
ಕಲರ್ಸ್ ಕನ್ನಡದ ಎವರ್‌ಗ್ರೀನ್ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್. ಕಳೆದ ಬಾರಿ ಈ ಶೋನಲ್ಲಿ ಮಿಂಚಿ ಕನ್ನಡ ಕಿರುತೆರೆಗೆ ಪರಿಚಯವಾದ ಅದ್ಭುತ ಬಾಲ ಪ್ರತಿಭೆ ವನ್ಶಿಕಾ. ಈಕೆಯ ತಂದೆ ಮಾಸ್ಟರ್ ಆನಂದ್ ಕೂಡ ಇದೇ ವಯಸ್ಸಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಚಟಪಟ ಡೈಲಾಗ್‌ಗಳಿಂದಲೇ ಭೇಷ್ ಅನಿಸಿಕೊಂಡವರು. ಟ್ಯಾಲೆಂಟೆಡ್ ಅಪ್ಪನ ಸೂಪರ್ ಟ್ಯಾಲೆಂಟೆಡ್ ಮಗಳು ವನ್ಶಿಕಾ ಇದೀಗ ಕನ್ನಡಿಗರ ಮನೆ ಮನಗಳಲ್ಲಿ ನೆಲೆಸಿರುವ ಪುಟ್ಟ ನಿರೂಪಕಿ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇಷ್ಟು ಚಿಕ್ಕ ಮಗುವೊಂದು ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವುದು ಹಿಂದೆ ನಡೆದಿಲ್ಲ. ಮುಂದೆ ನಡೆಯೋ ಚಾನ್ಸು ಕಾಣ್ತಿಲ್ಲ. ಮಾಸ್ಟರ್ ಆನಂದ್, ಯಶಸ್ವಿನಿ ಅವರ ಮಗಳು. ಈಗ 5 ವರ್ಷ. ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ. ಈಕೆಯ ಕೀರ್ತಿ ಯಾವ ಲೆವೆಲ್‌ಗಿದೆ ಅಂದರೆ ಮೊದ ಮೊದಲು ಮಾಸ್ಟರ್ ಆನಂದ್ ಮಗಳು ವನ್ಶಿಕಾ ಅಂತಿದ್ದೋರು ಈಗ ವನ್ಶಿಕಾ ಅಪ್ಪ ಆನಂದ್ ಅನ್ನೋ ಹಾಗಾಗಿದೆ. ನಿರಂಜನ್ ದೇಶಪಾಂಡೆ ಜೊತೆ ಈ ಛೋಟಾ ಚೂಟಿ ನಿರೂಪಣೆ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈಕೆಯ ಮುದ್ದು ಮಾತಿಗೆ ಜನ ಕಾದು ಕೂರೋ ಹಾಗಾಗಿದೆ. ಈಗ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಪ್ರತಿ ಶನಿವಾರ, ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ.
ಅಂದಹಾಗೆ ಈ ಬಾರಿ ವನ್ಶಿಕಾ ಹೊಸತೊಂದು ಕಿತಾಪತಿ ಮಾಡಿದ್ದಾಳೆ. ಈಕೆಯ ಈ ತರಲೆ ತುಂಟಾಟ ನೋಡಿ ಸ್ವತಃ ಜಡ್ಜಸ್ ಬೆರಗಾಗಿದ್ದಾರೆ. ಈ ತರಲೆ ಸುಬ್ಬಿ ಈ ಬಾರಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಸ್ಪರ್ಧಿಗಳು ಹೇಗೆಲ್ಲ ಮಾಡ್ತಾರೆ, ಹೇಗೆ ಆಡ್ತಾರೆ ಅಂತ ಅವರ ಸ್ಟೈಲ್‍ನಲ್ಲೇ ತೋರಿಸಿದ್ದಾರೆ. ದಿಶಾ, ಇಶಾನಿ, ಮಂಡ್ಯ ಅವಳಿ ಹುಡುಗರ ಬಗ್ಗೆ ಸಖತ್ತಾಗಿ ಅಣಕಿಸಿ ತೋರಿಸಿದ್ದಾಳೆ. ಇನ್ನು ಲಕ್ಕಿ ಎನ್ನುವ ಹುಡುಗ ಮಾತೇ ಅರ್ಥವಾಗೋದಿಲ್ವಂತೆ. ಬರೀ ಡಾರ್ಲಿಂಗ್, ಬ್ರೋ ಅನ್ನೋದಷ್ಟೇ ಅಂತೇ ಗೊತ್ತಾಗೋದಂತೆ. ಹೀಗೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ನ ಎಲ್ಲಾ ಅಭ್ಯರ್ಥಿಗಳು ಹೇಗೆ ಮಾಡ್ತಾರೆ ಅಂತ ತೋರಿಸಿ ಕೊಟ್ಟಿದ್ದಾಳೆ. ಅವರೆಲ್ಲರ ನಟನೆ ಅಣಕಿಸಿದ್ದಾಳೆ. ಅದನ್ನು ನೋಡಿ ಜಡ್ಜ್ ಗಳಾದ ಸೃಜನ್ ಲೋಕೇಶ್, ತಾರ ಅನುರಾಧ, ಅನು ಪ್ರಭಾಕರ್ ಶಾಕ್ ಆಗಿದ್ದಾರೆ. ಜೊತೆಗೆ ಭಾಗವಹಿಸಿದ್ದ ಅಮ್ಮಂದಿರು, ಮಕ್ಕಳು ಕೂಡ ಅದನ್ನು ಎಂಜಾಯ್ ಮಾಡಿದ್ದಾರೆ.
