟ್ ಆಕೆಯ ಅಪ್ಪ ಸುಬ್ಬುವಿಗೆ ಬಂದಿದೆ. ಇದೆಲ್ಲದರ ಜೊತೆಗೆ ಈ ಚಿತ್ರ ವಿಚಿತ್ರ ಕಥೆಗೆ ವೀಕ್ಷಕರ ತಲೆಯೂ ಕೆಟ್ಟು ಹೋಗಿದೆ.

ಆರ್ಯವರ್ಧನ್ ಪಾತ್ರ ಬದಲಾದಾಗ ಇನ್ನೊಂದು ಪಾತ್ರದ ಎಂಟ್ರಿಗೆ ಒಂದು ತಿರುವು ತಂದು ಆ ಕಡೆಗೇ ಫೋಕಸ್ ಮಾಡಿದ್ದರೆ ಸೀರಿಯಲ್ ನೋಡುವಂತಾದರೂ ಇರುತ್ತಿತ್ತೇನೋ. ಆದರೆ ಇದೀಗ ಸೂತ್ರವಿಲ್ಲದ ಗಾಳಿಪಟದಂತೆ ಕತೆ ಓಲಾಡುತ್ತಿರುವುದು ವೀಕ್ಷಕರಿಗೆ ಅಷ್ಟು ಖುಷಿ ತಂದಂತಿಲ್ಲ. ಜೊತೆ ಜೊತೆಯಲಿ ಸೀರಿಯಲ್‌ ಆಗಾಗ ಸಡನ್ ಬ್ರೇಕ್ ಹೊಡೆದು ವೀಕ್ಷಕರು ತಲೆ ಜಜ್ಜಿಕೊಳ್ಳೋ ಹಾಗೆ ಮಾಡೋದುಂಟು. ಹೀರೋ ಆಗಿ ವಿಜೃಂಭಿಸುತ್ತಿದ್ದ ಅರ್ಯವರ್ಧನ್ ಪಾತ್ರಕ್ಕೆ ಏಕಾಏಕಿ ನೆಗೆಟಿವ್ ಶೇಡ್ ತಂದು ಹೀರೋನನ್ನೇ ವಿಲನ್ ಮಾಡಿತ್ತು. ಇದನ್ನು ಹೆಚ್ಚಿನವರು ವಿರೋಧಿಸಿದ್ದರೂ ಕಥೆಯಲ್ಲೊಂದು ಗ್ರಿಪ್ ಇದ್ದಿದ್ದ ಕಾರಣಕ್ಕೆ ನೋಡೋದನ್ನು ಬಿಟ್ಟಿರಲಿಲ್ಲ. ಇನ್ನೊಮ್ಮೆ ನಾಯಕಿ ಮೇಘಾ ಶೆಟ್ಟಿ ಸೀರಿಯಲ್ ಟೀಮ್ ಜೊತೆ ಕಿರಿಕ್‌ ಮಾಡಿಕೊಂಡು ಅವರನ್ನು ಸೀರಿಯಲ್‌ನಿಂದ ಹೊರಗಿಡುತ್ತಾರೆ ಎಂದೇ ಆಗಿತ್ತು. ಕೊನೆಯಲ್ಲಿ ಶಾಂತಿ ಸಂಧಾನ ನಡೆದು ಅವರು ಸೀರಿಯಲ್‌ಗೆ ಮರಳಿದ್ದರು. ಆ ವೇಳೆಗೂ ವೀಕ್ಷಕರು ರೊಚ್ಚಿಗೆದ್ದಿದ್ದರು.

