ಹಿಟ್ಲರ್ ಕಲ್ಯಾಣದಲ್ಲಿ ಅಂತರಾ ಹವಾ ಜೋರಾಗಿದೆ. ಇನ್ನೊಂದೆಡೆ ಎಜೆಯನ್ನು ಹೃದಯಪೂರ್ವಕವಾಗಿ ಪ್ರೀತಿಸುವ ಲೀಲಾ ಕೊಲೆಯಾಗಿ ಹೋಗ್ತಾಳ ಅನ್ನೋ ಭಯ ಎದುರಾಗಿದೆ.
ಹಿಟ್ಲರ್ ಕಲ್ಯಾಣ್ ಜೀ ಕನ್ನಡದಲ್ಲಿ ಪ್ರತೀ ಸಂಜೆ ಏಳು ಗಂಟೆಗೆ ಪ್ರಸಾರವಾಗ್ತಿರೋ ಸೀರಿಯಲ್. ಈಗ ಸೀರಿಯಲ್‌ಗಳ ನಡುವೆ ಟಿಆರ್‌ಪಿ ವಿಚಾರದಲ್ಲಿ ಸಾಕಷ್ಟು ಸ್ಪರ್ಧೆಯಿದೆ. ಮೊದಲಾದರೆ ಆಗಾಗ ಟಾಪ್ ಐದು ಸೀರಿಯಲ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿಟ್ಲರ್ ಕಲ್ಯಾಣ ಇತ್ತೀಚೆಗೆ ಟಿಆರ್‌ಪಿ ರೇಸ್‌ನಲ್ಲಿ ಹಿಂದಕ್ಕೆ ಬೀಳ್ತಿದೆ. ಇದಕ್ಕೆ ಕಾರಣ ಈ ಸೀರಿಯಲ್‌ನ ಕಥೆ ಬದಲಾದದ್ದು. ಎಜೆ ಅರ್ಥಾತ್ ಅಭಿರಾಮ್ ಮಧ್ಯ ವಯಸ್ಸಿನ ಶ್ರೀಮಂತ ಉದ್ಯಮಿ. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ಆತನ ಬದುಕಿಂದ ದೂರವಾಗಿ ಬಹಳ ಕಾಲವಾಗಿದೆ. ತನ್ನ ಮೂವರು ಸೊಸೆಯರು, ವೃದ್ಧ ತಾಯಿ ಜೊತೆಗೆ ಬ್ಯುಸಿನೆಸ್‌ನಲ್ಲಿ ಸಾಧನೆ ಮಾಡುತ್ತಿರುವಾಗಲೇ ಆತನ ಬಾಳಲ್ಲಿ ಲೀಲಾ ಅನ್ನುವ ಮುಗ್ಧ ಹುಡುಗಿಯ ಎಂಟ್ರಿ ಆಗುತ್ತದೆ. ಆಕೆ ತನ್ನ ಶ್ರೀಮಂತಿಕೆಗಾಗಿ ಮದುವೆಗೆ ಒಪ್ಪಿದ್ದಾಳೆ ಅಂತ ಬಹಳ ಕಾಲ ಏಜೆ ತಪ್ಪು ತಿಳಿಯುತ್ತಾನೆ. ಆದರೆ ತಾನಂದುಕೊಂಡ ಹಾಗೆ ಅವಳು ದುರಾಸೆಯ ಹುಡುಗಿ ಅಲ್ಲ, ಬಹಳ ಮುಗ್ಧೆ, ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳೆ ಅನ್ನೋ ಸತ್ಯ ಗೊತ್ತಾಗುತ್ತದೆ.
ಈ ನಡುವೆ ಏನೇನೋ ಡ್ರಾಮಾಗಳು ನಡೆದು ಏಜೆಗೆ ಲೀಲಾಳ ಮುಗ್ಧತೆ, ಒಳ್ಳೆತನ ಇಷ್ಟವಾಗುತ್ತದೆ. ಆಕೆಯ ಒಳ್ಳೆಯನವನ್ನು ಮೆಚ್ಚಿಕೊಂಡು ಸ್ನೇಹದಿಂದ ಇರುತ್ತಾನೆ. ಆಕೆಯ ಬಗ್ಗೆ ಪ್ರೀತಿಯೂ ಇರುತ್ತದೆ. ಒಂದು ಹಂತದಲ್ಲಿ ಇಬ್ಬರ ನಡುವಿನ ಅಂತರ ತಗ್ಗಿ ಇಬ್ಬರೂ ಪರಸ್ಪರ ಪ್ರೇಮದಲ್ಲಿ ಬೀಳುತ್ತಾರೆ. ಇನ್ನೇನು ಇವರಿಬ್ಬರ ಮರು ಮದುವೆ ಆಗಬೇಕು ಅನ್ನುವಾಗ ಏಜೆ ಮೊದಲ ಹೆಂಡತಿ ಅಂತರಾ ಎಂಟ್ರಿ ಆಗುತ್ತೆ. ಇದಕ್ಕೆ ಕಾರಣ ಏಜೆಯ ಮೂವರು ಸೊಸೆಯರಲ್ಲಿ ಇಬ್ಬರು. ಮುಖ್ಯವಾಗಿ ಹಿರಿ ಸೊಸೆ ದುರ್ಗಾ. ಅಂತರಾ ಬಂದದ್ದೇ ಲೀಲಾ ಜೊತೆ ಏಜೆ ಮರು ಮದುವೆಯೂ ನಿಂತು ಹೋಗುತ್ತದೆ.