'ಪೆಪ್ಪಾ ಪಿಗ್' ಸ್ಟೇಜ್ ಶೋ; ಕಾರ್ಟೂನ್ ಪ್ರಪಂಚದಲ್ಲಿ ಮೈಮರೆತ ಮಕ್ಕಳು
ಅತೀ ಕಿರಿಯ ವಯಸ್ಸಿನಲ್ಲೇ ನಿರೂಪಣೆಗೆ ಇಳಿದಿರುವ ಈ ಪುಟ್ಟ ಮಗುವಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಮೆಚ್ಚುಗೆ ಹರದು ಬರ್ತಿದೆ. ಜನ ಈಕೆಯ ಟ್ಯಾಲೆಂಟ್ ಕಂಡು ಬೆಕ್ಕಸ ಬೆರಗಾಗಿದ್ದಾರೆ. ಈ ಪೋರಿ ಪ್ರತೀ ವಾರವೂ ಒಂದಿಲ್ಲೊಂದು ಅಚ್ಚರಿ ನೀಡುತ್ತಲೇ ಬಂದಿದ್ದಾಳೆ. ಈ ವಾರ ತನ್ನ ಸಾಮರ್ಥ್ಯಕ್ಕೂ ಮೀರಿದ ಪರ್ಫಾಮೆನ್ಸ್ ನೀಡಿದ್ದಾಳೆ. ಉಳಿದ ಸ್ಪರ್ಧಿಗಳನ್ನೇ ಅಣಕಿಸಿ ಬೆರಗಾಗಿಸಿದ್ದಾಳೆ.
ಈ ಪೋರಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ನೆಗೆಟಿವ್ ಕಮೆಂಟ್‌ಗಳೂ ಆಗಾಗ ಬರೋದಿದೆ. ಮಕ್ಕಳಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಲೆವೆಲ್ ಜನಪ್ರಿಯತೆ ಬರಬಾರದು, ಮಕ್ಕಳನ್ನು ರಿಯಾಲಿಟಿ ಶೋ(Reality show)ಗಳು ಹಾಳು ಮಾಡುತ್ತವೆ ಎನ್ನುವಂಥಾ ಟೀಕೆಗಳು ಬಂದಿವೆ. ಇದಕ್ಕೆಲ್ಲ ವನ್ಶಿಕಾ ತಂದೆ ಮಾಸ್ಟರ್ ಆನಂದ್ ಉತ್ತರಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಿದ್ದ ಆನಂದ್, ಸೋಷಿಯಲ್ ಮೀಡಿಯಾಗಳು ಮಕ್ಕಳ ಮನಸ್ಸನ್ನು ಹೇಗೆ ಒಡೆಯುತ್ತವೆ, ಎಳೆಯ ಮನಸ್ಸುಗಳ ಮೇಲೆ ಈ ಇಂಟರ್‌ನೆಸ್(Internet) ಮಾಡುವ ದುಷ್ಪರಿಣಾಮಗಳೇನು ಅನ್ನೋದನ್ನು ಹೇಳುತ್ತಲೆ ತನ್ನ ಮಗಳು ವನ್ಶಿಕಾ ಮೇಲೆ ಸೋಷಿಯಲ್ ಮೀಡಿಯಾ(Social media) ಚರ್ಚೆಗಳು ನೆಗೆಟಿವ್ ಪರಿಣಾಮ ಬೀರುತ್ತಿವೆ ಎನ್ನೋದನ್ನು ಪರೋಕ್ಷವಾಗಿ ಹೇಳಿದ್ದರು. ಆದರೆ ಮಗಳ ನಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಸಿಲೂರಿನ ಸ್ಟಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ, ಅಶ್ಲೀಲವಲ್ಲದ ಜೋಕಿಗೇ ಇವರು ಫೇಮಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.