'ಪೆಪ್ಪಾ ಪಿಗ್‌' ಸ್ಟೇಜ್ ಶೋ; ಕಾರ್ಟೂನ್ ಪ್ರಪಂಚದಲ್ಲಿ ಮೈಮರೆತ ಮಕ್ಕಳು

ಇದೀಗ ಹಳೆ ಆರ್ಯವರ್ಧನ್ ಬದಲಿಗೆ ಹೊಸ ಆರ್ಯವರ್ಧನ್ ಬಂದು ಆತನೂ ಹಳಬನಾಗಿದ್ದಾನೆ. ಆದರೆ ಯಾರೋ ರ್ಯಾಪೋ ಸೆಟ್‌ ಆಗ್ತಿಲ್ಲ. ಒಂದು ಕಡೆ ಕಥೆ ಹಳ್ಳ ಹಿಡಿದಿದ್ದರೆ ಹೊಸ ಆರ್ಯವರ್ಧನ್ ಪಾತ್ರದಲ್ಲಿ ಹರೀಶ್‌ ರಾಜ್ ಡಲ್ ಹೊಡೆಯುತ್ತಿದ್ದಾರೆ, ಈ ಪಾತ್ರದಿಂದ ಒಂದು ಸ್ಮಾರ್ಟ್ ನೆಸ್ ಮಾಯವಾಗಿದೆ. ಹೀಗಾಗಿ ಈ ಪಾತ್ರ ವೀಕ್ಷಕರನ್ನು ಹಿಡಿದಿಡಲು ವಿಫಲವಾಗಿದೆ ಎಂಬ ಮಾತು ವೀಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.

ಟಿಆರ್‌ಪಿ ಲಿಸ್ಟ್ ನಲ್ಲೂ ಈ ಸೀರಿಯಲ್‌(Serial) ಹಿಂದೆ ಬೀಳುತ್ತಿದೆ. ನಿಧಾನಕ್ಕೆ ಪ್ರೇಕ್ಷಕರು ಈ ಸೀರಿಯಲ್‌ನಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸದ್ಯಕ್ಕೀಗ ಸ್ಟೋರಿಲೈನ್ (Storyline)ಸ್ಟ್ರಾಂಗ್ ಮಾಡಿಕೊಂಡು ಎತ್ತೆತ್ತಲೋ ಹೋಗುತ್ತಿರುವ ಕಥೆಯನ್ನು ಮತ್ತೆ ಮುಖ್ಯಹರಿವಿಗೆ ಎಳೆದು ತರದಿದ್ದರೆ ಸೀರಿಯಲ್‌ ವೀಕ್ಷಕರ ಸಂಖ್ಯೆ ಇನ್ನಷ್ಟು ಇಳಿಯಬಹುದು.

BBK9; ಕಿಚ್ಚನ ಸ್ಪೆಷಲ್ ಟ್ರೀಟ್‌ಗೆ ಬಿಗ್ ಬಾಸ್ ಸ್ಪರ್ಧಿಗಳು ಫಿದಾ

ಹಲವಾರು ಸೀರಿಯಲ್‌ಗಳು, ರಿಯಾಲಿಟಿ ಶೋ(Realiಗಳ ಮಧ್ಯೆ ಕಿರುತೆರೆಯಲ್ಲಿ ಸ್ಪರ್ಧೆ(Compition) ತೀವ್ರವಾಗಿದೆ. ಹೀಗಿರುವಾಗ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಇದ್ದ ಸೀರಿಯಲ್ ಮಾತ್ರ ಉಳಿದುಕೊಳ್ಳುತ್ತೆ ಅನ್ನೋದನ್ನು ಯಾರು ಬೇಕಿದ್ರೂ ಹೇಳ್ತಾರೆ. ಸೋ, ಜೊತೆ ಜೊತೆಯಲಿ ಟೀಮ್ ವೀಕ್ಷಕರನ್ನು ಅಂಡರ್‌ ಎಸ್ಟಿಮೇಟ್(Under estimate) ಮಾಡದೇ ಕಥೆ, ಕಲಾವಿದರನ್ನು ಸ್ಟ್ರಾಂಗ್ ಮಾಡಬೇಕಿದೆ.

 

click me!