'ನಮ್ಮ ಲಚ್ಚಿ' ಧಾರಾವಾಹಿಯಿಂದ ಸಾರಾ ಔಟ್; ದೀಪಿಕಾ ಪಾತ್ರಕ್ಕೆ ಎಂಟ್ರಿ ಕೊಟ್ಟ ನಟಿ ಇವರೆ
ಇತ್ತ ಎಂಟ್ರಿ ಕೊಟ್ಟ ಅಂತರಾಗೆ ಏಜೆ ಜೊತೆಗಿನ ಯಾವ ನೆನಪುಗಳೂ ಇಲ್ಲ. ಆಕೆ ತನ್ನ ಹೆಸರು ಅಂತರಾ ಅಲ್ಲ, ಪ್ರಾರ್ಥನಾ ಅಂದರೂ ಯಾರೂ ನಂಬೋದಿಲ್ಲ. ಲೀಲಾಳಿಗೆ ಅಂತರಾಳನ್ನು ನೋಡಿ ಆಶ್ಚರ್ಯ, ಖುಷಿ, ನಿರಾಸೆ ಆದರೂ ಅವಳು ಮತ್ತೆ ಅಂತರಾ ಮತ್ತು ಏಜೆಯನ್ನು ಒಂದು ಮಾಡಲು ಹೆಣಗುತ್ತಿರುತ್ತಾಳೆ. ಈ ನಡುವೆ ಶುರುವಿಗೆ ತನಗೂ ಏಜೆಗೂ ಸಂಬಂಧವೇ ಇಲ್ಲ ಅಂದ ಅಂತರಾ ಇತ್ತೀಚೆಗೆ ಏಜೆ ಪ್ರೀತಿಗೆ ಕರಗುತ್ತಿದ್ದಾಳೆ. ಶುರುವಲ್ಲಿ ಲೀಲಾಳನ್ನು ಮಾತ್ರ ನಂಬುತ್ತಿದ್ದ ಅವಳು ಇತ್ತೀಚೆಗೆ ಲೀಲಾ, ಏಜೆ ಜೊತೆ ಕೊಂಚ ಸಲಿಗೆಯಿಂದ ಇರೋದನ್ನೂ ಸಹಿಸೋದಿಲ್ಲ.
ಆದರೆ ಜನರಿಗೆ ಈ ಥರದ ಎಪಿಸೋಡ್(episode) ಇಷ್ಟ ಆಗ್ತಿಲ್ಲ. ಅವರು ಅಂತರಾ ಏಜೆ ಮತ್ತೆ ಕ್ಲೋಸ್ ಆಗಿರೋದಕ್ಕೆ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. ಲೀಲಾ ಏಜೆ ಜೋಡಿಯನ್ನು ಬಹುವಾಗಿ ಇಷ್ಟಪಟ್ಟಿದ್ದ ಜನರಿಗೆ ಅಂತರಾ ಏಜೆ ನಡುವಿನ ಎಪಿಸೋಡ್‌ಗಳು ಇಷ್ಟವಾಗುತ್ತಿಲ್ಲ. ಈ ನಡುವೆ ಸೀರಿಯಲ್ ಟಿಆರ್‌ಪಿಯೂ ಕಡಿಮೆ ಆಗುತ್ತಿದೆ. ಈ ನಡುವೆ ಈ ಸೀರಿಯಲ್‌ನಲ್ಲಿ ಲೀಲಾ ಕೊಲೆಯಾಗುತ್ತದೆ(Murder) ಅನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಕೊಲೆ ಯಾರು ಮಾಡ್ತಾರೆ, ಯಾಕಾಗಿ ಕೊಲೆ ಮಾಡ್ತಾರೆ, ಇದರಿಂದ ಏಜೆ ಲೈಫಿನ (Life)ಮೇಲಾಗುವ ಪರಿಣಾಮಗಳೇನು ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. ನಿಜಕ್ಕೂ ಲೀಲಾ ಕೊಲೆಯಾಗುತ್ತಾ ಅಥವಾ ಕೊಲೆ ಪ್ರಯತ್ನವನ್ನು ಏಜೆ ತಡೆಯುತ್ತಾನ ಅನ್ನೋ ಮಾತುಗಳೂ ಇವೆ. ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ(Serial) ಮಲೈಕಾ ವಸುಪಾಲ್, ದಿಲೀಪ್ ರಾಜ್, ರಂಜಿನಿ, ವಿದ್ಯಾ ಮೂರ್ತಿ, ರವಿ ಭಟ್ ಮುಂತಾದವರು ನಟಿಸುತ್ತಿದ್ದಾರೆ.
ಬರ್ತ್ ಡೇ ಕೇಕ್ ಮೂಲಕ ರಾಮಚಾರಿ -ಚಾರು ಮದುವೆ ಗುಟ್ಟು ರಟ್ಟಾಗುತ್ತಾ?