ಮಾಸ್ಟರ್ ಸಾಂಗ್‌ಗೆ ಮಗನ 'ಜೊತೆಜೊತೆ'ಯಲಿ ಹೆಜ್ಜೆ ಹಾಕಿದ ಅನಿರುದ್ಧ್

By Suvarna News  |  First Published Jan 23, 2021, 5:16 PM IST

ಜನರ ನೆಚ್ಚಿನ ಧಾರವಾಹಿ ಜೊತೆಜೊತೆಯಲ್ಲಿ ಹಿರೋ ಆರ್ಯವರ್ಧನ್ ದಳಪತಿ ವಿಜಯ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ವಾತಿ ಕಮ್ಮಿಂಗ್ ಸಾಂಗ್‌ಗೆ ಅನಿರುದ್ದ್‌ ಡ್ಯಾನ್ಸ್ ಹೇಗಿದ ನೋಡಿ


ಕನ್ನಡತಿಗರ ನೆಚ್ಚಿನ ಧಾರವಾಹಿ ಜೊತೆಜೊತೆಯಲಿ ಸೀರಿಯಲ್ ನಟ ಅನಿರುದ್ಧ್‌ ವಾತಿ ಕಮ್ಮಿಂಗ್‌ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಭಾರೀ ಬಾಕ್ಸ್‌ ಆಪೀಸ್‌ ಕಲೆಕ್ಷನ್ ಪಡೆಯುತ್ತಿರುವ ವಿಜಯ್‌ ಅಭಿನಯದ ಮಾಸ್ಟರ್ ಸಿನಿಮಾದ ವಾತಿ ಸಾಂಗ್ ಕಳೆದ ವರ್ಷವೇ ಹಿಟ್ ಆಗಿತ್ತು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ರೀಲ್ಸ್ ತುಂಬಾ ವೈರಲ್ ಆಗಿದೆ. ಇದಕ್ಕೆ ಜೊತೆಜೊತೆಯಲ್ಲಿ ಆರ್ಯವರ್ಧನ್ ಕೂಡಾ ಸೇರಿದ್ದಾರೆ. ವೈರಲ್ ಆಗ್ತಿರೋ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ನಟ.

Tap to resize

Latest Videos

ಕೊರೋನಾ ಜೊತೆ ಜೊತೆಯಲಿ ಶೂಟಿಂಗ್, ಮಾರಿ ನಡುವೆ ಮನೆಗೆ ಮಗಳು ಜಾನಕಿ!

ನನ್ನ ಮಗನ ಜೊತೆ ವಾತಿ ಕಮ್ಮಿಂಗ್ ಡ್ಯಾನ್ಸ್ ಎಂದು ಕ್ಯಾಪ್ಶನ್ ಕೊಟ್ಟು ನಟ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನನ್ನ ತಮಿಳು ಫ್ಯಾನ್ಸ್‌ಗಾಗಿ ಎಂದು ಬರೆದಿದ್ದಾರೆ ಅನಿರುದ್ದ್‌. ತೆಲುಗು ಫ್ಯಾನ್ಸ್ ಕಾಯುತ್ತಿದ್ದೇವೆ ಎಂದು ಕೇಳಿದ್ದಾರೆ ಫ್ಯಾನ್ಸ್.

ಫ್ಯಾನ್ಸ್ ನಟನ ಡ್ಯಾನ್ಸ್ ನೋಡಿ ಸೂಪರ್ ಎನರ್ಜಿ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಜೊತೆಯಲಿ ಧಾರವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟ ಸಕ್ಸಸ್‌ಫುಲ್ ಆಗಿ ಮುಂದುವರಿಯುತ್ತಿದ್ದಾರೆ.

click me!